ಕೀರ್ತನೆಗಳು 94 : 1 (KNV)
ಓ ಕರ್ತನೇ, ದೇವರೇ ಮುಯ್ಯಿ ತೀರಿಸುವದು ನಿನ್ನದು; ಓ ದೇವರೇ, ಮುಯ್ಯಿ ತೀರಿಸುವದು ನಿನಗೆ ಸೇರಿದ್ದು. ನಿನ್ನನ್ನು ಪ್ರಕಟಿಸಿಕೋ.
ಕೀರ್ತನೆಗಳು 94 : 2 (KNV)
ಭೂಮಿಯ ನ್ಯಾಯಾಧಿಪತಿಯೇ, ನೀನು ಎದ್ದೇಳು; ಗರ್ವಿಷ್ಠರಿಗೆ ಪ್ರತೀಕಾರವನ್ನು ಕೊಡು.
ಕೀರ್ತನೆಗಳು 94 : 3 (KNV)
ಕರ್ತನೇ, ದುಷ್ಟರು ಎಷ್ಟರ ವರೆಗೆ ದುಷ್ಟರು ಎಷ್ಟರ ವರೆಗೆ ಜಯಿಸುವರು?
ಕೀರ್ತನೆಗಳು 94 : 4 (KNV)
ಎಷ್ಟುಕಾಲ ಕಠಿಣ ವಾದವುಗಳನ್ನು ನುಡಿದು ಮಾತಾಡುತ್ತಾರೆ? ದುಷ್ಟತನ ಮಾಡುವವರೆಲ್ಲರು ಹೆಚ್ಚಿಸಿಕೊಳ್ಳುತ್ತಾರೆ;
ಕೀರ್ತನೆಗಳು 94 : 5 (KNV)
ಓ ಕರ್ತನೇ, ನಿನ್ನ ಜನರನ್ನು ತುಂಡುತುಂಡು ಮಾಡುತ್ತಾರೆ; ನಿನ್ನ ಸ್ವಾಸ್ಥ್ಯವನ್ನು ಬಾಧಿಸುತ್ತಾರೆ.
ಕೀರ್ತನೆಗಳು 94 : 6 (KNV)
ವಿಧವೆಯನ್ನೂ ಪರ ದೇಶಸ್ಥನನ್ನೂ ಅವರು ಕೊಲ್ಲುತ್ತಾರೆ; ದಿಕ್ಕಿಲ್ಲದವರನ್ನು ಹತಮಾಡುತ್ತಾರೆ.
ಕೀರ್ತನೆಗಳು 94 : 7 (KNV)
ಕರ್ತನು ನೋಡುವದಿಲ್ಲ; ಇಲ್ಲವೆ ಯಾಕೋಬನ ದೇವರು ಲಕ್ಷಿಸುವದಿಲ್ಲ ಅನ್ನುತ್ತಾರೆ.
ಕೀರ್ತನೆಗಳು 94 : 8 (KNV)
ಜನರಲ್ಲಿ ಪಶುಪ್ರಾಯದವರೇ, ನೀವು ಗ್ರಹಿಸಿರಿ; ಹುಚ್ಚರೇ, ಯಾವಾಗ ಬುದ್ಧಿವಂತರಾಗುವಿರಿ?
ಕೀರ್ತನೆಗಳು 94 : 9 (KNV)
ಕಿವಿ ಯನ್ನು ಕೊಟ್ಟವನು ಕೇಳನೋ? ಕಣ್ಣನ್ನು ರೂಪಿಸಿದವನು ತಿಳಿಯನೋ?
ಕೀರ್ತನೆಗಳು 94 : 10 (KNV)
ಜನಾಂಗಗಳನ್ನು ಶಿಕ್ಷಿಸುವ ವನೂ ಮನುಷ್ಯನಿಗೆ ತಿಳುವಳಿಕೆಯನ್ನು ಕಲಿಸುವವನೂ ಗದರಿಸನೋ?
ಕೀರ್ತನೆಗಳು 94 : 11 (KNV)
ಕರ್ತನು ಮನುಷ್ಯನ ಯೋಚನೆ ಗಳನ್ನು ವ್ಯರ್ಥವೆಂದು ತಿಳುಕೊಳ್ಳುತ್ತಾನೆ.
ಕೀರ್ತನೆಗಳು 94 : 12 (KNV)
ಓ ಕರ್ತನೇ, ನೀನು ಶಿಕ್ಷಿಸುವವನೂ ನಿನ್ನ ನ್ಯಾಯ ಪ್ರಮಾಣದಿಂದ ಯಾರಿಗೆ ಕಲಿಸುವಿಯೋ ಅವನು ಧನ್ಯನು.
ಕೀರ್ತನೆಗಳು 94 : 13 (KNV)
ದುಷ್ಟನಿಗಾಗಿ ಕುಣಿಯು ಅಗಿಯಲ್ಪಡುವ ವರೆಗೆ ಕಷ್ಟದ ದಿವಸಗಳಲ್ಲಿ ಅಂಥವನಿಗೆ ವಿಶ್ರಾಂತಿ ಯನ್ನು ಕೊಡುವನು.
ಕೀರ್ತನೆಗಳು 94 : 14 (KNV)
ಕರ್ತನು ತನ್ನ ಜನರನ್ನು ತೊರೆಯನು; ಇಲ್ಲವೆ ತನ್ನ ಸ್ವಾಸ್ಥ್ಯವನ್ನು ಬಿಟ್ಟುಬಿಡನು.
ಕೀರ್ತನೆಗಳು 94 : 15 (KNV)
ನ್ಯಾಯವು ನೀತಿಗೆ ತಿರುಗಿಕೊಳ್ಳುವದು; ಯಥಾರ್ಥ ಹೃದಯದವರೆಲ್ಲರು ಅದನ್ನು ಹಿಂಬಾಲಿಸುವರು.
ಕೀರ್ತನೆಗಳು 94 : 16 (KNV)
ನನಗೋಸ್ಕರ ದುರ್ಮಾರ್ಗಿಗಳಿಗೆ ವಿರೋಧ ವಾಗಿ ಏಳುವವನ್ಯಾರು? ಇಲ್ಲವೆ ಅಪರಾಧ ಮಾಡು ವವರಿಗೆ ವಿರೋಧವಾಗಿ ನನಗೋಸ್ಕರ ನಿಂತು ಕೊಳ್ಳುವವನಾರು?
ಕೀರ್ತನೆಗಳು 94 : 17 (KNV)
ಕರ್ತನು ನನಗೆ ಸಹಾಯಕ ನಾಗಿರದಿದ್ದರೆ ನನ್ನ ಪ್ರಾಣವು ಮೌನದಲ್ಲಿ ವಾಸಿಸ ಬೇಕಾಗಿತ್ತು.
ಕೀರ್ತನೆಗಳು 94 : 18 (KNV)
ನನ್ನ ಕಾಲುಜಾರಿತೋ ಎಂದು ನಾನು ಅಂದಾಗಲೇ ಓ ಕರ್ತನೇ, ನಿನ್ನ ಕರುಣೆಯು ನನ್ನನ್ನು ಎತ್ತಿಹಿಡಿಯಿತು.
ಕೀರ್ತನೆಗಳು 94 : 19 (KNV)
ನನ್ನ ಚಿಂತೆಗಳು ಅಂತರಂಗದಲ್ಲಿ ಹೆಚ್ಚುವಾಗ ನಿನ್ನ ಆದರಣೆಗಳು ನನ್ನ ಪ್ರಾಣವನ್ನು ಆನಂದಪಡಿಸುತ್ತವೆ.
ಕೀರ್ತನೆಗಳು 94 : 20 (KNV)
ವಿಧಿಯಿಂದ ಕೇಡನ್ನು ಕಲ್ಪಿಸುವ ಅಪರಾಧದ ಸಿಂಹಾಸನವು ನಿನ್ನ ಸಂಗಡ ಅನ್ಯೋನ್ಯವಾಗಿರು ವದೋ?
ಕೀರ್ತನೆಗಳು 94 : 21 (KNV)
ನೀತಿವಂತನ ಪ್ರಾಣಕ್ಕೆ ವಿರೋಧವಾಗಿ ಅವರು ಕೂಡಿಕೊಳ್ಳುತ್ತಾರೆ; ನಿರಪರಾಧಿಯ ರಕ್ತವನ್ನು ಖಂಡಿಸುತ್ತಾರೆ.
ಕೀರ್ತನೆಗಳು 94 : 22 (KNV)
ಆದರೆ ಕರ್ತನು ನನಗೆ ದುರ್ಗವೂ ನನ್ನ ದೇವರು ನನ್ನ ಆಶ್ರಯದ ಬಂಡೆಯೂ ಆಗಿದ್ದಾನೆ.
ಕೀರ್ತನೆಗಳು 94 : 23 (KNV)
ಅವರ ಅಪರಾಧವನ್ನು ಅವರ ಮೇಲೆ ತಿರಿಗಿ ಬರಮಾಡುವನು; ಅವರ ಕೇಡಿನಲ್ಲಿ ಅವರನ್ನು ಸಂಹರಿಸುವನು; ನಮ್ಮ ದೇವರಾದ ಕರ್ತನು ಅವರನ್ನು ಸಂಹರಿಸುವನು.

1 2 3 4 5 6 7 8 9 10 11 12 13 14 15 16 17 18 19 20 21 22 23

BG:

Opacity:

Color:


Size:


Font: