ಕೀರ್ತನೆಗಳು 87 : 1 (KNV)
ಆತನ ಅಸ್ತಿವಾರವು ಪರಿಶುದ್ಧ ಪರ್ವತಗಳಲ್ಲಿ ಅದೆ.
ಕೀರ್ತನೆಗಳು 87 : 2 (KNV)
ಕರ್ತನು ಚಿಯೋನಿನ ಬಾಗಲುಗಳನ್ನು ಯಾಕೋಬನ ಎಲ್ಲಾ ನಿವಾಸಗಳಿ ಗಿಂತ ಪ್ರೀತಿಮಾಡುತ್ತಾನೆ.
ಕೀರ್ತನೆಗಳು 87 : 3 (KNV)
ದೇವರ ಪಟ್ಟಣವೇ, ನಿನ್ನ ವಿಷಯವಾಗಿ ಘನವುಳ್ಳವುಗಳು ಹೇಳಲ್ಪಟ್ಟಿವೆ.
ಕೀರ್ತನೆಗಳು 87 : 4 (KNV)
ರಾಹಬನ್ನೂ ಬಾಬೆಲನ್ನೂ ನನ್ನನ್ನು ತಿಳಿದವರಿಗೆ ಜ್ಞಾಪಕಮಾಡುವೆನು; ಫಿಲಿಷ್ಟಿಯವೂ ತೂರಿನ ಸಂಗಡ ಕೂಷನ್ನೂ ನೋಡು: ಈ ಮನುಷ್ಯನು ಅಲ್ಲಿ ಹುಟ್ಟಿ ದನು.
ಕೀರ್ತನೆಗಳು 87 : 5 (KNV)
ಚೀಯೋನಿನ ವಿಷಯ ಹೇಳುವದೇನಂದರೆ --ಇಂಥಿಂಥವರು ಅದರಲ್ಲಿ ಹುಟ್ಟಿದರೆಂದೂ ಮಹೋ ನ್ನತನು ತಾನೇ ಅದನ್ನು ಸ್ಥಾಪಿಸುವನು.
ಕೀರ್ತನೆಗಳು 87 : 6 (KNV)
ಕರ್ತನು ಜನಸಂಖ್ಯೆ ಬರೆಯುವಾಗ ಇವನು ಅಲ್ಲಿ ಹುಟ್ಟಿದ ನೆಂದು ಎಣಿಸುವನು ಸೆಲಾ.
ಕೀರ್ತನೆಗಳು 87 : 7 (KNV)
ಹಾಡುವವರೂ ವಾದ್ಯ ಗಳನ್ನು ಬಾರಿಸುವವರೂ ಇದ್ದಾರೆ; ನನ್ನ ಬುಗ್ಗೆಗಳೆಲ್ಲಾ ನಿನ್ನಲ್ಲಿಯೇ.

1 2 3 4 5 6 7

BG:

Opacity:

Color:


Size:


Font: