ಕೀರ್ತನೆಗಳು 80 : 1 (KNV)
ಯೋಸೇಫ್ಯರನ್ನು ಮಂದೆಯಂತೆ ನಡಿಸುವಾತನೇ, ಇಸ್ರಾಯೇಲ್ಯರ ಕುರುಬನೇ, ಕಿವಿಗೊಡು; ಕೆರೂಬಿಗಳ ಮಧ್ಯದಲ್ಲಿ ವಾಸಿಸುವಾತನೇ, ಪ್ರಕಾಶಿಸು.
ಕೀರ್ತನೆಗಳು 80 : 2 (KNV)
ಎಫ್ರಾಯಾಮ್ ಬೆನ್ಯಾವಿಾನ್ ಮನಸ್ಸೆ ಯರ ಮುಂದೆ ನಿನ್ನ ಪರಾಕ್ರಮವನ್ನು ತೋರಿಸಿ ನಮ್ಮನ್ನು ರಕ್ಷಿಸು.
ಕೀರ್ತನೆಗಳು 80 : 3 (KNV)
ಓ ದೇವರೇ, ನಮ್ಮನ್ನು ಮತ್ತೆ ತಿರುಗಿಸಿ ನಿನ್ನ ಮುಖವನ್ನು ಪ್ರಕಾಶಿಸುವಂತೆ ಮಾಡು; ಆಗ ನಾವು ರಕ್ಷಿಸಲ್ಪಡುವೆವು.
ಕೀರ್ತನೆಗಳು 80 : 4 (KNV)
ಸೈನ್ಯಗಳ ದೇವರಾದ ಓ ಕರ್ತನೇ, ಎಷ್ಟರವರೆಗೆ ನಿನ್ನ ಜನರ ಪ್ರಾರ್ಥನೆಗೆ ವಿರೋಧವಾಗಿ ಕೋಪ ಗೊಳ್ಳುತ್ತೀ?
ಕೀರ್ತನೆಗಳು 80 : 5 (KNV)
ಕಣ್ಣೀರಿನ ರೊಟ್ಟಿಯನ್ನು ಅವರಿಗೆ ತಿನ್ನಿಸಿ, ದೊಡ್ಡ ಅಳತೆಯಿಂದ ಕಣ್ಣೀರನ್ನು ಕುಡಿಯಲು ಕೊಡುತ್ತೀ.
ಕೀರ್ತನೆಗಳು 80 : 6 (KNV)
ನಮ್ಮ ನೆರೆಯವರಿಗೆ ನೀನು ನಮ್ಮನ್ನು ವಿವಾದಕ್ಕೆ ಕಾರಣ ಮಾಡುತ್ತೀ; ನಮ್ಮ ಶತ್ರುಗಳು ತಮ್ಮಲ್ಲಿ ತಾವೇ ನಗುತ್ತಾರೆ.
ಕೀರ್ತನೆಗಳು 80 : 7 (KNV)
ಸೈನ್ಯಗಳ ಓ ದೇವರೇ, ನೀನು ನಮ್ಮನ್ನು ಮತ್ತೆ ತಿರಿಗಿಸಿ ನಿನ್ನ ಮುಖವನ್ನು ಪ್ರಕಾಶಿಸ ಮಾಡು; ಆಗ ನಾವು ರಕ್ಷಿಸಲ್ಪಡುವೆವು.
ಕೀರ್ತನೆಗಳು 80 : 8 (KNV)
ನೀನು ದ್ರಾಕ್ಷೇಗಿಡವನ್ನು ಐಗುಪ್ತದಿಂದ ತಂದಿ; ಜನಾಂಗಗಳನ್ನು ಹೊರಡಿಸಿ ಅದನ್ನು ನೆಟ್ಟಿ.
ಕೀರ್ತನೆಗಳು 80 : 9 (KNV)
ಅದರ ಮುಂದೆ ಸ್ಥಳ ಸಿದ್ಧಮಾಡಿದಿ; ಆಗ ಅದು ಬೇರೂರಿ ದೇಶವನ್ನು ತುಂಬಿತು.
ಕೀರ್ತನೆಗಳು 80 : 10 (KNV)
ಅದರ ನೆರಳಿನಿಂದ ಬೆಟ್ಟ ಗಳೂ ಕೊಂಬೆಗಳಿಂದ ದೇವದಾರುಗಳೂ ಮುಚ್ಚಲ್ಪ ಟ್ಟವು.
ಕೀರ್ತನೆಗಳು 80 : 11 (KNV)
ಅದು ತನ್ನ ರೆಂಬೆಗಳನ್ನು ಸಮುದ್ರದ ವರೆಗೂ ತನ್ನ ಬಳ್ಳಿಗಳನ್ನು ನದಿಗೂ ಹರಡಿಸಿತು.
ಕೀರ್ತನೆಗಳು 80 : 12 (KNV)
ಮಾರ್ಗ ದಲ್ಲಿ ಹಾದು ಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಯಾಕೆ ಅದರ ಬೇಲಿಗಳನ್ನು ನೀನು ಮುರಿದು ಬಿಟ್ಟಿದ್ದೀ?
ಕೀರ್ತನೆಗಳು 80 : 13 (KNV)
ಅಡವಿಯಿಂದ ಬಂದ ಹಂದಿಯು ಅದನ್ನು ಹಾಳುಮಾಡುತ್ತದೆ ಕಾಡಿನ ಮೃಗವು ಅದನ್ನು ಮೇಯ್ದು ಬಿಡುತ್ತದೆ.
ಕೀರ್ತನೆಗಳು 80 : 14 (KNV)
ಓ ಸೈನ್ಯಗಳ ದೇವರೇ, ತಿರುಗಿಕೋ ಎಂದು ನಾವು ನಿನ್ನನ್ನು ಬೇಡುತ್ತೇವೆ. ಆಕಾಶದಿಂದ ದೃಷ್ಟಿಸಿ ನೋಡು; ಈ ದ್ರಾಕ್ಷೇಗಿಡವನ್ನೂ
ಕೀರ್ತನೆಗಳು 80 : 15 (KNV)
ನಿನ್ನ ಬಲಗೈ ನೆಟ್ಟ ಸಸಿಯನ್ನೂ ನೀನು ನಿನಗೆ ಬಲಪಡಿಸಿ ಕೊಂಡ ಕೊಂಬೆಯನ್ನೂ ಪರಾಮರಿಸು.
ಕೀರ್ತನೆಗಳು 80 : 16 (KNV)
ಅದು ಈಗ ಕೊಯ್ಯಲ್ಪಟ್ಟು ಬೆಂಕಿಯಿಂದ ಸುಡಲ್ಪಟ್ಟಿದೆ; ನಿನ್ನ ಬಾಯಿ ಗದರಿಕೆಯಿಂದ ಅವರು ನಾಶವಾಗುತ್ತಾರೆ.
ಕೀರ್ತನೆಗಳು 80 : 17 (KNV)
ನಿನ್ನ ಬಲಗೈ ಮನುಷ್ಯನ ಮೇಲೆ ಹೌದು, ನೀನು ನಿನಗೆ ಬಲಪಡಿಸಿಕೊಂಡ ಮನುಷ್ಯ ಪುತ್ರನ ಮೇಲೆ ನಿನ್ನ ಕೈ ಇರಲಿ.
ಕೀರ್ತನೆಗಳು 80 : 18 (KNV)
ಆಗ ನಾವು ನಿನ್ನಿಂದ ಹಿಂದಿರು ಗುವದಿಲ್ಲ; ನಮ್ಮನ್ನು ಬದುಕಿಸು, ಆಗ ನಿನ್ನ ಹೆಸರನ್ನು ಕರೆಯುವೆವು.
ಕೀರ್ತನೆಗಳು 80 : 19 (KNV)
ಸೈನ್ಯಗಳ ದೇವರಾದ ಓ ಕರ್ತನೇ, ಮತ್ತೆ ನಮ್ಮನ್ನು ತಿರುಗಿಸಿ ನಿನ್ನ ಮುಖವನ್ನು ಪ್ರಕಾಶಿಸ ಮಾಡು; ಆಗ ನಾವು ರಕ್ಷಿಸಲ್ಪಡುವೆವು.

1 2 3 4 5 6 7 8 9 10 11 12 13 14 15 16 17 18 19