ಕೀರ್ತನೆಗಳು 78 : 1 (KNV)
ಓ ನನ್ನ ಜನರೇ, ನನ್ನ ನ್ಯಾಯಪ್ರಮಾಣಕ್ಕೆ ಕಿವಿಗೊಡಿರಿ; ನನ್ನ ಬಾಯಿ ಮಾತುಗಳಿಗೆ ನಿಮ್ಮ ಕಿವಿಗಳನ್ನು ಬೊಗ್ಗಿಸಿರಿ.
ಕೀರ್ತನೆಗಳು 78 : 2 (KNV)
ಸಾಮ್ಯವನ್ನು ಹೇಳಲು ನನ್ನ ಬಾಯಿ ತೆರೆಯುವೆನು; ಪೂರ್ವಕಾಲದಿಂದಿರುವ ಗುಪ್ತವಾದವುಗಳನ್ನು ನುಡಿಯುವೆನು.
ಕೀರ್ತನೆಗಳು 78 : 3 (KNV)
ಅವುಗಳನ್ನು ಕೇಳಿ ತಿಳಿದಿದ್ದೇವೆ; ನಮ್ಮ ತಂದೆಗಳು ನಮಗೆ ವಿವರಿಸಿದರು.
ಕೀರ್ತನೆಗಳು 78 : 4 (KNV)
ನಾವು ಕರ್ತನ ಸ್ತೋತ್ರಗಳನ್ನೂ ಆತನ ತ್ರಾಣವನ್ನೂ ಆತನು ಮಾಡಿದ ಅದ್ಭುತಗಳನ್ನೂ ವಿವರಿಸುತ್ತಾ ಅವರ ಮಕ್ಕಳಿಗೆ, ಮುಂದಿನ ವಂಶಕ್ಕೆ ಮರೆಮಾಡುವದಿಲ್ಲ.
ಕೀರ್ತನೆಗಳು 78 : 5 (KNV)
ಆತನು ಯಾಕೋಬನಲ್ಲಿ ಸಾಕ್ಷಿ ಯನ್ನು ಸ್ಥಾಪಿಸಿ ಇಸ್ರಾಯೇಲಿನಲ್ಲಿ ನ್ಯಾಯಪ್ರಮಾಣವನ್ನು ಇಟ್ಟು
ಕೀರ್ತನೆಗಳು 78 : 6 (KNV)
ಮುಂದಿನ ವಂಶವು ಅಂದರೆ ಹುಟ್ಟುವ ದಕ್ಕಿರುವ ಮಕ್ಕಳು ತಿಳಿದು, ಎದ್ದು, ತಮ್ಮ ಮಕ್ಕಳಿಗೆ ವಿವರಿಸಲಾಗಿ
ಕೀರ್ತನೆಗಳು 78 : 7 (KNV)
ಇವರು ದೇವರಲ್ಲಿ ತಮ್ಮ ನಿರೀಕ್ಷೆ ಇಡುವಂತೆಯೂ ದೇವರ ಕ್ರಿಯೆಗಳನ್ನು ಮರೆತುಬಿಡ ದಂತೆಯೂ ಆತನ ಆಜ್ಞೆಗಳನ್ನು ಕೈಕೊಂಡು
ಕೀರ್ತನೆಗಳು 78 : 8 (KNV)
ತಮ್ಮ ತಂದೆಗಳ ಹಾಗೆ ತಮ್ಮ ಹೃದಯವನ್ನು ಸ್ಥಿರಪಡಿಸು ವಂತೆಯೂ ತಮ್ಮ ಆತ್ಮವು ದೇವರೊಂದಿಗೆ ಸ್ಥಿರವಾಗು ವಂತೆಯೂ ಗರ್ವದಿಂದ ತಿರುಗಿ ಬೀಳುವಂಥ ವಂಶ ವಾಗಿರದ ಹಾಗೆಯೂ ಅದನ್ನು ತಮ್ಮ ಮಕ್ಕಳಿಗೆ ತಿಳಿ ಯಮಾಡಬೇಕೆಂದು ನಮ್ಮ ತಂದೆಗಳಿಗೆ ಆತನು ಆಜ್ಞಾಪಿಸಿದನು.
ಕೀರ್ತನೆಗಳು 78 : 9 (KNV)
ಎಫ್ರಾಯಾಮನ ಮಕ್ಕಳು ಆಯುಧಗಳನ್ನು ಧರಿಸಿ ಬಿಲ್ಲುಗಳನ್ನು ಹೊತ್ತುಕೊಂಡು ಕಾಳಗದ ದಿವಸದಲ್ಲಿ ಹಿಂತಿರುಗಿಕೊಂಡರು.
ಕೀರ್ತನೆಗಳು 78 : 10 (KNV)
ಅವರು ದೇವರ ಒಡಂಬಡಿಕೆ ಯನ್ನು ಕೈಕೊಳ್ಳದೆ ಆತನ ನ್ಯಾಯಪ್ರಮಾಣದಲ್ಲಿ ನಡೆಯಲೊಲ್ಲದೆ ಇದ್ದರು.
ಕೀರ್ತನೆಗಳು 78 : 11 (KNV)
ಆತನು ಅವರಿಗೆ ತೋರಿ ಸಿದ ಆತನ ಕೃತ್ಯಗಳನ್ನೂ ಆದ್ಭುತಗಳನ್ನೂ ಮರೆತು ಬಿಟ್ಟರು.
ಕೀರ್ತನೆಗಳು 78 : 12 (KNV)
ಅವರ ತಂದೆಗಳ ಮುಂದೆ ಐಗುಪ್ತ ದೇಶ ದಲ್ಲಿ, ಸೋನ್ ಬೈಲಿನಲ್ಲಿ ಆತನು ಅದ್ಭುತಗಳನ್ನು ಮಾಡಿದನು.
ಕೀರ್ತನೆಗಳು 78 : 13 (KNV)
ಆತನು ಸಮುದ್ರವನ್ನು ವಿಭಾಗಿಸಿ ಅವರನ್ನು ದಾಟಿಸಿದನು; ನೀರನ್ನು ಕುಪ್ಪೆಯಾಗಿ ನಿಲ್ಲಿಸಿ ದನು.
ಕೀರ್ತನೆಗಳು 78 : 14 (KNV)
ಹಗಲಿನಲ್ಲಿ ಮೇಘದಿಂದ, ರಾತ್ರಿಯೆಲ್ಲಾ ಬೆಂಕಿಯ ಬೆಳಕಿನಿಂದ ಅವರನ್ನು ನಡಿಸಿದನು.
ಕೀರ್ತನೆಗಳು 78 : 15 (KNV)
ಅರಣ್ಯ ದಲ್ಲಿ ಆತನು ಬಂಡೆಗಳನ್ನು ಸೀಳಿ ಅವರಿಗೆ ಮಹಾ ಜಲಾಗಾಧಗಳ ಹಾಗೆ ನೀರು ಕುಡಿಯಲು ಕೊಟ್ಟನು.
ಕೀರ್ತನೆಗಳು 78 : 16 (KNV)
ಬಂಡೆಯೊಳಗಿಂದ ಹೊಳೆಗಳನ್ನು ಹೊರಗೆ ತಂದು ನದಿಗಳಂತೆ ನೀರನ್ನು ಹರಿಯಮಾಡಿದನು.
ಕೀರ್ತನೆಗಳು 78 : 17 (KNV)
ಆದರೆ ಅವರು ಇನ್ನೂ ಆತನಿಗೆ ವಿರೋಧವಾಗಿ ಪಾಪಮಾಡಿ ಅರಣ್ಯದಲ್ಲಿ ಮಹೋನ್ನತನಿಗೆ ಕೋಪ ವನ್ನೆಬ್ಬಿಸಿ
ಕೀರ್ತನೆಗಳು 78 : 18 (KNV)
ದೇವರನ್ನು ತಮ್ಮ ಹೃದಯದಲ್ಲಿ ಶೋಧಿಸು ವವರಾಗಿ ತಮ್ಮ ದುರಾಶೆಗಳಿಗ್ಕೋಸ್ಕರ ಆಹಾರವನ್ನು ಕೇಳಿದರು.
ಕೀರ್ತನೆಗಳು 78 : 19 (KNV)
ಹೌದು, ಅವರು ದೇವರಿಗೆ ವಿರೋಧ ವಾಗಿ ಮಾತನಾಡಿ--ದೇವರು ಅರಣ್ಯದಲ್ಲಿ ಮೇಜನ್ನು ಸಿದ್ಧ ಮಾಡಬಲ್ಲನೋ ಅಂದರು.
ಕೀರ್ತನೆಗಳು 78 : 20 (KNV)
ಇಗೋ, ಆತನು ಬಂಡೆಯನ್ನು ಹೊಡೆಯಲಾಗಿ ನೀರು ಹೊರಟಿತು; ಹಳ್ಳಗಳು ಹರಿದವು; ರೊಟ್ಟಿಯನ್ನೂ ಕೊಡಬಲ್ಲನೋ? ತನ್ನ ಜನರಿಗೆ ಮಾಂಸವನ್ನು ಸಿದ್ಧ ಮಾಡುವನೋ ಅಂದರು.
ಕೀರ್ತನೆಗಳು 78 : 21 (KNV)
ಆದದರಿಂದ ಕರ್ತನು ಇದನ್ನು ಕೇಳಿದಾಗ ಉಗ್ರನಾದನು; ಯಾಕೋಬನಲ್ಲಿ ಬೆಂಕಿ ಹೊತ್ತಿತ್ತು; ಇಸ್ರಾಯೇಲಿನ ಮೇಲೆ ಕೋಪವು ಸಹ ಎದ್ದಿತು.
ಕೀರ್ತನೆಗಳು 78 : 22 (KNV)
ಅವರು ದೇವರಲ್ಲಿ ನಂಬಿಕೆ ಇಡಲಿಲ್ಲ; ಆತನ ರಕ್ಷಣೆಯಲ್ಲಿ ಭರವಸವಿಡಲಿಲ್ಲ.
ಕೀರ್ತನೆಗಳು 78 : 23 (KNV)
ಆದರೆ ಆತನು ಮೇಲಿರುವ ಮೇಘಗಳಿಗೆ ಆಜ್ಞಾಪಿಸಿ ಪರಲೋಕದ ಕದಗಳನ್ನು ತೆರೆದನು.
ಕೀರ್ತನೆಗಳು 78 : 24 (KNV)
ಉಣ್ಣುವದಕ್ಕೆ ಮನ್ನವನ್ನು ಅವರ ಮೇಲೆ ಸುರಿಸಿ ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟನು.
ಕೀರ್ತನೆಗಳು 78 : 25 (KNV)
ಮನುಷ್ಯನು ದೂತರ ಆಹಾರ ವನ್ನು ತಿಂದನು; ತೃಪ್ತಿಯಾಗುವಷ್ಟು ಆಹಾರವನ್ನು ಅವರಿಗೆ ಆತನು ಕಳುಹಿಸಿದನು.
ಕೀರ್ತನೆಗಳು 78 : 26 (KNV)
ಮೂಡಣ ಗಾಳಿ ಯನ್ನು ಆಕಾಶದಲ್ಲಿ ಹುಟ್ಟಿಸಿ ತನ್ನ ಬಲದಿಂದ ದಕ್ಷಿಣ ಗಾಳಿಯನ್ನು ತಂದನು.
ಕೀರ್ತನೆಗಳು 78 : 27 (KNV)
ಧೂಳಿನಂತೆ ಮಾಂಸವನ್ನೂ ಸಮುದ್ರದ ಮರಳಿನಂತೆ ರೆಕ್ಕೆಯುಳ್ಳ ಪಕ್ಷಿಗಳನ್ನೂ ಅವರ ಮೇಲೆ ಸುರಿಸಿ
ಕೀರ್ತನೆಗಳು 78 : 28 (KNV)
ಅವರ ಮಧ್ಯದಲ್ಲಿಯೂ ಅವರ ನಿವಾಸಗಳ ಸುತ್ತಲೂ ಬೀಳಮಾಡಿದನು.
ಕೀರ್ತನೆಗಳು 78 : 29 (KNV)
ಅವರು ತಿಂದು ಬಹಳ ತೃಪ್ತಿಯಾದರು; ಅವರು ಆಶಿಸಿದ್ದನ್ನು ಆತನು ಅವರಿಗೆ ಕೊಟ್ಟನು.
ಕೀರ್ತನೆಗಳು 78 : 30 (KNV)
ಅವರು ತಮ್ಮ ಆಶೆಯನ್ನು ಬಿಡದೆ ಅವರ ಊಟವು ಇನ್ನೂ ಅವರ ಬಾಯಿಯಲ್ಲಿ ಇರುವಾಗ
ಕೀರ್ತನೆಗಳು 78 : 31 (KNV)
ದೇವರ ಕೋಪವು ಅವರ ಮೇಲೆ ಎದ್ದು ಅವರಲ್ಲಿ ಕೊಬ್ಬಿದವ ರನ್ನು ಕೊಂದುಹಾಕಿ ಇಸ್ರಾಯೇಲಿನ ಪ್ರಾಯಸ್ಥರನ್ನು ಹೊಡೆದು ಬೀಳಿಸಿತು.
ಕೀರ್ತನೆಗಳು 78 : 32 (KNV)
ಇದೆಲ್ಲಾ ಆದಾಗ್ಯೂ ಅವರು ಇನ್ನೂ ಪಾಪಮಾಡಿ ಆತನ ಆದ್ಭುತಗಳನ್ನು ನಂಬ ಲಿಲ್ಲ.
ಕೀರ್ತನೆಗಳು 78 : 33 (KNV)
ಆಗ ಆತನು ಅವರ ದಿವಸಗಳನ್ನು ಉಸಿರಿ ನಂತೆಯೂ ಅವರ ವರುಷಗಳನ್ನು ಕಳವಳದಲ್ಲಿಯೂ ಮುಗಿಸಿದನು.
ಕೀರ್ತನೆಗಳು 78 : 34 (KNV)
ಅವರನ್ನು ಕೊಲ್ಲುವಾಗ ಅವರು ಆತನನ್ನು ಹುಡುಕಿ ತಿರುಗಿಕೊಂಡು ದೇವರನ್ನು ಹೊತ್ತಾರೆ ವಿಚಾರಿಸಿ
ಕೀರ್ತನೆಗಳು 78 : 35 (KNV)
ದೇವರು ತಮ್ಮ ಬಂಡೆ ಎಂದೂ ಮಹೋನ್ನತ ನಾದ ದೇವರು ತಮ್ಮ ವಿಮೋಚಕನೆಂದೂ ಜ್ಞಾಪಕ ಮಾಡಿಕೊಂಡರು.
ಕೀರ್ತನೆಗಳು 78 : 36 (KNV)
ಆದಾಗ್ಯೂ ತಮ್ಮ ಬಾಯಿಗಳಿಂದ ಆತನಿಗೆ ಮುಖಸ್ತುತಿ ಮಾಡಿ ತಮ್ಮ ನಾಲಿಗೆಯಿಂದ ಆತನಿಗೆ ಸುಳ್ಳು ಹೇಳಿದರು.
ಕೀರ್ತನೆಗಳು 78 : 37 (KNV)
ಅವರ ಹೃದಯವು ಆತನ ಸಂಗಡ ಇರಲಿಲ್ಲ ಅವರು ಆತನ ಒಡಂಬಡಿ ಕೆಯಲ್ಲೂ ಸ್ಥಿರವಾಗಿರಲಿಲ್ಲ
ಕೀರ್ತನೆಗಳು 78 : 38 (KNV)
ಆದಾಗ್ಯೂ ಆತನು ಅಂತಃಕರಣವುಳ್ಳವನಾಗಿ, ಅವರ ಅಕ್ರಮವನ್ನು ಕ್ಷಮಿಸಿ, ನಾಶಮಾಡದೆ ಹೌದು, ಆತನು ಅನೇಕ ಸಾರಿ ತನ್ನ ಕೋಪವನ್ನು ತೋರಿಸದೆ ಕೋಪೋದ್ರೇಕವನ್ನೂ ಮಾಡಿಕೊಳ್ಳಲಿಲ್ಲ.
ಕೀರ್ತನೆಗಳು 78 : 39 (KNV)
ಅವರು ಕೇವಲ ಮನುಷ್ಯ ರೆಂದು, ಹಾರಿಹೋಗಿ ತಿರುಗಿಬಾರದ ಗಾಳಿಯಾಗಿ ದ್ದಾರೆಂದು ಆತನು ಜ್ಞಾಪಕಮಾಡಿಕೊಂಡನು.
ಕೀರ್ತನೆಗಳು 78 : 40 (KNV)
ಎಷ್ಟೋ ಸಾರಿ ಅವರು ಅರಣ್ಯದಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು. ಕಾಡಿನಲ್ಲಿ ಆತನನ್ನು ದುಃಖ ಪಡಿಸಿದರು.
ಕೀರ್ತನೆಗಳು 78 : 41 (KNV)
ಹೌದು, ಅವರು ತಿರುಗಿಬಿದ್ದು ದೇವ ರನ್ನು ಪರೀಕ್ಷಿಸಿ ಇಸ್ರಾಯೇಲಿನ ಪರಿಶುದ್ಧನಿಗೆ ಮಿತಿ ಮಾಡಿದರು.
ಕೀರ್ತನೆಗಳು 78 : 42 (KNV)
ಆತನು ಅವರನ್ನು ವೈರಿಯಿಂದ ವಿಮೋಚಿಸಿದ್ದನ್ನೂ
ಕೀರ್ತನೆಗಳು 78 : 43 (KNV)
ಐಗುಪ್ತದಲ್ಲಿ ಆದ ಸೂಚಕ ಕಾರ್ಯಗಳನ್ನೂ ಸೋನ್ ಬೈಲಿನಲ್ಲಿ ನಡಿಸಿದ ಅದ್ಭುತ ಗಳನ್ನೂ ಮಾಡಿದ ದಿವಸವನ್ನೂ ಆತನ ಕೈಯನ್ನೂ ಅವರು ಜ್ಞಾಪಕಮಾಡಿಕೊಳ್ಳಲಿಲ್ಲ.
ಕೀರ್ತನೆಗಳು 78 : 44 (KNV)
ಅವರು ಕುಡಿ ಯಲಾರದ ಹಾಗೆ ಅವರ ನದಿಗಳನ್ನೂ ಹೊಳೆಗ ಳನ್ನೂ ಆತನು ರಕ್ತಕ್ಕೆ ಮಾರ್ಪಡಿಸಿದನು.
ಕೀರ್ತನೆಗಳು 78 : 45 (KNV)
ಅವರಲ್ಲಿ ವಿವಿಧ ಹುಳಗಳನ್ನು ಕಳುಹಿಸಿದನು, ಅವು ಅವರನ್ನು ತಿಂದು ಬಿಟ್ಟವು; ಕಪ್ಪೆಗಳನ್ನು ಸಹ ಕಳುಹಿಸಿದನು; ಅವು ಅವರನ್ನು ನಾಶಮಾಡಿದವು.
ಕೀರ್ತನೆಗಳು 78 : 46 (KNV)
ಅವರ ಬೆಳೆ ಯನ್ನು ಕಂಬಳಿ ಹುಳಗಳಿಗೂ ವ್ಯವಸಾಯವನ್ನು ಮಿಡಿತೆಗಳಿಗೂ ಕೊಟ್ಟು
ಕೀರ್ತನೆಗಳು 78 : 47 (KNV)
ಅವರ ದ್ರಾಕ್ಷೇ ಬಳ್ಳಿಗ ಳನ್ನು ಕಲ್ಮಳೆಯಿಂದಲೂ ಆಲದ ಮರಗಳನ್ನು ಮಂಜಿ ನಿಂದಲೂ ನಾಶ ಮಾಡಿ
ಕೀರ್ತನೆಗಳು 78 : 48 (KNV)
ಅವರ ದನಗಳನ್ನು ಕಲ್ಮ ಳೆಗೂ ಮಂದೆಗಳನ್ನು ಸಿಡಿಲಿಗೂ ಒಪ್ಪಿಸಿಬಿಟ್ಟನು.
ಕೀರ್ತನೆಗಳು 78 : 49 (KNV)
ಉಪದ್ರಪಡಿಸುವ ದೂತರನ್ನೋ ಎಂಬಂತೆ ತನ್ನ ಕೋಪದ ಉರಿಯನ್ನು ಉಗ್ರ, ರೋಷ, ಇಕ್ಕಟ್ಟುಗಳನ್ನು ಅವರ ಮೇಲೆ ಸುರಿಸಿದನು.
ಕೀರ್ತನೆಗಳು 78 : 50 (KNV)
ತನ್ನ ಕೋಪಕ್ಕೆ ದಾರಿಮಾಡಿ ಅವರ ಪ್ರಾಣವನ್ನು ಸಾವಿನಿಂದ ಉಳಿಸದೆ ಅವರ ಜೀವವನ್ನು ಜಾಡ್ಯಕ್ಕೆ ಒಪ್ಪಿಸಿ
ಕೀರ್ತನೆಗಳು 78 : 51 (KNV)
ಐಗುಪ್ತದಲ್ಲಿ ಚೊಚ್ಚಲವಾದವರೆಲ್ಲರನ್ನೂ ಹಾಮನ ಗುಡಾರಗಳಲ್ಲಿ ಶಕ್ತಿಯ ಪ್ರಥಮ ಫಲವನ್ನೂ ಹೊಡೆದನು.
ಕೀರ್ತನೆಗಳು 78 : 52 (KNV)
ಕುರಿಗಳ ಹಾಗೆ ತನ್ನ ಜನರನ್ನು ಹೊರತಂದು, ಮಂದೆಯ ಹಾಗೆ ಅರಣ್ಯದಲ್ಲಿ ಅವರನ್ನು ನಡಿಸಿದನು.
ಕೀರ್ತನೆಗಳು 78 : 53 (KNV)
ಅವರನ್ನು ಸುರಕ್ಷಿತವಾಗಿ ನಡಿಸಿದಕಾರಣ ಅವರು ಹೆದರಲಿಲ್ಲ; ಆದರೆ ಸಮುದ್ರವು ಅವರ ಶತ್ರುಗಳನ್ನು ಮುಚ್ಚಿಬಿಟ್ಟಿತು.
ಕೀರ್ತನೆಗಳು 78 : 54 (KNV)
ತನ್ನ ಪರಿಶುದ್ದಾಲಯದ ಮೇರೆಗೂ ಆತನ ಬಲಗೈ ಕೊಂಡುಕೊಂಡ ಈ ಪರ್ವತಕ್ಕೂ ಅವರನ್ನು ಬರ ಮಾಡಿದನು.
ಕೀರ್ತನೆಗಳು 78 : 55 (KNV)
ಅನ್ಯಜನಾಂಗವನ್ನು ಅವರ ಮುಂದೆ ಹೊರಗೆ ಹಾಕಿ, ಅವರ ಬಾಧ್ಯತೆಯನ್ನು ಅಳತೆಮಾಡಿ, ಹಂಚಿ, ಅವರ ಗುಡಾರಗಳಲ್ಲಿ ಇಸ್ರಾಯೇಲಿನ ಗೋತ್ರ ಗಳು ವಾಸಿಸುವಂತೆ ಮಾಡಿದನು.
ಕೀರ್ತನೆಗಳು 78 : 56 (KNV)
ಆದರೆ ಅವರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ರೇಗಿಸಿದರು; ಆತನ ವಿಧಿಗಳನ್ನು ಕೈಕೊಳ್ಳ ಲಿಲ್ಲ.
ಕೀರ್ತನೆಗಳು 78 : 57 (KNV)
ತಮ್ಮ ಪಿತೃಗಳ ಹಾಗೆ ತಿರುಗಿಬಿದ್ದು ಅಪ ನಂಬಿಗಸ್ತರಾಗಿ ಮೋಸದ ಬಿಲ್ಲಿನ ಹಾಗೆ ವಾರೆ ಯಾದರು.
ಕೀರ್ತನೆಗಳು 78 : 58 (KNV)
ತಮ್ಮ ಉನ್ನತ ಸ್ಥಳಗಳಿಂದ ಆತನಿಗೆ ಕೋಪವನ್ನೆಬ್ಬಿಸಿ ಕೆತ್ತಿದ ತಮ್ಮ ವಿಗ್ರಹಗಳಿಂದ ಆತನಿಗೆ ರೋಷವನ್ನೆಬ್ಬಿಸಿದರು.
ಕೀರ್ತನೆಗಳು 78 : 59 (KNV)
ದೇವರು ಇದನ್ನು ಕೇಳಿ ಉಗ್ರನಾಗಿ ಇಸ್ರಾಯೇಲನ್ನು ಬಹು ಅಸಹ್ಯಿಸಿ ಬಿಟ್ಟು,
ಕೀರ್ತನೆಗಳು 78 : 60 (KNV)
ಸಿಲೋವಿನ ಗುಡಾರವನ್ನೂ ಮನುಷ್ಯರೊಳಗೆ ಆತನು ಹಾಕಿದ ಗುಡಾರವನ್ನೂ ಬಿಟ್ಟು,
ಕೀರ್ತನೆಗಳು 78 : 61 (KNV)
ತನ್ನ ಬಲ ವನ್ನು ಸೆರೆಗೂ ಮಹಿಮೆಯನ್ನು ವೈರಿಯ ಕೈಗೂ ಕೊಟ್ಟುಬಿಟ್ಟನು.
ಕೀರ್ತನೆಗಳು 78 : 62 (KNV)
ತನ್ನ ಜನರನ್ನು ಕತ್ತಿಗೆ ಒಪ್ಪಿಸಿಕೊಟ್ಟು ತನ್ನ ಬಾಧ್ಯತೆಗೆ ವಿರೋಧವಾಗಿ ಉಗ್ರನಾದನು.
ಕೀರ್ತನೆಗಳು 78 : 63 (KNV)
ಅವರ ಪ್ರಾಯಸ್ಥರನ್ನು ಬೆಂಕಿಯು ದಹಿಸಿಬಿಟ್ಟಿತು; ಅವರ ಕನ್ಯೆಯರು ಮದುವೆಯಾಗಲಿಲ್ಲ.
ಕೀರ್ತನೆಗಳು 78 : 64 (KNV)
ಅವರ ಯಾಜಕರು ಕತ್ತಿಯಿಂದ ಸಂಹಾರವಾದರು; ಅವರ ವಿಧವೆಯರು ಗೋಳಾಡಲಿಲ್ಲ.
ಕೀರ್ತನೆಗಳು 78 : 65 (KNV)
ಆಗ ಕರ್ತನು ನಿದ್ದೆಯಿಂದ ಎಚ್ಚತ್ತವನ ಹಾಗೆಯೂ ದ್ರಾಕ್ಷಾರಸದಿಂದ ಆರ್ಭಟಿಸುವ ಪರಾಕ್ರಮಶಾಲಿಯ ಹಾಗೆಯೂ ಎಚ್ಚತ್ತು,
ಕೀರ್ತನೆಗಳು 78 : 66 (KNV)
ತನ್ನ ವೈರಿಗಳನ್ನು ಹಿಂದಕ್ಕೆ ಹೊಡೆದು, ನಿತ್ಯ ನಿಂದೆಯನ್ನು ಅವರಿಗೆ ಕೊಟ್ಟನು.
ಕೀರ್ತನೆಗಳು 78 : 67 (KNV)
ಆತನು ಯೋಸೇಫನ ಗುಡಾರವನ್ನು ತಿರಸ್ಕರಿಸಿ, ಎಫ್ರಾಯಾಮನ ಗೋತ್ರವನ್ನು ಆದು ಕೊಳ್ಳದೆ,
ಕೀರ್ತನೆಗಳು 78 : 68 (KNV)
ಯೆಹೂದನ ಕುಲವನ್ನೂ ತಾನು ಪ್ರೀತಿ ಮಾಡಿದ ಚೀಯೋನ್ ಪರ್ವತವನ್ನೂ ಆದುಕೊಂಡು,
ಕೀರ್ತನೆಗಳು 78 : 69 (KNV)
ಉನ್ನತವಾದವುಗಳಂತೆಯೂ ಯುಗಯುಗಕ್ಕೂ ತಾನು ಅಸ್ತಿವಾರ ಹಾಕಿದ ಭೂಮಿಯಂತೆಯೂ ತನ್ನ ಪರಿಶುದ್ಧಾಲಯವನ್ನು ಕಟ್ಟಿದನು
ಕೀರ್ತನೆಗಳು 78 : 70 (KNV)
ಇದಲ್ಲದೆ ತನ್ನ ಸೇವಕನಾದ ದಾವೀದನನ್ನು ಆದುಕೊಂಡು, ಕುರಿ ಹಟ್ಟಿಗಳಿಂದ ಅವನನ್ನು ತೆಗೆದು,
ಕೀರ್ತನೆಗಳು 78 : 71 (KNV)
ತನ್ನ ಪ್ರಜೆಯಾದ ಯಾಕೋಬನ್ನೂ ಭಾದ್ಯತೆಯಾದ ಇಸ್ರಾಯೇಲನ್ನೂ ಮೇಯಿಸುವ ಹಾಗೆ, ಅವನನ್ನು ಕುರಿಮರಿಗಳ ಹಿಂಡಿ ನಿಂದ ತಂದನು.
ಕೀರ್ತನೆಗಳು 78 : 72 (KNV)
ಆತನು ತನ್ನ ಹೃದಯದ ಯಥಾ ರ್ಥತ್ವದ ಪ್ರಕಾರ ಅವರನ್ನು ಮೇಯಿಸಿ ತನ್ನ ಹಸ್ತ ಕೌಶಲ್ಯದಿಂದ ಅವರನ್ನು ನಡಿಸಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72