ಕೀರ್ತನೆಗಳು 77 : 1 (KNV)
ನನ್ನ ಸ್ವರದಿಂದ ದೇವರಿಗೆ ಮೊರೆಯಿಟ್ಟೆನು, ದೇವರಿಗೆ ನನ್ನ ಸ್ವರದಿಂದ ಮೊರೆಯಿಟ್ಟೆನು; ಆತನು ನನ್ನ ಮೊರೆಯನ್ನು ಆಲೈಸಿದನು.
ಕೀರ್ತನೆಗಳು 77 : 2 (KNV)
ನನ್ನ ಇಕ್ಕ ಟ್ಟಿನ ದಿವಸದಲ್ಲಿ ಕರ್ತನನ್ನು ಹುಡುಕಿದೆನು; ನಾನು ರಾತ್ರಿಯೆಲ್ಲಾ ವ್ಯಥೆಪಟ್ಟದ್ದರಿಂದ ನನ್ನ ಪ್ರಾಣವು ಆದರಣೆ ಹೊಂದಲೊಲ್ಲದು.
ಕೀರ್ತನೆಗಳು 77 : 3 (KNV)
ನಾನು ವ್ಯಥೆಪಡುತ್ತಾ ದೇವರನ್ನು ಜ್ಞಾಪಕಮಾಡಿಕೊಂಡೆನು. ನಾನು ಚಿಂತಿ ಸುವದರಿಂದ ನನ್ನ ಆತ್ಮವು ಬಳಲಿ ಹೋಗಿದೆ ಸೆಲಾ.
ಕೀರ್ತನೆಗಳು 77 : 4 (KNV)
ನನ್ನ ಕಣ್ಣುಗಳನ್ನು ಮುಚ್ಚದಂತೆ ನೀನು ಹಿಡಿಯುತ್ತೀ; ನಾನು ಮಾತಾಡದಂತೆ ಕಳವಳಪಟ್ಟಿದ್ದೇನೆ.
ಕೀರ್ತನೆಗಳು 77 : 5 (KNV)
ಪುರಾ ತನ ದಿವಸಗಳನ್ನೂ ಆದಿಕಾಲದ ವರುಷಗಳನ್ನೂ ಯೋಚಿಸಿದೆನು.
ಕೀರ್ತನೆಗಳು 77 : 6 (KNV)
ನನ್ನ ಹಾಡನ್ನು ರಾತ್ರಿಯಲ್ಲಿ ಜ್ಞಾಪಕ ಮಾಡಿಕೊಳ್ಳುತ್ತೇನೆ; ನನ್ನ ಹೃದಯದ ಸಂಗಡ ಮಾತಾ ಡುತ್ತೇನೆ; ನನ್ನ ಆತ್ಮವು ಪರಿಶೋಧನೆ ಮಾಡಿತು.
ಕೀರ್ತನೆಗಳು 77 : 7 (KNV)
ನಿರಂತರವಾಗಿ ಕರ್ತನು ತಳ್ಳಿಬಿಡುವನೋ? ಇನ್ನು ದಯೆತೋರದೆ ಇರುವನೋ?
ಕೀರ್ತನೆಗಳು 77 : 8 (KNV)
ಆತನ ಕೃಪೆಯು ಸದಾಕಾಲಕ್ಕೆ ನಿಂತು ಹೋಗುತ್ತದೋ? ನಿರಂತರಕ್ಕೂ ವಾಗ್ದಾನ ತಪ್ಪಿಹೋಗುತ್ತದೋ?
ಕೀರ್ತನೆಗಳು 77 : 9 (KNV)
ದೇವರು ಕರು ಣಿಸುವದನ್ನು ಮರೆತು ಬಿಟ್ಟಿದ್ದಾನೋ? ತನ್ನ ಅಂತಃ ಕರಣಗಳನ್ನು ಕೋಪದಿಂದ ಮುಚ್ಚಿಕೊಂಡಿದ್ದಾನೋ? ಸೆಲಾ.
ಕೀರ್ತನೆಗಳು 77 : 10 (KNV)
ಇದೇ ನನ್ನ ಬಲಹೀನತೆ ಎಂದು ನಾನು ಅಂದುಕೊಂಡೆನು. ಮಹೋನ್ನತನ ಬಲಗೈಯ ವರ್ಷ ಗಳನ್ನು ಜ್ಞಾಪಕಮಾಡಿಕೊಳ್ಳುವೆನು;
ಕೀರ್ತನೆಗಳು 77 : 11 (KNV)
ಕರ್ತನ ಕ್ರಿಯೆಗಳನ್ನು ನೆನಸಿ ನಿಶ್ಚಯವಾಗಿ ಪುರಾತನ ಅದ್ಭುತ ಗಳನ್ನು ಜ್ಞಾಪಿಸಿಕೊಳ್ಳುವೆನು.
ಕೀರ್ತನೆಗಳು 77 : 12 (KNV)
ನಿನ್ನ ಕೆಲಸವನ್ನೆಲ್ಲಾ ಸ್ಮರಿಸಿ ನಿನ್ನ ಕೃತ್ಯಗಳನ್ನು ಕುರಿತು ಮಾತನಾಡುವೆನು.
ಕೀರ್ತನೆಗಳು 77 : 13 (KNV)
ಓ ದೇವರೇ, ನಿನ್ನ ಮಾರ್ಗವು ಪರಿಶುದ್ಧ ಆಲಯದಲ್ಲಿದೆ; ನಮ್ಮ ದೇವರಂತೆ ದೊಡ್ಡ ದೇವರು ಯಾರು?
ಕೀರ್ತನೆಗಳು 77 : 14 (KNV)
ಅದ್ಭುತಗಳನ್ನು ನಡಿಸುವ ದೇವರು ನೀನೇ; ನಿನ್ನ ಬಲವನ್ನು ಜನರಲ್ಲಿ ತೋರಿಸಿದ್ದೀ.
ಕೀರ್ತನೆಗಳು 77 : 15 (KNV)
ಯಾಕೋಬನ ಮತ್ತು ಯೋಸೇಫನ ಮಕ್ಕಳಾದ ನಿನ್ನ ಜನರನ್ನು ತೋಳಿನಿಂದ ವಿಮೋಚನೆ ಮಾಡಿದ್ದೀ ಸೆಲಾ.
ಕೀರ್ತನೆಗಳು 77 : 16 (KNV)
ನೀರು ಗಳು ನಿನ್ನನ್ನು ನೋಡಿದವು; ಓ ದೇವರೇ, ನೀರುಗಳು ನಿನ್ನನ್ನು ನೋಡಿ ಭ್ರಮೆಗೊಂಡವು; ಅಗಾಧಗಳು ನಡುಗಿದವು.
ಕೀರ್ತನೆಗಳು 77 : 17 (KNV)
ಮೋಡಗಳು ನೀರನ್ನು ಸುರಿಸಿದವು; ಆಕಾಶಗಳು ಶಬ್ದ ಮಾಡಿದವು; ನಿನ್ನ ಬಾಣಗಳು ಸಹ ಹಾರಿ ಬಂದವು.
ಕೀರ್ತನೆಗಳು 77 : 18 (KNV)
ನಿನ್ನ ಗುಡುಗಿನ ಶಬ್ದವು ಆಕಾಶ ಮಂಡಲದಲ್ಲಿ ಇತ್ತು; ಮಿಂಚುಗಳು ಜಗತ್ತನ್ನು ಬೆಳಗ ಮಾಡಿದವು; ಭೂಮಿಯು ನಡುಗಿ ಕದಲಿತು.
ಕೀರ್ತನೆಗಳು 77 : 19 (KNV)
ನಿನ್ನ ಮಾರ್ಗವು ಸಮುದ್ರದಲ್ಲಿ ಅದೆ; ನಿನ್ನ ಹಾದಿಯು ಬಹಳ ನೀರುಗಳಲ್ಲಿ ಅವೆ; ನಿನ್ನ ಹೆಜ್ಜೆಗಳು ತಿಳಿಯ ಲ್ಪಡಲಿಲ್ಲ.ಮೋಶೆ ಆರೋನರ ಕೈಯಿಂದ ನಿನ್ನ ಜನರನ್ನು ಮಂದೆಯ ಹಾಗೆ ನಡಿಸಿದಿ.
ಕೀರ್ತನೆಗಳು 77 : 20 (KNV)
ಮೋಶೆ ಆರೋನರ ಕೈಯಿಂದ ನಿನ್ನ ಜನರನ್ನು ಮಂದೆಯ ಹಾಗೆ ನಡಿಸಿದಿ.

1 2 3 4 5 6 7 8 9 10 11 12 13 14 15 16 17 18 19 20

BG:

Opacity:

Color:


Size:


Font: