ಕೀರ್ತನೆಗಳು 68 : 1 (KNV)
ದೇವರು ಎದ್ದೇಳುವಾಗ, ಆತನನ್ನು ಹಗೆ ಮಾಡುವವರು ಚದುರಿಸಲ್ಪಡಲಿ; ಆತ ನನ್ನು ವಿರೋಧಿಸುವವರು ಆತನ ಸಮ್ಮುಖದಿಂದ ಓಡಿ ಹೋಗುತ್ತಾರೆ.
ಕೀರ್ತನೆಗಳು 68 : 2 (KNV)
ಹೊಗೆ ಹಾರಿಹೋಗುವ ಮೇರೆಗೆ ಅವರನ್ನು ಓಡಿಸಿಬಿಡು; ಮೇಣವು ಬೆಂಕಿಯ ಮುಂದೆ ಕರಗುವ ಹಾಗೆ ದುಷ್ಟರು ದೇವರ ಮುಂದೆ ನಾಶ ವಾಗಲಿ.
ಕೀರ್ತನೆಗಳು 68 : 3 (KNV)
ಆದರೆ ನೀತಿವಂತರು ಸಂತೋಷಿಸಲಿ; ದೇವರ ಮುಂದೆ ಉತ್ಸಾಹಪಡಲಿ; ಹೌದು, ಅವರು ಅತಿಸಂತೋಷದಿಂದ ಹರ್ಷಿಸುವವರಾಗಲಿ.
ಕೀರ್ತನೆಗಳು 68 : 4 (KNV)
ದೇವರಿಗೆ ಹಾಡಿರಿ; ಆತನ ನಾಮಕ್ಕೆ ಸ್ತುತಿಗಳನ್ನು ಹಾಡಿರಿ; ಆಕಾಶಗಳ ಮೇಲೆ ಯಾಹು ಎಂಬ ತನ್ನ ಹೆಸರಿನ ಮೇಲೆ ಸವಾರಿಮಾಡುವಾತನನ್ನು ಕೊಂಡಾಡಿ ಆತನ ಮುಂದೆ ಉತ್ಸಾಹಪಡಿರಿ.
ಕೀರ್ತನೆಗಳು 68 : 5 (KNV)
ದೇವರು ತನ್ನ ಪರಿಶುದ್ಧಸ್ಥಾನದಲ್ಲಿ ದಿಕ್ಕಿಲ್ಲದವರಿಗೆ ತಂದೆಯೂ ವಿಧವೆಯರಿಗೆ ನ್ಯಾಯಾಧಿಪತಿಯೂ ಆಗಿದ್ದಾನೆ.
ಕೀರ್ತನೆಗಳು 68 : 6 (KNV)
ದೇವರು ಒಬ್ಬೊಂಟಿಗರನ್ನು ಕುಟುಂಬಸ್ತರನ್ನಾಗಿ ಮಾಡುತ್ತಾನೆ; ಸರಪಣಿಗಳಿಂದ ಬಂಧಿಸಲ್ಪಟ್ಟವರನ್ನು ಹೊರಗೆ ಬರಮಾಡುತ್ತಾನೆ; ಆದರೆ ಎದುರು ಬೀಳು ವವರು ಒಣಭೂಮಿಯಲ್ಲಿ ವಾಸಮಾಡುತ್ತಾರೆ.
ಕೀರ್ತನೆಗಳು 68 : 7 (KNV)
ಓ ದೇವರೇ, ನೀನು ನಿನ್ನ ಜನರ ಮುಂದೆ ಹೊರಟು ಕಾಡಿನಲ್ಲಿ ನಡೆದಾಗ, ಸೆಲಾ.
ಕೀರ್ತನೆಗಳು 68 : 8 (KNV)
ದೇವರು ಪ್ರತ್ಯಕ್ಷನಾಗಿ ದ್ದಾನೆಂದು ಭೂಮಿಯು ಕಂಪಿಸಿತು; ಮೇಘ ಮಂಡ ಲವು ಮಳೆಗರಿಯಿತು. ಇಸ್ರಾಯೇಲ್ಯರ ದೇವನಾದ ದೇವರು ಪ್ರತ್ಯಕ್ಷನಾಗಿದ್ದಾನೆಂದು ಆ ಸೀನಾಯಿ ಬೆಟ್ಟವು ಕದಲಿತು.
ಕೀರ್ತನೆಗಳು 68 : 9 (KNV)
ಓ ದೇವರೇ, ನೀನು ಸಮೃದ್ಧಿಯಾಗಿ ಮಳೆಯನ್ನು ಸುರಿಸಿದಿ; ಇದರಿಂದ ದಣಿದ ನಿನ್ನ ಬಾಧ್ಯ ತೆಯನ್ನು ನೀನು ಸ್ಥಿರಪಡಿಸಿದಿ.
ಕೀರ್ತನೆಗಳು 68 : 10 (KNV)
ನಿನ್ನ ಸಭೆಯು ಅದರಲ್ಲಿ ವಾಸಮಾಡಿತು; ಓ ದೇವರೇ, ನಿನ್ನ ಸಮೃದ್ಧಿ ಯಿಂದ ಬಡವರನ್ನು ತೃಪ್ತಿಪಡಿಸಿದಿ.
ಕೀರ್ತನೆಗಳು 68 : 11 (KNV)
ಕರ್ತನು ವಾಕ್ಯ ವನ್ನು ಕೊಟ್ಟನು; ಅದನ್ನು ಪ್ರಕಟಿಸಿದವರ ಗುಂಪು ದೊಡ್ಡದಾಗಿತ್ತು.
ಕೀರ್ತನೆಗಳು 68 : 12 (KNV)
ಸೈನ್ಯಗಳ ಅರಸರು ತ್ವರೆಯಾಗಿ ಓಡಿಹೋದರು; ಮನೆಯಲ್ಲಿ ವಾಸಿಸುವವಳು ಕೊಳ್ಳೆ ಯನ್ನು ಪಾಲು ಮಾಡಿಕೊಂಡಳು.
ಕೀರ್ತನೆಗಳು 68 : 13 (KNV)
ನೀವು ಮಡಿಕೆ ಗಳ ಮಧ್ಯದಲ್ಲಿ ಮಲಗಿದಾಗ್ಯೂ ಬೆಳ್ಳಿಯಿಂದಲೂ ಅದರ ರೆಕ್ಕೆಗಳು ಹಳದಿ ಚಿನ್ನದಿಂದಲೂ ಮುಚ್ಚಿದ ಪಾರಿವಾಳದ ರೆಕ್ಕೆಗಳ ಹಾಗಿದ್ದೀರಿ.
ಕೀರ್ತನೆಗಳು 68 : 14 (KNV)
ಸರ್ವಶಕ್ತನು ಅರಸುಗಳನ್ನು ಸಲ್ಮೋನಿನಲ್ಲಿ ಚದರಿಸಿದಾಗ ಅದರಲ್ಲಿ ಬಿಳೀ ಹಿಮದ ಹಾಗಿತ್ತು.
ಕೀರ್ತನೆಗಳು 68 : 15 (KNV)
ಬಾಷಾನ್ ಬೆಟ್ಟವು ದೇವರ ಬೆಟ್ಟದಂತೆ ಇದೆ; ಬಾಷಾನ್ ಬೆಟ್ಟವು ಉನ್ನತ ಬೆಟ್ಟವಾಗಿದೆ.
ಕೀರ್ತನೆಗಳು 68 : 16 (KNV)
ಉನ್ನತ ಬೆಟ್ಟಗಳೇ, ಯಾಕೆ ನೆಗೆಯುತ್ತೀರಿ? ದೇವರು ನಿವಾಸ ಕ್ಕಾಗಿ ಅಪೇಕ್ಷಿಸುವ ಬೆಟ್ಟವು ಇದೇ ಹೌದು, ಕರ್ತನು ಅದರಲ್ಲಿ ಸದಾಕಾಲಕ್ಕೆ ವಾಸಿಸುವನು.
ಕೀರ್ತನೆಗಳು 68 : 17 (KNV)
ದೇವರ ರಥಗಳು ಇಪ್ಪತ್ತು ಸಾವಿರವು, ಸಾವಿರಾರು ದೂತರು ಗಳು; ಕರ್ತನು ಸೀನಾಯಿಯಲ್ಲಿ ಇದ್ದ ಹಾಗೆ ಅವರೊಳಗೆ ಪರಿಶುದ್ಧ ಸ್ಥಳದಲ್ಲಿ ಇದ್ದಾನೆ.
ಕೀರ್ತನೆಗಳು 68 : 18 (KNV)
ನೀನು ಉನ್ನತಕ್ಕೆ ಏರಿಹೋಗಿ ಸೆರೆಯವರನ್ನು ಸೆರೆಯಾಗಿ ನಡೆಸಿದಿ, ಕರ್ತನಾದ ದೇವರು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಮನುಷ್ಯರಿಗಾಗಿಯೂ ಹೌದು, ತಿರುಗಿ ಬಿದ್ದವರಿಗಾಗಿಯೂ ಸ್ವೀಕರಿಸಿದಿ.
ಕೀರ್ತನೆಗಳು 68 : 19 (KNV)
ಪ್ರತಿ ದಿನವೂ ನಮ್ಮನ್ನು ಮೇಲುಗಳಿಂದ ತುಂಬಿಸು,ಕರ್ತನು ಅಂದರೆ ನಮ್ಮ ರಕ್ಷಣೆಯ ದೇವರು ಸ್ತುತಿ ಹೊಂದಲಿ. ಸೆಲಾ.
ಕೀರ್ತನೆಗಳು 68 : 20 (KNV)
ನಮ್ಮ ದೇವರು ರಕ್ಷಣೆಯ ದೇವರಾಗಿದ್ದಾನೆ; ನಮ್ಮ ಕರ್ತನಾದ ದೇವರು ಮರಣದಿಂದ ತಪ್ಪಿಸಲು ಶಕ್ತನಾಗಿದ್ದಾನೆ.
ಕೀರ್ತನೆಗಳು 68 : 21 (KNV)
ದೇವರು ತನ್ನ ಶತ್ರುಗಳ ತಲೆ ಯನ್ನೂ ತನ್ನ ಅಪರಾಧಗಳಲ್ಲಿ ಮುಂದುವರಿಯುವ ತುಂಬು ಗೂದಲಿನ ತಲೆಯನ್ನೂ ಗಾಯಪಡಿಸುತ್ತಾನೆ.
ಕೀರ್ತನೆಗಳು 68 : 22 (KNV)
ಬಾಷಾನಿನಿಂದ ತಿರಿಗಿ ಬರಮಾಡುವೆನು, ಸಮು ದ್ರದ ಅಗಾಧಗಳಿಂದ ನನ್ನ ಜನರನ್ನು ತಿರಿಗಿ ಬರ ಮಾಡುವೆನು ಎಂದು ಕರ್ತನು ಹೇಳಿದ್ದಾನೆ.
ಕೀರ್ತನೆಗಳು 68 : 23 (KNV)
ನಿನ್ನ ಪಾದವೂ ನಿನ್ನ ಶತ್ರುಗಳ ರಕ್ತದಲ್ಲಿ ಕಲಕುವ ಹಾಗೆ ಮಾಡುವೆನು. ನಿನ್ನ ನಾಯಿಗಳ ನಾಲಿಗೆಯೂ ಸಹ ಹಾಗೆಯೇ ಮಾಡುವದು.
ಕೀರ್ತನೆಗಳು 68 : 24 (KNV)
ದೇವರೇ, ನಿನ್ನ ಹೋಗೋಣಗಳನ್ನು ಪರಿಶುದ್ಧ ಸ್ಥಳದಲ್ಲಿ ನನ್ನ ದೇವರ ಮತ್ತು ನನ್ನ ಅರಸನ ಹೋಗೋಣಗಳನ್ನು ಅವರು ನೋಡಿದ್ದಾರೆ.
ಕೀರ್ತನೆಗಳು 68 : 25 (KNV)
ಹಾಡು ವವರು ಮುಂದಾಗಿಯೂ ಬಾರಿಸುವವರು ಹಿಂದಾ ಗಿಯೂ ಹೋದರು, ಅವರಲ್ಲಿ ದಮ್ಮಡಿ ಬಾರಿಸುವ ಕನ್ಯೆಯರು ಇದ್ದರು.
ಕೀರ್ತನೆಗಳು 68 : 26 (KNV)
ಸಭೆಗಳಲ್ಲಿ ದೇವರನ್ನು ಸ್ತುತಿ ಸಿರಿ; ಇಸ್ರಾಯೇಲನ ಬುಗ್ಗೆಯಿಂದ ಕರ್ತನನ್ನು ಸ್ತುತಿ ಸಿರಿ.
ಕೀರ್ತನೆಗಳು 68 : 27 (KNV)
ಅಲ್ಲಿ ಅವರನ್ನಾಳುವವರ ಕೂಡ ಚಿಕ್ಕ ಬೆನ್ಯಾ ವಿಾನನು ಅವರ ನಾಯಕರಾದ ಯೆಹೂದನ ಪ್ರಧಾ ನರೂ ಅವರ ಸಮೂಹವೂ ಜೆಬುಲೂನನ, ನಫ್ತಾ ಲಿಯ ಪ್ರಧಾನರೂ ಇದ್ದಾರೆ.
ಕೀರ್ತನೆಗಳು 68 : 28 (KNV)
ನಿನ್ನ ದೇವರು ನಿನ್ನ ಬಲವನ್ನು ಆಜ್ಞಾಪಿಸಿದ್ದಾನೆ; ಓ ದೇವರೇ, ನಮಗೋಸ್ಕರ ನಡಿಸಿದ ಕಾರ್ಯವನ್ನು ಬಲಪಡಿಸು.
ಕೀರ್ತನೆಗಳು 68 : 29 (KNV)
ಯೆರೂಸಲೇಮಿನಲ್ಲಿರುವ ನಿನ್ನ ಮಂದಿ ರದ ನಿಮಿತ್ತ ಅರಸುಗಳು ನಿನಗೆ ಕಾಣಿಕೆಗಳನ್ನು ತರು ವರು.
ಕೀರ್ತನೆಗಳು 68 : 30 (KNV)
ಪ್ರತಿಯೊಬ್ಬನು ಬೆಳ್ಳಿಯ ತುಂಡುಗಳನ್ನು ಸಮರ್ಪಿಸುವ ವರೆಗೆ ಜನರ ಕರುಗಳ ಸಂಗಡ ಹೋರಿ ಗಳ ಗುಂಪನ್ನು ಭಲ್ಲೆಗಾರರ ಗುಂಪುನ್ನು ಗದರಿಸು. ಕಾಳಗದಲ್ಲಿ ಸಂತೋಷ ಪಡುವ ಜನರನ್ನು ನೀನು ಚದರಿಸು.
ಕೀರ್ತನೆಗಳು 68 : 31 (KNV)
ಐಗುಪ್ತದಿಂದ ಪ್ರಧಾನರು ಬರುವರು; ಕೂಷ್ ತನ್ನ ಕೈಗಳನ್ನು ದೇವರ ಕಡೆಗೆ ಬೇಗ ಚಾಚುವದು.
ಕೀರ್ತನೆಗಳು 68 : 32 (KNV)
ಭೂಮಿಯ ರಾಜ್ಯಗಳೇ, ನೀವು ದೇವರಿಗೆ ಹಾಡಿರಿ; ಕರ್ತನಿಗೆ ಸ್ತುತಿಗಳನ್ನು ಹಾಡಿರಿ. ಸೆಲಾ.
ಕೀರ್ತನೆಗಳು 68 : 33 (KNV)
ಅನಾದಿಯಿಂದಿದ್ದ ಆಕಾಶಗಳಲ್ಲಿ ಸವಾರಿಮಾಡು ವಾತನಿಗೆ ಹಾಡಿರಿ; ಇಗೋ, ಆತನು ತನ್ನ ಮಹಾ ಧ್ವನಿಯಿಂದ ಧ್ವನಿಗೈಯುತ್ತಾನೆ.
ಕೀರ್ತನೆಗಳು 68 : 34 (KNV)
ದೇವರ ಬಲವನ್ನು ವಿವರಿಸಿರಿ; ಇಸ್ರಾಯೇಲಿನ ಮೇಲೆ ಆತನಿಗೆ ಘನ ತೆಯೂ ಮೇಘಗಳಲ್ಲಿ ಆತನಿಗೆ ಬಲವೂ ಇರುತ್ತದೆ.
ಕೀರ್ತನೆಗಳು 68 : 35 (KNV)
ಓ ದೇವರೇ, ನಿನ್ನ ಪರಿಶುದ್ಧ ಸ್ಥಳಗಳಿಂದ ನೀನು ಭಯಂಕರನಾಗಿದ್ದೀ; ಇಸ್ರಾಯೇಲಿನ ದೇವರಾದ ಈತನೇ ಜನರಿಗೆ ಬಲವನ್ನೂ ಶಕ್ತಿಯನ್ನೂ ಕೊಡುತ್ತಾನೆ. ದೇವರಿಗೆ ಸ್ತುತಿಯಾಗಿಲಿ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35

BG:

Opacity:

Color:


Size:


Font: