ಕೀರ್ತನೆಗಳು 67 : 1 (KNV)
ದೇವರು ನಮಗೆ ಕರುಣೆಯುಳ್ಳವನಾಗಿದ್ದು ನಮ್ಮನ್ನು ಆಶೀರ್ವದಿಸಲಿ; ಆತನು ತನ್ನ ಮುಖವನ್ನು ನಮ್ಮ ಮೇಲೆ ಪ್ರಕಾಶಿಸಮಾಡಲಿ. ಸೆಲಾ.
ಕೀರ್ತನೆಗಳು 67 : 2 (KNV)
ಆಗ ನಿನ್ನ ಮಾರ್ಗವೂ ನಿನ್ನ ರಕ್ಷಣೆಯ ಸ್ವಸ್ಥತೆಯೂ, ಭೂಮಿಯಲ್ಲಿ, ಎಲ್ಲಾ ಜನಾಂಗಗಳಿಗೆ ತಿಳಿಯಲ್ಪಡು ವದು.
ಕೀರ್ತನೆಗಳು 67 : 3 (KNV)
ಓ ದೇವರೇ, ಜನರು ನಿನ್ನನ್ನು ಕೊಂಡಾಡಲಿ. ಜನರೆಲ್ಲಾ ನಿನ್ನನ್ನು ಕೊಂಡಾಡಲಿ.
ಕೀರ್ತನೆಗಳು 67 : 4 (KNV)
ಜನಾಂಗಗಳು ಸಂತೋಷಪಟ್ಟು ಉತ್ಸಾಹಕ್ಕಾಗಿ ಹಾಡಲಿ; ನೀನು ಜನರನ್ನು ನೀತಿಯಿಂದ ನ್ಯಾಯತೀರಿಸಿ ಜನಾಂಗಗಳನ್ನು ಭೂಮಿಯಲ್ಲಿ ಪರಿಪಾಲಿಸುತ್ತೀ. ಸೆಲಾ.
ಕೀರ್ತನೆಗಳು 67 : 5 (KNV)
ಓ ದೇವರೇ, ಜನರು ನಿನ್ನನ್ನು ಕೊಂಡಾಡಲಿ; ಜನರೆಲ್ಲಾ ನಿನ್ನನ್ನು ಕೊಂಡಾಡಲಿ.
ಕೀರ್ತನೆಗಳು 67 : 6 (KNV)
ಆಗ ಭೂಮಿಯು ತನ್ನ ಸಮೃದ್ಧಿಯಾದ ಬೆಳೆಯನ್ನು ಕೊಡುವದು; ದೇವರೇ, ಹೌದು, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸುವನು.
ಕೀರ್ತನೆಗಳು 67 : 7 (KNV)
ದೇವರು ನಮ್ಮನ್ನು ಆಶೀರ್ವದಿಸುವನು; ಭೂಮಿಯ ಕೊನೆಯ ಭಾಗಗಳು ಆತನಿಗೆ ಭಯಪಡುವವು.

1 2 3 4 5 6 7

BG:

Opacity:

Color:


Size:


Font: