ಕೀರ್ತನೆಗಳು 61 : 1 (KNV)
ಓ ದೇವರೇ, ನನ್ನ ಕೂಗನ್ನು ಕೇಳು; ನನ್ನ ಪ್ರಾರ್ಥನೆಯನ್ನು ಆಲೈಸು.
ಕೀರ್ತನೆಗಳು 61 : 2 (KNV)
ನನ್ನ ಹೃದಯವು ಕುಂದಿಹೋಗಿರಲಾಗಿ, ಭೂಮಿಯ ಕಡೇ ಭಾಗದಿಂದ ನಿನ್ನನ್ನು ಕೂಗುವೆನು; ನನಗಿಂತ ಎತ್ತರ ವಾದ ಬಂಡೆಗೆ ನನ್ನನ್ನು ನಡಿಸು.
ಕೀರ್ತನೆಗಳು 61 : 3 (KNV)
ನೀನು ನನಗೆ ಆಶ್ರಯವೂ ಶತ್ರುವಿನಿಂದ ತಪ್ಪಿಸುವ ಬಲವಾದ ಬುರುಜೂ ಆಗಿದ್ದೀ;
ಕೀರ್ತನೆಗಳು 61 : 4 (KNV)
ನಿನ್ನ ಗುಡಾರದಲ್ಲಿ ನಾನು ಎಂದೆಂದಿಗೂ ವಾಸಿಸುವೆನು; ನಿನ್ನ ರೆಕ್ಕೆಗಳ ಮರೆಯಲ್ಲಿ ಭರವಸವುಳ್ಳವನಾಗಿರುವೆನು. ಸೆಲಾ.
ಕೀರ್ತನೆಗಳು 61 : 5 (KNV)
ಓ ದೇವರೇ, ನೀನು ನನ್ನ ಹರಕೆಗಳನ್ನು ಕೇಳಿದ್ದೀ; ನಿನ್ನ ಹೆಸರಿಗೆ ಭಯಪಡುವವರಿಗೆ ಸ್ವಾಸ್ಥ್ಯವನ್ನು ಕೊಟ್ಟಂತೆ ನನಗೂ ಕೊಟ್ಟಿದ್ದೀ.
ಕೀರ್ತನೆಗಳು 61 : 6 (KNV)
ಅರಸನ ಆಯುಷ್ಯ ವನ್ನು ಹೆಚ್ಚಿಸುವಿ; ಅವನ ವರುಷಗಳು ಅನೇಕ ತಲ ತಲಾಂತರಗಳ ಹಾಗೆ ಇರುವವು.
ಕೀರ್ತನೆಗಳು 61 : 7 (KNV)
ಅವನು ಎಂದಿಗೂ ದೇವರ ಮುಂದೆ ವಾಸಿಸುವನು; ಅವನನ್ನು ಕಾಯು ವದಕ್ಕೆ ಕರುಣೆಯನ್ನೂ ಸತ್ಯವನ್ನೂ ಸಿದ್ಧಮಾಡು.
ಕೀರ್ತನೆಗಳು 61 : 8 (KNV)
ಹಾಗಾದರೆ ನನ್ನ ಹರಕೆಗಳನ್ನು ದಿನ ದಿನಕ್ಕೆ ಸಲ್ಲಿ ಸುವ ಹಾಗೆ ನಿನ್ನ ಹೆಸರನ್ನು ಎಂದೆಂದಿಗೂ ನಾನು ಕೀರ್ತಿಸುವೆನು.

1 2 3 4 5 6 7 8

BG:

Opacity:

Color:


Size:


Font: