ಕೀರ್ತನೆಗಳು 52 : 1 (KNV)
ಓ ಪರಾಕ್ರಮಿಯೇ, ಕೆಟ್ಟತನದಲ್ಲಿ ನಿನ್ನ ಷ್ಟಕ್ಕೆ ನೀನೇ ಹೆಚ್ಚಳಪಡುವದು ಯಾಕೆ? ದೇವರ ಒಳ್ಳೇತನವು ಯಾವಾಗಲೂ ಇರುವದು.
ಕೀರ್ತನೆಗಳು 52 : 2 (KNV)
ಮೋಸ ಮಾಡುವ ಹದವಾದ ಕತ್ತಿಯ ಹಾಗೆ ನಿನ್ನ ನಾಲಿಗೆಯು ಕೇಡುಗಳನ್ನು ಕಲ್ಪಿಸುತ್ತದೆ.
ಕೀರ್ತನೆಗಳು 52 : 3 (KNV)
ಒಳ್ಳೇದಕ್ಕಿಂತ ಕೆಟ್ಟದ್ದನ್ನೂ ನೀತಿಯನ್ನು ಮಾತನಾಡುವದಕ್ಕಿಂತ ಸುಳ್ಳನ್ನೂ ಪ್ರೀತಿ ಮಾಡುತ್ತೀ ಸೆಲಾ.
ಕೀರ್ತನೆಗಳು 52 : 4 (KNV)
ಓ ಮೋಸದ ನಾಲಿಗೆಯೇ, ನೀನು ನುಂಗಿಬಿಡುವ ಮಾತುಗಳನ್ನೆಲ್ಲಾ ಪ್ರೀತಿ ಮಾಡುತ್ತೀ.
ಕೀರ್ತನೆಗಳು 52 : 5 (KNV)
ಆದದರಿಂದ ದೇವರು ಅದೇ ರೀತಿಯಲ್ಲಿ ನಿನ್ನನ್ನು ಸದಾಕಾಲಕ್ಕೂ ನಾಶಮಾಡಿ, ತೆಗೆದುಬಿಡುವನು. ನಿನ್ನ ವಾಸಸ್ಥಳದಿಂದ ಕಿತ್ತುಹಾಕುವನು; ಜೀವಿತರ ದೇಶ ದೊಳಗಿಂದ ನಿನ್ನನ್ನು ಬೇರುಸಹಿತ ಕೀಳುವನು. ಸೆಲಾ.
ಕೀರ್ತನೆಗಳು 52 : 6 (KNV)
ನೀತಿವಂತರು ಸಹ ಭಯಪಟ್ಟು ಅವನನ್ನು ನೋಡಿ ನಗುವರು.
ಕೀರ್ತನೆಗಳು 52 : 7 (KNV)
ಇಗೋ, ದೇವರನ್ನು ತನ್ನ ಬಲವಾಗಿ ಆಶ್ರಯಿಸದೆ ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡ ಮನುಷ್ಯನು ಇವನೇ.
ಕೀರ್ತನೆಗಳು 52 : 8 (KNV)
ಆದರೆ ನಾನು ದೇವರ ಆಲಯದಲ್ಲಿರುವ ಹಸು ರಾದ ಇಪ್ಪೇ ಮರದಹಾಗೆ ಇದ್ದೇನೆ. ದೇವರ ಕರು ಣೆಯಲ್ಲಿ ಯುಗಯುಗಾಂತರಗಳಲ್ಲಿಯೂ ನಾನು ಭರವಸವಿಟ್ಟಿದ್ದೇನೆ.
ಕೀರ್ತನೆಗಳು 52 : 9 (KNV)
ನಾನು ಎಂದೆಂದಿಗೂ ನಿನ್ನನ್ನು ಕೊಂಡಾಡುವೆನು; ನೀನು ಅದನ್ನು ಮಾಡಿದಿ; ನಿನ್ನ ಹೆಸರನ್ನು ನಿರೀಕ್ಷಿಸುವೆನು; ನಿನ್ನ ಪರಿಶುದ್ಧರ ಮುಂದೆ ಅದು ಒಳ್ಳೇದಾಗಿದೆ.

1 2 3 4 5 6 7 8 9