ಕೀರ್ತನೆಗಳು 47 : 1 (KNV)
ಎಲ್ಲಾ ಜನರೇ, ನೀವು ನಿಮ್ಮ ಕೈಗಳನ್ನು ತಟ್ಟಿರಿ; ಜಯಾರ್ಭಟದಿಂದ ದೇವರಿಗೆ ಧ್ವನಿಗೈಯಿರಿ.
ಕೀರ್ತನೆಗಳು 47 : 2 (KNV)
ಮಹೋನ್ನತನಾದ ಕರ್ತನು ಭಯಂಕ ರನೂ ಭೂಮಿಯ ಮೇಲೆಲ್ಲಾ ಮಹಾಅರಸನೂ ಆಗಿದ್ದಾನೆ.
ಕೀರ್ತನೆಗಳು 47 : 3 (KNV)
ಜನರನ್ನು ನಮ್ಮ ಕೆಳಗೂ ಜನಾಂಗಗಳನ್ನು ನಮ್ಮ ಪಾದಗಳ ಕೆಳಗೂ ಅಧೀನ ಮಾಡಿದ್ದಾನೆ.
ಕೀರ್ತನೆಗಳು 47 : 4 (KNV)
ಆತನು ಪ್ರೀತಿಮಾಡುವ ಯಾಕೋಬನ ಘನತೆಯಾದ ನಮ್ಮ ಬಾಧ್ಯತೆಯನ್ನು ಆದುಕೊಳ್ಳುತ್ತಾನೆ--ಸೆಲಾ.
ಕೀರ್ತನೆಗಳು 47 : 5 (KNV)
ದೇವರು ಮಹಾಧ್ವನಿಯಿಂದ, ಕರ್ತನು ತುತೂ ರಿಯ ಶಬ್ದದಿಂದ, ಮೇಲೆ ಹೋಗಿದ್ದಾನೆ.
ಕೀರ್ತನೆಗಳು 47 : 6 (KNV)
ದೇವರಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ; ನಮ್ಮ ಅರಸನಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ;
ಕೀರ್ತನೆಗಳು 47 : 7 (KNV)
ದೇವರು ಭೂಮಿಗೆಲ್ಲಾ ಅರಸನು; ತಿಳುವಳಿಕೆಯಿಂದ ಸ್ತುತಿಗಳನ್ನು ಹಾಡಿರಿ.
ಕೀರ್ತನೆಗಳು 47 : 8 (KNV)
ಅನ್ಯಜನಾಂಗವನ್ನು ಆಳುತ್ತಾನೆ; ತನ್ನ ಪರಿಶುದ್ಧ ಸಿಂಹಾಸನದಲ್ಲಿ ಕೂತಿದ್ದಾನೆ.
ಕೀರ್ತನೆಗಳು 47 : 9 (KNV)
ಜನರ ಅಧಿಪತಿಗಳು ಅಬ್ರಹಾಮನ ದೇವರ ಪ್ರಜೆಯ ಸಂಗಡ ಕೂಡಿ ಕೊಂಡಿದ್ದಾರೆ; ಭೂಮಿಯ ಗುರಾಣಿಗಳು ದೇವರ ವಶದಲ್ಲಿವೆ; ಆತನು ಬಹಳವಾಗಿ ಹೆಚ್ಚಿಸಲ್ಪಟ್ಟಿದ್ದಾನೆ.

1 2 3 4 5 6 7 8 9