ಕೀರ್ತನೆಗಳು 41 : 1 (KNV)
ಬಡವನನ್ನು ಪರಾಂಬರಿಸುವವನು ಧನ್ಯನು; ಕೇಡಿನ ಸಮಯದಲ್ಲಿ ಕರ್ತನು ಅವನನ್ನು ತಪ್ಪಿಸುವನು.
ಕೀರ್ತನೆಗಳು 41 : 2 (KNV)
ಕರ್ತನು ಅವನನ್ನು ಕಾಪಾಡಿ ಜೀವದಲ್ಲಿಡುವನು; ಅವನು ಭೂಮಿಯಲ್ಲಿ ಧನ್ಯನಾಗಿ ರುವನು; ನೀನು ಅವನ ಶತ್ರುಗಳ ಇಷ್ಟಕ್ಕೆ ಅವನನ್ನು ಒಪ್ಪಿಸದೆ ಇರುವಿ.
ಕೀರ್ತನೆಗಳು 41 : 3 (KNV)
ಹಾಸಿಗೆಯ ಮೇಲೆ ಕ್ಷೀಣಿಸುವ ವನನ್ನು ಕರ್ತನು ಬಲಪಡಿಸುವನು. ನೀನು ಅವನ ರೋಗದಲ್ಲಿ ಹಾಸಿಗೆಯನ್ನು ಸರಿಮಾಡುವಿ.
ಕೀರ್ತನೆಗಳು 41 : 4 (KNV)
ಕರ್ತನೇ, ನನಗೆ ಕರುಣೆ ತೋರಿಸಿ ನನ್ನ ಪ್ರಾಣವನ್ನು ಸ್ವಸ್ಥಮಾಡು; ನಿನಗೆ ವಿರೋಧವಾಗಿ ಪಾಪಮಾಡಿದೆ ನೆಂದು ನಾನು ಹೇಳಿದೆನು.
ಕೀರ್ತನೆಗಳು 41 : 5 (KNV)
ಅವನು ಸತ್ತು ಅವನ ಹೆಸರು ನಾಶವಾಗುವದು ಯಾವಾಗ ಎಂದು ನನ್ನ ಶತ್ರುಗಳು ನನ್ನನ್ನು ಕುರಿತು ಕೇಡನ್ನು ಮಾತನಾಡುತ್ತಾರೆ.
ಕೀರ್ತನೆಗಳು 41 : 6 (KNV)
ನನ್ನನ್ನು ನೋಡುವದಕ್ಕೆ ಅವನು ಬಂದರೆ ವ್ಯರ್ಥ ಮಾತು ಆಡುತ್ತಾನೆ; ಅವನ ಹೃದಯವು ಅವನಿಗೆ ಅಕ್ರಮವನ್ನು ಕೂಡಿಸುತ್ತದೆ; ಅವನು ಹೊರಗೆ ಹೋದಾಗ ಅದನ್ನು ಹೇಳುತ್ತಾನೆ.
ಕೀರ್ತನೆಗಳು 41 : 7 (KNV)
ನನ್ನನ್ನು ಹಗೆ ಮಾಡುವವರೆಲ್ಲರು ಕೂಡಿ ನನ್ನ ಮೇಲೆ ಪಿಸುಗುಟ್ಟು ತ್ತಾರೆ; ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸುತ್ತಾರೆ;
ಕೀರ್ತನೆಗಳು 41 : 8 (KNV)
ಕೆಟ್ಟ ರೋಗವು ಅವನನ್ನು ಹಿಡಿದದೆ, ಈಗ ಅವನು ಮಲಗಿಕೊಂಡವನಾಗಿ ಎಂದಿಗೂ ಏಳನು ಎಂದು ಅವರು ಅನ್ನುತ್ತಾರೆ.
ಕೀರ್ತನೆಗಳು 41 : 9 (KNV)
ಹೌದು, ನನ್ನ ರೊಟ್ಟಿಯನ್ನು ತಿಂದಂಥ, ನಾನು ಭರವಸವಿಟ್ಟಂಥ, ನನ್ನ ಆಪ್ತ ಸ್ನೇಹಿತನು ನನಗೆ ವಿರೋಧವಾಗಿ ತನ್ನ ಕಾಲನ್ನು ಅಡ್ಡಗೊಟ್ಟಿದ್ದಾನೆ.
ಕೀರ್ತನೆಗಳು 41 : 10 (KNV)
ಆದರೆ ನೀನು, ಓ ಕರ್ತನೇ, ನನ್ನ ಮೇಲೆ ಕರುಣೆತೋರಿಸಿ ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಪ್ರತೀಕಾರವನ್ನು ಮಾಡುವೆನು.
ಕೀರ್ತನೆಗಳು 41 : 11 (KNV)
ನನ್ನ ಶತ್ರು ನನ್ನ ಮೇಲೆ ಜಯಧ್ವನಿ ಮಾಡದೆ ಇರುವದ ರಿಂದಲೇ ನಿನ್ನ ಒಲುಮೆಯು ನನಗಿರುವ ದೆಂದು ನಾನು ಬಲ್ಲೆನು.
ಕೀರ್ತನೆಗಳು 41 : 12 (KNV)
ನನ್ನನ್ನಾದರೋ ನನ್ನ ಯಥಾರ್ಥ ತ್ವದಲ್ಲಿ ನೀನು ಉದ್ಧರಿಸಿ ನಿನ್ನ ಸಮ್ಮುಖದಲ್ಲಿ ಎಂದೆಂದಿಗೂ ನನ್ನನ್ನು ನಿಲ್ಲಿಸಿದ್ದೀ.
ಕೀರ್ತನೆಗಳು 41 : 13 (KNV)
ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಕ್ಕೂ ಕೊಂಡಾಟ ವಾಗಲಿ. ಆಮೆನ್. ಆಮೆನ್.
❮
❯
1
2
3
4
5
6
7
8
9
10
11
12
13