ಕೀರ್ತನೆಗಳು 34 : 1 (KNV)
ನಾನು ಎಲ್ಲಾ ಕಾಲಗಳಲ್ಲಿ ಕರ್ತನನ್ನು ಸ್ತುತಿಸುವೆನು; ಆತನ ಸ್ತೋತ್ರವು ಯಾವಾ ಗಲೂ ನನ್ನ ಬಾಯಲ್ಲಿ ಇರುವದು.
ಕೀರ್ತನೆಗಳು 34 : 2 (KNV)
ನನ್ನ ಪ್ರಾಣವು ಕರ್ತನಲ್ಲಿ ಹೊಗಳಿಕೊಳ್ಳುವದು; ಇದನ್ನು ದೀನರು ಕೇಳಿ ಸಂತೋಷಪಡುವರು.
ಕೀರ್ತನೆಗಳು 34 : 3 (KNV)
ನನ್ನ ಸಂಗಡ ಕರ್ತ ನನ್ನು ಘನಪಡಿಸಿರಿ. ನಾವು ಒಟ್ಟಾಗಿ ಆತನ ಹೆಸ ರನ್ನು ಘನಪಡಿಸೋಣ.
ಕೀರ್ತನೆಗಳು 34 : 4 (KNV)
ನಾನು ಕರ್ತನನ್ನು ಹುಡು ಕಿದೆನು; ಆಗ ಆತನು ನನಗೆ ಉತ್ತರಕೊಟ್ಟು ನನ್ನ ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದನು.
ಕೀರ್ತನೆಗಳು 34 : 5 (KNV)
ಅವರು ಆತನನ್ನು ದೃಷ್ಟಿಸಿ ಪ್ರಕಾಶ ಹೊಂದಿದರು. ಅವರ ಮುಖಗಳು ನಾಚಿಕೆಪಡಲಿಲ್ಲ.
ಕೀರ್ತನೆಗಳು 34 : 6 (KNV)
ಈ ಬಡವನು ಮೊರೆ ಯಿಡಲು; ಕರ್ತನು ಅದನ್ನು ಕೇಳಿ ಅವನ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವನನ್ನು ರಕ್ಷಿಸಿದನು.
ಕೀರ್ತನೆಗಳು 34 : 7 (KNV)
ಆತನಿಗೆ ಭಯಪಡುವವರ ಸುತ್ತಲೂ ಕರ್ತನ ದೂತನು ಇಳು ಕೊಂಡು ಅವರನ್ನು ಕಾಪಾಡುತ್ತಾನೆ.
ಕೀರ್ತನೆಗಳು 34 : 8 (KNV)
ಕರ್ತನು ಒಳ್ಳೆಯವನೆಂದು ರುಚಿಸಿ ನೋಡಿರಿ; ಆತನಲ್ಲಿ ಆಶ್ರ ಯಿಸಿಕೊಳ್ಳುವ ಮನುಷ್ಯನು ಧನ್ಯನು.
ಕೀರ್ತನೆಗಳು 34 : 9 (KNV)
ಆತನ ಪರಿ ಶುದ್ಧರೇ, ನೀವು ಕರ್ತನಿಗೆ ಭಯಪಡಿರಿ; ಆತನಿಗೆ ಭಯಪಡುವವರಿಗೆ ಏನೂ ಕೊರತೆ ಇಲ್ಲ.
ಕೀರ್ತನೆಗಳು 34 : 10 (KNV)
ಪ್ರಾಯದ ಸಿಂಹಗಳು ಕೊರತೆಯಾಗಿ ಹಸಿಯುತ್ತವೆ; ಆದರೆ ಕರ್ತನನ್ನು ಹುಡುಕುವವರು ಯಾವ ಒಳ್ಳೆಯ ದಕ್ಕಾದರೂ ಕೊರತೆ ಪಡುವದಿಲ್ಲ.
ಕೀರ್ತನೆಗಳು 34 : 11 (KNV)
ಮಕ್ಕಳೇ, ನೀವು ಬಂದು ನನ್ನ ಮಾತನ್ನು ಕೇಳಿರಿ; ನಾನು ಕರ್ತನ ಭಯವನ್ನು ನಿಮಗೆ ಕಲಿಸುವೆನು.
ಕೀರ್ತನೆಗಳು 34 : 12 (KNV)
ಒಳ್ಳೆಯದನ್ನು ನೋಡುವಂತೆ ದಿವಸಗಳನ್ನು ಪ್ರೀತಿ ಮಾಡಿ, ಜೀವವನ್ನು ಕೋರುವ ಮನುಷ್ಯನು ಯಾರು?
ಕೀರ್ತನೆಗಳು 34 : 13 (KNV)
ಕೇಡಿನಿಂದ ನಿನ್ನ ನಾಲಿಗೆಯನ್ನೂ ಮೋಸವನ್ನು ನುಡಿಯದ ಹಾಗೆ ನಿನ್ನ ತುಟಿಗಳನ್ನೂ ಕಾಯಿ.
ಕೀರ್ತನೆಗಳು 34 : 14 (KNV)
ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು; ಸಮಾ ಧಾನವನ್ನು ಹುಡುಕಿ ಅದನ್ನು ಹಿಂಬಾಲಿಸು.
ಕೀರ್ತನೆಗಳು 34 : 15 (KNV)
ಕರ್ತನ ಕಣ್ಣುಗಳು ನೀತಿವಂತರ ಮೇಲೆಯೂ ಆತನ ಕಿವಿಗಳು ಅವರ ಮೊರೆಯ ಕಡೆಗೂ ಅವೆ.
ಕೀರ್ತನೆಗಳು 34 : 16 (KNV)
ಕೇಡನ್ನು ಮಾಡುವವರ ಜ್ಞಾಪಕವನ್ನು ಭೂಮಿ ಯೊಳಗಿಂದ ಕಡಿದುಹಾಕುವದಕ್ಕೆ ಕರ್ತನ ಮುಖವು ಅವರಿಗೆ ವಿರೋಧವಾಗಿದೆ.
ಕೀರ್ತನೆಗಳು 34 : 17 (KNV)
ನೀತಿವಂತರು ಕೂಗು ತ್ತಾರೆ; ಆಗ ಕರ್ತನು ಕೇಳಿ ಅವರ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವರನ್ನು ಬಿಡಿಸುತ್ತಾನೆ.
ಕೀರ್ತನೆಗಳು 34 : 18 (KNV)
ಮುರಿದ ಹೃದಯದವರಿಗೆ ಕರ್ತನು ಸವಿಾಪವಾಗಿದ್ದಾನೆ; ಜಜ್ಜಿದ ಆತ್ಮವನ್ನು ರಕ್ಷಿಸುತ್ತಾನೆ.
ಕೀರ್ತನೆಗಳು 34 : 19 (KNV)
ನೀತಿವಂತನಿಗೆ ಬರುವ ಕೇಡುಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಕರ್ತನು ಅವನನ್ನು ಬಿಡಿಸುತ್ತಾನೆ.
ಕೀರ್ತನೆಗಳು 34 : 20 (KNV)
ಆತನ ಎಲುಬು ಗಳನ್ನೆಲ್ಲಾ ಕಾಪಾಡುತ್ತಾನೆ; ಅವುಗಳಲ್ಲಿ ಒಂದಾದರೂ ಮುರಿಯಲ್ಪಡುವದಿಲ್ಲ.
ಕೀರ್ತನೆಗಳು 34 : 21 (KNV)
ಕೇಡು ದುಷ್ಟನನ್ನು ಕೊಲ್ಲು ವದು; ನೀತಿವಂತನನ್ನು ಹಗೆಮಾಡುವವರು ಹಾಳಾ ಗುವರು.
ಕೀರ್ತನೆಗಳು 34 : 22 (KNV)
ಕರ್ತನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ; ಆತನಲ್ಲಿ ಭರವಸವಿಡುವವರು ಹಾಳಾಗುವದಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22

BG:

Opacity:

Color:


Size:


Font: