ಕೀರ್ತನೆಗಳು 33 : 1 (KNV)
ಓ ನೀತಿವಂತರೇ, ನೀವು ಕರ್ತನಲ್ಲಿ ಸಂತೋಷಪಡಿರಿ; ಯಥಾರ್ಥರು ಸ್ತೋತ್ರ ಮಾಡುವದು ಯೋಗ್ಯವಾಗಿದೆ.
ಕೀರ್ತನೆಗಳು 33 : 2 (KNV)
ಕರ್ತನನ್ನು ಕಿನ್ನರಿ ಯಿಂದ ಕೊಂಡಾಡಿರಿ; ಹತ್ತು ತಂತಿಗಳ ವೀಣೆಯಿಂದ ಆತನನ್ನು ಕೀರ್ತಿಸಿರಿ.
ಕೀರ್ತನೆಗಳು 33 : 3 (KNV)
ಆತನಿಗೆ ಹೊಸ ಹಾಡನ್ನು ಹಾಡಿರಿ; ಮಹಾಧ್ವನಿಯಿಂದ ಇಂಪಾಗಿ ಬಾರಿಸಿರಿ.
ಕೀರ್ತನೆಗಳು 33 : 4 (KNV)
ಕರ್ತನ ವಾಕ್ಯವು ಯಥಾರ್ಥವಾದದ್ದು. ಆತನ ಕೆಲಸಗಳೆಲ್ಲಾ ಸತ್ಯದಲ್ಲಿ ಮಾಡಲ್ಪಟ್ಟಿವೆ.
ಕೀರ್ತನೆಗಳು 33 : 5 (KNV)
ಆತನು ನೀತಿ ನ್ಯಾಯಗಳನ್ನು ಪ್ರೀತಿಮಾಡುತ್ತಾನೆ; ಭೂಮಿ ಎಲ್ಲಾ ಕರ್ತನ ಒಳ್ಳೇತನದಿಂದ ತುಂಬಿದೆ.
ಕೀರ್ತನೆಗಳು 33 : 6 (KNV)
ಕರ್ತನ ವಾಕ್ಯ ದಿಂದ ಆಕಾಶವೂ ಆತನ ಬಾಯಿಯ ಉಸುರಿನಿಂದ ಅದರ ಸೈನ್ಯವೆಲ್ಲವೂ ಉಂಟಾದವು.
ಕೀರ್ತನೆಗಳು 33 : 7 (KNV)
ಆತನು ಸಮು ದ್ರದ ನೀರುಗಳನ್ನು ರಾಶಿಯಾಗಿ ಕೂಡಿಸುತ್ತಾನೆ; ಆಗಾಧವನ್ನು ಉಗ್ರಾಣಗಳಲ್ಲಿ ಇಡುತ್ತಾನೆ.
ಕೀರ್ತನೆಗಳು 33 : 8 (KNV)
ಭೂಮಿ ಯೆಲ್ಲಾ ಕರ್ತನಿಗೆ ಭಯಪಡಲಿ; ಭೂಲೋಕ ನಿವಾಸಿ ಗಳೆಲ್ಲರು ಆತನಿಗೆ ಹೆದರಲಿ.
ಕೀರ್ತನೆಗಳು 33 : 9 (KNV)
ಆತನು ಹೇಳಲು ಆಯಿತು; ಆಜ್ಞಾಪಿಸಲು ಅದು ಸ್ಥಿರವಾಯಿತು.
ಕೀರ್ತನೆಗಳು 33 : 10 (KNV)
ಕರ್ತನು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವನು; ಜನರ ಕಲ್ಪನೆಗಳನ್ನು ನಿಷ್ಫಲಮಾಡು ತ್ತಾನೆ.
ಕೀರ್ತನೆಗಳು 33 : 11 (KNV)
ಕರ್ತನ ಆಲೋಚನೆಯು ಎಂದೆಂದಿಗೂ ಆತನ ಹೃದಯದ ಆಲೋಚನೆಗಳು ತಲತಲಾಂತ ರಕ್ಕೂ ನಿಲ್ಲುವವು.
ಕೀರ್ತನೆಗಳು 33 : 12 (KNV)
ಕರ್ತನು ಯಾರ ದೇವರಾಗಿರು ವನೋ ಯಾವ ಜನಾಂಗವನ್ನು ತನ್ನ ಸ್ವಾಸ್ಥ್ಯವನ್ನಾಗಿ ಆದುಕೊಂಡಿದ್ದಾನೋ ಆ ಜನರೇ ಧನ್ಯರು.
ಕೀರ್ತನೆಗಳು 33 : 13 (KNV)
ಕರ್ತನು ಆಕಾಶದಿಂದ ಮನುಷ್ಯರ ಮಕ್ಕಳೆಲ್ಲರನ್ನು ದೃಷ್ಟಿಸಿ ನೋಡುತ್ತಾನೆ.
ಕೀರ್ತನೆಗಳು 33 : 14 (KNV)
ತನ್ನ ನಿವಾಸಸ್ಥಳದಿಂದ ಭೂನಿವಾ ಸಿಗಳೆಲ್ಲರ ಮೇಲೆ ಕಣ್ಣಿಡುತ್ತಾನೆ.
ಕೀರ್ತನೆಗಳು 33 : 15 (KNV)
ಅವರ ಹೃದಯ ಗಳನ್ನು ಏಕವಾಗಿ ರೂಪಿಸಿ ಅವರ ಕೆಲಸಗಳನ್ನೆಲ್ಲಾ ಗ್ರಹಿಸಿಕೊಳ್ಳುವವನು ಆತನೇ.
ಕೀರ್ತನೆಗಳು 33 : 16 (KNV)
ಯಾವ ಅರಸನೂ ಅಧಿಕವಾದ ಸೈನ್ಯದಿಂದ ರಕ್ಷಿಸಲ್ಪಡುವದಿಲ್ಲ. ಪರಾಕ್ರಮ ಶಾಲಿಯು ಅಧಿಕಶಕ್ತಿಯಿಂದ ಬಿಡಿಸಲ್ಪಡುವದಿಲ್ಲ.
ಕೀರ್ತನೆಗಳು 33 : 17 (KNV)
ಕುದುರೆಯು ಭದ್ರತೆಗೆ ವ್ಯರ್ಥವಾಗಿದೆ; ಇಲ್ಲವೆ ತನ್ನ ಅಧಿಕಬಲದಿಂದ ಯಾರನ್ನೂ ತಪ್ಪಿಸುವದಿಲ್ಲ.
ಕೀರ್ತನೆಗಳು 33 : 18 (KNV)
ಇಗೋ, ಕರ್ತನ ಕಣ್ಣು ಆತನಿಗೆ ಭಯಪಡುವ ವರ ಮೇಲೆಯೂ ಆತನ ಕರುಣೆಯನ್ನು ಎದುರು ನೋಡುವವರ ಮೇಲೆಯೂ ಅದೆ.
ಕೀರ್ತನೆಗಳು 33 : 19 (KNV)
ಇದರಿಂದ ಅವರ ಪ್ರಾಣವನ್ನು ಮರಣದಿಂದ ಬಿಡಿಸಿ ಬರಗಾಲ ದಲ್ಲಿ ಅವರ ಜೀವವನ್ನು ಕಾಪಾಡುತ್ತಾನೆ.
ಕೀರ್ತನೆಗಳು 33 : 20 (KNV)
ನಮ್ಮ ಪ್ರಾಣವು ಕರ್ತನಿಗಾಗಿ ಕಾದುಕೊಳ್ಳುತ್ತದೆ; ನಮ್ಮ ಸಹಾಯವೂ ಗುರಾಣಿಯೂ ಆತನೇ.
ಕೀರ್ತನೆಗಳು 33 : 21 (KNV)
ಆತನಲ್ಲಿ ನಮ್ಮ ಹೃದಯವು ಸಂತೋಷಿಸುತ್ತದೆ; ನಾವು ಆತನ ಪರಿಶುದ್ಧವಾದ ಹೆಸರಿನಲ್ಲಿ ಭರಸವಿಟ್ಟಿದ್ದೇವೆ.
ಕೀರ್ತನೆಗಳು 33 : 22 (KNV)
ನಾವು ನಿನ್ನನ್ನು ನಿರೀಕ್ಷಿಸುವ ಪ್ರಕಾರ ಓ ಕರ್ತನೇ, ನಿನ್ನ ಕೃಪೆಯು ನಮ್ಮ ಮೇಲೆ ಇರಲಿ.

1 2 3 4 5 6 7 8 9 10 11 12 13 14 15 16 17 18 19 20 21 22

BG:

Opacity:

Color:


Size:


Font: