ಕೀರ್ತನೆಗಳು 31 : 1 (KNV)
ಓ ಕರ್ತನೇ, ನಿನ್ನಲ್ಲಿ ಭರವಸವಿಟ್ಟು ಕೊಂಡಿದ್ದೇನೆ; ನಾನು ಎಂದಿಗೂ ಆಶಾ ಭಂಗಪಡದಂತೆ ಮಾಡು; ನಿನ್ನ ನೀತಿಯಲ್ಲಿ ನನ್ನನ್ನು ರಕ್ಷಿಸು.
ಕೀರ್ತನೆಗಳು 31 : 2 (KNV)
ನಿನ್ನ ಕಿವಿಯನ್ನು ನನ್ನ ಕಡೆಗೆ ತಿರುಗಿಸು; ಬೇಗ ನನ್ನನ್ನು ರಕ್ಷಿಸು. ನನ್ನನ್ನು ರಕ್ಷಿಸುವದಕ್ಕೆ ನನಗೆ ಬಲವಾದ ಬಂಡೆಯೂ ರಕ್ಷಣಾ ಮನೆಯೂ ಆಗಿರು.
ಕೀರ್ತನೆಗಳು 31 : 3 (KNV)
ನನ್ನ ಬಂಡೆಯೂ ಕೋಟೆಯೂ ನೀನೇ; ನಿನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸು; ನನಗೆ ಮಾರ್ಗ ದರ್ಶಕನಾಗಿರು.
ಕೀರ್ತನೆಗಳು 31 : 4 (KNV)
ಅವರು ಗುಪ್ತವಾಗಿ ಒಡ್ಡಿದ ಬಲೆ ಯೊಳಗಿಂದ ನನ್ನನ್ನು ಹೊರಗೆ ಎಳೆ; ನೀನು ನನ್ನ ಬಲವಾಗಿದ್ದೀ.
ಕೀರ್ತನೆಗಳು 31 : 5 (KNV)
ಸತ್ಯದ ದೇವರಾದ ಓ ಕರ್ತನೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ; ನೀನು ನನ್ನನ್ನು ವಿಮೋಚನೆ ಮಾಡಿದ್ದೀ.
ಕೀರ್ತನೆಗಳು 31 : 6 (KNV)
ವ್ಯರ್ಥವಾದ ಸುಳ್ಳುಗಳನ್ನ ನುಸರಿಸುವವರನ್ನು ನಾನು ಹಗೆಮಾಡುತ್ತೇನೆ; ಆದರೆ ನಾನು ಕರ್ತನಲ್ಲಿ ಭರವಸವಿಡುತ್ತೇನೆ.
ಕೀರ್ತನೆಗಳು 31 : 7 (KNV)
ನಿನ್ನ ಕರುಣೆ ಯಲ್ಲಿ ಉಲ್ಲಾಸಿಸಿ ಸಂತೋಷಪಡುವೆನು; ಯಾಕಂ ದರೆ ನೀನು ನನ್ನ ಕಷ್ಟವನ್ನು ಲಕ್ಷ್ಯಕ್ಕೆ ತಂದು ನನ್ನ ಪ್ರಾಣವು ಇಕ್ಕಟ್ಟುಗಳಲ್ಲಿರುವದನ್ನು ಅರಿತಿದ್ದೀಯಲ್ಲಾ.
ಕೀರ್ತನೆಗಳು 31 : 8 (KNV)
ಶತ್ರುವಿನ ಕೈಯಲ್ಲಿ ನನ್ನನ್ನು ಒಪ್ಪಿಸಿಬಿಡಲಿಲ್ಲ; ನನ್ನ ಪಾದಗಳನ್ನು ಅಗಲವಾದ ಸ್ಥಳದಲ್ಲಿ ನಿಲ್ಲಿಸಿದ್ದೀ.
ಕೀರ್ತನೆಗಳು 31 : 9 (KNV)
ಓ ಕರ್ತನೇ, ನನ್ನನ್ನು ಕರುಣಿಸು; ನಾನು ಇಕ್ಕಟ್ಟಿ ನಲ್ಲಿದ್ದೇನೆ. ನನ್ನ ಕಣ್ಣೂ ಪ್ರಾಣವೂ ಹೊಟ್ಟೆಯೂ ದುಃಖದಿಂದ ಕ್ಷೀಣವಾಗಿವೆ.
ಕೀರ್ತನೆಗಳು 31 : 10 (KNV)
ನನ್ನ ಜೀವವು ಚಿಂತೆ ಯಿಂದಲೂ ನನ್ನ ವರುಷಗಳು ನಿಟ್ಟುಸುರಿನಿಂದಲೂ ತೀರಿಹೋಗಿವೆ; ನನ್ನ ಶಕ್ತಿಯು ನನ್ನ ಅಪರಾಧದಿಂದ ಕುಂದಿ ಎಲುಬುಗಳು ಕ್ಷೀಣವಾಗಿವೆ.
ಕೀರ್ತನೆಗಳು 31 : 11 (KNV)
ನನ್ನ ವೈರಿ ಗಳೆಲ್ಲರಿಗೆ, ವಿಶೇಷವಾಗಿ ನನ್ನ ನೆರೆಯವರಿಗೆ, ನಾನು ನಿಂದೆಯೂ ಪರಿಚಿತರಿಗೆ ಹೆದರಿಕೆಯೂ ಆಗಿದ್ದೇನೆ; ಹೊರಗೆ ನನ್ನನ್ನು ನೋಡಿದವರು ನನ್ನನ್ನು ಬಿಟ್ಟು ಓಡಿಹೋದರು.
ಕೀರ್ತನೆಗಳು 31 : 12 (KNV)
ಸತ್ತವನ ಹಾಗೆ ಮನಸ್ಸಿನೊಳಗಿಂದ ಮರೆತು ಬಿಡಲ್ಪಟ್ಟಿದ್ದೇನೆ; ನಾನು ಒಡೆದ ಬೋಕಿಯ ಹಾಗೆ ಇದ್ದೆನೆ.
ಕೀರ್ತನೆಗಳು 31 : 13 (KNV)
ನಾನು ಅನೇಕರ ಚಾಡಿಯನ್ನು ಕೇಳಿದ್ದೇನೆ; ಸುತ್ತಲೂ ಭಯ ಅದೆ; ನನಗೆ ವಿರೋಧ ವಾಗಿ ಆಲೋಚನೆ ಮಾಡಿ ನನ್ನ ಪ್ರಾಣ ತೆಗೆದು ಕೊಳ್ಳುವದಕ್ಕೆ ಅವರು ಯೋಚಿಸುತ್ತಾರೆ.
ಕೀರ್ತನೆಗಳು 31 : 14 (KNV)
ಓ ಕರ್ತನೇ, ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ; ನನ್ನ ದೇವರು ನೀನೇ ಎಂದು ಹೇಳಿದ್ದೇನೆ.
ಕೀರ್ತನೆಗಳು 31 : 15 (KNV)
ನನ್ನ ಆಯ ಷ್ಕಾಲವು ನಿನ್ನ ಕೈಯಲ್ಲಿದೆ; ಶತ್ರುಗಳ ಕೈಯಿಂದಲೂ ಹಿಂಸೆಪಡಿಸುವವರಿಂದಲೂ ನನ್ನನ್ನು ಬಿಡಿಸು.
ಕೀರ್ತನೆಗಳು 31 : 16 (KNV)
ನಿನ್ನ ಮುಖವು ನಿನ್ನ ಸೇವಕನ ಮೇಲೆ ಪ್ರಕಾಶಿಸಲಿ, ನಿನ್ನ ಕರುಣೆಯಿಂದ ನನ್ನನ್ನು ರಕ್ಷಿಸು.
ಕೀರ್ತನೆಗಳು 31 : 17 (KNV)
ಓ ಕರ್ತನೇ, ನಿನಗೆ ಮೊರೆಯಿಟ್ಟಿದ್ದೇನೆ; ನಾನು ಆಶಾಭಂಗಪಡ ದಂತೆ ಮಾಡು; ದುಷ್ಟರು ಆಶಾಭಂಗಪಡಲಿ; ಅವರು ಸಮಾಧಿಯಲ್ಲಿ ಮೌನವಾಗಿರಲಿ.
ಕೀರ್ತನೆಗಳು 31 : 18 (KNV)
ನೀತಿವಂತರ ಮೇಲೆ ಗರ್ವದಿಂದಲೂ ತಿರಸ್ಕಾರದಿಂದಲೂ ಕಠಿಣ ವಾಗಿ ಮಾತನಾಡುವ ಸುಳ್ಳಿನ ತುಟಿಗಳು ಮೌನ ವಾಗಲಿ.
ಕೀರ್ತನೆಗಳು 31 : 19 (KNV)
ನಿನಗೆ ಭಯಪಡುವವರಿಗೋಸ್ಕರ ಮನುಷ್ಯ ಪುತ್ರರ ಮುಂದೆ ನಿನ್ನಲ್ಲಿ ಭರವಸೆ ಇಟ್ಟವರಿಗೋಸ್ಕರ ನೀನು ಇಟ್ಟಿರುವ ಒಳ್ಳೇತನವು ಎಷ್ಟೋ ದೊಡ್ಡದು.
ಕೀರ್ತನೆಗಳು 31 : 20 (KNV)
ಅವರನ್ನು ನಿನ್ನ ಸನ್ನಿಧಾನದ ಮರೆಯಲ್ಲಿ ಮನು ಷ್ಯರ ಗರ್ವಕ್ಕೆ ನೀನು ಮರೆಮಾಡುತ್ತೀ; ನಾಲಿಗೆಗಳ ವಿವಾದಕ್ಕೆ ಡೇರೆಯಲ್ಲಿ ಗುಪ್ತವಾಗಿ ಅವರನ್ನು ಕಾಪಾ ಡುವಿ.
ಕೀರ್ತನೆಗಳು 31 : 21 (KNV)
ಆತನು ಭದ್ರವಾದ ಪಟ್ಟಣದಲ್ಲಿ ತನ್ನ ಆಶ್ಚ ರ್ಯವಾದ ಕರುಣೆ ನನಗೆ ತೋರಿಸಿದ್ದಾನೆ ಕರ್ತ ನಿಗೆ ಸ್ತೋತ್ರ.
ಕೀರ್ತನೆಗಳು 31 : 22 (KNV)
ಆದರೆ ನಾನು ನಿನ್ನ ಕಣ್ಣುಗಳ ಎದುರಿನಿಂದ ಕಡಿದು ಹಾಕಲ್ಪಟ್ಟಿದ್ದೇನೆಂದು ಆತುರ ದಲ್ಲಿ ಹೇಳಿದೆನು; ಆದರೂ ನಾನು ಮೊರೆಯಿಡು ವಾಗ ನನ್ನ ವಿಜ್ಞಾಪನೆಗಳ ಸ್ವರವನ್ನು ನೀನು ಕೇಳಿದಿ.
ಕೀರ್ತನೆಗಳು 31 : 23 (KNV)
ಕರ್ತನ ಎಲ್ಲಾ ಪರಿಶುದ್ಧರೇ, ಆತನನ್ನು ಪ್ರೀತಿ ಮಾಡಿರಿ; ಕರ್ತನು ನಂಬಿಕೆಯುಳ್ಳವರನ್ನು ಕಾಯು ತ್ತಾನೆ; ಅಹಂಕಾರ ಮಾಡುವವನಿಗೆ ಬಹಳವಾಗಿ ಮುಯ್ಯಿಗೆಮುಯ್ಯಿ ತೀರಿಸುತ್ತಾನೆ.
ಕೀರ್ತನೆಗಳು 31 : 24 (KNV)
ಕರ್ತನಲ್ಲಿ ನಿರೀಕ್ಷಿ ಸುವವರೆಲ್ಲರೇ, ಧೈರ್ಯವಾಗಿರ್ರಿ; ಆತನು ನಿಮ್ಮ ಹೃದಯವನ್ನು ದೃಢಪಡಿಸುವನು.

1 2 3 4 5 6 7 8 9 10 11 12 13 14 15 16 17 18 19 20 21 22 23 24

BG:

Opacity:

Color:


Size:


Font: