ಕೀರ್ತನೆಗಳು 30 : 1 (KNV)
ಓ ಕರ್ತನೇ, ನಿನ್ನನ್ನು ಕೊಂಡಾಡುವೆನು; ನೀನು ನನ್ನ ಶತ್ರುಗಳು ನನ್ನ ವಿಷಯದಲ್ಲಿ ಸಂತೋಷಪಡದಂತೆ ಮಾಡಿ ನನ್ನನ್ನು ಮೇಲಕ್ಕೆ ಎತ್ತಿದ್ದೀ.
ಕೀರ್ತನೆಗಳು 30 : 2 (KNV)
ನನ್ನ ದೇವರಾದ ಓ ಕರ್ತನೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದ್ದೀ.
ಕೀರ್ತನೆಗಳು 30 : 3 (KNV)
ಓ ಕರ್ತನೇ, ನನ್ನ ಪ್ರಾಣವನ್ನು ಸಮಾಧಿಯಿಂದ ಎತ್ತಿದ್ದೀ; ನಾನು ತಗ್ಗಿಗೆ ಇಳಿಯದಂತೆ ನನ್ನನ್ನು ಜೀವದಲ್ಲಿ ಕಾಪಾಡಿದ್ದೀ.
ಕೀರ್ತನೆಗಳು 30 : 4 (KNV)
ಓ ಕರ್ತನ ಪರಿಶುದ್ಧರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧತ್ವವನ್ನು ಜ್ಞಾಪಕಮಾಡಿ ಕೊಂಡಾಡಿರಿ.
ಕೀರ್ತನೆಗಳು 30 : 5 (KNV)
ಆತನ ಕೋಪವು ಕ್ಷಣಮಾತ್ರ. ಆತನ ಕಟಾಕ್ಷವು ಜೀವವೇ; ರಾತ್ರಿಯಲ್ಲಿ ದುಃಖವು ತಂಗಬಹುದಾದರೂ ಬೆಳಿಗ್ಗೆ ಆನಂದವು ಬರುವದು.
ಕೀರ್ತನೆಗಳು 30 : 6 (KNV)
ನನ್ನ ಅಭಿವೃದ್ಧಿಯಲ್ಲಿ--ನಾನು ಎಂದಿಗೂ ಕದಲು ವದಿಲ್ಲ ಎಂದು ಹೇಳಿದೆನು.
ಕೀರ್ತನೆಗಳು 30 : 7 (KNV)
ಕರ್ತನೇ, ನಿನ್ನ ಕಟಾ ಕ್ಷದಿಂದ ನನ್ನ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀ, ನಿನ್ನ ಮುಖವನ್ನು ಮರೆಮಾಡಲು ಕಳವಳಗೊಂಡೆನು.
ಕೀರ್ತನೆಗಳು 30 : 8 (KNV)
ಓ ಕರ್ತನೇ, ನಾನು ನಿನಗೆ ಕೂಗಿಕೊಂಡೆನು; ಕರ್ತ ನಿಗೆ ವಿಜ್ಞಾಪನೆ ಮಾಡಿದೆನು.
ಕೀರ್ತನೆಗಳು 30 : 9 (KNV)
ನಾನು ಕುಣಿಯಲ್ಲಿಳಿ ದರೆ ನನ್ನ ರಕ್ತದಲ್ಲಿ ಲಾಭವೇನು? ಧೂಳು ನಿನ್ನನ್ನು ಕೊಂಡಾಡುವದೋ? ಅದು ನಿನ್ನ ಸತ್ಯವನ್ನು ತಿಳಿಸು ವದೋ?
ಕೀರ್ತನೆಗಳು 30 : 10 (KNV)
ಓ ಕರ್ತನೇ, ಕೇಳು; ನನ್ನ ಮೇಲೆ ಕರುಣೆಯಿಡು. ಕರ್ತನೇ, ನನಗೆ ಸಹಾಯಕನಾಗಿರು.
ಕೀರ್ತನೆಗಳು 30 : 11 (KNV)
ನೀನು ನನ್ನ ಗೋಳಾಟವನ್ನು ಕುಣಿದಾಟಕ್ಕೆ ತಿರು ಗಿಸಿದ್ದೀ; ನನ್ನ ಗೋಣಿತಟ್ಟನ್ನು ತೆಗೆದುಹಾಕಿ ಸಂತೋಷ ದಿಂದ ನನ್ನ ನಡುವನ್ನು ಕಟ್ಟಿದ್ದೀ.
ಕೀರ್ತನೆಗಳು 30 : 12 (KNV)
ಹೀಗೆ ನನ್ನ ಹೆಚ್ಚಳವು ಮೌನವಾಗಿರದೆ ನಿನ್ನನ್ನು ಕೀರ್ತಿಸುವದು. ನನ್ನ ದೇವರಾದ ಓ ಕರ್ತನೇ, ಯುಗಯುಗಕ್ಕೂ ನಿನ್ನನ್ನು ಕೊಂಡಾಡುವೆನು.

1 2 3 4 5 6 7 8 9 10 11 12