ಕೀರ್ತನೆಗಳು 26 : 1 (KNV)
ಓ ಕರ್ತನೇ, ನನಗೆ ನ್ಯಾಯತೀರಿಸು; ಯಾಕಂದರೆ ನಾನು ನನ್ನ ಯಥಾರ್ಥತ್ವ ದಲ್ಲಿ ನಡೆದುಕೊಂಡಿದ್ದೇನೆ. ನಾನು ಕರ್ತನಲ್ಲಿ ಭರ ವಸವಿಟ್ಟಿದ್ದೇನೆ; ನಾನು ಕದಲುವದಿಲ್ಲ.
ಕೀರ್ತನೆಗಳು 26 : 2 (KNV)
ಓ ಕರ್ತನೇ ನನ್ನನ್ನು ಶೋಧಿಸಿ ಪರೀಕ್ಷಿಸು; ನನ್ನ ಅಂತರಿಂದ್ರಿ ಯಗಳನ್ನೂ ಹೃದಯವನ್ನೂ ಶೋಧಿಸು.
ಕೀರ್ತನೆಗಳು 26 : 3 (KNV)
ನಿನ್ನ ಪ್ರೀತಿಯೂ ಕೃಪೆಯೂ ನನ್ನ ಕಣ್ಣುಗಳ ಮುಂದೆ ಅವೆ; ನಾನು ನಿನ್ನ ಸತ್ಯದಲ್ಲಿ ನಡೆದುಕೊಂಡಿದ್ದೇನೆ.
ಕೀರ್ತನೆಗಳು 26 : 4 (KNV)
ನಿಷ್ಪ್ರಯೋಜಕರೊಂದಿಗೆ ನಾನು ಕೂತುಕೊಳ್ಳ ಲಿಲ್ಲ; ವಂಚಕರ ಸಂಗಡ ನಾನು ಹೋಗುವದಿಲ್ಲ.
ಕೀರ್ತನೆಗಳು 26 : 5 (KNV)
ದುರ್ಮಾರ್ಗಿಗಳ ಸಭೆಯನ್ನು ಹಗೆಮಾಡಿದ್ದೇನೆ; ದುಷ್ಟರ ಸಂಗಡ ಕೂತುಕೊಳ್ಳುವದಿಲ್ಲ.
ಕೀರ್ತನೆಗಳು 26 : 6 (KNV)
ಓ ಕರ್ತನೇ, ಸ್ತೋತ್ರದ ಶಬ್ದದಿಂದ ಪ್ರಕಟಿಸಿ ನಿನ್ನ ಅದ್ಭುತಗಳ ನ್ನೆಲ್ಲಾ ತಿಳಿಸುವ ಹಾಗೆ
ಕೀರ್ತನೆಗಳು 26 : 7 (KNV)
ನನ್ನ ಕೈಗಳನ್ನು ನಿರ್ಮಲ ತ್ವದಲ್ಲಿ ತೊಳೆದು, ನಿನ್ನ ಬಲಿಪೀಠವನ್ನು ಸುತ್ತುವೆನು.
ಕೀರ್ತನೆಗಳು 26 : 8 (KNV)
ಕರ್ತನೇ, ನಿನ್ನ ವಾಸಸ್ಥಾನವನ್ನೂ ಗೌರವದ ನಿವಾಸವನ್ನೂ ನಾನು ಪ್ರೀತಿಸಿದ್ದೇನೆ.
ಕೀರ್ತನೆಗಳು 26 : 9 (KNV)
ಪಾಪಾತ್ಮರ ಸಂಗಡ ನನ್ನ ಪ್ರಾಣವನ್ನೂ ರಕ್ತ ಸುರಿಸುವವರ ಸಂಗಡ ನನ್ನ ಜೀವವನ್ನೂ ತೆಗೆಯಬೇಡ.
ಕೀರ್ತನೆಗಳು 26 : 10 (KNV)
ಅವರ ಕೈಗಳಲ್ಲಿ ಕೇಡು ಅದೆ; ಅವರ ಬಲಗೈ ಲಂಚಗಳಿಂದ ತುಂಬಿದೆ.
ಕೀರ್ತನೆಗಳು 26 : 11 (KNV)
ನಾನಾದರೋ ನನ್ನ ಯಥಾರ್ಥತ್ವದಲ್ಲಿ ನಡೆಯು ತ್ತೇನೆ: ನನ್ನನ್ನು ವಿಮೋಚಿಸು; ನನಗೆ ಕರುಣೆಯುಳ್ಳ ವನಾಗಿರು.
ಕೀರ್ತನೆಗಳು 26 : 12 (KNV)
ನನ್ನ ಪಾದವು ಸಮಸ್ಥಳದಲ್ಲಿ ನಿಲ್ಲುತ್ತದೆ; ಸಭೆಗಳಲ್ಲಿ ನಾನು ಕರ್ತನನ್ನು ಸ್ತುತಿಸುವೆನು.
❮
❯
1
2
3
4
5
6
7
8
9
10
11
12