ಕೀರ್ತನೆಗಳು 21 : 1 (KNV)
ಓ ಕರ್ತನೇ, ನಿನ್ನ ಬಲದಲ್ಲಿ ಅರಸನು ಸಂತೋಷಪಡುವನು; ನಿನ್ನ ರಕ್ಷಣೆಯಲ್ಲಿ ಎಷ್ಟೋ ಅಧಿಕವಾಗಿ ಉಲ್ಲಾಸಪಡುವನು.
ಕೀರ್ತನೆಗಳು 21 : 2 (KNV)
ಅವನ ಹೃದಯದ ಆಶೆಯನ್ನು ನೀನು ಅವನಿಗೆ ಪೂರೈಸಿ ಅವನ ತುಟಿಗಳ ಬಿನ್ನಹವನ್ನು ತಡೆಯಲಿಲ್ಲ. ಸೆಲಾ.
ಕೀರ್ತನೆಗಳು 21 : 3 (KNV)
ಒಳ್ಳೇತನದ ಆಶೀರ್ವಾದಗಳೊಂದಿಗೆ ಅವನನ್ನು ಎದುರುಗೊಂಡು ಅಪರಂಜಿಯ ಕಿರೀಟವನ್ನು ಅವನ ತಲೆಗೆ ಇಡುತ್ತೀ.
ಕೀರ್ತನೆಗಳು 21 : 4 (KNV)
ಜೀವವನ್ನು ಅವನು ನಿನ್ನಿಂದ ಬೇಡಲು ನೀನು ಅವನಿಗೆ ಯುಗಯುಗಾಂತರಗಳಿಗೂ ದೀರ್ಘಾಯುಷ್ಯವನ್ನು ಕೊಟ್ಟೆ.
ಕೀರ್ತನೆಗಳು 21 : 5 (KNV)
ನ್ನ ರಕ್ಷಣೆಯಲ್ಲಿ ಅವನ ಹೆಚ್ಚಳವು ದೊಡ್ಡದಾಗಿದೆ, ಗೌರವವನ್ನೂ ಘನತೆಯನ್ನೂ ಅವನ ಮೇಲೆ ಇಡುತ್ತೀ.
ಕೀರ್ತನೆಗಳು 21 : 6 (KNV)
ನೀನು ಎಂದೆಂದಿಗೂ ಅವನನ್ನು ಅಧಿಕವಾಗಿ ಆಶೀರ್ವಾದ ಮಾಡಿದ್ದೀ. ನಿನ್ನ ಮುಖದ ಮುಂದೆ ಅವನನ್ನು ಅಧಿಕ ವಾಗಿ ಸಂತೋಷಪಡುವಂತೆ ಮಾಡಿದ್ದೀ.
ಕೀರ್ತನೆಗಳು 21 : 7 (KNV)
ಅರಸನು ಕರ್ತನಲ್ಲಿ ಭರವಸವಿಡುತ್ತಾನೆ; ಮಹೋನ್ನತನ ಕೃಪೆ ಯಿಂದ ಅವನು ಕದಲದೆ ಇರುವನು.
ಕೀರ್ತನೆಗಳು 21 : 8 (KNV)
ನಿನ್ನ ಶತ್ರು ಗಳೆಲ್ಲಾ ನಿನ್ನ ಕೈಗೆ ಸಿಕ್ಕುವರು; ನಿನ್ನ ಬಲಗೈಗೆ ನಿನ್ನನ್ನು ಹಗೆಮಾಡುವವರು ಸಿಕ್ಕುವರು.
ಕೀರ್ತನೆಗಳು 21 : 9 (KNV)
ನೀನು ಕೋಪಿಸುವ ಕಾಲದಲ್ಲಿ ಅವರನ್ನು ಬೆಂಕಿಯ ಒಲೆಯ ಹಾಗೆ ಮಾಡುವಿ; ಕರ್ತನು ತನ್ನ ಕೋಪದಿಂದ ಅವರನ್ನು ನುಂಗಿಬಿಡುವನು; ಬೆಂಕಿಯು ಅವರನ್ನು ದಹಿಸಿ ಬಿಡು ವದು.
ಕೀರ್ತನೆಗಳು 21 : 10 (KNV)
ನೀನು ಅವರ ಫಲವನ್ನು ಭೂಮಿಯೊಳ ಗಿಂದಲೂ ಅವರ ಸಂತತಿಯನ್ನು ಮನುಷ್ಯನ ಮಕ್ಕ ಳೊಳಗಿಂದಲೂ ನಾಶಮಾಡುವಿ.
ಕೀರ್ತನೆಗಳು 21 : 11 (KNV)
ಅವರು ನಿನಗೆ ವಿರೋಧವಾಗಿ ಕೇಡನ್ನು ಯತ್ನಿಸಿದರು; ಪೂರೈಸಲಾ ರದ ಯುಕ್ತಿಯನ್ನು ಕಲ್ಪಿಸಿದರು.
ಕೀರ್ತನೆಗಳು 21 : 12 (KNV)
ನೀನು ಅವರನ್ನು ಬೆನ್ನು ತಿರಿಗಿಸುವಂತೆ ಮಾಡುವಿ: ಅವರ ಮುಖಕ್ಕೆ ಎದುರಾಗಿ ನಿನ್ನ ಬಿಲ್ಲನೂ ಹಗ್ಗಗಳಲ್ಲಿ ಹೂಡುವಿ.ಕರ್ತನೇ, ನಿನ್ನ ಸ್ವಂತ ಬಲದಿಂದ ನೀನು ಘನ ಹೊಂದಿದವನಾಗು; ಹೀಗೆ ನಾವು ನಿನ್ನ ಪರಾಕ್ರಮ ವನ್ನು ಹಾಡಿ ಕೀರ್ತಿಸುವೆವು.
ಕೀರ್ತನೆಗಳು 21 : 13 (KNV)
ಕರ್ತನೇ, ನಿನ್ನ ಸ್ವಂತ ಬಲದಿಂದ ನೀನು ಘನ ಹೊಂದಿದವನಾಗು; ಹೀಗೆ ನಾವು ನಿನ್ನ ಪರಾಕ್ರಮ ವನ್ನು ಹಾಡಿ ಕೀರ್ತಿಸುವೆವು.

1 2 3 4 5 6 7 8 9 10 11 12 13

BG:

Opacity:

Color:


Size:


Font: