ಕೀರ್ತನೆಗಳು 18 : 1 (KNV)
ನನ್ನ ಬಲವಾಗಿರುವ ಓ ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆ.
ಕೀರ್ತನೆಗಳು 18 : 2 (KNV)
ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸು ವಾತನೂ ನನ್ನ ದೇವರೂ ನಾನು ಭರವಸವಿಡುವ ನನ್ನ ಬಲವೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ಉನ್ನತವಾದ ದುರ್ಗವೂ ಆಗಿದ್ದಾನೆ.
ಕೀರ್ತನೆಗಳು 18 : 3 (KNV)
ಸ್ತುತಿಸತಕ್ಕ ಕರ್ತನಿಗೆ ನಾನು ಮೊರೆಯಿಡುತ್ತೇನೆ; ಹೀಗೆ ನಾನು ನನ್ನ ಶತ್ರುಗಳೊಳಗಿಂದ ರಕ್ಷಿಸಲ್ಪಡುತ್ತೇನೆ.
ಕೀರ್ತನೆಗಳು 18 : 4 (KNV)
ಮರಣದ ದುಃಖಗಳು ನನ್ನನ್ನು ಆವರಿಸಿಕೊಂಡವು, ಭಕ್ತಿಹೀನರ ಪ್ರವಾಹಗಳು ನನ್ನನ್ನು ಹೆದರಿಸಿದವು.
ಕೀರ್ತನೆಗಳು 18 : 5 (KNV)
ಪಾತಾಳದ ದುಃಖಗಳು ನನ್ನನ್ನು ಸುತ್ತಿಕೊಂಡವು; ಮರಣದ ನೇಣುಗಳು ನನ್ನನ್ನು ಸುತ್ತಿದವು.
ಕೀರ್ತನೆಗಳು 18 : 6 (KNV)
ನನ್ನ ಇಕ್ಕಟ್ಟಿನಲ್ಲಿ ಕರ್ತನನ್ನು ಬೇಡಿದೆನು; ನನ್ನ ದೇವರಿಗೆ ಮೊರೆಯಿಟ್ಟೆನು; ಆತನು ತನ್ನ ಮಂದಿರದೊಳಗಿಂದ ನನ್ನ ಸ್ವರವನ್ನು ಕೇಳಿದನು; ನನ್ನ ಮೊರೆಯು ಆತನ ಸನ್ನಿಧಿಗೂ ಆತನ ಕಿವಿಗಳಲ್ಲಿಯೂ ಮುಟ್ಟಿತು.
ಕೀರ್ತನೆಗಳು 18 : 7 (KNV)
ಆಗ ಆತನು ಕೋಪಗೊಂಡಿದ್ದನು. ಭೂಮಿಯು ಕದಲಿ ಕಂಪಿಸಿತು; ಪರ್ವತಗಳ ಅಸ್ತಿವಾರಗಳು ಸಹ ನಡುಗಿ ಕದಲಿದವು;
ಕೀರ್ತನೆಗಳು 18 : 8 (KNV)
ಆತನ ಮೂಗಿನಿಂದ ಹೊಗೆ ಎದ್ದು ಆತನ ಬಾಯಿಯೊಳಗಿಂದ ಬೆಂಕಿ ದಹಿಸಿತು; ಕೆಂಡಗಳು ಅದರಿಂದ ಉರಿದವು.
ಕೀರ್ತನೆಗಳು 18 : 9 (KNV)
ಆತನು ಆಕಾಶ ಗಳನ್ನು ಬೊಗ್ಗಿಸಿ ಇಳಿದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು.
ಕೀರ್ತನೆಗಳು 18 : 10 (KNV)
ಆತನು ಕೆರೂಬಿನ ಮೇಲೆ ಕೂತು ಹಾರಿದನು; ಹೌದು, ಗಾಳಿಯ ರೆಕ್ಕೆಗಳ ಮೇಲೆ ಹಾರಿದನು.
ಕೀರ್ತನೆಗಳು 18 : 11 (KNV)
ಕತ್ತಲನ್ನು ತನಗೆ ಮರೆಯ ಸ್ಥಳವಾಗಿ ಯೂ ಕತ್ತಲಿನ ನೀರುಗಳನ್ನು ಆಕಾಶದ ಮಂದವಾದ ಮೋಡಗಳನ್ನು ತನ್ನ ಸುತ್ತಲು ಡೇರೆಯಾಗಿಯೂ ಮಾಡಿ ದನು.
ಕೀರ್ತನೆಗಳು 18 : 12 (KNV)
ಆತನ ಮುಂದಿದ್ದ ಪ್ರಕಾಶದಿಂದ ಆತನ ಮಂದವಾದ ಮೋಡಗಳೂ ಕಲ್ಮಳೆಗಳೂ ಉರಿಗೆಂಡ ಗಳೂ ಹಾದು ಹೋದವು.
ಕೀರ್ತನೆಗಳು 18 : 13 (KNV)
ಕರ್ತನು ಆಕಾಶಗಳಲ್ಲಿ ಗುಡುಗಿದನು; ಮಹೋನ್ನತನು ಕಲ್ಮಳೆಯಿಂದಲೂ ಉರಿಗೆಂಡಗಳಿಂದಲೂ ತನ್ನ ಶಬ್ದವನ್ನು ಕೊಟ್ಟನು
ಕೀರ್ತನೆಗಳು 18 : 14 (KNV)
ಹೌದು, ತನ್ನ ಬಾಣಗಳನ್ನು ಕಳುಹಿಸಿ ಅವರನ್ನು ಚದುರಿಸಿದನು; ಮಿಂಚುಗಳನ್ನೆಸೆದು ಅವರನ್ನು ಗಲಿಬಿಲಿ ಮಾಡಿದನು.
ಕೀರ್ತನೆಗಳು 18 : 15 (KNV)
ಓ ಕರ್ತನೇ, ನಿನ್ನ ಗದರಿಕೆಯಿಂದಲೂ ನಿನ್ನ ಮೂಗಿನ ಶ್ವಾಸದ ಗಾಳಿಯಿಂದಲೂ ನೀರಿನ ಕಾಲುವೆಗಳ ನೆಲೆಯು ಕಾಣಬಂದು ಭೂಮಿಯ ಅಸ್ತಿವಾರಗಳು ಬೈಲಾದವು.
ಕೀರ್ತನೆಗಳು 18 : 16 (KNV)
ಆತನು ಮೇಲಿನಿಂದ ಕಳುಹಿಸಿ ನನ್ನನ್ನು ಹಿಡಿದು ಬಹಳ ನೀರುಗಳೊಳಗಿಂದ ಎಳೆದನು.
ಕೀರ್ತನೆಗಳು 18 : 17 (KNV)
ಆತನು ನನ್ನನ್ನು ಬಲವುಳ್ಳ ಶತ್ರುವಿ ನಿಂದಲೂ ಹಗೆಮಾಡಿದವನಿಂದಲೂ ಬಿಡಿಸಿದನು; ಅವರು ನನಗಿಂತ ಬಲಿಷ್ಠರಾಗಿದ್ದರು.
ಕೀರ್ತನೆಗಳು 18 : 18 (KNV)
ನನ್ನ ಆಪ ತ್ತಿನ ದಿವಸದಲ್ಲಿ ನನ್ನನ್ನು ಅವರು ಸುತ್ತಿಕೊಂಡರು; ಆದರೆ ಕರ್ತನು ನನ್ನ ಆಧಾರನಾದನು.
ಕೀರ್ತನೆಗಳು 18 : 19 (KNV)
ಆತನು ನನ್ನನ್ನು ವಿಶಾಲಸ್ಥಳಕ್ಕೆ ತಂದು ನನ್ನನ್ನು ತಪ್ಪಿಸಿಬಿಟ್ಟನು. ಯಾಕಂದರೆ ಆತನು ನನ್ನಲ್ಲಿ ಸಂತೋಷಪಟ್ಟನು.
ಕೀರ್ತನೆಗಳು 18 : 20 (KNV)
ಕರ್ತನು ನನ್ನ ನೀತಿಯ ಪ್ರಕಾರ ನನಗೆ ಪ್ರತಿಫಲ ಕೊಟ್ಟನು. ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಬದಲು ಕೊಟ್ಟನು.
ಕೀರ್ತನೆಗಳು 18 : 21 (KNV)
ನಾನು ಕರ್ತನ ಮಾರ್ಗಗಳನ್ನು ಕೈಕೊಂಡು ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ.
ಕೀರ್ತನೆಗಳು 18 : 22 (KNV)
ಆತನ ತೀರ್ಪುಗಳೆಲ್ಲಾ ನನ್ನ ಮುಂದೆ ಇದ್ದವು; ಆತನ ನೇಮಗಳನ್ನು ನನ್ನಿಂದ ತೊಲಗಿಸ ಲಿಲ್ಲ.
ಕೀರ್ತನೆಗಳು 18 : 23 (KNV)
ಆತನ ಮುಂದೆ ಸಂಪೂರ್ಣನಾಗಿದ್ದು ನನ್ನ ಅಕ್ರಮದಿಂದ ನನ್ನನ್ನು ಕಾಪಾಡಿಕೊಂಡೆನು.
ಕೀರ್ತನೆಗಳು 18 : 24 (KNV)
ಆದದ ರಿಂದ ಕರ್ತನು ನನ್ನ ನೀತಿಯ ಪ್ರಕಾರವೂ ಆತನ ಕಣ್ಣೆದುರಿನಲ್ಲಿ ನನ್ನ ಕೈಗಳ ಶುದ್ಧತ್ವದ ಪ್ರಕಾರವೂ ನನಗೆ ಬದಲು ಕೊಟ್ಟನು.
ಕೀರ್ತನೆಗಳು 18 : 25 (KNV)
ನೀನು ಕರುಣೆಯು ಳ್ಳವನಿಗೆ ಕರುಣೆಯನ್ನು ತೋರಿಸುವಿ; ಸಂಪೂರ್ಣ ನಾದ ಮನುಷ್ಯನಿಗೆ ಸಂಪೂರ್ಣನಾಗಿರುವಿ.
ಕೀರ್ತನೆಗಳು 18 : 26 (KNV)
ಶುದ್ಧ ನಿಗೆ ಶುದ್ಧನಾಗಿರುವಿ; ಮೂರ್ಖನಿಗೆ ಮೂರ್ಖನಾಗಿ ರುವಿ.
ಕೀರ್ತನೆಗಳು 18 : 27 (KNV)
ಕುಂದಿಸಿದ ಜನರನ್ನು ನೀನು ರಕ್ಷಿಸುವಿ; ಆದರೆ ನೀನು ಗರ್ವಿಷ್ಟರ ಕಣ್ಣುಗಳನ್ನು ತಗ್ಗಿಸುವಿ.
ಕೀರ್ತನೆಗಳು 18 : 28 (KNV)
ನೀನು ನನ್ನ ದೀಪವನ್ನು ಬೆಳಗಿಸುವಿ; ನನ್ನ ದೇವ ರಾದ ಕರ್ತನು ನನ್ನ ಕತ್ತಲೆಯನ್ನು ಪ್ರಕಾಶಿಸುವಂತೆ ಮಾಡುವನು.
ಕೀರ್ತನೆಗಳು 18 : 29 (KNV)
ನಿನ್ನಿಂದ ನಾನು ದಂಡಿನ ಮೇಲೆ ಬಿದ್ದೆನು; ನನ್ನ ದೇವರಿಂದ ಗೋಡೆ ನೆಗೆದೆನು.
ಕೀರ್ತನೆಗಳು 18 : 30 (KNV)
ದೇವರ ಮಾರ್ಗವಾದರೋ ಸಂಪೂರ್ಣವಾದದ್ದು; ಕರ್ತನ ವಾಕ್ಯವು ಪುಟಕ್ಕೆ ಹಾಕಿದ್ದಾಗಿದೆ; ಆತನು ತನ್ನಲ್ಲಿ ಭರವಸವಿಟ್ಟವರೆಲ್ಲರಿಗೆ ಗುರಾಣಿಯಾಗಿದ್ದಾನೆ.
ಕೀರ್ತನೆಗಳು 18 : 31 (KNV)
ಕರ್ತನಲ್ಲದೆ ದೇವರು ಯಾರು? ಇಲ್ಲವೆ ನಮ್ಮ ದೇವರ ಹೊರತು ಬಂಡೆಯು ಯಾರು?
ಕೀರ್ತನೆಗಳು 18 : 32 (KNV)
ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿ ನನ್ನ ಮಾರ್ಗವನ್ನು ಸಂಪೂರ್ಣ ಮಾಡುವ ದೇವರು ಆತನೇ.
ಕೀರ್ತನೆಗಳು 18 : 33 (KNV)
ನನ್ನ ಕಾಲುಗಳನ್ನು ಜಿಂಕೆಗಳ ಕಾಲುಗಳಂತೆ ಮಾಡಿ ನನ್ನ ಉನ್ನತ ಸ್ಥಳಗಳ ಮೆಲೆ ನನ್ನನ್ನು ನಿಲ್ಲಿಸುತ್ತಾನೆ.
ಕೀರ್ತನೆಗಳು 18 : 34 (KNV)
ಆತನು ನನ್ನ ಕೈಗಳಿಗೆ ಯುದ್ಧವನ್ನು ಕಲಿಸುತ್ತಾನೆ; ಹೀಗೆ ನನ್ನ ತೋಳುಗಳು ಉಕ್ಕಿನ ಬಿಲ್ಲನ್ನು ಮುರಿಯುತ್ತವೆ.
ಕೀರ್ತನೆಗಳು 18 : 35 (KNV)
ನಿನ್ನ ರಕ್ಷಣೆಯ ಗುರಾಣಿಯನ್ನು ಸಹ ನನಗೆ ನೀನು ಕೊಟ್ಟಿದ್ದೀ; ನಿನ್ನ ಬಲಗೈ ನನ್ನನ್ನು ಹಿಡಿದಿದೆ. ನಿನ್ನ ಸಾತ್ವಿಕತ್ವವು ನನ್ನನ್ನು ಹೆಚ್ಚಿಸಿಯದೆ.
ಕೀರ್ತನೆಗಳು 18 : 36 (KNV)
ನನ್ನ ಹೆಜ್ಜೆಗ ಳನ್ನು ವಿಶಾಲಮಾಡಿ ನನ್ನ ಪಾದಗಳನ್ನು ಎಡವದಂತೆ ಮಾಡಿದ್ದೀ.
ಕೀರ್ತನೆಗಳು 18 : 37 (KNV)
ನನ್ನ ಶತ್ರುಗಳನ್ನು ಹಿಂದಟ್ಟಿ ಹಿಡಿದಿ ದ್ದೇನೆ; ಅವರನ್ನು ಸಂಹರಿಸಿಬಿಡುವ ವರೆಗೆ ನಾನು ಹಿಂತಿರುಗಲಿಲ್ಲ.
ಕೀರ್ತನೆಗಳು 18 : 38 (KNV)
ಅವರು ಏಳಲಾರದ ಹಾಗೆ ಅವ ರಿಗೆ ಗಾಯ ಮಾಡಿದೆನು; ಅವರು ನನ್ನ ಪಾದಗಳ ಕೆಳಗೆ ಬಿದ್ದಿದ್ದಾರೆ.
ಕೀರ್ತನೆಗಳು 18 : 39 (KNV)
ನೀನು ಯುದ್ಧಕಾಗ್ಕಿ ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿ ನನ್ನ ಎದುರಾಳಿಗ ಳನ್ನು ಅಧೀನ ಮಾಡಿದಿ.
ಕೀರ್ತನೆಗಳು 18 : 40 (KNV)
ನನ್ನ ಹಗೆಯವರನ್ನು ನಾಶಮಾಡುವಂತೆ ಶತ್ರುಗಳ ಕುತ್ತಿಗೆಗಳನ್ನು ನೀನು ನನಗೆ ಕೊಟ್ಟಿದ್ದೀ.
ಕೀರ್ತನೆಗಳು 18 : 41 (KNV)
ಅವರು ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇದ್ದಿಲ್ಲ. ಕರ್ತನಿಗೂ ಮೊರೆ ಇಟ್ಟರು, ಆದರೆ ಅವರಿಗೆ ಆತನು ಉತ್ತರ ಕೊಡ ಲಿಲ್ಲ.
ಕೀರ್ತನೆಗಳು 18 : 42 (KNV)
ಗಾಳಿಯ ಮುಂದಿನ ಧೂಳಿನಹಾಗೆ ಅವ ರನ್ನು ಹೊಡೆದು ಪುಡಿಪುಡಿ ಮಾಡಿದನು; ಬೀದಿಯ ಕೆಸರಿನಹಾಗೆ ಅವರನ್ನು ಹೊರಗೆ ಚೆಲ್ಲಿಬಿಟ್ಟನು.
ಕೀರ್ತನೆಗಳು 18 : 43 (KNV)
ನೀನು ಜನರ ವಿವಾದಗಳಿಂದ ನನ್ನನ್ನು ತಪ್ಪಿಸಿದ್ದೀ; ಅನ್ಯ ಜನಾಂಗಗಳ ತಲೆಯಾಗಿ ನನ್ನನ್ನು ಮಾಡಿದ್ದೀ; ನಾನ ರಿಯದ ಜನರು ನನ್ನನ್ನು ಸೇವಿಸುವರು.
ಕೀರ್ತನೆಗಳು 18 : 44 (KNV)
ನನ್ನ ಮಾತನ್ನು ಕೇಳಿದೊಡನೆ ಅವರು ನನಗೆ ವಿಧೇಯ ರಾಗುವರು.
ಕೀರ್ತನೆಗಳು 18 : 45 (KNV)
ಪರಕೀಯರು ನನಗೆ ಅಧೀನರಾ ಗುವರು ಮತ್ತು ಅವರು ಬಾಡಿಹೋಗುವರು; ತಮ್ಮ ದುರ್ಗಗಳೊಳಗಿಂದ ನಡುಗುತ್ತಾ ಬರುವರು.
ಕೀರ್ತನೆಗಳು 18 : 46 (KNV)
ಕರ್ತನು ಜೀವಿತನಾಗಿದ್ದಾನೆ; ನನ್ನ ಬಂಡೆ ಯಾದಾತನು ಸ್ತುತಿಹೊಂದಲಿ; ನನ್ನ ರಕ್ಷಣೆಯ ದೇವರು ಘನಹೊಂದಲಿ.
ಕೀರ್ತನೆಗಳು 18 : 47 (KNV)
ನನಗೋಸ್ಕರ ಮುಯ್ಯಿಗೆ ಮುಯ್ಯಿತೀರಿಸುವಾತನೂ ಜನರನ್ನು ನನ್ನ ಕೆಳಗೆ ಅಧೀನಮಾಡುವಾತನೂ ದೇವರು ತಾನೇ.
ಕೀರ್ತನೆಗಳು 18 : 48 (KNV)
ನನ್ನ ಶತ್ರುಗಳಿಂದ ನನ್ನನ್ನು ತಪ್ಪಿಸುವನು; ಹೌದು, ನೀನು ನನ್ನ ಎದುರಾಳಿಗಳಿಂದ ತಪ್ಪಿಸಿ ನನ್ನನ್ನು ಮೇಲೆ ಎತ್ತುತ್ತೀ; ಬಲಾತ್ಕಾರ ಮಾಡುವವನಿಂದ ನನ್ನನ್ನು ಬಿಡಿಸಿದ್ದೀ.
ಕೀರ್ತನೆಗಳು 18 : 49 (KNV)
ಆದ್ದರಿಂದ ಓ ಕರ್ತನೇ, ಅನ್ಯಜನಾಂಗ ಗಳಲ್ಲಿ ನಿನಗೆ ಉಪಕಾರಸ್ತುತಿ ಮಾಡುತ್ತೇನೆ. ನಿನ್ನನ್ನು ಕೊಂಡಾಡಿ ನಿನ್ನ ಹೆಸರನ್ನು ಕೀರ್ತಿಸುವೆನು.
ಕೀರ್ತನೆಗಳು 18 : 50 (KNV)
ಆತನು ತನ್ನ ಅರಸನಿಗೆ ದೊಡ್ಡ ಬಿಡುಗಡೆಯನ್ನು ಕೊಟ್ಟು ತನ್ನ ಅಭಿಷಕ್ತನಾದ ದಾವೀದನಿಗೂ ಅವನ ಸಂತತಿಗೂ ಕೃಪೆಯನ್ನು ಎಂದೆಂದಿಗೂ ತೋರಿಸುತ್ತಾನೆ.
❮
❯