ಕೀರ್ತನೆಗಳು 148 : 1 (KNV)
ಕರ್ತನನ್ನು ನೀವು ಸ್ತುತಿಸಿರಿ, ಕರ್ತನನ್ನು ಆಕಾಶದಿಂದ ನೀವು ಸ್ತುತಿಸಿರಿ; ಉನ್ನತವಾದವುಗಳಲ್ಲಿ ಆತನನ್ನು ಸ್ತುತಿಸಿರಿ.
ಕೀರ್ತನೆಗಳು 148 : 2 (KNV)
ಆತನ ದೂತರೆಲ್ಲರೇ, ಆತನನ್ನು, ಸ್ತುತಿಸಿರಿ; ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ;
ಕೀರ್ತನೆಗಳು 148 : 3 (KNV)
ಸೂರ್ಯ ಚಂದ್ರರೇ, ಆತನನ್ನು ಸ್ತುತಿಸಿರಿ; ಹೊಳೆಯುವ ನಕ್ಷತ್ರಗಳೇ, ಆತ ನನ್ನು ಸ್ತುತಿಸಿರಿ.
ಕೀರ್ತನೆಗಳು 148 : 4 (KNV)
ಆಕಾಶಗಳ ಆಕಾಶಗಳೇ, ಆಕಾಶಗಳ ಮೇಲೆ ಇರುವ ನೀರುಗಳೇ, ಆತನನ್ನು ಸ್ತುತಿಸಿರಿ.
ಕೀರ್ತನೆಗಳು 148 : 5 (KNV)
ಕರ್ತನ ಹೆಸರನ್ನು ಅವು ಸ್ತುತಿಸಲಿ; ಆತನು ಆಜ್ಞಾ ಪಿಸಲು ಅವು ನಿರ್ಮಿಸಲ್ಪಟ್ಟವು.
ಕೀರ್ತನೆಗಳು 148 : 6 (KNV)
ಆತನು ಅವುಗಳನ್ನು ಯುಗಯುಗಗಳಿಗೂ ಸ್ಥಾಪಿಸಿದ್ದಾನೆ; ಆಜ್ಞೆಯನ್ನು ಕೊಟ್ಟಿ ದ್ದಾನೆ, ಅದು ವಿಾರಿ ಹೋಗುವದಿಲ್ಲ.
ಕೀರ್ತನೆಗಳು 148 : 7 (KNV)
ಭೂಮಿಯಿಂದ ಕರ್ತನನ್ನು ಸ್ತುತಿಸಿರಿ; ಎಲ್ಲಾ ಅಗಾಧಗಳೇ,
ಕೀರ್ತನೆಗಳು 148 : 8 (KNV)
ಬೆಂಕಿಯೇ, ಕಲ್ಮಳೆಯೇ, ಹಿಮವೇ, ಹಬೆಯೇ, ಆತನ ವಾಕ್ಯವನ್ನು ಕೈಕೊಳ್ಳುವ ಬಿರು ಗಾಳಿಯೇ,
ಕೀರ್ತನೆಗಳು 148 : 9 (KNV)
ಬೆಟ್ಟಗಳೇ, ಎಲ್ಲಾ ಗುಡ್ಡಗಳೇ, ಹಣ್ಣಿನ ಮರಗಳೇ, ಎಲ್ಲಾ ದೇವದಾರುಗಳೇ,
ಕೀರ್ತನೆಗಳು 148 : 10 (KNV)
ಮೃಗಗಳೇ, ಎಲ್ಲಾ ಪಶುಗಳೇ, ಹರಿದಾಡುವ ಜೀವಜಂತುಗಳೇ ಹಾರುವ ಪಕ್ಷಿಗಳೇ,
ಕೀರ್ತನೆಗಳು 148 : 11 (KNV)
ಭೂರಾಜರೇ, ಎಲ್ಲಾ ಪ್ರಜೆ ಗಳೇ, ಪ್ರಧಾನರೇ, ಭೂಮಿಯ ಎಲ್ಲಾ ನ್ಯಾಯಾಧಿ ಪತಿಗಳೇ,
ಕೀರ್ತನೆಗಳು 148 : 12 (KNV)
ಪ್ರಾಯಸ್ಥರೇ, ಕನ್ಯೆಯರೇ, ಮಕ್ಕಳೇ, ಮುದುಕರೇ,
ಕೀರ್ತನೆಗಳು 148 : 13 (KNV)
ಕರ್ತನ ಹೆಸರನ್ನು ಸ್ತುತಿಸಿರಿ; ಆತನ ಹೆಸರು ಮಾತ್ರ ಶ್ರೇಷ್ಠವಾಗಿದೆ; ಆತನ ಮಹಿಮೆಯು ಭೂಮ್ಯಾಕಾಶಗಳ ಮೇಲೆ ಅದೆ.
ಕೀರ್ತನೆಗಳು 148 : 14 (KNV)
ಆತನು ತನ್ನ ಜನರ ಕೊಂಬನ್ನು ಮೇಲಕ್ಕೆತ್ತಿದ್ದಾನೆ; ಆತನ ಪರಿ ಶುದ್ಧರೆಲ್ಲರೂ ಇಸ್ರಾಯೇಲಿನ ಮಕ್ಕಳು, ಅಂದರೆ ಆತನಿಗೆ ಸವಿಾಪವಾದ ಜನರ ಸ್ತೋತ್ರವನ್ನು ಗೌರವಿ ಸುತ್ತಾನೆ; ಕರ್ತನನ್ನು ಸ್ತುತಿಸಿರಿ.

1 2 3 4 5 6 7 8 9 10 11 12 13 14

BG:

Opacity:

Color:


Size:


Font: