ಕೀರ್ತನೆಗಳು 145 : 1 (KNV)
ಓ ಅರಸನಾದ ನನ್ನ ದೇವರೇ, ನಿನ್ನನ್ನು ಘನಪಡಿಸುವೆನು; ನಿನ್ನ ಹೆಸರನ್ನು ಎಂದೆಂದಿಗೂ ಸ್ತುತಿಸುವೆನು.
ಕೀರ್ತನೆಗಳು 145 : 2 (KNV)
ಪ್ರತಿದಿನ ನಿನ್ನನ್ನು ಸ್ತುತಿಸುವೆನು; ಎಂದೆಂದಿಗೂ ನಿನ್ನ ಹೆಸರನ್ನು ಸ್ತುತಿಸುವೆನು.
ಕೀರ್ತನೆಗಳು 145 : 3 (KNV)
ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸಲ್ಪಡತಕ್ಕವನೂ ಆಗಿದ್ದಾನೆ; ಆತನ ದೊಡ್ಡಸ್ತಿಕೆಯು ಅಶೋಧ್ಯವಾದದ್ದು.
ಕೀರ್ತನೆಗಳು 145 : 4 (KNV)
ತಲಾಂತರಕ್ಕೆ ಇನ್ನೊಂದು ತಲಾಂತರವು ನಿನ್ನ ಕೆಲಸಗಳನ್ನು ಪ್ರಕಟಿಸುತ್ತದೆ; ನಿನ್ನ ಪರಾಕ್ರಮಗಳನ್ನು ತಿಳಿಸುತ್ತಾರೆ.
ಕೀರ್ತನೆಗಳು 145 : 5 (KNV)
ನಿನ್ನ ಮಹಿಮೆಯ ಘನದ ಪ್ರಭೆಯ ವಿಷಯ ವಾಗಿಯೂ ನಿನ್ನ ಅದ್ಭುತಕಾರ್ಯಗಳ ವಿಷಯ ವಾಗಿಯೂ
ಕೀರ್ತನೆಗಳು 145 : 6 (KNV)
ನಿನ್ನ ಭಯಂಕರವಾದ ತ್ರಾಣದ ವಿಷಯ ವಾಗಿಯೂ ಅವರು ಹೇಳುವರು; ನಿನ್ನ ಮಹತ್ವವನ್ನು ನಾನು ಸಾರುವೆನು.
ಕೀರ್ತನೆಗಳು 145 : 7 (KNV)
ನಿನ್ನ ಬಹು ಒಳ್ಳೇತನದ ಜ್ಞಾಪಕವನ್ನು ಅವರು ನುಡಿಯುವರು; ನಿನ್ನ ನೀತಿಯ ನಿಮಿತ್ತ ಉತ್ಸಾಹಧ್ವನಿ ಮಾಡುವರು.
ಕೀರ್ತನೆಗಳು 145 : 8 (KNV)
ಕರ್ತನು ಕೃಪಾಳುವೂ ಅಂತಃಕರಣವೂ ದೀರ್ಘಶಾಂತಿಯೂ ಮಹಾಕರುಣೆಯುಳ್ಳವನೂ ಆಗಿದ್ದಾನೆ.
ಕೀರ್ತನೆಗಳು 145 : 9 (KNV)
ಕರ್ತನು ಸರ್ವರಿಗೂ ಒಳ್ಳೆಯವನು; ಆತನ ಅಂತಃಕರಣವು ಆತನ ಎಲ್ಲಾ ಕೆಲಸಗಳ ಮೇಲೆ ಅದೆ.
ಕೀರ್ತನೆಗಳು 145 : 10 (KNV)
ಓ ಕರ್ತನೇ, ನಿನ್ನ ಕೆಲಸಗಳೆಲ್ಲಾ ನಿನ್ನನ್ನು ಕೊಂಡಾಡುವವು; ನಿನ್ನ ಪರಿಶುದ್ಧರು ನಿನ್ನನ್ನು ಸ್ತುತಿಸುವರು.
ಕೀರ್ತನೆಗಳು 145 : 11 (KNV)
ನಿನ್ನ ರಾಜ್ಯದ ಘನವನ್ನು ಹೇಳುವರು; ನಿನ್ನ ಪರಾಕ್ರಮವನ್ನು ನುಡಿಯುವರು.
ಕೀರ್ತನೆಗಳು 145 : 12 (KNV)
ಮನುಷ್ಯನ ಮಕ್ಕಳಿಗೆ ಆತನ ಪರಾಕ್ರಮ ಕ್ರಿಯೆಗಳನ್ನೂ ಆತನ ರಾಜ್ಯದ ಪ್ರಭೆಯ ಘನವನ್ನೂ ತಿಳಿಯಪಡಿಸುವರು.
ಕೀರ್ತನೆಗಳು 145 : 13 (KNV)
ನಿನ್ನ ರಾಜ್ಯವು ಶಾಶ್ವತವಾದ ರಾಜ್ಯವಾಗಿದೆ; ನಿನ್ನ ದೊರೆತನವು ಎಲ್ಲಾ ತಲತಲಾಂತರಗಳಲ್ಲಿ ಇರುವದು.
ಕೀರ್ತನೆಗಳು 145 : 14 (KNV)
ಕರ್ತನು ಬೀಳುವವರೆಲ್ಲರನ್ನು ಉದ್ಧಾರಮಾಡುತ್ತಾನೆ; ತಗ್ಗಿಸಿ ಕೊಳ್ಳುವವರೆಲ್ಲರನ್ನು ಎತ್ತುತ್ತಾನೆ.
ಕೀರ್ತನೆಗಳು 145 : 15 (KNV)
ಎಲ್ಲರ ಕಣ್ಣುಗಳು ನಿನಗೆ ಕಾದುಕೊಳ್ಳುತ್ತವೆ; ನೀನು ಅವರಿಗೆ ಅವರ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುತ್ತೀ.
ಕೀರ್ತನೆಗಳು 145 : 16 (KNV)
ನಿನ್ನ ಕೈ ತೆರೆದು ಎಲ್ಲಾ ಜೀವಿಗಳ ಇಷ್ಟವನ್ನು ತೃಪ್ತಿಪಡಿ ಸುತ್ತೀ.
ಕೀರ್ತನೆಗಳು 145 : 17 (KNV)
ಕರ್ತನು ತನ್ನ ಎಲ್ಲಾ ಮಾರ್ಗಗಳಲ್ಲಿ ನೀತಿವಂತನೂ ತನ್ನ ಎಲ್ಲಾ ಕೆಲಸಗಳಲ್ಲಿ ಪರಿಶುದ್ಧನೂ ಆಗಿದ್ದಾನೆ.
ಕೀರ್ತನೆಗಳು 145 : 18 (KNV)
ಕರ್ತನಿಗೆ ಮೊರೆಯಿಡುವವರು ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.
ಕೀರ್ತನೆಗಳು 145 : 19 (KNV)
ತನಗೆ ಭಯಪಡುವವರ ಇಷ್ಟವನ್ನು ತೀರಿಸುತ್ತಾನೆ. ಅವರ ಮೊರೆಯನ್ನು ಕೇಳಿ ಅವರನ್ನು ರಕ್ಷಿಸುತ್ತಾನೆ.
ಕೀರ್ತನೆಗಳು 145 : 20 (KNV)
ಕರ್ತನು ತನ್ನನ್ನು ಪ್ರೀತಿ ಮಾಡುವ ವರೆಲ್ಲರನ್ನು ಕಾಪಾಡುತ್ತಾನೆ; ಆದರೆ ದುಷ್ಟರೆಲ್ಲರನ್ನು ನಾಶಮಾಡುತ್ತಾನೆ.
ಕೀರ್ತನೆಗಳು 145 : 21 (KNV)
ನನ್ನ ಬಾಯಿ ಕರ್ತನ ಸ್ತೋತ್ರ ವನ್ನು ನುಡಿಯಲಿ; ಎಲ್ಲಾ ಮನುಷ್ಯರು ಆತನ ಪರಿಶುದ್ಧವಾದ ಹೆಸರನ್ನು ಯುಗಯುಗಾಂತರಗಳಿಗೂ ಸ್ತುತಿಸಲಿ.

1 2 3 4 5 6 7 8 9 10 11 12 13 14 15 16 17 18 19 20 21