ಕೀರ್ತನೆಗಳು 137 : 1 (KNV)
ಬಾಬೆಲಿನ ನದಿಗಳ ಹತ್ತಿರ ನಾವು ಕೂತುಕೊಂಡು ಹೌದು, ಚೀಯೋ ನನ್ನು ಜ್ಞಾಪಕಮಾಡಿಕೊಂಡಾಗ ನಾವು ಅತ್ತೆವು.
ಕೀರ್ತನೆಗಳು 137 : 2 (KNV)
ಅದರ ನಡುವೆ ಇರುವ ನೀರವಂಜಿ ಮರಗಳ ಮೇಲೆ ನಮ್ಮ ಕಿನ್ನರಿಗಳನ್ನು ತೂಗಹಾಕಿದೆವು.
ಕೀರ್ತನೆಗಳು 137 : 3 (KNV)
ಅಲ್ಲಿ ನಮ್ಮನ್ನು ಸೆರೆಹಿಡಿದು ಹಾಳುಮಾಡಿದವರು--ನಮ್ಮ ಸಂತೋಷ ಕ್ಕಾಗಿ ಒಂದು ಹಾಡನ್ನು ಹಾಡಿರಿ ಅಂದರು.
ಕೀರ್ತನೆಗಳು 137 : 4 (KNV)
ಅನ್ಯದೇಶದಲ್ಲಿ ನಾವು ಕರ್ತನ ಹಾಡನ್ನು ಹಾಡು ವದು ಹೇಗೆ?
ಕೀರ್ತನೆಗಳು 137 : 5 (KNV)
ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ ನನ್ನ ಬಲಗೈ ಮರೆತುಹೋಗಲಿ.
ಕೀರ್ತನೆಗಳು 137 : 6 (KNV)
ನಾನು ನಿನ್ನನ್ನು ಜ್ಞಾಪಕಮಾಡಿಕೊಳ್ಳದೆ ಯೆರೂಸ ಲೇಮನ್ನು ನನ್ನ ಮುಖ್ಯ ಸಂತೋಷಕ್ಕಿಂತ ಅದನ್ನು ಹೆಚ್ಚಿಸದಿದ್ದರೆ ನನ್ನ ನಾಲಿಗೆಯು ನನ್ನ ಅಂಗಳಕ್ಕೆ ಹತ್ತಲಿ.
ಕೀರ್ತನೆಗಳು 137 : 7 (KNV)
ಹಾಳುಮಾಡಿರಿ, ಅದರ ಅಸ್ತಿವಾರದ ವರೆಗೆ ಹಾಳು ಮಾಡಿರಿ ಎಂದು ಹೇಳಿದ ಎದೋಮಿನ ಮಕ್ಕಳನ್ನು ಯೆರೂಸಲೇಮಿನ ದಿವಸದಲ್ಲಿ ಕರ್ತನೇ, ಜ್ಞಾಪಕ ಮಾಡಿಕೋ.
ಕೀರ್ತನೆಗಳು 137 : 8 (KNV)
ಹಾಳಾಗಲಿಕ್ಕಿರುವ ಬಾಬೆಲಿನ ಮಗಳೇ, ನೀನು ನಮಗೆ ಮಾಡಿದ ಕಾರ್ಯಕ್ಕೆ ಪ್ರತೀಕಾರ ವನ್ನು ನಿನಗೆ ಸಲ್ಲಿಸುವವನು ಧನ್ಯನು.
ಕೀರ್ತನೆಗಳು 137 : 9 (KNV)
ನಿನ್ನ ಚಿಕ್ಕ ಕೂಸುಗಳನ್ನು ಹಿಡಿದು ಬಂಡೆಗಳ ಮೇಲೆ ಅಪ್ಪಳಿಸಿ ಬಿಡುವವನು ಧನ್ಯನು.

1 2 3 4 5 6 7 8 9

BG:

Opacity:

Color:


Size:


Font: