ಕೀರ್ತನೆಗಳು 136 : 1 (KNV)
ಕರ್ತನನ್ನು ಕೊಂಡಾಡಿರಿ, ಆತನು ಒಳ್ಳೆಯವನು; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 2 (KNV)
ದೇವರುಗಳ ದೇವರನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 3 (KNV)
ಕರ್ತರ ಕರ್ತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 4 (KNV)
ಒಬ್ಬನಾಗಿ ದೊಡ್ಡ ಅದ್ಭುತಗಳನ್ನು ಮಾಡುವಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 5 (KNV)
ಆಕಾಶ ವನ್ನು ಜ್ಞಾನದಿಂದ ಉಂಟುಮಾಡಿದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 6 (KNV)
ಭೂಮಿಯನ್ನು ನೀರಿನ ಮೇಲೆ ಹಾಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 7 (KNV)
ದೊಡ್ಡ ಬೆಳಕುಗಳನ್ನು ಉಂಟು ಮಾಡಿದಾತ ನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 8 (KNV)
ಹಗಲನ್ನು ಆಳುವದಕ್ಕೆ ಸೂರ್ಯನನ್ನು ಉಂಟು ಮಾಡಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 9 (KNV)
ಇರುಳನ್ನು ಆಳುವದಕ್ಕೆ ಚಂದ್ರ ನಕ್ಷತ್ರಗಳನ್ನು ಉಂಟು ಮಾಡಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 10 (KNV)
ಐಗುಪ್ತದ ಚೊಚ್ಚಲಾದವುಗಳನ್ನು ಹೊಡೆದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 11 (KNV)
ಇಸ್ರಾಯೇಲನನ್ನು ಅವರ ಮಧ್ಯದಲ್ಲಿಂದ ಹೊರಗೆ ಬರಮಾಡಿದಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 12 (KNV)
ಬಲವಾದ ಕೈಯಿಂ ದಲೂ ಚಾಚಿದ ತೋಳಿನಿಂದಲೂ ಅವರನ್ನು ಹೊರಗೆ ತಂದನು; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 13 (KNV)
ಕೆಂಪು ಸಮುದ್ರವನ್ನು ವಿಭಾಗಿಸಿದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 14 (KNV)
ಇಸ್ರಾಯೇಲನ್ನು ಅದರ ನಡುವೆ ನಡಿಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 15 (KNV)
ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮು ದ್ರದಲ್ಲಿ ಕೆಡವಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 16 (KNV)
ತನ್ನ ಜನರನ್ನು ಅರಣ್ಯದಲ್ಲಿ ನಡೆಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 17 (KNV)
ದೊಡ್ಡ ಅರಸುಗಳನ್ನು ಹೊಡೆದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 18 (KNV)
ಪ್ರಸಿ ದ್ಧರಾದ ಅರಸುಗಳನ್ನು ಕೊಂದುಹಾಕಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 19 (KNV)
ಅಮೋರಿಯರ ಅರಸನಾದ ಸೀಹೋನನು ಒಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 20 (KNV)
ಬಾಷಾ ನಿನ ಅರಸನಾದ ಓಗನೊಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 21 (KNV)
ಅವರ ದೇಶವನ್ನು ಬಾಧ್ಯತೆ ಯಾಗಿ ಕೊಟ್ಟಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 22 (KNV)
ತನ್ನ ಸೇವಕನಾದ ಇಸ್ರಾಯೇಲಿಗೆ ಅದು ಬಾಧ್ಯತೆಯಾಗಿದೆ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 23 (KNV)
ನಮ್ಮ ದೀನಸ್ಥಿತಿಯಲ್ಲಿ ನಮ್ಮನ್ನು ನೆನಸಿ ಕೊಂಡಾ ತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂ ದಿಗೂ ಅದೆ.
ಕೀರ್ತನೆಗಳು 136 : 24 (KNV)
ನಮ್ಮ ವೈರಿಗಳಿಂದ ನಮ್ಮನ್ನು ಬಿಡಿ ಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 25 (KNV)
ಮನುಷ್ಯರಿಗೆಲ್ಲಾ ಆಹಾರ ಕೊಡುವಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 136 : 26 (KNV)
ಪರಲೋಕದ ದೇವರನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
❮
❯