ಕೀರ್ತನೆಗಳು 132 : 1 (KNV)
ಕರ್ತನೇ, ದಾವೀದನನ್ನೂ ಅವನ ಎಲ್ಲಾ ಶ್ರಮೆಗಳನ್ನೂ ಜ್ಞಾಪಕ ಮಾಡಿಕೋ.
ಕೀರ್ತನೆಗಳು 132 : 2 (KNV)
ಅವನು ಕರ್ತನಿಗೆ ಆಣೆ ಇಟ್ಟು ಶಕ್ತಿ ಯುಳ್ಳ ಯಾಕೋಬನ ದೇವರಿಗೆ ಪ್ರಮಾಣಮಾಡಿ ಕೊಂಡದ್ದೇನಂದರೆ--
ಕೀರ್ತನೆಗಳು 132 : 3 (KNV)
ಕರ್ತನಿಗೆ ಒಂದು ಸ್ಥಳವನ್ನೂ ಯಾಕೋಬನ ದೇವರಿಗೆ ನಿವಾಸಗಳನ್ನೂ ನಾನು ಕಂಡುಕೊಳ್ಳುವ ವರೆಗೆ ನಿಶ್ಚಯವಾಗಿ
ಕೀರ್ತನೆಗಳು 132 : 4 (KNV)
ನನ್ನ ಮನೆಯ ಗುಡಾರದಲ್ಲಿ ಸೇರೆನು; ನನ್ನ ಮಂಚದ ಹಾಸಿಗೆಯನ್ನು ಏರೆನು;
ಕೀರ್ತನೆಗಳು 132 : 5 (KNV)
ನನ್ನ ಕಣ್ಣುಗಳಿಗೆ ನಿದ್ದೆಯನ್ನೂ ನನ್ನ ರೆಪ್ಪೆ ಗಳಿಗೆ ತೂಕಡಿಕೆಯನ್ನೂ ಕೊಡೆನು ಎಂಬದು.
ಕೀರ್ತನೆಗಳು 132 : 6 (KNV)
ಇಗೋ, ಎಫ್ರಾತದಲ್ಲಿ ಅದನ್ನು ಕೇಳಿದೆವು; ಅಡವಿಯ ಬೈಲುಗಳಲ್ಲಿ ಅದನ್ನು ಕಂಡುಕೊಂಡೆವು.
ಕೀರ್ತನೆಗಳು 132 : 7 (KNV)
ನಾವು ಆತನ ಗುಡಾರಗಳಿಗೆ ಹೋಗಿ ಆತನ ಪಾದಪೀಠದಲ್ಲಿ ಆರಾಧಿಸೋಣ.
ಕೀರ್ತನೆಗಳು 132 : 8 (KNV)
ಓ ಕರ್ತನೇ, ನೀನು ಬಲವುಳ್ಳ ನಿನ್ನ ಮಂಜೂಷದೊಂದಿಗೆ ನಿನ್ನ ವಿಶ್ರಾಂತಿಗೆ ಎದ್ದೇಳು.
ಕೀರ್ತನೆಗಳು 132 : 9 (KNV)
ನಿನ್ನ ಯಾಜಕರು ನೀತಿಯನ್ನು ಹೊದ್ದು ಕೊಳ್ಳಲಿ; ಪರಿಶುದ್ಧರು ಉತ್ಸಾಹಧ್ವನಿ ಮಾಡಲಿ.
ಕೀರ್ತನೆಗಳು 132 : 10 (KNV)
ನಿನ್ನ ಸೇವಕನಾದ ದಾವೀದನ ನಿಮಿತ್ತ ನಿನ್ನ ಅಭಿಷಿಕ್ತನ ಮುಖವನ್ನು ತಿರುಗಿಸಬೇಡ.
ಕೀರ್ತನೆಗಳು 132 : 11 (KNV)
ಕರ್ತನು ದಾವೀದನಿಗೆ ಸತ್ಯದ ಆಣೆ ಇಟ್ಟಿದ್ದಾನೆ; ಅದರಿಂದ ತಿರುಗಿಕೊಳ್ಳನು; ಅದು--ನಿನ್ನ ಸಂತಾನ ವನ್ನು ನಿನ್ನ ಸಿಂಹಾಸನದ ಮೇಲೆ ಇರಿಸು ವದು.
ಕೀರ್ತನೆಗಳು 132 : 12 (KNV)
ನಿನ್ನ ಮಕ್ಕಳಿಗೆ ನಾನು ಕಲಿಸುವ ನನ್ನ ಒಡಂಬಡಿಕೆಯನ್ನೂ ನನ್ನ ಸಾಕ್ಷಿಯನ್ನೂ ಕೈಕೊಂಡರೆ ಅವರ ಮಕ್ಕಳು ಸಹ ಎಂದೆಂದಿಗೂ ನಿನ್ನ ಸಿಂಹಾಸನ ದಲ್ಲಿ ಕೂಡ್ರುವರು.
ಕೀರ್ತನೆಗಳು 132 : 13 (KNV)
ಕರ್ತನು ಚೀಯೋನನ್ನು ಆದುಕೊಂಡು ಅದನ್ನು ತನ್ನ ವಾಸಕ್ಕಾಗಿ ಅಪೇಕ್ಷಿಸಿದ್ದಾನೆ.
ಕೀರ್ತನೆಗಳು 132 : 14 (KNV)
ಇದೇ ಎಂದೆಂದಿಗೂ ನನ್ನ ವಿಶ್ರಾಂತಿಯು; ಇಲ್ಲೇ ವಾಸಿಸುವೆನು; ಇದನ್ನು ನಾನು ಅಪೇಕ್ಷಿಸಿದ್ದೇನೆ.
ಕೀರ್ತನೆಗಳು 132 : 15 (KNV)
ಅದರ ಆದಾಯವನ್ನು ಬಹಳವಾಗಿ ಆಶೀರ್ವದಿ ಸುವೆನು; ಆದರೆ ಬಡವರನ್ನು ರೊಟ್ಟಿಯಿಂದ ತೃಪ್ತಿ ಪಡಿಸುವೆನು.
ಕೀರ್ತನೆಗಳು 132 : 16 (KNV)
ಅದರ ಯಾಜಕರಿಗೆ ರಕ್ಷಣೆಯನ್ನೂ ಹೊದಿಸುವೆನು; ಅದರ ಪರಿಶುದ್ಧರು ಗಟ್ಟಿಯಾಗಿ ಉತ್ಸಾಹ ಧ್ವನಿಮಾಡುವರು.
ಕೀರ್ತನೆಗಳು 132 : 17 (KNV)
ಅಲ್ಲಿ ದಾವೀದನಿಗೆ ಕೊಂಬನ್ನು ಮೊಳಿಸುವೆನು; ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ.
ಕೀರ್ತನೆಗಳು 132 : 18 (KNV)
ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.
❮
❯