ಕೀರ್ತನೆಗಳು 127 : 1 (KNV)
ಕರ್ತನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಕಷ್ಟಪಡುತ್ತಾರೆ; ಕರ್ತನು ಪಟ್ಟಣವನ್ನು ಕಾಪಾಡದೆ ಇದ್ದರೆ ಅದನ್ನು ಕಾಪಾಡುವವನು ವ್ಯರ್ಥವಾಗಿ ಎಚ್ಚರ ವಾಗಿರುತ್ತಾನೆ.
ಕೀರ್ತನೆಗಳು 127 : 2 (KNV)
ರೊಟ್ಟಿಗಾಗಿ ವ್ಯಥೆಪಟ್ಟು ಬೆಳಿಗ್ಗೆ ಬೇಗ ಏಳುವದೂ ರಾತ್ರಿ ತಡವಾಗಿ ಮಲಗುವದೂ ವ್ಯರ್ಥವೇ. ಆತನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಅದನ್ನು ಕೊಡುತ್ತಾನೆ.
ಕೀರ್ತನೆಗಳು 127 : 3 (KNV)
ಇಗೋ, ಮಕ್ಕಳು ಕರ್ತನಿಂದ ಸಿಕ್ಕಿದ ಸ್ವಾಸ್ಥ್ಯವಾಗಿ ದ್ದಾರೆ; ಗರ್ಭಫಲವು ಆತನ ಬಹುಮಾನವಾಗಿದೆ.
ಕೀರ್ತನೆಗಳು 127 : 4 (KNV)
ಯೌವನದ ಮಕ್ಕಳು ಪರಾಕ್ರಮಶಾಲಿಯ ಕೈಯಲ್ಲಿ ಬಾಣಗಳು ಹೇಗೋ ಹಾಗೆಯೇ.ತನ್ನ ಬತ್ತಳಿಕೆ ಯನ್ನು ಅವರಿಂದ ತುಂಬಿಸಿದ ಪುರುಷನು ಧನ್ಯನು; ಶತ್ರುಗಳ ಸಂಗಡ ಬಾಗಲಲ್ಲಿ ಮಾತನಾಡುವಾಗ ಅವರು ನಾಚಿಕೆಪಡರು.
ಕೀರ್ತನೆಗಳು 127 : 5 (KNV)
ತನ್ನ ಬತ್ತಳಿಕೆ ಯನ್ನು ಅವರಿಂದ ತುಂಬಿಸಿದ ಪುರುಷನು ಧನ್ಯನು; ಶತ್ರುಗಳ ಸಂಗಡ ಬಾಗಲಲ್ಲಿ ಮಾತನಾಡುವಾಗ ಅವರು ನಾಚಿಕೆಪಡರು.

1 2 3 4 5

BG:

Opacity:

Color:


Size:


Font: