ಕೀರ್ತನೆಗಳು 124 : 1 (KNV)
ಇಸ್ರಾಯೇಲ್‌ ಈಗ ಹೇಳುವದೇನಂದರೆ: ಕರ್ತನು ನಮ್ಮ ಪಕ್ಷ ಇಲ್ಲದಿದ್ದರೆ,
ಕೀರ್ತನೆಗಳು 124 : 2 (KNV)
ಮನುಷ್ಯರು ನಮಗೆ ವಿರೋಧವಾಗಿ ಏಳುವಾಗ, ಕರ್ತನು ನಮಗಿಲ್ಲದಿದ್ದರೆ ನಮ್ಮ ಮೇಲೆ ಅವರ ಕೋಪವು ಉರಿದು,
ಕೀರ್ತನೆಗಳು 124 : 3 (KNV)
ಅವರು ನಮ್ಮನ್ನು ಜೀವಿತರಾಗಿ ನುಂಗಿಬಿಡುತ್ತಿದ್ದರು.
ಕೀರ್ತನೆಗಳು 124 : 4 (KNV)
ಆಗ ನೀರುಗಳು ನಮ್ಮನ್ನು ಮುಣುಗಿಸುತ್ತಿದ್ದವು; ತೊರೆಯು ನಮ್ಮ ಪ್ರಾಣದ ಮೇಲೆ ಹರಿಯುತ್ತಿತ್ತು.
ಕೀರ್ತನೆಗಳು 124 : 5 (KNV)
ಆಗ ನಮ್ಮ ಪ್ರಾಣದ ಮೇಲೆ ಗರ್ವದ ನೀರುಗಳು ಹರಿಯುತ್ತಿ ದ್ದವು.
ಕೀರ್ತನೆಗಳು 124 : 6 (KNV)
ಆದರೆ ನಮ್ಮನ್ನು ಅವರ ಹಲ್ಲುಗಳಿಗೆ ಬೇಟೆ ಯಾಗಿ ಕೊಡದೆ ಇದ್ದ ಕರ್ತನಿಗೆ ಸ್ತೋತ್ರವಾಗಲಿ.
ಕೀರ್ತನೆಗಳು 124 : 7 (KNV)
ನಮ್ಮ ಪ್ರಾಣವು ಪಕ್ಷಿಯ ಹಾಗೆ ಬೇಟೆಗಾರರ ಉರ್ಲಿನಿಂದ ತಪ್ಪಿಸಿಕೊಂಡಿತು; ಬಲೆಯು ಹರಿಯಿತು; ನಾವು ತಪ್ಪಿಸಿಕೊಂಡೆವು.ನಮ್ಮ ಸಹಾಯವು ಆಕಾ ಶವನ್ನೂ ಭೂಮಿಯನ್ನೂ ಉಂಟು ಮಾಡಿದ ಕರ್ತನ ಹೆಸರಿನಲ್ಲಿ ಇದೆ.
ಕೀರ್ತನೆಗಳು 124 : 8 (KNV)
ನಮ್ಮ ಸಹಾಯವು ಆಕಾ ಶವನ್ನೂ ಭೂಮಿಯನ್ನೂ ಉಂಟು ಮಾಡಿದ ಕರ್ತನ ಹೆಸರಿನಲ್ಲಿ ಇದೆ.

1 2 3 4 5 6 7 8

BG:

Opacity:

Color:


Size:


Font: