ಕೀರ್ತನೆಗಳು 122 : 1 (KNV)
ಕರ್ತನ ಆಲಯಕ್ಕೆ ಹೋಗೋಣ ಎಂದು ಅವರು ನನಗೆ ಹೇಳಿದಾಗ ನನಗೆ ಸಂತೋಷವಾಯಿತು.
ಕೀರ್ತನೆಗಳು 122 : 2 (KNV)
ಓ ಯೆರೂಸಲೇಮೇ, ನಮ್ಮ ಪಾದಗಳು ನಿನ್ನ ಬಾಗಲುಗಳಲ್ಲಿ ನಿಲ್ಲುತ್ತವೆ.
ಕೀರ್ತನೆಗಳು 122 : 3 (KNV)
ಯೆರೂಸಲೇಮು ಒಟ್ಟಾಗಿ ಜೋಡಿಸಲ್ಪಟ್ಟ ಪಟ್ಟ ಣದ ಹಾಗೆ ಕಟ್ಟಲ್ಪಟ್ಟಿದೆ.
ಕೀರ್ತನೆಗಳು 122 : 4 (KNV)
ಅಲ್ಲಿಗೆ ಗೋತ್ರಗಳು, ಕರ್ತನ ಗೋತ್ರಗಳು, ಇಸ್ರಾಯೇಲಿಗೆ ಸಾಕ್ಷಿಯಾಗಿ, ಕರ್ತನ ಹೆಸರನ್ನು ಕೊಂಡಾಡುವದಕ್ಕೆ ಹೋಗುತ್ತದೆ.
ಕೀರ್ತನೆಗಳು 122 : 5 (KNV)
ಅಲ್ಲಿ ನ್ಯಾಯತೀರ್ವಿಕೆಗೆ ಸಿಂಹಾಸನಗಳೂ ದಾವೀದನ ಮನೆಯ ಸಿಂಹಾಸನಗಳೂ ಇರುತ್ತವೆ.
ಕೀರ್ತನೆಗಳು 122 : 6 (KNV)
ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ. ಯೆರೂಸಲೇಮನ್ನು ಪ್ರೀತಿಮಾಡುವವರು ಅಭಿವೃದ್ಧಿ ಯಾಗುವರು.
ಕೀರ್ತನೆಗಳು 122 : 7 (KNV)
ನಿನ್ನ ಪ್ರಾಕಾರದಲ್ಲಿ ಸಮಾಧಾನವೂ ಅರಮನೆಗಳಲ್ಲಿ ಅಭಿವೃದ್ಧಿಯೂ ಇರಲಿ.
ಕೀರ್ತನೆಗಳು 122 : 8 (KNV)
ನನ್ನ ಸಹೋದರರ ನಿಮಿತ್ತವೂ ನನ್ನ ಸ್ನೇಹಿತರ ನಿಮಿತ್ತವೂ ನಿನ್ನಲ್ಲಿ ಸಮಾಧಾನವಿರಲೆಂದು ಈಗ ಹೇಳುತ್ತೇನೆ.
ಕೀರ್ತನೆಗಳು 122 : 9 (KNV)
ನಮ್ಮ ದೇವರಾದ ಕರ್ತನ ಆಲಯದ ನಿಮಿತ್ತ ನಿನಗೆ ಒಳ್ಳೇದನ್ನು ಹುಡುಕುತ್ತೇನೆ.

1 2 3 4 5 6 7 8 9

BG:

Opacity:

Color:


Size:


Font: