ಕೀರ್ತನೆಗಳು 119 : 1 (KNV)
ಮಾರ್ಗದಲ್ಲಿ ಅಶುದ್ಧರಾಗದವರೂ ಕರ್ತನ ನ್ಯಾಯಪ್ರಮಾಣದಲ್ಲಿ ನಡೆದುಕೊಳ್ಳುವವರೂ ಧನ್ಯರು.
ಕೀರ್ತನೆಗಳು 119 : 2 (KNV)
ಆತನ ಸಾಕ್ಷಿಗಳನ್ನು ಕೈಕೊಂಡು ಪೂರ್ಣಹೃದಯದಿಂದ ಆತನನ್ನು ಹುಡುಕುವವರು ಧನ್ಯರು.
ಕೀರ್ತನೆಗಳು 119 : 3 (KNV)
ನಿಶ್ಚಯವಾಗಿ ಅವರು ಅಪರಾಧ ವನ್ನು ಮಾಡದೆ ಆತನ ಮಾರ್ಗಗಳಲ್ಲಿ ನಡೆದುಕೊಳ್ಳು ತ್ತಾರೆ.
ಕೀರ್ತನೆಗಳು 119 : 4 (KNV)
ನಿನ್ನ ಕಟ್ಟಳೆಗಳನ್ನು ಜಾಗ್ರತೆಯಾಗಿ ಕೈಕೊಳ್ಳ ಬೇಕೆಂದು ನೀನು ಆಜ್ಞಾಪಿಸಿದ್ದೀ.
ಕೀರ್ತನೆಗಳು 119 : 5 (KNV)
ನನ್ನ ಮಾರ್ಗಗಳು ನಿನ್ನ ನಿಯಮಗಳನ್ನು ಕೈಕೊಳ್ಳುವದಕ್ಕೆ ನನ್ನನ್ನು ನಡಿ ಸಲಿ.
ಕೀರ್ತನೆಗಳು 119 : 6 (KNV)
ಆಗ ನಿನ್ನ ಆಜ್ಞೆಗಳನ್ನೆಲ್ಲಾ ದೃಷ್ಟಿಸುವಾಗ ನಾಚಿಕೆ ಪಡೆನು.
ಕೀರ್ತನೆಗಳು 119 : 7 (KNV)
ನಿನ್ನ ನೀತಿಯ ನ್ಯಾಯಗಳನ್ನು ನಾನು ಕಲಿ ಯುವಾಗ ಯಥಾರ್ಥ ಹೃದಯದಿಂದ ನಿನ್ನನ್ನು ಕೊಂಡಾ ಡುವೆನು.
ಕೀರ್ತನೆಗಳು 119 : 8 (KNV)
ನಿನ್ನ ನಿಯಮಗಳನ್ನು ಕೈಕೊಳ್ಳುವ ನನ್ನನ್ನು ಸಂಪೂರ್ಣವಾಗಿ ಕೈಬಿಡಬೇಡ.
ಕೀರ್ತನೆಗಳು 119 : 9 (KNV)
ಯೌವನಸ್ಥನು ಯಾವದರಿಂದ ತನ್ನ ನಡತೆಯನ್ನು ಶುಚಿಮಾಡಿಕೊಳ್ಳುವನು? ನಿನ್ನ ವಾಕ್ಯವನ್ನು ಕೈಕೊಳ್ಳು ವದರಿಂದಲೇ.
ಕೀರ್ತನೆಗಳು 119 : 10 (KNV)
ನನ್ನ ಪೂರ್ಣಹೃದಯದಿಂದ ನಿನ್ನನ್ನು ಹುಡುಕಿದ್ದೇನೆ; ನಿನ್ನ ಆಜ್ಞೆಗಳಿಂದ ನಾನು ತಪ್ಪಿಹೋಗ ದಂತೆ ಮಾಡು.
ಕೀರ್ತನೆಗಳು 119 : 11 (KNV)
ನಿನಗೆ ವಿರೋಧವಾಗಿ ಪಾಪ ಮಾಡದ ಹಾಗೆ ನನ್ನ ಹೃದಯದಲ್ಲಿ ನಿನ್ನ ವಾಕ್ಯವನ್ನು ಬಚ್ಚಿಟ್ಟಿದ್ದೇನೆ.
ಕೀರ್ತನೆಗಳು 119 : 12 (KNV)
ಓ ಕರ್ತನೇ, ನೀನು ಸ್ತುತಿಸಲ್ಪಡು ವಾತನು; ನಿನ್ನ ನಿಯಮಗಳನ್ನು ನನಗೆ ಕಲಿಸು.
ಕೀರ್ತನೆಗಳು 119 : 13 (KNV)
ನನ್ನ ತುಟಿಗಳಿಂದ ನಿನ್ನ ನ್ಯಾಯವಿಧಿಗಳನ್ನೆಲ್ಲಾ ಸಾರಿದ್ದೇನೆ.
ಕೀರ್ತನೆಗಳು 119 : 14 (KNV)
ನಿನ್ನ ಸಾಕ್ಷಿಗಳ ಮಾರ್ಗದಲ್ಲಿ, ಸಕಲ ಸಂಪತ್ತಿನಲ್ಲಿ ಹೇಗೋ ಹಾಗೆಯೇ ಸಂತೋಷಿಸಿದ್ದೇನೆ.
ಕೀರ್ತನೆಗಳು 119 : 15 (KNV)
ನಿನ್ನ ಕಟ್ಟಳೆಗಳನ್ನು ಧ್ಯಾನ ಮಾಡಿ, ನಿನ್ನ ದಾರಿಗಳನ್ನು ಗಮ ನಿಸುವೆನು.
ಕೀರ್ತನೆಗಳು 119 : 16 (KNV)
ನಿನ್ನ ನಿಯಮಗಳಲ್ಲಿ ಆನಂದಪಟ್ಟು, ನಿನ್ನ ವಾಕ್ಯವನ್ನು ಮರೆತುಬಿಡೆನು.
ಕೀರ್ತನೆಗಳು 119 : 17 (KNV)
ನಿನ್ನ ಸೇವಕನಿಗೆ ಉಪಕಾರಮಾಡು; ಆಗ ನಾನು ಬದುಕಿ, ನಿನ್ನ ವಾಕ್ಯವನ್ನು ಕೈಕೊಳ್ಳುವೆನು.
ಕೀರ್ತನೆಗಳು 119 : 18 (KNV)
ನನ್ನ ಕಣ್ಣುಗಳನ್ನು ತೆರೆ; ಆಗ ನಿನ್ನ ನ್ಯಾಯಪ್ರಮಾಣದಲ್ಲಿನ ಅದ್ಭುತಗಳನ್ನು ನೋಡುವೆನು.
ಕೀರ್ತನೆಗಳು 119 : 19 (KNV)
ನಾನು ಭೂಮಿಯಲ್ಲಿ ಪರದೇಶಸ್ಥನಾಗಿದ್ದೇನೆ; ನಿನ್ನ ಆಜ್ಞೆ ಗಳನ್ನು ನನಗೆ ಮರೆಮಾಡಬೇಡ.
ಕೀರ್ತನೆಗಳು 119 : 20 (KNV)
ನಿನ್ನ ನ್ಯಾಯ ವಿಧಿಗಳಿಗಾಗಿ ನನ್ನಲ್ಲಿರುವ ಅಭಿಲಾಷೆಯ ನಿಮಿತ್ತ ನನ್ನ ಪ್ರಾಣವು ಜಜ್ಜಿಹೋಗಿದೆ
ಕೀರ್ತನೆಗಳು 119 : 21 (KNV)
ನಿನ್ನ ಆಜ್ಞೆಗಳಿಂದ ತಪ್ಪಿಹೋಗುವ ಶಾಪಗ್ರಸ್ಥರಾದ ಅಹಂಕಾರಿಗಳನ್ನು ನೀನು ಗದರಿಸಿದ್ದೀ.
ಕೀರ್ತನೆಗಳು 119 : 22 (KNV)
ನಾನು ನಿನ್ನ ಸಾಕ್ಷಿಗಳನ್ನು ಕೈಕೊಂಡ ಕಾರಣ ನಿಂದೆಯನ್ನೂ ತಿರಸ್ಕಾರವನ್ನೂ ನನಗೆ ದೂರಮಾಡಿಬಿಡು.
ಕೀರ್ತನೆಗಳು 119 : 23 (KNV)
ಪ್ರಧಾನರು ಕೂತುಕೊಂಡು ನನಗೆ ವಿರೋಧವಾಗಿ ಮಾತಾಡಿಕೊಂಡರೂ ನಿನ್ನ ಸೇವಕನು ನಿನ್ನ ನಿಯಮಗಳನ್ನು ಧ್ಯಾನಮಾಡುವನು.
ಕೀರ್ತನೆಗಳು 119 : 24 (KNV)
ನಿನ್ನ ಸಾಕ್ಷಿಗಳೇ ನನ್ನ ಆನಂದವೂ ಆಲೋಚನಾ ಕರ್ತರೂ ಆಗಿವೆ.
ಕೀರ್ತನೆಗಳು 119 : 25 (KNV)
ನನ್ನ ಪ್ರಾಣವು ಧೂಳಿಗೆ ಹತ್ತಿ ಕೊಳ್ಳುತ್ತದೆ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಉಜ್ಜೀ ವಿಸು.
ಕೀರ್ತನೆಗಳು 119 : 26 (KNV)
ನಾನು ನಿನ್ನ ಮಾರ್ಗಗಳನ್ನು ಸಾರಲು, ನನಗೆ ಉತ್ತರಕೊಟ್ಟೆ; ನಿನ್ನ ನಿಯಮಗಳನ್ನು ನನಗೆ ಕಲಿಸು.
ಕೀರ್ತನೆಗಳು 119 : 27 (KNV)
ನಿನ್ನ ಕಟ್ಟಳೆಗಳ ಮಾರ್ಗವನ್ನು ನಾನು ಗ್ರಹಿಸಮಾಡು; ಆಗ ನಿನ್ನ ಅದ್ಭುತಗಳ ವಿಷಯವಾಗಿ ಮಾತನಾಡುವೆನು.
ಕೀರ್ತನೆಗಳು 119 : 28 (KNV)
ನನ್ನ ಪ್ರಾಣವು ಭಾರದಿಂದ ಕರಗಿಹೋಗುತ್ತದೆ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಸ್ಥಿರಮಾಡು;
ಕೀರ್ತನೆಗಳು 119 : 29 (KNV)
ಸುಳ್ಳು ಮಾರ್ಗವನ್ನು ನನ್ನಿಂದ ತೊಲ ಗಿಸು. ನಿನ್ನ ನ್ಯಾಯಪ್ರಮಾಣವನ್ನು ನನಗೆ ಕೃಪೆಯಿಂದ ಅನುಗ್ರಹಿಸು.
ಕೀರ್ತನೆಗಳು 119 : 30 (KNV)
ಸತ್ಯದ ಮಾರ್ಗವನ್ನು ಆದು ಕೊಂಡಿದ್ದೇನೆ; ನಿನ್ನ ನ್ಯಾಯವಿಧಿಗಳನ್ನು ಮುಂದಿಟ್ಟು ಕೊಂಡಿದ್ದೇನೆ;
ಕೀರ್ತನೆಗಳು 119 : 31 (KNV)
ನಿನ್ನ ಸಾಕ್ಷಿಗಳಿಗೆ ಹತ್ತಿಕೊಂಡಿದ್ದೇನೆ; ಓ ಕರ್ತನೇ, ನನ್ನನ್ನು ನಾಚಿಕೆಪಡಿಸಬೇಡ.
ಕೀರ್ತನೆಗಳು 119 : 32 (KNV)
ನಿನ್ನ ಆಜ್ಞೆಗಳ ಮಾರ್ಗದಲ್ಲಿ ಓಡುವೆನು; ನೀನು ನನ್ನ ಹೃದಯವನ್ನು ವಿಶಾಲಮಾಡುತ್ತೀ.
ಕೀರ್ತನೆಗಳು 119 : 33 (KNV)
ಓ ಕರ್ತನೇ, ನಿನ್ನ ನಿಯಮಗಳ ಮಾರ್ಗವನ್ನು ನನಗೆ ಬೋಧಿಸು; ಅದನ್ನು ಕಡೇ ವರೆಗೂ ಕೈ ಕೊಳ್ಳುವೆನು.
ಕೀರ್ತನೆಗಳು 119 : 34 (KNV)
ನನಗೆ ಗ್ರಹಿಕೆಯನ್ನು ಕೊಡು; ಆಗ ನಿನ್ನ ನ್ಯಾಯಪ್ರಮಾಣವನ್ನು ಕೈಕೊಂಡು ಹೌದು, ಪೂರ್ಣಹೃದಯದಿಂದ ಅದನ್ನು ಕೈಕೊಳ್ಳುವೆನು.
ಕೀರ್ತನೆಗಳು 119 : 35 (KNV)
ನಿನ್ನ ಆಜ್ಞೆಗಳ ದಾರಿಯಲ್ಲಿ ನನ್ನನ್ನು ನಡೆಯಮಾಡು; ಅದ ರಲ್ಲಿ ಸಂತೋಷಿಸುತ್ತೇನೆ.
ಕೀರ್ತನೆಗಳು 119 : 36 (KNV)
ಲೋಭದ ಕಡೆಗಲ್ಲ, ನಿನ್ನ ಸಾಕ್ಷಿಗಳ ಕಡೆಗೆ ನನ್ನ ಹೃದಯವನ್ನು ತಿರುಗಿಸು.
ಕೀರ್ತನೆಗಳು 119 : 37 (KNV)
ವ್ಯರ್ಥತೆಯನ್ನು ನೋಡದ ಹಾಗೆ ನನ್ನ ಕಣ್ಣುಗಳನ್ನು ತೊಲಗಿಸು; ನಿನ್ನ ಮಾರ್ಗಗಳಲ್ಲಿ ನನ್ನನ್ನು ಚೈತನ್ಯ ಪಡಿಸು.
ಕೀರ್ತನೆಗಳು 119 : 38 (KNV)
ನಿನ್ನಲ್ಲಿ ಭಯಭಕ್ತಿಯುಳ್ಳ ಸೇವಕನಿಗೆ ವಾಕ್ಯವನ್ನು ನೇರವೇರಿಸು,
ಕೀರ್ತನೆಗಳು 119 : 39 (KNV)
ನನಗೆ ಭಯಪಡಿಸುವ ಅವಮಾನದಿಂದ ನನ್ನನ್ನು ತೊಲಗಿಸು;
ಕೀರ್ತನೆಗಳು 119 : 40 (KNV)
ನಿನ್ನ ಕಟ್ಟಳೆ ಗಳನ್ನು ಬಯಸುವ ನನ್ನನ್ನು ನಿನ್ನ ನೀತಿಯಿಂದ ಚೈತನ್ಯಪಡಿಸು.
ಕೀರ್ತನೆಗಳು 119 : 41 (KNV)
ಕರ್ತನೇ, ನಿನ್ನ ವಾಕ್ಯದ ಪ್ರಕಾರ ನಿನ್ನ ಕರು ಣೆಯೂ ರಕ್ಷಣೆಯೂ ನನಗೆ ದೊರಕಲಿ.
ಕೀರ್ತನೆಗಳು 119 : 42 (KNV)
ಆಗ ನನ್ನನ್ನು ನಿಂದಿಸುವವನಿಗೆ ಉತ್ತರ ಕೊಡುವೆನು; ನಿನ್ನ ವಾಕ್ಯದಲ್ಲಿ ಭರವಸವಿಟ್ಟದ್ದೇನೆ.
ಕೀರ್ತನೆಗಳು 119 : 43 (KNV)
ಸತ್ಯದ ವಾಕ್ಯವನ್ನು ನನ್ನ ಬಾಯಿಂದ ಪೂರ್ಣವಾಗಿ ತೆಗೆದುಹಾಕಬೇಡ; ನಿನ್ನ ನ್ಯಾಯವಿಧಿಗಳನ್ನು ನಿರೀಕ್ಷಿಸಿದ್ದೇನೆ,
ಕೀರ್ತನೆಗಳು 119 : 44 (KNV)
ನಿನ್ನ ನ್ಯಾಯಪ್ರಮಾಣವನ್ನು ಸತತವಾಗಿ ಎಂದೆಂದಿಗೂ ಕೈಕೊಳ್ಳುವೆನು.
ಕೀರ್ತನೆಗಳು 119 : 45 (KNV)
ಸ್ವತಂತ್ರದಲ್ಲಿ ನಡೆದುಕೊಳ್ಳುವೆನು; ನಿನ್ನ ಕಟ್ಟಳೆಗಳನ್ನು ನಾನು ಹುಡುಕುತ್ತೇನೆ.
ಕೀರ್ತನೆಗಳು 119 : 46 (KNV)
ನಿನ್ನ ಸಾಕ್ಷಿಗಳನ್ನು ಕುರಿತು ಅರಸರ ಮುಂದೆ ಮಾತನಾಡು ತ್ತೇನೆ, ನಾಚಿಕೆಪಡುವದಿಲ್ಲ.
ಕೀರ್ತನೆಗಳು 119 : 47 (KNV)
ನಾನು ಪ್ರೀತಿಮಾಡುವ ನಿನ್ನ ಆಜ್ಞೆಗಳಲ್ಲಿ ಆನಂದಪಡುವೆನು.
ಕೀರ್ತನೆಗಳು 119 : 48 (KNV)
ನಾನು ಪ್ರೀತಿ ಮಾಡುವ ನಿನ್ನ ಆಜ್ಞೆಗಳ ಕಡೆಗೆ ನನ್ನ ಕೈಗಳನ್ನೆತ್ತಿ, ನಿನ್ನ ನಿಯಮಗಳನ್ನು ಧ್ಯಾನ ಮಾಡುವೆನು.
ಕೀರ್ತನೆಗಳು 119 : 49 (KNV)
ನಾನು ನಿರೀಕ್ಷಿಸುವಂತೆ ಮಾಡಿದ ನಿನ್ನ ವಾಕ್ಯವನ್ನು ನಿನ್ನ ಸೇವಕನಿಗೋಸ್ಕರ ನೀನು ಜ್ಞಾಪಕಮಾಡಿಕೋ,
ಕೀರ್ತನೆಗಳು 119 : 50 (KNV)
ನನ್ನ ಸಂಕಷ್ಟದಲ್ಲಿ ಇದೇ ನನ್ನ ಆದರಣೆಯು; ಯಾಕಂದರೆ ನಿನ್ನ ವಾಕ್ಯವು ನನ್ನನ್ನು ಬದುಕಿಸಿತು.
ಕೀರ್ತನೆಗಳು 119 : 51 (KNV)
ಅಹಂಕಾರಿಗಳು ಬಹಳವಾಗಿ ನನ್ನನ್ನು ಹಾಸ್ಯ ಮಾಡಿ ದರೂ ನಿನ್ನ ನ್ಯಾಯಪ್ರಮಾಣದಿಂದ ನಾನು ತೊಲ ಗಲಿಲ್ಲ.
ಕೀರ್ತನೆಗಳು 119 : 52 (KNV)
ಓ ಕರ್ತನೇ, ಪೂರ್ವಕಾಲದಿಂದ ಬಂದಿ ರುವ ನಿನ್ನ ನ್ಯಾಯಗಳನ್ನು ಜ್ಞಾಪಕಮಾಡಿಕೊಂಡು ಆದರಣೆ ಹೊಂದಿದ್ದೇನೆ.
ಕೀರ್ತನೆಗಳು 119 : 53 (KNV)
ನಿನ್ನ ನ್ಯಾಯಪ್ರಮಾಣ ವನ್ನು ಬಿಟ್ಟುಬಿಡುವ ದುಷ್ಟರ ನಿಮಿತ್ತ ಭಯ ಭ್ರಾಂತಿಯು ನನ್ನನ್ನು ಹಿಡಿದುಕೊಂಡಿತು.
ಕೀರ್ತನೆಗಳು 119 : 54 (KNV)
ನನ್ನ ಪ್ರವಾಸದ ಮನೆಯಲ್ಲಿ ನಿನ್ನ ನಿಯಮಗಳು ನನಗೆ ಕೀರ್ತನೆಗಳಾಗಿವೆ.
ಕೀರ್ತನೆಗಳು 119 : 55 (KNV)
ಓ ಕರ್ತನೇ, ರಾತ್ರಿಯಲ್ಲಿ ನಿನ್ನ ಹೆಸರನ್ನು ಜ್ಞಾಪಕಮಾಡಿಕೊಂಡಿದ್ದೇನೆ, ನಿನ್ನ ನ್ಯಾಯ ಪ್ರಮಾಣವನ್ನು ಕೈಕೊಂಡಿದ್ದೇನೆ.
ಕೀರ್ತನೆಗಳು 119 : 56 (KNV)
ನಿನ್ನ ಕಟ್ಟಳೆಗಳನ್ನು ಕೈಕೊಳ್ಳಲು ನನಗೆ ಅನುಗ್ರಹವಾಯಿತು.
ಕೀರ್ತನೆಗಳು 119 : 57 (KNV)
ಕರ್ತನೇ ನನ್ನ ಪಾಲು; ನಿನ್ನ ವಾಕ್ಯಗಳನ್ನು ಕೈಕೊಳ್ಳುವೆನೆಂದು ಹೇಳಿದೆನು.
ಕೀರ್ತನೆಗಳು 119 : 58 (KNV)
ಪೂರ್ಣಹೃದಯ ದಿಂದ ನಿನ್ನನ್ನು ಬೇಡಿಕೊಂಡಿದ್ದೇನೆ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಕರುಣಿಸು.
ಕೀರ್ತನೆಗಳು 119 : 59 (KNV)
ನನ್ನ ಮಾರ್ಗಗಳನ್ನು ಯೋಚಿಸಿಕೊಂಡು ನಿನ್ನ ಸಾಕ್ಷಿಗಳ ಕಡೆಗೆ ನನ್ನ ಪಾದ ಗಳನ್ನು ತಿರುಗಿಸಿದ್ದೇನೆ.
ಕೀರ್ತನೆಗಳು 119 : 60 (KNV)
ನಿನ್ನ ಆಜ್ಞೆಗಳನ್ನು ಕೈಕೊಳ್ಳು ವದಕ್ಕೆ ತಡಮಾಡದೆ ತ್ವರೆಪಟ್ಟಿದ್ದೇನೆ.
ಕೀರ್ತನೆಗಳು 119 : 61 (KNV)
ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡವು; ಆದರೂ ನಿನ್ನ ನ್ಯಾಯಪ್ರಮಾಣವನ್ನು ನಾನು ಮರೆತುಬಿಡಲಿಲ್ಲ.
ಕೀರ್ತನೆಗಳು 119 : 62 (KNV)
ನಿನ್ನ ನೀತಿಯ ನ್ಯಾಯವಿಧಿಗಳಿಗೋಸ್ಕರ ನಿನ್ನನ್ನು ಕೊಂಡಾಡುವದಕ್ಕೆ ಮಧ್ಯರಾತ್ರಿಯಲ್ಲಿ ಏಳುತ್ತೇನೆ.
ಕೀರ್ತನೆಗಳು 119 : 63 (KNV)
ನಿನಗೆ ಭಯಪಡುವವರೆಲ್ಲರಿಗೂ ನಿನ್ನ ಕಟ್ಟಳೆಗ ಳನ್ನು ಕೈಕೊಳ್ಳುವವರಿಗೂ, ನಾನು ಸಂಗಡಿಗನಾಗಿದ್ದೇನೆ.
ಕೀರ್ತನೆಗಳು 119 : 64 (KNV)
ಕರ್ತನೇ, ಭೂಮಿಯು ನಿನ್ನ ಕರುಣೆಯಿಂದ ತುಂಬಿದೆ; ನಿನ್ನ ನಿಯಮಗಳನ್ನು ನನಗೆ ಕಲಿಸು.
ಕೀರ್ತನೆಗಳು 119 : 65 (KNV)
ಓ ಕರ್ತನೇ, ನಿನ್ನ ವಾಕ್ಯದ ಪ್ರಕಾರ ನಿನ್ನ ಸೇವಕ ನಿಗೆ ಒಳ್ಳೇದನ್ನು ಮಾಡಿದ್ದೀ.
ಕೀರ್ತನೆಗಳು 119 : 66 (KNV)
ಒಳ್ಳೆಯ ವಿವೇಚನೆ ಯನ್ನೂ ತಿಳುವಳಿಕೆಗಳನ್ನೂ ನನಗೆ ಕಲಿಸು; ನಿನ್ನ ಆಜ್ಞೆಗಳಲ್ಲಿ ನಂಬಿಕೆ ಇಟ್ಟಿದ್ದೇನೆ.
ಕೀರ್ತನೆಗಳು 119 : 67 (KNV)
ನಾನು ಶ್ರಮೆಪಡು ವದಕ್ಕಿಂತ ಮುಂಚೆ ತಪ್ಪಿಹೋಗುತ್ತಿದ್ದೆನು; ಆದರೆ ಈಗ ನಿನ್ನ ವಾಕ್ಯವನ್ನು ಕೈಕೊಂಡಿದ್ದೇನೆ.
ಕೀರ್ತನೆಗಳು 119 : 68 (KNV)
ನೀನು ಒಳ್ಳೆಯ ವನೂ ಒಳ್ಳೇದನ್ನು ಮಾಡುವವನೂ ಆಗಿದ್ದೀ; ನಿನ್ನ ನಿಯಮಗಳನ್ನು ನನಗೆ ಬೋಧಿಸು.
ಕೀರ್ತನೆಗಳು 119 : 69 (KNV)
ಅಹಂಕಾರಿ ಗಳು ನನಗೆ ವಿರೋಧವಾಗಿ ಸುಳ್ಳು ಕಲ್ಪಿಸಿದರು; ನಾನು ಪೂರ್ಣಹೃದಯದಿಂದ ನಿನ್ನ ಕಟ್ಟಳೆಗಳನ್ನು ಕೈಕೊಳ್ಳುವೆನು.
ಕೀರ್ತನೆಗಳು 119 : 70 (KNV)
ಅವರ ಹೃದಯವು ಕೊಬ್ಬಿನ ಹಾಗೆ ಮಂದವಾಗಿದೆ; ನಾನು ನಿನ್ನ ನ್ಯಾಯಪ್ರಮಾಣದಲ್ಲಿ ಆನಂದಪಡುತ್ತೇನೆ.
ಕೀರ್ತನೆಗಳು 119 : 71 (KNV)
ನಿನ್ನ ನಿಯಮಗಳನ್ನು ಕಲಿಯುವ ಹಾಗೆ ನಾನು ಶ್ರಮೆಪಟ್ಟದ್ದು ನನಗೆ ಒಳ್ಳೇದು.
ಕೀರ್ತನೆಗಳು 119 : 72 (KNV)
ಸಾವಿ ರಾರು ಬೆಳ್ಳಿಬಂಗಾರಗಳಿಗಿಂತ ನಿನ್ನ ಬಾಯಿಯ ನ್ಯಾಯ ಪ್ರಮಾಣವು ನನಗೆ ಒಳ್ಳೇದು.
ಕೀರ್ತನೆಗಳು 119 : 73 (KNV)
ನಿನ್ನ ಕೈಗಳು ನನ್ನನ್ನು ರೂಪಿಸಿ ನಿರ್ಮಿಸಿದವು; ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳುವ ಹಾಗೆ ಗ್ರಹಿಕೆಯನ್ನು ನನಗೆ ಕೊಡು.
ಕೀರ್ತನೆಗಳು 119 : 74 (KNV)
ನಿನಗೆ ಭಯಪಡುವವರು ನನ್ನನ್ನು ನೋಡಿ ಸಂತೋಷಪಡುವರು; ನಿನ್ನ ವಾಕ್ಯವನ್ನು ಎದುರುನೋಡುತ್ತೇನೆ.
ಕೀರ್ತನೆಗಳು 119 : 75 (KNV)
ಕರ್ತನೇ, ನಿನ್ನ ನ್ಯಾಯ ವಿಧಿಗಳು ನೀತಿಯುಳ್ಳವುಗಳೆಂದೂ ನಂಬಿಕೆಯಿಂದಲೇ ನೀನು ನನ್ನನ್ನು ಶ್ರಮೆಪಡಿಸಿದ್ದೀ ಎಂದು ಬಲ್ಲೆನು.
ಕೀರ್ತನೆಗಳು 119 : 76 (KNV)
ನಿನ್ನ ಸೇವಕನಿಗೆ ನೀನು ಹೇಳಿದ ಮಾತಿನ ಪ್ರಕಾರ ನನ್ನನ್ನು ಆದರಿಸುವದಕ್ಕೆ ನಿನ್ನ ದಯಾಪೂರ್ಣ ಕರುಣೆ ಇರಲಿ.
ಕೀರ್ತನೆಗಳು 119 : 77 (KNV)
ನಿನ್ನ ಅಂತಃಕರಣವು ನನಗೆ ಬರಲಿ; ಆಗ ನಾನು ಬದುಕುವೆನು; ನಿನ್ನ ನ್ಯಾಯಪ್ರಮಾಣವು ನನ್ನ ಆನಂದವಾಗಿದೆ.
ಕೀರ್ತನೆಗಳು 119 : 78 (KNV)
ಕಾರಣವಿಲ್ಲದೆ ನನಗೆ ಕೇಡು ಮಾಡಿದ ಕಾರಣ ಅಹಂಕಾರಿಗಳು ನಾಚಿಕೆಪಡಲಿ, ನಾನು ನಿನ್ನ ಕಟ್ಟಳೆಗಳನ್ನು ಧ್ಯಾನ ಮಾಡುವೆನು.
ಕೀರ್ತನೆಗಳು 119 : 79 (KNV)
ನಿನಗೆ ಭಯಪಟ್ಟು ನಿನ್ನ ಸಾಕ್ಷಿಗಳನ್ನು ಬಲ್ಲವರು ನನ್ನ ಕಡೆಗೆ ತಿರುಗಲಿ.
ಕೀರ್ತನೆಗಳು 119 : 80 (KNV)
ನಾನು ನಾಚಿಕೆಪಡದ ಹಾಗೆ ನನ್ನ ಹೃದಯವು ನಿನ್ನ ನಿಯಮಗಳಲ್ಲಿ ಸಂಪೂರ್ಣವಾಗಿರಲಿ.
ಕೀರ್ತನೆಗಳು 119 : 81 (KNV)
ನನ್ನ ಪ್ರಾಣವು ನಿನ್ನ ರಕ್ಷಣೆಗಾಗಿ ಕುಗ್ಗಿ ಹೋಗುತ್ತದೆ; ನಿನ್ನ ವಾಕ್ಯದಲ್ಲಿ ನಿರೀಕ್ಷೆ ಇಟ್ಟಿದ್ದೇನೆ.
ಕೀರ್ತನೆಗಳು 119 : 82 (KNV)
ಯಾವಾಗ ನನ್ನನ್ನು ಆದರಿಸುವಿ ಎಂದು ನನ್ನ ಕಣ್ಣು ಗಳು ನಿನ್ನ ಮಾತಿಗೆ ಮಂದವಾಗುತ್ತವೆ.
ಕೀರ್ತನೆಗಳು 119 : 83 (KNV)
ನಾನು ಹೊಗೆಯಲ್ಲಿರುವ ಬುದ್ಧಲಿಯ ಹಾಗೆ ಇದ್ದರೂ ನಿನ್ನ ನಿಯಮಗಳನ್ನು ನಾನು ಮರೆತುಬಿಡಲಿಲ್ಲ.
ಕೀರ್ತನೆಗಳು 119 : 84 (KNV)
ನಿನ್ನ ಸೇವಕನ ದಿವಸಗಳು ಎಷ್ಟು? ನನ್ನನ್ನು ಹಿಂಸಿಸುವವರಿಗೆ ಯಾವಾಗ ನ್ಯಾಯ ತೀರಿಸುವಿ?
ಕೀರ್ತನೆಗಳು 119 : 85 (KNV)
ನಿನ್ನ ನ್ಯಾಯ ಪ್ರಮಾಣದ ಪ್ರಕಾರವಾಗಿರದ ಅಹಂಕಾರಿಗಳು ನನಗೆ ಕುಣಿಗಳನ್ನು ಅಗೆದಿದ್ದಾರೆ.
ಕೀರ್ತನೆಗಳು 119 : 86 (KNV)
ನಿನ್ನ ಆಜ್ಞೆಗಳೆಲ್ಲಾ ನಂಬಿ ಕೆಯುಳ್ಳವುಗಳು; ನನ್ನನ್ನು ಅನ್ಯಾಯವಾಗಿ ಹಿಂಸಿ ಸುತ್ತಾರೆ. ನನಗೆ ಸಹಾಯಮಾಡು.
ಕೀರ್ತನೆಗಳು 119 : 87 (KNV)
ಅವರು ನನ್ನನ್ನು ಬಹಳ ಮಟ್ಟಿಗೆ ಭೂಮಿಯಲ್ಲಿ ಸಂಹರಿಸುವದಕ್ಕಿದ್ದರು. ಆದರೆ ನಾನು ನಿನ್ನ ಕಟ್ಟಳೆಗಳನ್ನು ಬಿಡಲಿಲ್ಲ.
ಕೀರ್ತನೆಗಳು 119 : 88 (KNV)
ನಿನ್ನ ಪ್ರೀತಿ ಕರುಣೆಯ ಪ್ರಕಾರ ನನ್ನನ್ನು ಬದುಕಿಸು; ಆಗ ನಿನ್ನ ಬಾಯಿಯ ಸಾಕ್ಷಿಯನ್ನು ಕೈಕೊಳ್ಳುವೆನು.
ಕೀರ್ತನೆಗಳು 119 : 89 (KNV)
ಓ ಕರ್ತನೇ, ಎಂದೆಂದಿಗೂ ನಿನ್ನ ವಾಕ್ಯವು ಪರಲೋಕದಲ್ಲಿ ಸ್ಥಿರವಾಗಿದೆ.
ಕೀರ್ತನೆಗಳು 119 : 90 (KNV)
ತಲತಲಾಂತರಕ್ಕೂ ನಿನ್ನ ನಂಬಿಗಸ್ತಿಕೆಯು ಇರುವದು; ನೀನು ಭೂಮಿ ಯನ್ನು ಸ್ಥಾಪಿಸಿದಿ; ಅದು ನೆಲೆಯಾಗಿದೆ.
ಕೀರ್ತನೆಗಳು 119 : 91 (KNV)
ಇಂದಿನ ವರೆಗೆ ನಿನ್ನ್ನ ನಿರ್ಣಯಗಳು ನಿಲ್ಲುತ್ತವೆ; ಯಾಕಂದರೆ ಸರ್ವವೂ ನಿನ್ನನ್ನು ಸೇವಿಸುತ್ತದೆ.
ಕೀರ್ತನೆಗಳು 119 : 92 (KNV)
ನಿನ್ನ ನ್ಯಾಯ ಪ್ರಮಾಣವು ನನಗೆ ಆನಂದವಾಗಿರದಿದ್ದರೆ ನಾನು ನನ್ನ ಸಂಕಟದಲ್ಲಿ ನಾಶವಾಗುತ್ತಿದ್ದೆನು.
ಕೀರ್ತನೆಗಳು 119 : 93 (KNV)
ಎಂದೆಂದಿಗೂ ನಿನ್ನ ಕಟ್ಟಳೆಗಳನ್ನು ಮರೆತುಬಿಡೆನು; ಯಾಕಂದರೆ ಅವುಗಳಿಂದ ನನ್ನನ್ನು ಬದುಕಿಸಿದ್ದೀ.
ಕೀರ್ತನೆಗಳು 119 : 94 (KNV)
ನಾನು ನಿನ್ನ ವನೇ, ನನ್ನನ್ನು ರಕ್ಷಿಸು; ನಿನ್ನ ಕಟ್ಟಳೆಗಳನ್ನು ಹುಡುಕಿ ದ್ದೇನೆ.
ಕೀರ್ತನೆಗಳು 119 : 95 (KNV)
ದುಷ್ಟರು ನನ್ನನ್ನು ನಾಶಮಾಡುವದಕ್ಕೆ ನನಗಾಗಿ ಕಾದುಕೊಳ್ಳುತ್ತಾರೆ. ನಿನ್ನ ಸಾಕ್ಷಿಗಳನ್ನು ಗ್ರಹಿಸಿ ಕೊಳ್ಳುತ್ತೇನೆ.
ಕೀರ್ತನೆಗಳು 119 : 96 (KNV)
ಎಲ್ಲಾ ಸಂಪೂರ್ಣತೆಯ ಮೇರೆ ಯನ್ನು ನೋಡಿದ್ದೇನೆ; ಆದರೆ ನಿನ್ನ ಆಜ್ಞೆಯು ಬಹಳ ವಿಸ್ತಾರವಾಗಿದೆ.
ಕೀರ್ತನೆಗಳು 119 : 97 (KNV)
ನಿನ್ನ ನ್ಯಾಯಪ್ರಮಾಣವನ್ನು ನಾನು ಎಷ್ಟೋ ಪ್ರೀತಿ ಮಾಡುತ್ತೇನೆ, ದಿನವೆಲ್ಲಾ ಅದೇ ನನ್ನ ಧ್ಯಾನವು.
ಕೀರ್ತನೆಗಳು 119 : 98 (KNV)
ನಿನ್ನ ಆಜ್ಞೆಗಳ ಮೂಲಕ ನನ್ನ ಶತ್ರುಗಳಿಗಿಂತ ನನ್ನನ್ನು ಜ್ಞಾನಿಯಾಗಿ ಮಾಡಿದ್ದೀ; ಅವು ಎಂದೆಂದಿಗೂ ನನ್ನಲ್ಲಿ ಅವೆ.
ಕೀರ್ತನೆಗಳು 119 : 99 (KNV)
ನನ್ನ ಬೋಧಕರೆಲ್ಲರಿಗಿಂತ ನಾನು ಬುದ್ಧಿವಂತ ನಾಗಿದ್ದೇನೆ; ನಿನ್ನ ಸಾಕ್ಷಿಗಳು ನನ್ನ ಧ್ಯಾನವಾಗಿವೆ.
ಕೀರ್ತನೆಗಳು 119 : 100 (KNV)
ನಾನು ಪೂರ್ವಿಕರಿಗಿಂತ ವಿವೇಕಿಯಾಗಿದ್ದೇನೆ; ನಿನ್ನ ಕಟ್ಟಳೆಗಳನ್ನು ಕೈಕೊಂಡಿದ್ದೇನೆ.
ಕೀರ್ತನೆಗಳು 119 : 101 (KNV)
ನಿನ್ನ ವಾಕ್ಯವನ್ನು ಕೈಕೊಳ್ಳುವ ಹಾಗೆ ಎಲ್ಲಾ ಕೆಟ್ಟದಾರಿಗಳಿಂದ ನನ್ನ ಪಾದ ಗಳನ್ನು ಹಿಂದೆಗೆದ್ದಿದ್ದೇನೆ.
ಕೀರ್ತನೆಗಳು 119 : 102 (KNV)
ನಿನ್ನ ನ್ಯಾಯವಿಧಿಗಳಿಂದ ನಾನು ತೊಲಗಲಿಲ್ಲ; ನೀನು ನನ್ನನ್ನು ಬೋಧಿಸಿದ್ದೀ.
ಕೀರ್ತನೆಗಳು 119 : 103 (KNV)
ನಿನ್ನ ಮಾತುಗಳು ನನ್ನ ರುಚಿಗೆ ಎಷ್ಟೋ ಸಿಹಿ ಯಾಗಿವೆ, ಅವು ನನ್ನ ಬಾಯಿಗೆ ಜೇನಿಗಿಂತ ಸಿಹಿ ಯಾಗಿವೆ.
ಕೀರ್ತನೆಗಳು 119 : 104 (KNV)
ನಾನು ನಿನ್ನ ಕಟ್ಟಳೆಗಳಿಂದ ವಿವೇಕಿ ಯಾಗಿದ್ದೇನೆ. ಆದದರಿಂದ ಮೋಸದ ಮಾರ್ಗಗ ಳನ್ನೆಲ್ಲಾ ಹಗೆಮಾಡಿದ್ದೇನೆ.
ಕೀರ್ತನೆಗಳು 119 : 105 (KNV)
ನಿನ್ನ ವಾಕ್ಯವು ನನ್ನ ಪಾದಕ್ಕೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.
ಕೀರ್ತನೆಗಳು 119 : 106 (KNV)
ನಿನ್ನ ನೀತಿ ವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣ ಮಾಡಿದ್ದೇನೆ; ಅದನ್ನು ಈಡೇರಿಸುವೆನು.
ಕೀರ್ತನೆಗಳು 119 : 107 (KNV)
ಬಹಳವಾಗಿ ಶ್ರಮೆಪಟ್ಟಿದ್ದೇನೆ; ಕರ್ತನೇ, ನಿನ್ನ ವಾಕ್ಯಾನುಸಾರ ನನ್ನನ್ನು ಉಜ್ಜೀವಿಸು.
ಕೀರ್ತನೆಗಳು 119 : 108 (KNV)
ಕರ್ತನೇ, ನನ್ನ ಮನಃಪೂರ್ವಕವಾದ ಸ್ತುತಿ ಸಮರ್ಪಣೆಗಳನ್ನು ದಯವಿಟ್ಟು ಅಂಗೀಕರಿಸು. ನಿನ್ನ ವಿಧಿಗಳನ್ನು ನನಗೆ ಬೋಧಿಸು.
ಕೀರ್ತನೆಗಳು 119 : 109 (KNV)
ನನ್ನ ಪ್ರಾಣವು ಯಾವಾಗಲೂ ನನ್ನ ಕೈಯಲ್ಲಿ ಅದೆ; ಆದಾಗ್ಯೂ ನಿನ್ನ ನ್ಯಾಯಪ್ರಮಾಣವನ್ನು ಮರೆತುಬಿಡೆನು.
ಕೀರ್ತನೆಗಳು 119 : 110 (KNV)
ದುಷ್ಟರು ನನಗೆ ಉರ್ಲು ಒಡ್ಡಿದ್ದಾರೆ. ಆದರೂ ನಾನು ನಿನ್ನ ಕಟ್ಟಳೆಗಳನ್ನು ಬಿಟ್ಟು ತಪ್ಪಿಹೋಗಲಿಲ್ಲ.
ಕೀರ್ತನೆಗಳು 119 : 111 (KNV)
ನಿನ್ನ ಸಾಕ್ಷಿಗಳನ್ನು ನಿತ್ಯಸ್ವಾಸ್ತ್ಯವಾಗಿ ತೆಗೆದುಕೊಂಡಿದ್ದೇನೆ; ಅವು ನನ್ನ ಹೃದಯಕ್ಕೆ ಆನಂದವಾಗಿವೆ.
ಕೀರ್ತನೆಗಳು 119 : 112 (KNV)
ನಿನ್ನ ನಿಯಮಗಳನ್ನು ಕಡೇ ವರೆಗೂ ಈಡೇರಿಸುವದಕ್ಕೆ ನಾನು ಮನಸ್ಸು ಮಾಡಿದ್ದೇನೆ.
ಕೀರ್ತನೆಗಳು 119 : 113 (KNV)
ನಾನು ಚಂಚಲ ರನ್ನು ಹಗೆಮಾಡುತ್ತೇನೆ; ಆದರೆ ನಿನ್ನ ನ್ಯಾಯಪ್ರಮಾಣ ವನ್ನು ಪ್ರೀತಿಮಾಡುತ್ತೇನೆ.
ಕೀರ್ತನೆಗಳು 119 : 114 (KNV)
ನನ್ನ ಆಶ್ರಯವೂ ಗುರಾಣಿಯೂ ನೀನೇ; ನಿನ್ನ ವಾಕ್ಯದಲ್ಲಿಯೇ ನಿರೀಕ್ಷೆ ಯಿಟ್ಟಿದ್ದೇನೆ.
ಕೀರ್ತನೆಗಳು 119 : 115 (KNV)
ಕೇಡು ಮಾಡುವವರೇ, ನನ್ನಿಂದ ತೊಲಗಿರಿ; ನನ್ನ ದೇವರ ಆಜ್ಞೆಗಳನ್ನು ಕೈಕೊಳ್ಳುವೆನು.
ಕೀರ್ತನೆಗಳು 119 : 116 (KNV)
ನಿನ್ನ ವಾಕ್ಯಾನುಸಾರವಾಗಿ ನನ್ನನ್ನು ಎತ್ತಿಹಿಡಿ; ಆಗ ಬದುಕುವೆನು; ನನ್ನ ನಿರೀಕ್ಷೆಯ ನಿಮಿತ್ತ ನನ್ನನ್ನು ನಾಚಿಕೆಪಡಿಸಬೇಡ.
ಕೀರ್ತನೆಗಳು 119 : 117 (KNV)
ನನ್ನನ್ನು ನೀನು ಹಿಡಿ; ಆಗ ನಾನು ಸುರಕ್ಷಿತನಾಗಿದ್ದು ನಿನ್ನ ನಿಯಮಗಳನ್ನು ಯಾವಾ ಗಲೂ ಗೌರವಿಸುವೆನು.
ಕೀರ್ತನೆಗಳು 119 : 118 (KNV)
ನಿನ್ನ ನಿಯಮಗಳಿಂದ ತಪ್ಪಿದವರೆಲ್ಲರನ್ನು ನೀನು ತುಳಿದುಬಿಟ್ಟಿದ್ದೀ; ಅವರಲ್ಲಿ ಮೋಸವೂ ಸುಳ್ಳೂ ಇತ್ತು.
ಕೀರ್ತನೆಗಳು 119 : 119 (KNV)
ಕಿಟ್ಟದ ಹಾಗೆ ಭೂಮಿ ಯಲ್ಲಿರುವ ದುಷ್ಟರೆಲ್ಲರನ್ನು ತೆಗೆದುಹಾಕುತ್ತೀ, ಆದದ ರಿಂದ ನಿನ್ನ ವಿಧಿಗಳನ್ನು ಪ್ರೀತಿ ಮಾಡುತ್ತೇನೆ.
ಕೀರ್ತನೆಗಳು 119 : 120 (KNV)
ನಿನ್ನ ಹೆದರಿಕೆಯಿಂದ ನನ್ನ ಶರೀರವು ನಡುಗುತ್ತದೆ. ನಾನು ನಿನ್ನ ತೀರ್ಪುಗಳಿಗೆ ಭಯಪಡುತ್ತೇನೆ.
ಕೀರ್ತನೆಗಳು 119 : 121 (KNV)
ನ್ಯಾಯವನ್ನೂ ನೀತಿಯನ್ನೂ ಮಾಡಿದ್ದೇನೆ;ನನ್ನ ಹಿಂಸಕರಿಗೆ ನನ್ನನ್ನು ಒಪ್ಪಿಸಿಬಿಡಬೇಡ.
ಕೀರ್ತನೆಗಳು 119 : 122 (KNV)
ಒಳ್ಳೇದಕ್ಕಾಗಿ ನಿನ್ನ ಸೇವಕನಿಗೆ ಹೊಣೆಯಾಗು; ಅಹಂಕಾರಿಗಳು ನನಗೆ ಹಿಂಸೆ ಮಾಡದಿರಲಿ.
ಕೀರ್ತನೆಗಳು 119 : 123 (KNV)
ನನ್ನ ಕಣ್ಣುಗಳು ನಿನ್ನ ರಕ್ಷಣೆಗೋಸ್ಕರವೂ ನಿನ್ನ ನೀತಿಯ ನುಡಿಗೋಸ್ಕರವೂ ನೆರವೇರುವದನ್ನು ನಿರೀಕ್ಷಿಸುತ್ತಾ ಮೊಬ್ಬಾಗುವವು.
ಕೀರ್ತನೆಗಳು 119 : 124 (KNV)
ನಿನ್ನ ಕರುಣೆಯ ಪ್ರಕಾರ ನಿನ್ನ ಸೇವಕನಿಗೆ ಮಾಡಿ ನಿನ್ನ ನಿಯಮಗಳನ್ನು ನನಗೆ ಕಲಿಸು.
ಕೀರ್ತನೆಗಳು 119 : 125 (KNV)
ನಾನು ನಿನ್ನ ಸೇವಕನು; ನಿನ್ನ ಸಾಕ್ಷಿಗಳನ್ನು ತಿಳಿಯುವ ಹಾಗೆ ನನಗೆ ಗ್ರಹಿಕೆಯನ್ನು ಕೊಡು.
ಕೀರ್ತನೆಗಳು 119 : 126 (KNV)
ಕರ್ತನೆ, ಕೆಲಸಮಾಡುವದಕ್ಕೆ ಇದು ನಿನಗೆ ಸಮಯವಾಗಿದೆ; ಅವರು ನಿನ್ನ ನ್ಯಾಯಪ್ರಮಾಣವನ್ನು ನಿರರ್ಥಕ ಮಾಡಿ ದ್ದಾರೆ.
ಕೀರ್ತನೆಗಳು 119 : 127 (KNV)
ಆದದರಿಂದ ನಿನ್ನ ಆಜ್ಞೆಗಳನ್ನು ಬಂಗಾರ ಕ್ಕಿಂತಲೂ ಹೌದು, ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಮಾಡಿದ್ದೇನೆ.
ಕೀರ್ತನೆಗಳು 119 : 128 (KNV)
ನಿನ್ನ ಕಟ್ಟಳೆಗಳೆಲ್ಲಾ ಸರಿಯಾದ ವುಗಳೆಂದು ನಾನು ಎಣಿಸುತ್ತೇನೆ. ಮೋಸದ ಪ್ರತಿ ಯೊಂದು ಮಾರ್ಗವನ್ನು ಹಗೆಮಾಡುತ್ತೇನೆ.
ಕೀರ್ತನೆಗಳು 119 : 129 (KNV)
ನಿನ್ನ ಸಾಕ್ಷಿಗಳು ಅದ್ಭುತವಾದವುಗಳೇ; ಆದದ ರಿಂದ ನನ್ನ ಪ್ರಾಣವು ಅವುಗಳನ್ನು ಕೈಕೊಳ್ಳುತ್ತದೆ.
ಕೀರ್ತನೆಗಳು 119 : 130 (KNV)
ನಿನ್ನ ವಾಕ್ಯಗಳ ಪ್ರವೇಶವು ಬೆಳಕನ್ನು ಕೊಟ್ಟು ಮೂರ್ಖರಿಗೆ ಗ್ರಹಿಕೆಯನ್ನು ಉಂಟುಮಾಡುತ್ತದೆ.
ಕೀರ್ತನೆಗಳು 119 : 131 (KNV)
ನನ್ನ ಬಾಯಿಯನ್ನು ತೆರೆದು ಏದುತ್ತಿದ್ದೇನೆ. ನಿನ್ನ ಆಜ್ಞೆಗಳನ್ನು ನಾನು ಬಯಸಿದ್ದೇನೆ.
ಕೀರ್ತನೆಗಳು 119 : 132 (KNV)
ನೀನು ನನ್ನ ಕಡೆಗೆ ದೃಷ್ಟಿಸಿ ನಿನ್ನ ಹೆಸರನ್ನು ಪ್ರೀತಿಸುವವರಿಗೆ ಮಾಡುವ ಪ್ರಕಾರ ನನ್ನನ್ನು ಕರುಣಿಸು.
ಕೀರ್ತನೆಗಳು 119 : 133 (KNV)
ನನ್ನ ಹೆಜ್ಜೆಗಳನ್ನು ನಿನ್ನ ವಾಕ್ಯದಲ್ಲಿ ದೃಢಪಡಿಸು; ಯಾವ ದುಷ್ಟತನವಾದರೂ ನನ್ನ ಮೇಲೆ ದೊರೆತನ ಮಾಡ ದಿರಲಿ.
ಕೀರ್ತನೆಗಳು 119 : 134 (KNV)
ಮನುಷ್ಯರ ಬಲಾತ್ಕಾರದಿಂದ ನನ್ನನ್ನು ತಪ್ಪಿಸು; ಆಗ ನಿನ್ನ ಕಟ್ಟಳೆಗಳನ್ನು ನಾನು ಕೈಕೊಳ್ಳುವೆನು.
ಕೀರ್ತನೆಗಳು 119 : 135 (KNV)
ನಿನ್ನ ಮುಖವನ್ನು ನಿನ್ನ ಸೇವಕನ ಮೇಲೆ ಪ್ರಕಾಶಿಸ ಮಾಡು ಮತ್ತು ನಿನ್ನ ನಿಯಮಗಳನ್ನು ನನಗೆ ಕಲಿಸು.
ಕೀರ್ತನೆಗಳು 119 : 136 (KNV)
ಅವರು ನಿನ್ನ ನ್ಯಾಯಪ್ರಮಾಣವನ್ನು ಕೈ ಕೊಳ್ಳದ ನಿಮಿತ್ತ ಹೊಳೆಗಳಂತೆ ನನ್ನ ಕಣ್ಣೀರು ಹರಿಯುತ್ತದೆ.
ಕೀರ್ತನೆಗಳು 119 : 137 (KNV)
ಕರ್ತನೇ, ನೀನು ನೀತಿವಂತನು; ನಿನ್ನ ನ್ಯಾಯ ವಿಧಿಗಳು ಯಥಾರ್ಥವಾದವುಗಳೇ.
ಕೀರ್ತನೆಗಳು 119 : 138 (KNV)
ನಿನ್ನ ಸಾಕ್ಷಿ ಗಳನ್ನು ನೀತಿಯಾಗಿಯೂ ಬಹು ನಂಬಿಕೆಯುಳ್ಳವು ಗಳಾಗಿಯೂ ಆಜ್ಞಾಪಿಸಿದ್ದೀ.
ಕೀರ್ತನೆಗಳು 119 : 139 (KNV)
ನನ್ನ ವೈರಿಗಳು ನಿನ್ನ ವಾಕ್ಯಗಳನ್ನು ಮರೆತುಬಿಡುವದರಿಂದ ನನ್ನ ಆಸಕ್ತಿಯು ನನ್ನನ್ನು ದಹಿಸಿಯದೆ.
ಕೀರ್ತನೆಗಳು 119 : 140 (KNV)
ನಿನ್ನ ವಾಕ್ಯವು ಬಹಳ ಶುದ್ಧವಾಗಿದೆ; ಆದದರಿಂದ ನಿನ್ನ ಸೇವಕನು ಅದನ್ನು ಪ್ರೀತಿಮಾಡುತ್ತಾನೆ.
ಕೀರ್ತನೆಗಳು 119 : 141 (KNV)
ನಾನು ಅಲ್ಪನೂ ತಿರಸ್ಕರಿಸ ಲ್ಪಟ್ಟವನೂ ಆಗಿದ್ದರೂ ನಿನ್ನ ಕಟ್ಟಳೆಗಳನ್ನು ನಾನು ಮರೆತುಬಿಡುವದಿಲ್ಲ.
ಕೀರ್ತನೆಗಳು 119 : 142 (KNV)
ನಿನ್ನ ನೀತಿಯು ನಿತ್ಯವಾದ ನೀತಿಯೇ; ನಿನ್ನ ನ್ಯಾಯಪ್ರಮಾಣವು ಸತ್ಯವೇ.
ಕೀರ್ತನೆಗಳು 119 : 143 (KNV)
ಇಕ್ಕಟ್ಟೂ ಸಂಕಟವೂ ನನ್ನನ್ನು ಹಿಡಿದವೆ; ಆದರೂ ನಿನ್ನ ಆಜ್ಞೆಗಳು ನನಗೆ ಆನಂದವಾಗಿವೆ.
ಕೀರ್ತನೆಗಳು 119 : 144 (KNV)
ನಿನ್ನ ಸಾಕ್ಷಿಗಳ ನೀತಿ ನಿತ್ಯವಾದದ್ದು; ನನಗೆ ಗ್ರಹಿಕೆಯನ್ನು ಕೊಡು; ಆಗ ಬದುಕುವೆನು.
ಕೀರ್ತನೆಗಳು 119 : 145 (KNV)
ಪೂರ್ಣಹೃದಯದಿಂದ ನಾನು ಕೂಗಿದ್ದೇನೆ; ಓ ಕರ್ತನೇ, ನನಗೆ ಉತ್ತರಕೊಡು; ನಾನು ನಿನ್ನ ನಿಯಮಗಳನ್ನು ಕೈಕೊಳ್ಳುವೆನು.
ಕೀರ್ತನೆಗಳು 119 : 146 (KNV)
ನಿನಗೆ ಮೊರೆ ಯಿಟ್ಟಿದ್ದೇನೆ; ನನ್ನನ್ನು ರಕ್ಷಿಸು, ಆಗ ನಿನ್ನ ಕಟ್ಟಳೆಗಳನ್ನು ಕೈಕೊಳ್ಳುವೆನು.
ಕೀರ್ತನೆಗಳು 119 : 147 (KNV)
ಉದಯವನ್ನು ಎದುರುಗೊಂಡು ಮೊರೆಯಿಟ್ಟಿದ್ದೇನೆ; ನಿನ್ನ ವಾಕ್ಯಕ್ಕೆ ಎದುರು ನೋಡಿ ದ್ದೇನೆ.
ಕೀರ್ತನೆಗಳು 119 : 148 (KNV)
ನಾನು ನಿನ್ನ ವಾಕ್ಯದಲ್ಲಿ ಧ್ಯಾನ ಮಾಡುವ ಹಾಗೆ ನನ್ನ ಕಣ್ಣುಗಳು ರಾತ್ರಿ ಜಾವಗಳನ್ನು ಮುಂಗೊ ಂಡವೆ.
ಕೀರ್ತನೆಗಳು 119 : 149 (KNV)
ನಿನ್ನ ಪ್ರೀತಿ ಕರುಣೆಯ ಪ್ರಕಾರ ನನ್ನ ಮೊರೆಯನ್ನು ಕೇಳು; ಓ ಕರ್ತನೇ, ನಿನ್ನ ವಿಧಿಯ ಪ್ರಕಾರ ನನ್ನನ್ನು ಉಜ್ಜೀವಿಸು.
ಕೀರ್ತನೆಗಳು 119 : 150 (KNV)
ದುಷ್ಟತನವನ್ನು ಕಲ್ಪಿಸುವವರು ಸವಿಾಪವಾಗಿದ್ದಾರೆ; ನಿನ್ನ ನ್ಯಾಯ ಪ್ರಮಾಣಕ್ಕೆ ಅವರು ದೂರವಾಗಿದ್ದಾರೆ.
ಕೀರ್ತನೆಗಳು 119 : 151 (KNV)
ಓ ಕರ್ತನೇ, ನೀನು ಸವಿಾಪವೇ ಇದ್ದೀ; ನಿನ್ನ ಆಜ್ಞೆ ಗಳೆಲ್ಲಾ ಸತ್ಯವೇ.
ಕೀರ್ತನೆಗಳು 119 : 152 (KNV)
ನೀನು ಎಂದೆಂದಿಗೂ ಅವು ಗಳನ್ನು ಸ್ಥಾಪಿಸಿದ್ದೀ ಎಂದು ನಿನ್ನ ಸಾಕ್ಷಿಗಳಿಂದ ಪೂರ್ವದಲ್ಲಿ ತಿಳಿದೆನು.
ಕೀರ್ತನೆಗಳು 119 : 153 (KNV)
ನನ್ನ ಸಂಕಟವನ್ನು ನೋಡಿ ನನ್ನನ್ನು ತಪ್ಪಿಸಿ ಬಿಡು; ನಿನ್ನ ನ್ಯಾಯಪ್ರಮಾಣವನ್ನು ಮರೆತುಬಿಡೆನು.
ಕೀರ್ತನೆಗಳು 119 : 154 (KNV)
ನನ್ನ ವ್ಯಾಜ್ಯವನ್ನು ನಡಿಸಿ ನನ್ನನ್ನು ಬಿಡುಗಡೆ ಮಾಡು; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಉಜ್ಜೀವಿಸು.
ಕೀರ್ತನೆಗಳು 119 : 155 (KNV)
ದುಷ್ಟರಿಗೆ ರಕ್ಷಣೆಯು ದೂರವಾಗಿದೆ; ನಿನ್ನ ನಿಯ ಮಗಳನ್ನು ಅವರು ಹುಡುಕರು.
ಕೀರ್ತನೆಗಳು 119 : 156 (KNV)
ಓ ಕರ್ತನೇ, ನಿನ್ನ ಅಂತಃಕರಣಗಳು ಮಹತ್ತಾದವುಗಳು. ನಿನ್ನ ನ್ಯಾಯವಿಧಿಗಳ ಪ್ರಕಾರ ನನ್ನನ್ನು ಬದುಕಿಸು.
ಕೀರ್ತನೆಗಳು 119 : 157 (KNV)
ನನ್ನನ್ನು ಹಿಂಸಿಸುವವರೂ ನನ್ನ ವೈರಿಗಳೂ ಅನೇಕ ರಾಗಿದ್ದಾರೆ; ನಿನ್ನ ಸಾಕ್ಷಿಗಳಿಂದ ನಾನು ತೊಲಗೆನು.
ಕೀರ್ತನೆಗಳು 119 : 158 (KNV)
ನಿನ್ನ ವಾಕ್ಯವನ್ನು ಕೈಕೊಳ್ಳದ ಅಪರಾಧಿಗಳನ್ನು ನೋಡಿ ದುಃಖಪಟ್ಟಿದ್ದೇನೆ.
ಕೀರ್ತನೆಗಳು 119 : 159 (KNV)
ನಿನ್ನ ಕಟ್ಟಳೆಗಳನ್ನು ಪ್ರೀತಿಮಾಡುತ್ತೇನೆಂದು ನೋಡು; ಓ ಕರ್ತನೇ, ನಿನ್ನ ಪ್ರೀತಿ ಕರುಣೆಯ ಪ್ರಕಾರ ನನ್ನನ್ನು ಬದುಕಿಸು.
ಕೀರ್ತನೆಗಳು 119 : 160 (KNV)
ಆದಿ ಯಿಂದಲೂ ನಿನ್ನ ವಾಕ್ಯವು ಸತ್ಯವೇ; ನಿನ್ನ ನೀತಿಯ ನ್ಯಾಯವಿಧಿಗಳೆಲ್ಲಾ ನಿತ್ಯವಾಗಿವೆ.
ಕೀರ್ತನೆಗಳು 119 : 161 (KNV)
ಪ್ರಧಾನರು ಕಾರಣವಿಲ್ಲದೆ ನನ್ನನ್ನು ಹಿಂಸಿಸು ತ್ತಾರೆ. ನನ್ನ ಹೃದಯವು ನಿನ್ನ ವಾಕ್ಯಗಳಿಗೆ ಮಾತ್ರ ಭಯಪಡುತ್ತದೆ.
ಕೀರ್ತನೆಗಳು 119 : 162 (KNV)
ಬಹಳ ಕೊಳ್ಳೆಹೊಡೆದವನ ಹಾಗೆ ನಾನು ನಿನ್ನ ವಾಕ್ಯದ ನಿಮಿತ್ತ ಸಂತೋಷಪಡು ತ್ತೇನೆ.
ಕೀರ್ತನೆಗಳು 119 : 163 (KNV)
ಸುಳ್ಳನ್ನು ಹಗೆಮಾಡಿ ಅಸಹ್ಯಿಸಿಬಿಡುತ್ತೇನೆ. ನಿನ್ನ ನ್ಯಾಯಪ್ರಮಾಣವನ್ನು ಪ್ರೀತಿಮಾಡುತ್ತೇನೆ.
ಕೀರ್ತನೆಗಳು 119 : 164 (KNV)
ನಿನ್ನ ನೀತಿಯ ವಿಧಿಗಳ ನಿಮಿತ್ತ ದಿವಸಕ್ಕೆ ಏಳು ಸಾರಿ ನಿನ್ನನ್ನು ಸ್ತುತಿಸುತ್ತೇನೆ.
ಕೀರ್ತನೆಗಳು 119 : 165 (KNV)
ನಿನ್ನ ನ್ಯಾಯಪ್ರಮಾಣ ವನ್ನು ಪ್ರೀತಿಮಾಡುವವರಿಗೆ ಸಂಪೂರ್ಣ ಸಮಾ ಧಾನ ಉಂಟು; ಅವರಿಗೆ ಆತಂಕವೇನೂ ಇರುವದಿಲ್ಲ.
ಕೀರ್ತನೆಗಳು 119 : 166 (KNV)
ಕರ್ತನೇ, ನಿನ್ನ ರಕ್ಷಣೆಗೆ ಕಾದುಕೊಂಡಿದ್ದೇನೆ; ನಿನ್ನ ಆಜ್ಞೆಗಳನ್ನು ನಡಿಸಿದ್ದೇನೆ.
ಕೀರ್ತನೆಗಳು 119 : 167 (KNV)
ನನ್ನ ಪ್ರಾಣವು ನಿನ್ನ ಸಾಕ್ಷಿಗಳನ್ನು ಕೈಕೊಂಡಿದೆ; ನಾನು ಅವುಗಳನ್ನು ಬಹಳವಾಗಿ ಪ್ರೀತಿಮಾಡುತ್ತೇನೆ;
ಕೀರ್ತನೆಗಳು 119 : 168 (KNV)
ನಿನ್ನ ಕಟ್ಟಳೆ ಗಳನ್ನೂ ಸಾಕ್ಷಿಗಳನ್ನೂ ಕೈಕೊಳ್ಳುತ್ತೇನೆ; ನನ್ನ ಮಾರ್ಗ ಗಳೆಲ್ಲಾ ನಿನ್ನ ಮುಂದೆ ಇವೆ.
ಕೀರ್ತನೆಗಳು 119 : 169 (KNV)
ಓ ಕರ್ತನೇ, ನನ್ನ ಕೂಗು ನಿನ್ನ ಸನ್ನಿಧಿಗೆ ಮುಟ್ಟಲಿ; ನಿನ್ನ ವಾಕ್ಯದ ಪ್ರಕಾರ ನನಗೆ ಜ್ಞಾನವನ್ನು ಕೊಡು.
ಕೀರ್ತನೆಗಳು 119 : 170 (KNV)
ನನ್ನ ವಿಜ್ಞಾಪನೆಯು ನಿನ್ನ ಸಮ್ಮುಖಕ್ಕೆ ಬರಲಿ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಬಿಡಿಸು.
ಕೀರ್ತನೆಗಳು 119 : 171 (KNV)
ನೀನು ನಿನ್ನ ನಿಯಮಗಳನ್ನು ನನಗೆ ಕಲಿಸಿದಾಗ ನನ್ನ ತುಟಿಗಳು ನಿನ್ನ ಸ್ತೋತ್ರವನ್ನು ನುಡಿಯುತ್ತವೆ.
ಕೀರ್ತನೆಗಳು 119 : 172 (KNV)
ನನ್ನ ನಾಲಿಗೆಯು ನಿನ್ನ ವಾಕ್ಯದ ವಿಷಯವಾಗಿ ಮಾತನಾಡುತ್ತದೆ. ನಿನ್ನ ಆಜ್ಞೆಗಳೆಲ್ಲಾ ನೀತಿಯೇ.
ಕೀರ್ತನೆಗಳು 119 : 173 (KNV)
ನಿನ್ನ ಕೈ ನನ್ನ ಸಹಾಯಕ್ಕಾಗಿರಲಿ; ನಿನ್ನ ಕಟ್ಟಳೆ ಗಳನ್ನು ನಾನು ಆದುಕೊಂಡಿದ್ದೇನೆ.
ಕೀರ್ತನೆಗಳು 119 : 174 (KNV)
ಕರ್ತನೇ, ನಿನ್ನ ರಕ್ಷಣೆಗೆ ಆಶೆಪಟ್ಟಿದೇನೆ. ನಿನ್ನ ನ್ಯಾಯಪ್ರಮಾಣವು ನನ್ನ ಆನಂದವಾಗಿದೆ.
ಕೀರ್ತನೆಗಳು 119 : 175 (KNV)
ನನ್ನ ಪ್ರಾಣವು ಬದುಕಿ ನಿನ್ನನ್ನು ಸ್ತುತಿಸಲಿ; ನಿನ್ನ ನ್ಯಾಯವಿಧಿಗಳು ನನಗೆ ಸಹಾಯಮಾಡಲಿ.
ಕೀರ್ತನೆಗಳು 119 : 176 (KNV)
ತಪ್ಪಿಹೋದ ಕುರಿಯ ಹಾಗೆ ತೊಳಲ್ಲಿದ್ದೇನೆ; ನಿನ್ನ ಸೇವಕನನ್ನು ಹುಡುಕು; ನಿನ್ನ ಆಜ್ಞೆಗಳನ್ನು ಮರೆತುಬಿಡೆನು.
❮
❯