ಕೀರ್ತನೆಗಳು 118 : 1 (KNV)
ಕರ್ತನಿಗೆ ಉಪಕಾರಸ್ತುತಿ ಮಾಡಿರಿ; ಆತನು ಒಳ್ಳೆಯವನು; ಆತನ ಕರು ಣೆಯು ಯುಗಯುಗಕ್ಕೂ ಇದೆ.
ಕೀರ್ತನೆಗಳು 118 : 2 (KNV)
ಆತನ ಕರುಣೆಯು ಯುಗಯುಗಕ್ಕೂ ಇದೆ ಎಂದು ಇಸ್ರಾಯೇಲ್ ಹೇಳಲಿ.
ಕೀರ್ತನೆಗಳು 118 : 3 (KNV)
ಆತನ ಕರುಣೆಯು ಯುಗಯುಗಕ್ಕೂ ಇದೆ ಎಂದು ಆರೋನನ ಮನೆಯವರು ಹೇಳಲಿ.
ಕೀರ್ತನೆಗಳು 118 : 4 (KNV)
ಆತನ ಕರುಣೆಯು ಯುಗಯುಗಕ್ಕೂ ಇದೆ ಎಂದು ಕರ್ತನಿಗೆ ಭಯಪಡುವವರು ಹೇಳಲಿ.
ಕೀರ್ತನೆಗಳು 118 : 5 (KNV)
ಇಕ್ಕಟ್ಟಿನೊಳಗಿಂದ ಕರ್ತನಿಗೆ ಕೂಗಿದೆನು; ಕರ್ತನು ಉತ್ತರ ಕೊಟ್ಟು ನನ್ನನ್ನು ವಿಶಾಲ ಸ್ಥಳದಲ್ಲಿ ನಿಲ್ಲಿಸಿ ದನು.
ಕೀರ್ತನೆಗಳು 118 : 6 (KNV)
ಕರ್ತನು ನನ್ನ ಪರವಾಗಿದ್ದಾನೆ; ನಾನು ಭಯಪಡೆನು; ಮನುಷ್ಯನು ನನಗೆ ಏನು ಮಾಡುವನು?
ಕೀರ್ತನೆಗಳು 118 : 7 (KNV)
ನನಗೆ ಸಹಾಯ ಮಾಡುವವರೊಂದಿಗೆ ಕರ್ತನು ನನ್ನ ಪಕ್ಷವನ್ನು ಹಿಡಿಯುತ್ತಾನೆ. ಆದದರಿಂದ ನಾನು ನನ್ನ ಹಗೆಯವರ ಮೇಲೆ ನನ್ನಾಶೆಯನ್ನು ತೀರಿಸು ವದನ್ನು ನಾನು ನೋಡುವೆನು.
ಕೀರ್ತನೆಗಳು 118 : 8 (KNV)
ಮನುಷ್ಯರಲ್ಲಿ ಭರ ವಸವಿಡುವದಕ್ಕಿಂತ ಕರ್ತನಲ್ಲಿ ನಂಬಿಕೆಯಿಡುವದು ಒಳ್ಳೇದು.
ಕೀರ್ತನೆಗಳು 118 : 9 (KNV)
ಅಧಿಪತಿಗಳಲ್ಲಿ ಭರವಸವಿಡುವದಕ್ಕಿಂತ ಕರ್ತನನ್ನು ನಂಬಿಕೊಳ್ಳುವದು ಒಳ್ಳೇದು.
ಕೀರ್ತನೆಗಳು 118 : 10 (KNV)
ಎಲ್ಲಾ ಜನಾಂಗದವರು ನನ್ನನ್ನು ಸುತ್ತಿಕೊಂಡರು; ನಾನು ಕರ್ತನ ಹೆಸರಿನಲ್ಲಿ ಅವರನ್ನು ನಾಶಮಾಡು ವೆನು.
ಕೀರ್ತನೆಗಳು 118 : 11 (KNV)
ಅವರು ನನ್ನನ್ನು ಸುತ್ತಿಕೊಂಡರು; ಹೌದು, ನನ್ನನ್ನು ಸುತ್ತಿಕೊಂಡರು; ಕರ್ತನ ಹೆಸರಿನಲ್ಲಿ ಅವ ರನ್ನು ಸಂಹರಿಸುವೆನು.
ಕೀರ್ತನೆಗಳು 118 : 12 (KNV)
ಜೇನ್ನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ ಅವರು ಮುಳ್ಳುಗಳ ಬೆಂಕಿಯ ಹಾಗೆ ಆರಿಹೋಗುತ್ತಾರೆ, ಕರ್ತನ ಹೆಸರಿನಲ್ಲಿ ನಾನು ಅವ ರನ್ನು ಸಂಹರಿಸುವೆನು.
ಕೀರ್ತನೆಗಳು 118 : 13 (KNV)
ನಾನು ಬೀಳುವ ಹಾಗೆ ನೀನು ನನ್ನನ್ನು ಕಠಿಣವಾಗಿ ನೂಕಿದ್ದೀ; ಆದರೆ ಕರ್ತನು ನನಗೆ ಸಹಾಯ ಮಾಡಿ ದನು.
ಕೀರ್ತನೆಗಳು 118 : 14 (KNV)
ನನ್ನ ಬಲವೂ ಕೀರ್ತನೆಯೂ ಕರ್ತನೇ; ಆತನೇ ನನಗೆ ರಕ್ಷಣೆಯಾದನು.
ಕೀರ್ತನೆಗಳು 118 : 15 (KNV)
ರಕ್ಷಣೆಯ ಉತ್ಸಾಹದ ಧ್ವನಿಯು ನೀತಿವಂತರ ಗುಡಾರಗಳಲ್ಲಿ ಅದೆ; ಕರ್ತನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.
ಕೀರ್ತನೆಗಳು 118 : 16 (KNV)
ಕರ್ತನ ಬಲಗೈ ಉನ್ನತವಾಗಿದೆ; ಕರ್ತನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.
ಕೀರ್ತನೆಗಳು 118 : 17 (KNV)
ನಾನು ಸಾಯದೆ ಬದುಕಿ, ಕರ್ತನ ಕಾರ್ಯಗಳನ್ನು ಪ್ರಕಟಿಸುವೆನು.
ಕೀರ್ತನೆಗಳು 118 : 18 (KNV)
ಕರ್ತನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು; ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ.
ಕೀರ್ತನೆಗಳು 118 : 19 (KNV)
ನೀತಿಯ ಬಾಗಲುಗಳನ್ನು ನನಗೆ ತೆರೆಯಿರಿ; ಅವುಗಳೊಳಗೆ ಪ್ರವೇಶಿಸಿ ಕರ್ತನನ್ನು ಕೊಂಡಾಡು ವೆನು.
ಕೀರ್ತನೆಗಳು 118 : 20 (KNV)
ಇದೇ ಕರ್ತನ ಬಾಗಲು, ನೀತಿವಂತರು ಅದರಲ್ಲಿ ಪ್ರವೇಶಿಸುವರು.
ಕೀರ್ತನೆಗಳು 118 : 21 (KNV)
ನಿನ್ನನ್ನು ಕೊಂಡಾಡು ವೆನು; ನನಗೆ ನೀನು ಉತ್ತರಕೊಟ್ಟು, ನನ್ನ ರಕ್ಷಣೆಯಾದಿ.
ಕೀರ್ತನೆಗಳು 118 : 22 (KNV)
ಮನೆ ಕಟ್ಟುವವರು ತಳ್ಳಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
ಕೀರ್ತನೆಗಳು 118 : 23 (KNV)
ಇದು ಕರ್ತನಿಂದುಂಟಾಗಿ ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿದೆ.
ಕೀರ್ತನೆಗಳು 118 : 24 (KNV)
ಕರ್ತನು ಮಾಡಿದ ದಿನವು ಇದೇ; ಇದರಲ್ಲಿ ನಾವು ಉಲ್ಲಾಸಿಸಿ ಸಂತೋಷಪಡುವೆವು.
ಕೀರ್ತನೆಗಳು 118 : 25 (KNV)
ಓ ಕರ್ತನೇ, ರಕ್ಷಿಸಬೇಕು ಎಂದು ನಾನು ನಿನ್ನನ್ನು ಬೇಡುತ್ತೇನೆ. ಓ ಕರ್ತನೇ, ಅಭಿವೃದ್ಧಿಯನ್ನು ಕೊಡು ಎಂದು ನಿನ್ನನ್ನು ಬೇಡುತ್ತೇನೆ.
ಕೀರ್ತನೆಗಳು 118 : 26 (KNV)
ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದವಾಗಲಿ; ಕರ್ತನ ಆಲಯ ದೊಳಗಿಂದ ನಾವು ನಿಮ್ಮನ್ನು ಆಶೀರ್ವದಿಸಿದೆವು.
ಕೀರ್ತನೆಗಳು 118 : 27 (KNV)
ದೇವರು ಕರ್ತನಾಗಿದ್ದಾನೆ. ಆತನು ನಮಗೆ ಬೆಳಕನ್ನು ತೋರಿಸಿದ್ದಾನೆ. ಬಲಿ (ಪಶುವನ್ನು) ಹಗ್ಗಗಳಿಂದ ಕಟ್ಟಿ ಬಲಿಪೀಠದ ಕೊಂಬುಗಳಿಗೆ ಕಟ್ಟಿರಿ,
ಕೀರ್ತನೆಗಳು 118 : 28 (KNV)
ನೀನು ನನ್ನ ದೇವರಾಗಿದ್ದೀ; ನಿನ್ನನ್ನು ಕೊಂಡಾಡುವೆನು; ನನ್ನ ದೇವರೇ, ನಿನ್ನನ್ನು ಘನಪಡಿಸುವೆನು.
ಕೀರ್ತನೆಗಳು 118 : 29 (KNV)
ಕರ್ತನನ್ನು ಕೊಂಡಾಡಿರಿ; ಆತನು ಒಳ್ಳೆಯವನು. ಆತನ ಕರು ಣೆಯು ಯುಗಯುಗಕ್ಕೂ ಅದೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29