ಕೀರ್ತನೆಗಳು 116 : 1 (KNV)
ನಾನು ಕರ್ತನನ್ನು ಪ್ರೀತಿ ಮಾಡುತ್ತೇನೆ.ಆತನು ನನ್ನ ಸ್ವರವನ್ನೂ ವಿಜ್ಞಾಪನೆಯನ್ನೂ ಕೇಳಿದ್ದಾನೆ.
ಕೀರ್ತನೆಗಳು 116 : 2 (KNV)
ಆತನು ನನ್ನ ಮೊರೆಯನ್ನು ಆಲಿಸಿದ್ದರಿಂದ ನಾನು ಜೀವದಿಂದಿರುವ ವರೆಗೂ ಆತನನ್ನೇ ಬೇಡುವೆನು.
ಕೀರ್ತನೆಗಳು 116 : 3 (KNV)
ಮರಣದ ದುಃಖ ಗಳು ನನ್ನನ್ನು ಆವರಿಸಿಕೊಂಡವು; ನರಕದ ಬಾಧೆ ಗಳೂ ಇಕ್ಕಟ್ಟೂ ದುಃಖವೂ ನನ್ನನ್ನು ಹಿಡಿದವು.
ಕೀರ್ತನೆಗಳು 116 : 4 (KNV)
ಆಗ ನಾನು ಅಯ್ಯೋ, ಕರ್ತನೇ, ನನ್ನ ಪ್ರಾಣವನ್ನು ತಪ್ಪಿಸು ಎಂದು ಕರ್ತನ ಹೆಸರಿನಲ್ಲಿ ಬೇಡಿದೆನು.
ಕೀರ್ತನೆಗಳು 116 : 5 (KNV)
ಕರ್ತನು ಕೃಪೆಯೂ ನೀತಿಯೂ ಉಳ್ಳವನು; ಹೌದು, ನಮ್ಮ ದೇವರು ಅಂತಃಕರಣವುಳ್ಳವನು.
ಕೀರ್ತನೆಗಳು 116 : 6 (KNV)
ಕರ್ತನು ಸಾಧು ಜನರನ್ನು ಕಾಪಾಡುತ್ತಾನೆ; ನಾನು ಕುಗ್ಗಿದವನಾದಾಗ ನನಗೆ ಸಹಾಯಮಾಡಿದನು.
ಕೀರ್ತನೆಗಳು 116 : 7 (KNV)
ನನ್ನ ಮನವೇ, ನಿನ್ನ ವಿಶ್ರಾಂತಿಗೆ ತಿರುಗಿಕೋ; ಕರ್ತನು ನಿನಗೆ ಉಪಕಾರ ಮಾಡಿದ್ದಾನೆ.
ಕೀರ್ತನೆಗಳು 116 : 8 (KNV)
ನೀನು ನನ್ನ ಪ್ರಾಣ ವನ್ನು ಮರಣಕ್ಕೂ ಕಣ್ಣುಗಳನ್ನು ಕಣ್ಣೀರಿಗೂ ನನ್ನ ಪಾದಗಳು ಬೀಳದಂತೆಯೂ ತಪ್ಪಿಸಿದ್ದೀ.
ಕೀರ್ತನೆಗಳು 116 : 9 (KNV)
ಜೀವಿತರ ದೇಶದಲ್ಲಿ ಕರ್ತನ ಮುಂದೆ ನಡೆದುಕೊಳ್ಳುವೆನು.
ಕೀರ್ತನೆಗಳು 116 : 10 (KNV)
ನಾನು ನಂಬಿದೆನು; ಆದದರಿಂದ ಮಾತಾಡಿದೆನು; ನಾನು ಬಹಳವಾಗಿ ಕುಗ್ಗಿಹೋದೆನು.
ಕೀರ್ತನೆಗಳು 116 : 11 (KNV)
ಮನುಷ್ಯ ರೆಲ್ಲರು ಸುಳ್ಳುಗಾರರೆಂದು ನಾನು ಆತುರತೆಯಿಂದ ಹೇಳಿದೆನು.
ಕೀರ್ತನೆಗಳು 116 : 12 (KNV)
ಆತನು ನನಗೆ ಮಾಡಿದ ಎಲ್ಲಾ ಉಪಕಾರಗಳಿಗೋಸ್ಕರ ನಾನು ಕರ್ತನಿಗೆ ಏನು ಬದಲು ಮಾಡಲಿ?
ಕೀರ್ತನೆಗಳು 116 : 13 (KNV)
ನಾನು ರಕ್ಷಣೆಯ ಪಾತ್ರೆಯನ್ನು ತಕ್ಕೊಂಡು, ಕರ್ತನ ಹೆಸರನ್ನು ಕರೆಯುವೆನು.
ಕೀರ್ತನೆಗಳು 116 : 14 (KNV)
ನನ್ನ ಪ್ರಮಾಣಗಳನ್ನು ಆತನ ಜನರೆಲ್ಲರ ಮುಂದೆಯೇ ಕರ್ತನಿಗೆ ಸಲ್ಲಿಸುವೆನು.
ಕೀರ್ತನೆಗಳು 116 : 15 (KNV)
ಕರ್ತನ ದೃಷ್ಟಿಯಲ್ಲಿ ಆತನ ಪರಿಶುದ್ಧರ ಮರಣವು ಅಮೂಲ್ಯವಾಗಿದೆ.
ಕೀರ್ತನೆಗಳು 116 : 16 (KNV)
ಓ ಕರ್ತನೇ, ನಿಜವಾಗಿ ನಾನು ನಿನ್ನ ಸೇವಕನು. ಹೌದು, ನಾನು ನಿನ್ನ ಸೇವಕನು ನಿನ್ನ ದಾಸಿಯ ಮಗನು; ನೀನು ನನ್ನ ಬಂಧನಗಳನ್ನು ಬಿಚ್ಚಿದ್ದೀ.
ಕೀರ್ತನೆಗಳು 116 : 17 (KNV)
ನಾನು ನಿನಗೆ ಸ್ತೋತ್ರದ ಬಲಿಯನ್ನು ಅರ್ಪಿಸುವೆನು; ಕರ್ತನ ಹೆಸರನ್ನು ಕರೆಯುವೆನು.
ಕೀರ್ತನೆಗಳು 116 : 18 (KNV)
ಓ ಯೆರೂಸಲೇಮೇ, ನನ್ನ ಪ್ರಮಾಣಗಳನ್ನು ಆತನ ಜನರೆಲ್ಲರ ಮುಂದೆಯೇ,
ಕೀರ್ತನೆಗಳು 116 : 19 (KNV)
ಅಂದರೆ ಕರ್ತನ ಆಲ ಯದ ಅಂಗಳಗಳ ಮಧ್ಯದಲ್ಲಿಯೇ ನಿನಗೆ ಸಲ್ಲಿಸು ವೆನು. ಕರ್ತನನ್ನು ಸ್ತುತಿಸಿರಿ.

1 2 3 4 5 6 7 8 9 10 11 12 13 14 15 16 17 18 19

BG:

Opacity:

Color:


Size:


Font: