ಕೀರ್ತನೆಗಳು 111 : 1 (KNV)
ಕರ್ತನನ್ನು ಸ್ತುತಿಸಿರಿ; ನಾನು ಕರ್ತನನ್ನು ಪೂರ್ಣಹೃದಯದಿಂದ ಯಥಾರ್ಥರ ಕೂಟದಲ್ಲಿಯೂ ಸಭೆಯಲ್ಲಿಯೂ ಕೊಂಡಾಡುವೆನು.
ಕೀರ್ತನೆಗಳು 111 : 2 (KNV)
ಕರ್ತನ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷಪಡುವವರೆಲ್ಲರು ಅವುಗಳನ್ನು ಶೋಧಿಸುತ್ತಾರೆ.
ಕೀರ್ತನೆಗಳು 111 : 3 (KNV)
ಆತನ ಕೆಲಸವು ಪ್ರಭೆಯೂ ಮಹಿಮೆಯೂ ಉಳ್ಳದ್ದು; ಆತನ ನೀತಿಯು ಎಂದೆಂದಿಗೂ ನಿಲ್ಲುತ್ತದೆ.
ಕೀರ್ತನೆಗಳು 111 : 4 (KNV)
ಆತನು ತನ್ನ ಅದ್ಭುತಗಳನ್ನು ಕುರಿತು ಜ್ಞಾಪಕಮಾಡಿದ್ದಾನೆ; ಕರ್ತನು ಕೃಪಾಳುವೂ ಅಂತಃ ಕರಣವೂ ಉಳ್ಳಾತನೇ.
ಕೀರ್ತನೆಗಳು 111 : 5 (KNV)
ಆತನು ತನಗೆ ಭಯಪಡುವ ವರಿಗೆ ಆಹಾರ ಕೊಟ್ಟಿದ್ದಾನೆ; ಯುಗಯುಗಕ್ಕೂ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವನು.
ಕೀರ್ತನೆಗಳು 111 : 6 (KNV)
ಅನ್ಯ ಜನರ ಬಾಧ್ಯತೆಯನ್ನು ಅವರಿಗೆ ಕೊಡುವ ಹಾಗೆ ತನ್ನ ಕೆಲಸಗಳ ಬಲವನ್ನು ಜನರಿಗೆ ತೋರಿಸಿದ್ದಾನೆ.
ಕೀರ್ತನೆಗಳು 111 : 7 (KNV)
ಆತನ ಕೈ ಕೆಲಸಗಳು ಸತ್ಯವೂ ನ್ಯಾಯವೂ ಆಗಿವೆ; ಆತನ ಕಟ್ಟಳೆಗಳೆಲ್ಲಾ ನಿಶ್ಚಯವಾದವುಗಳು.
ಕೀರ್ತನೆಗಳು 111 : 8 (KNV)
ಅವು ಯುಗಯುಗಾಂತರಗಳಿಗೂ ನೆಲೆಯಾಗಿ ನಿಲ್ಲುತ್ತವೆ. ಅವು ಸತ್ಯದಲ್ಲಿಯೂ ಯಥಾರ್ಥತೆಯಲ್ಲಿಯೂ ವಿಧಿಸ ಲ್ಪಟ್ಟಿವೆ.
ಕೀರ್ತನೆಗಳು 111 : 9 (KNV)
ತನ್ನ ಜನರಿಗೆ ವಿಮೋಚನೆಯನ್ನು ಕಳುಹಿ ಸಿದನು; ಯುಗಯುಗಕ್ಕೂ ತನ್ನ ಒಡಂಬಡಿಕೆಯನ್ನು ಆಜ್ಞಾಪಿಸಿದನು; ಆತನ ಹೆಸರು ಪರಿಶುದ್ಧವೂ ಘನವೂ ಆಗಿದೆ.
ಕೀರ್ತನೆಗಳು 111 : 10 (KNV)
ಕರ್ತನ ಭಯವು ಜ್ಞಾನದ ಮೂಲವು; ಆತನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ತಿಳುವಳಿಕೆಯಿದೆ; ಆತನ ಸ್ತೋತ್ರವು ಎಂದೆಂದಿಗೂ ನಿಲ್ಲುತ್ತದೆ.

1 2 3 4 5 6 7 8 9 10

BG:

Opacity:

Color:


Size:


Font: