ಕೀರ್ತನೆಗಳು 106 : 1 (KNV)
ನೀವು ಕರ್ತನನ್ನು ಸ್ತುತಿಸಿರಿ, ಕರ್ತನಿಗೆ ಉಪಕಾರ ಸ್ತುತಿಮಾಡಿರಿ; ಆತನು ಒಳ್ಳೆಯವನು, ಆತನ ಕರುಣೆಯು ಶಾಶ್ವತ ವಾಗಿರುವದು.
ಕೀರ್ತನೆಗಳು 106 : 2 (KNV)
ಕರ್ತನ ಪರಾಕ್ರಮ ಕ್ರಿಯೆಗಳನ್ನು ಪ್ರಕಟಿಸುವವನಾರು? ಆತನ ಸ್ತೋತ್ರಗಳನ್ನು ಪ್ರಸಿದ್ಧಿ ಪಡಿಸುವವನಾರು?
ಕೀರ್ತನೆಗಳು 106 : 3 (KNV)
ನ್ಯಾಯವನ್ನು ಕೈಕೊಂಡು ಎಲ್ಲಾ ಕಾಲದಲ್ಲಿ ನೀತಿಯನ್ನು ಮಾಡುವವರು ಧನ್ಯರು.
ಕೀರ್ತನೆಗಳು 106 : 4 (KNV)
ಓ ಕರ್ತನೇ, ನಿನ್ನ ಜನರ ಮೇಲಿರುವ ಕಟಾಕ್ಷದಿಂದ ನನ್ನನ್ನೂ ಜ್ಞಾಪಿಸಿಕೋ; ನಿನ್ನ ರಕ್ಷಣೆಯಿಂದ ನನ್ನನ್ನು ದರ್ಶಿಸು.
ಕೀರ್ತನೆಗಳು 106 : 5 (KNV)
ಕರ್ತನೇ, ನೀನು ಆದುಕೊಂಡವರ ಸುಖವನ್ನು ನಾನು ನೋಡಿ ನಿನ್ನ ಜನಾಂಗದ ಸಂತೋಷ ದೊಂದಿಗೆ ಸಂತೋಷಿಸಿ ನಿನ್ನ ಬಾಧ್ಯತೆಯ ಸಂಗಡ ಹೊಗಳಿಕೊಳ್ಳುವೆನು.
ಕೀರ್ತನೆಗಳು 106 : 6 (KNV)
ನಮ್ಮ ತಂದೆಗಳ ಸಂಗಡ ನಾವು ಪಾಪಮಾಡಿದ್ದೇವೆ, ಅಕ್ರಮಮಾಡಿದ್ದೇವೆ, ದುಷ್ಟತ್ವವನ್ನು ನಡಿಸಿದ್ದೇವೆ.
ಕೀರ್ತನೆಗಳು 106 : 7 (KNV)
ನಮ್ಮ ತಂದೆಗಳು ಐಗುಪ್ತದಲ್ಲಿ ನಿನ್ನ ಅದ್ಭುತಗಳನ್ನು ತಿಳಿಯದೆ ನಿನ್ನ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ, ಅಂದರೆ ಕೆಂಪು ಸಮುದ್ರದ ಹತ್ತಿರ ನಿನಗೆ ತಿರುಗಿ ಬಿದ್ದರು.
ಕೀರ್ತನೆಗಳು 106 : 8 (KNV)
ಆದಾಗ್ಯೂ ಆತನು ತನ್ನ ಮಹಾಶಕ್ತಿಯನ್ನು ಅವರಿಗೆ ತಿಳಿಯ ಮಾಡುವ ಹಾಗೆ ತನ್ನ ಹೆಸರಿನ ನಿಮಿತ್ತ ಅವರನ್ನು ರಕ್ಷಿಸಿದನು.
ಕೀರ್ತನೆಗಳು 106 : 9 (KNV)
ಆತನು ಕೆಂಪು ಸಮುದ್ರವನ್ನು ಗದರಿಸಲು ಅದು ಒಣಗಿ ಹೋಯಿತು. ಹೀಗೆ ಜಲಾಗಾಧದಲ್ಲಿ, ಅರಣ್ಯ ದಲ್ಲಿದ್ದ ಹಾಗೆಯೇ ಆತನು ಅವರನ್ನು ನಡಿಸಿದನು.
ಕೀರ್ತನೆಗಳು 106 : 10 (KNV)
ವೈರಿಯ ಕೈಯೊಳಗಿಂದ ಅವರನ್ನು ರಕ್ಷಿಸಿ, ಶತ್ರು ವಿನ ಕೈಯಿಂದ ಅವರನ್ನು ಬಿಡುಗಡೆ ಮಾಡಿದನು.
ಕೀರ್ತನೆಗಳು 106 : 11 (KNV)
ನೀರುಗಳು ಅವರ ವೈರಿಗಳನ್ನು ಮುಚ್ಚಿಬಿಟ್ಟವು; ಅವರಲ್ಲಿ ಒಬ್ಬನಾದರೂ ಉಳಿಯಲಿಲ್ಲ.
ಕೀರ್ತನೆಗಳು 106 : 12 (KNV)
ಆಗ ಅವರು ಆತನ ಮಾತುಗಳನ್ನು ನಂಬಿ ಆತನ ಸ್ತೋತ್ರ ವನ್ನು ಹಾಡಿದರು.
ಕೀರ್ತನೆಗಳು 106 : 13 (KNV)
ಆತನ ಕೆಲಸಗಳನ್ನು ಬೇಗ ಮರೆತುಬಿಟ್ಟು ಆತನ ಆಲೋಚನೆಗೆ ಅವರು ಕಾದುಕೊಳ್ಳದೆ ಇದ್ದರು.
ಕೀರ್ತನೆಗಳು 106 : 14 (KNV)
ಅರಣ್ಯದಲ್ಲಿ ದುರಾಶೆಯಿಂದ ಆಶಿಸಿ ಮರುಭೂಮಿ ಯಲ್ಲಿ ದೇವರನ್ನು ಪರೀಕ್ಷಿಸಿದರು.
ಕೀರ್ತನೆಗಳು 106 : 15 (KNV)
ಆಗ ಅವರ ಬೇಡಿಕೆಯಂತೆ ಅವರಿಗೆ ಆತನು ಕೊಟ್ಟನು; ಆದರೆ ಅವರ ಪ್ರಾಣದಲ್ಲಿ ಕ್ಷೀಣತೆಯನ್ನು ಕಳುಹಿಸಿದನು.
ಕೀರ್ತನೆಗಳು 106 : 16 (KNV)
ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ ಕರ್ತನ ಪರಿಶುದ್ದನಾದ ಆರೋನನ ಮೇಲೆಯೂ ಹೊಟ್ಟೇಕಿಚ್ಚು ಪಟ್ಟರು.
ಕೀರ್ತನೆಗಳು 106 : 17 (KNV)
ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ ಅಬಿರಾಮನ ಗುಂಪನ್ನು ಮುಚ್ಚಿ ಬಿಟ್ಟಿತು.
ಕೀರ್ತನೆಗಳು 106 : 18 (KNV)
ಬೆಂಕಿಯು ಅವರ ಗುಂಪಿನಲ್ಲಿ ಉರಿದು, ಜ್ವಾಲೆಯು ದುಷ್ಟರನ್ನು ಸುಟ್ಟಿತು.
ಕೀರ್ತನೆಗಳು 106 : 19 (KNV)
ಅವರು ಹೋರೇಬಿ ನಲ್ಲಿ ಕರುವನ್ನು ಮಾಡಿ ಎರಕದ ವಿಗ್ರಹಕ್ಕೆ ಅಡ್ಡ ಬಿದ್ದರು.
ಕೀರ್ತನೆಗಳು 106 : 20 (KNV)
ತಮ್ಮ ಘನವನ್ನು ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು.
ಕೀರ್ತನೆಗಳು 106 : 21 (KNV)
ತಮ್ಮ ರಕ್ಷಕನಾಗಿ ಐಗುಪ್ತದೇಶದಲ್ಲಿ ದೊಡ್ಡ ಕೆಲಸಗಳನ್ನೂ
ಕೀರ್ತನೆಗಳು 106 : 22 (KNV)
ಹಾಮನ ದೇಶದಲ್ಲಿ ಅದ್ಭುತಗಳನ್ನೂ ಕೆಂಪು ಸಮುದ್ರದ ಬಳಿ ಯಲ್ಲಿ ಭಯಂಕರವಾದವುಗಳನ್ನೂ ಮಾಡಿದ ದೇವ ರನ್ನು ಅವರು ಮರೆತರು.
ಕೀರ್ತನೆಗಳು 106 : 23 (KNV)
ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು.
ಕೀರ್ತನೆಗಳು 106 : 24 (KNV)
ಹೌದು, ಅವರು, ಮನೋಹರವಾದ ದೇಶ ವನ್ನು ಅಸಹ್ಯಿಸಿಬಿಟ್ಟು ಆತನ ಮಾತನ್ನು ನಂಬದೆ ಹೋದರು.
ಕೀರ್ತನೆಗಳು 106 : 25 (KNV)
ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ ಕರ್ತನ ಸ್ವರವನ್ನು ಕೇಳದೆ ಹೋದರು.
ಕೀರ್ತನೆಗಳು 106 : 26 (KNV)
ಆದದರಿಂದ ಅವರನ್ನು ಅರಣ್ಯದಲ್ಲಿ ಕೆಡವುವದಕ್ಕೂ
ಕೀರ್ತನೆಗಳು 106 : 27 (KNV)
ಅವರ ಸಂತತಿಯನ್ನು ಜನಾಂಗಗಳಲ್ಲಿ ಕೆಡವಿ, ಅವರನ್ನು ದೇಶಗಳಲ್ಲಿ ಚದರಿಸುವದಕ್ಕೂ ಆತನು ತನ್ನ ಕೈಯನ್ನು ಅವರ ಮೇಲೆತ್ತಿದನು.
ಕೀರ್ತನೆಗಳು 106 : 28 (KNV)
ಬಾಳ್ಪೆಗೊ ಯೋರಿಗೆ ಕೂಡಿಕೊಂಡು ಸತ್ತವರಿಗೆ ಅರ್ಪಿಸಿದ ಬಲಿಗಳನ್ನು ತಿಂದು
ಕೀರ್ತನೆಗಳು 106 : 29 (KNV)
ತಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನು ಎಬ್ಬಿಸಿದರು; ಆದದರಿಂದ ವ್ಯಾಧಿಯು ಅವರಲ್ಲಿ ಹೊಕ್ಕಿತು.
ಕೀರ್ತನೆಗಳು 106 : 30 (KNV)
ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು.
ಕೀರ್ತನೆಗಳು 106 : 31 (KNV)
ಇದು ತಲತಲಾಂತರಕ್ಕೂ ಯುಗ ಯುಗಕ್ಕೂ ಆತನಿಗೆ ನೀತಿಯೆಂದು ಎಣಿಸಲ್ಪಟ್ಟಿತು.
ಕೀರ್ತನೆಗಳು 106 : 32 (KNV)
ಅವರು ವಿವಾದದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು; ಅವರ ನಿಮಿತ್ತ ಮೋಶೆಗೆ ಕೇಡು ಬಂತು.
ಕೀರ್ತನೆಗಳು 106 : 33 (KNV)
ಅವರು ದೇವರಾತ್ಮನನ್ನು ಕೆಣ ಕಿದರು; ಆದದರಿಂದ ಅವನು ಬುದ್ಧಿಹೀನತೆಯಿಂದ ಮಾತನಾಡಿದನು.
ಕೀರ್ತನೆಗಳು 106 : 34 (KNV)
ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು.
ಕೀರ್ತನೆಗಳು 106 : 35 (KNV)
ಆದರೆ ಅನ್ಯಜನಾಂಗ ಗಳ ಸಂಗಡ ಕೂಡಿಕೊಂಡು; ಅವರ ಕೆಲಸಗಳನ್ನು ಕಲಿತುಕೊಂಡರು.
ಕೀರ್ತನೆಗಳು 106 : 36 (KNV)
ಅವರ ವಿಗ್ರಹಗಳಿಗೆ ಸೇವೆ ಮಾಡಿದರು ಅವು ಅವರಿಗೆ ನೇಣು ಆದವು.
ಕೀರ್ತನೆಗಳು 106 : 37 (KNV)
ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು.
ಕೀರ್ತನೆಗಳು 106 : 38 (KNV)
ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾ ಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ; ದೇಶವನ್ನು ರಕ್ತದಿಂದ ಅಶುದ್ಧಮಾಡಿದರು.
ಕೀರ್ತನೆಗಳು 106 : 39 (KNV)
ಹೀಗೆ ತಮ್ಮ ಕೆಲಸಗಳಿಂದ ತಮ್ಮನ್ನು ಹೊಲೆಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ಜಾರರಾದರು.
ಕೀರ್ತನೆಗಳು 106 : 40 (KNV)
ಆಗ ಕರ್ತನ ಕೋಪವು ಆತನ ಜನರಿಗೆ ವಿರೋಧವಾಗಿ ಉರಿ ಯಿತು; ಆತನು ತನ್ನ ಸ್ವಂತ ಬಾಧ್ಯತೆಯನ್ನು ಅಸಹ್ಯಿಸಿ ಕೊಂಡು
ಕೀರ್ತನೆಗಳು 106 : 41 (KNV)
ಅವರನ್ನು ಅನ್ಯಜನಾಂಗಗಳ ಕೈಗೆಕೊಟ್ಟನು; ಅವರ ಹಗೆಯವರು ಅವರನ್ನು ಆಳಿದರು.
ಕೀರ್ತನೆಗಳು 106 : 42 (KNV)
ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅಧೀನರಾದರು.
ಕೀರ್ತನೆಗಳು 106 : 43 (KNV)
ಬಹಳ ಸಾರಿ ಆತನು ಅವರನ್ನು ಬಿಡಿಸಿದನು; ಆದರೆ ಅವರು ತಮ್ಮ ಆಲೋಚನೆಯಿಂದ ಆತನಿಗೆ ಕೋಪವನ್ನೆಬ್ಬಿಸಿದರು. ತಮ್ಮ ಅಕ್ರಮದಿಂದ ಅವರು ಕುಗ್ಗಿಹೋದರು.
ಕೀರ್ತನೆಗಳು 106 : 44 (KNV)
ಆದಾಗ್ಯೂ ಅವರ ಕೂಗನ್ನು ಆತನು ಕೇಳಿದಾಗ ಅವರ ಇಕ್ಕಟ್ಟಿನ ಮೇಲೆ ಲಕ್ಷ್ಯವಿಟ್ಟು
ಕೀರ್ತನೆಗಳು 106 : 45 (KNV)
ಅವರಿಗಾಗಿ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು ತನ್ನ ಅತಿಶಯವಾದ ಕರು ಣೆಯ ಪ್ರಕಾರ ಪಶ್ಚಾತ್ತಾಪಪಟ್ಟನು.
ಕೀರ್ತನೆಗಳು 106 : 46 (KNV)
ಅವರನ್ನು ಸೆರೆಹಿಡಿದವರ ಮುಂದೆ ಅವರು ಕರುಣೆ ಹೊಂದುವಂತೆ ಮಾಡಿದನು.
ಕೀರ್ತನೆಗಳು 106 : 47 (KNV)
ಓ ನಮ್ಮ ದೇವರಾದ ಕರ್ತನೇ, ನಾವು ನಿನ್ನ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ ನಿನ್ನ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸು. ಅನ್ಯಜನಾಂಗಗಳೊಳಗಿಂದ ನಮ್ಮನ್ನು ಹೊರಗೆ ಬರಮಾಡು.
ಕೀರ್ತನೆಗಳು 106 : 48 (KNV)
ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ.
❮
❯