ಕೀರ್ತನೆಗಳು 104 : 1 (KNV)
ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ನನ್ನ ದೇವರಾದ ಓ ಕರ್ತನೇ, ನೀನು ಬಹಳ ದೊಡ್ಡವನಾಗಿದ್ದು ಗೌರವ ವನ್ನೂ ಪ್ರಭೆಯನ್ನೂ ಹೊದ್ದುಕೊಂಡಿದ್ದೀ.
ಕೀರ್ತನೆಗಳು 104 : 2 (KNV)
ಆತನು ವಸ್ತ್ರದ ಹಾಗೆ ಬೆಳಕನ್ನು ಧರಿಸಿಕೊಳ್ಳುವಾತನೂ ಆಕಾಶ ವನ್ನು ಪರದೆ ಹಾಗೆ ಹಾಸುವಾತನೂ ಆಗಿದ್ದಾನೆ.
ಕೀರ್ತನೆಗಳು 104 : 3 (KNV)
ಆತನು ನೀರುಗಳಲ್ಲಿ ತನ್ನ ಉಪ್ಪರಿಗೆಗಳ ತೊಲೆಗಳನ್ನು ಇರಿಸುತ್ತಾನೆ; ಮೋಡಗಳನ್ನು ತನ್ನ ರಥವಾಗಿ ಮಾಡು ತ್ತಾನೆ. ಗಾಳಿಯ ರೆಕ್ಕೆಗಳ ಮೇಲೆ ನಡೆದು ಹೋಗು ತ್ತಾನೆ.
ಕೀರ್ತನೆಗಳು 104 : 4 (KNV)
ಆತನು ತನ್ನ ದೂತರನ್ನು ಆತ್ಮಗಳನ್ನಾಗಿಯೂ ಉರಿಯುವ ಬೆಂಕಿಯನ್ನು ತನ್ನ ಸೇವಕರನ್ನಾಗಿಯೂ ಮಾಡುತ್ತಾನೆ.
ಕೀರ್ತನೆಗಳು 104 : 5 (KNV)
ಯುಗಯುಗಾಂತರಗಳಿಗೂ ಅದು ಕದಲದ ಹಾಗೆ ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಆತನು ಸ್ಥಾಪಿಸಿದನು.
ಕೀರ್ತನೆಗಳು 104 : 6 (KNV)
ನೀನು ಜಲಾಗಾಧದಿಂದ ವಸ್ತ್ರದ ಹಾಗೆ ಅದನ್ನು ಮುಚ್ಚಿದ್ದೀ; ಬೆಟ್ಟಗಳ ಮೇಲೆ ನೀರುಗಳು ನಿಂತವು.
ಕೀರ್ತನೆಗಳು 104 : 7 (KNV)
ಅವು ನಿನ್ನ ಗದರಿಕೆಯಿಂದ ಓಡಿಹೋದವು; ನಿನ್ನ ಗುಡುಗಿನ ಶಬ್ದದಿಂದ ಅವು ಓಡಿಹೋದವು.
ಕೀರ್ತನೆಗಳು 104 : 8 (KNV)
ಬೆಟ್ಟ ಗಳಿಗೆ ಏರಿ, ತಗ್ಗುಗಳಿಗೆ ಇಳಿದು, ನೀನು ಅವುಗಳಿಗೆ ಸ್ಥಾಪಿಸಿದ ಸ್ಥಳಕ್ಕೆ ಹೋದವು.
ಕೀರ್ತನೆಗಳು 104 : 9 (KNV)
ಅವು ದಾಟದ ಹಾಗೆಯೂ ಭೂಮಿಯನ್ನು ಮುಚ್ಚುವದಕ್ಕೆ ತಿರಿಗಿ ಬಾರದ ಹಾಗೆಯೂ ಮೇರೆಯನ್ನು ಇಟ್ಟಿದ್ದೀ.
ಕೀರ್ತನೆಗಳು 104 : 10 (KNV)
ಬುಗ್ಗೆ ಗಳನ್ನು ಹಳ್ಳಗಳಿಗೆ ಕಳುಹಿಸುತ್ತೀ; ಅವು ಬೆಟ್ಟಗಳ ನಡುವೆ ಹರಿಯುತ್ತವೆ;
ಕೀರ್ತನೆಗಳು 104 : 11 (KNV)
ಕಾಡಿನ ಮೃಗಗಳಿಗೆಲ್ಲಾ ಅವು ನೀರು ಕುಡಿಸುತ್ತವೆ; ಕಾಡು ಕತ್ತೆಗಳು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತವೆ.
ಕೀರ್ತನೆಗಳು 104 : 12 (KNV)
ಆಕಾಶದ ಪಕ್ಷಿಗಳು ಅವುಗಳ ಹತ್ತಿರ ವಾಸವಾಗಿದ್ದು ಕೊಂಬೆಗಳ ಮಧ್ಯ ದಲ್ಲಿಂದ ಹಾಡುತ್ತವೆ.
ಕೀರ್ತನೆಗಳು 104 : 13 (KNV)
ಬೆಟ್ಟಗಳಿಗೆ ತನ್ನ ಉಪ್ಪರಿಗೆ ಗಳೊಳಗಿಂದ ನೀರು ಹಾಕುತ್ತಾನೆ; ತನ್ನ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ.
ಕೀರ್ತನೆಗಳು 104 : 14 (KNV)
ಆತನು ಪಶುಗಳಿಗೋಸ್ಕರ ಹುಲ್ಲನ್ನೂ ಮನುಷ್ಯನ ಸೇವೆ ಗೋಸ್ಕರ ಪಲ್ಯಗಳನ್ನೂ ಮೊಳಿಸುತ್ತಾನೆ; ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾನೆ.
ಕೀರ್ತನೆಗಳು 104 : 15 (KNV)
ದ್ರಾಕ್ಷಾರಸವು ಮನುಷ್ಯನ ಹೃದಯವನ್ನು ಸಂತೋಷ ಪಡಿಸುತ್ತದೆ; ಎಣ್ಣೆಯು ಅವನ ಮುಖವನ್ನು ಪ್ರಕಾ ಶಿಸುವಂತೆ ಮಾಡುತ್ತದೆ; ರೊಟ್ಟಿಯು ಮನುಷ್ಯನ ಹೃದಯವನ್ನು ಬಲಪಡಿಸುತ್ತದೆ.
ಕೀರ್ತನೆಗಳು 104 : 16 (KNV)
ಆತನು ನೆಟ್ಟ ಕರ್ತನ ಮರಗಳಾದ ಲೆಬನೋನಿನ ದೇವದಾರುಗಳು ತೃಪ್ತಿ ಯಾಗುತ್ತವೆ.
ಕೀರ್ತನೆಗಳು 104 : 17 (KNV)
ಅಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ; ಬಕದ ಮನೆಯು ತುರಾಯಿ ಗಿಡಗಳಲ್ಲಿ ಅದೆ.
ಕೀರ್ತನೆಗಳು 104 : 18 (KNV)
ಎತ್ತರವಾದ ಬೆಟ್ಟಗಳು ಕಾಡುಮೇಕೆಗಳಿಗೆ, ಬಂಡೆ ಗಳು ಮೊಲಗಳಿಗೆ ಆಶ್ರಯವಾಗಿವೆ.
ಕೀರ್ತನೆಗಳು 104 : 19 (KNV)
ನೇಮಿಸಿದ ಕಾಲಗಳಿಗೋಸ್ಕರ ಚಂದ್ರನನ್ನು ಉಂಟು ಮಾಡಿದ್ದಾನೆ; ಸೂರ್ಯನು ತನ್ನ ಅಸ್ತಮಾನ ವನ್ನು ತಿಳಿದಿದ್ದಾನೆ.
ಕೀರ್ತನೆಗಳು 104 : 20 (KNV)
ನೀನು ಕತ್ತಲನ್ನು ಬರಮಾಡುತ್ತೀ; ಆಗ ರಾತ್ರಿಯಾಗುತ್ತದೆ; ಅದರಲ್ಲಿ ಅಡವಿಯ ಮೃಗ ಗಳೆಲ್ಲಾ ಸಂಚರಿಸುತ್ತವೆ.
ಕೀರ್ತನೆಗಳು 104 : 21 (KNV)
ಸಿಂಹದ ಮರಿಗಳು ಬೇಟೆ ಗೋಸ್ಕರವೂ ದೇವರಿಂದ ತಮ್ಮ ಆಹಾರವನ್ನು ಹುಡು ಕುವದಕ್ಕೋಸ್ಕರವೂ ಗರ್ಜಿಸುತ್ತವೆ.
ಕೀರ್ತನೆಗಳು 104 : 22 (KNV)
ಸೂರ್ಯನು ಹುಟ್ಟಲು ಅವು ಕೂಡಿ ಬಂದು ತಮ್ಮ ಗವಿಗಳಲ್ಲಿ ಮಲಗುತ್ತವೆ.
ಕೀರ್ತನೆಗಳು 104 : 23 (KNV)
ಮನುಷ್ಯನು ತನ್ನ ಕೆಲಸಕ್ಕೂ ಸಾಯಂ ಕಾಲದ ವರೆಗೆ ತನ್ನ ಪ್ರಯಾಸಕ್ಕೂ ಹೊರಡುತ್ತಾನೆ.
ಕೀರ್ತನೆಗಳು 104 : 24 (KNV)
ಓ ಕರ್ತನೇ, ನಿನ್ನ ಕೆಲಸಗಳು ಎಷ್ಟೋ ಉಂಟು! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟು ಮಾಡಿದ್ದೀ; ಭೂಮಿಯು ನಿನ್ನ ಸಂಪತ್ತಿನಿಂದ ತುಂಬಿದೆ.
ಕೀರ್ತನೆಗಳು 104 : 25 (KNV)
ದೊಡ್ಡದೂ ವಿಶಾಲವಾದದ್ದೂ ಆದ ಸಮುದ್ರವದೆ; ಅದರಲ್ಲಿ ಲೆಕ್ಕವಿಲ್ಲದ ಜೀವಜಂತುಗಳೂ ಸಣ್ಣ ದೊಡ್ಡ ಮೃಗಗಳೂ ಅವೆ.
ಕೀರ್ತನೆಗಳು 104 : 26 (KNV)
ಅದರಲ್ಲಿ ಹಡಗುಗಳು ಹೋಗು ತ್ತವೆ; ಅದರಲ್ಲಿ ಆಡುವದಕ್ಕೆ ನೀನು ರೂಪಿಸಿದ ಲೆವಿ ಯಾತಾನವು ಅದೆ.
ಕೀರ್ತನೆಗಳು 104 : 27 (KNV)
ನೀನು ಅವುಗಳ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುವಹಾಗೆ ಅವುಗಳೆಲ್ಲಾ ನಿನ್ನನ್ನು ಕಾದುಕೊಳ್ಳುತ್ತವೆ.
ಕೀರ್ತನೆಗಳು 104 : 28 (KNV)
ನೀನು ಅವುಗಳಿಗೆ ಕೊಡಲು ಅವು ಕೂಡಿಸುತ್ತವೆ; ನೀನು ನಿನ್ನ ಕೈ ತೆರೆಯಲು ಒಳ್ಳೇ ದರಿಂದ ತೃಪ್ತಿಯಾಗುತ್ತವೆ.
ಕೀರ್ತನೆಗಳು 104 : 29 (KNV)
ನೀನು ನಿನ್ನ ಮುಖವನ್ನು ಮರೆಮಾಡಲು ತಲ್ಲಣಿಸುತ್ತವೆ; ನೀನು ಅವುಗಳ ಶ್ವಾಸವನ್ನು ತೆಗೆದು ಬಿಡಲು, ಅವು ಸತ್ತುಹೋಗಿ, ತಮ್ಮ ಧೂಳಿಗೆ ತಿರುಗುತ್ತವೆ.
ಕೀರ್ತನೆಗಳು 104 : 30 (KNV)
ನೀನು ನಿನ್ನ ಶ್ವಾಸ ವನ್ನು ಕಳುಹಿಸಲು ಅವು ನಿರ್ಮಿಸಲ್ಪಡುತ್ತವೆ; ನೀನು ಭೂಮಿಯ ಮುಖವನ್ನು ಹೊಸದಾಗಿ ಮಾಡುತ್ತೀ.
ಕೀರ್ತನೆಗಳು 104 : 31 (KNV)
ಕರ್ತನ ಮಹಿಮೆಯು ಯುಗಯುಗಕ್ಕೂ ಇರಲಿ; ಕರ್ತನು ತನ್ನ ಕೆಲಸಗಳಲ್ಲಿ ಸಂತೋಷಪಡಲಿ.
ಕೀರ್ತನೆಗಳು 104 : 32 (KNV)
ಆತನು ಭೂಮಿಯನ್ನು ದೃಷ್ಟಿಸಲು ಅದು ನಡು ಗುತ್ತದೆ; ಬೆಟ್ಟಗಳನ್ನು ಮುಟ್ಟಲು ಅವು ಹೊಗೆ ಹಾಯುತ್ತವೆ.
ಕೀರ್ತನೆಗಳು 104 : 33 (KNV)
ನಾನು ಜೀವಿತಕಾಲವೆಲ್ಲಾ ಕರ್ತನಿಗೆ ಹಾಡು ವೆನು ನಾನು ಇರುವ ವರೆಗೆ ದೇವರನ್ನು ಕೀರ್ತಿಸುವೆನು.
ಕೀರ್ತನೆಗಳು 104 : 34 (KNV)
ಆತನ ವಿಷಯವಾದ ನನ್ನ ಧ್ಯಾನವು ಸಿಹಿಯಾಗಿ ರುವದು; ನಾನು ಕರ್ತನಲ್ಲಿ ಸಂತೋಷಪಡುವೆನು.
ಕೀರ್ತನೆಗಳು 104 : 35 (KNV)
ಪಾಪಾತ್ಮರು ಭೂಮಿಯೊಳಗಿಂದ ನಾಶವಾಗಲಿ; ದುಷ್ಟರು ಇಲ್ಲದೆ ಹೋಗಲಿ; ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ಕರ್ತನನ್ನು ಕೊಂಡಾಡಿರಿ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35

BG:

Opacity:

Color:


Size:


Font: