ಕೀರ್ತನೆಗಳು 103 : 1 (KNV)
ಓ ನನ್ನ ಮನವೇ, ಕರ್ತನನ್ನೂ ನನ್ನ ಎಲ್ಲಾ ಅಂತರಂಗವೇ, ಆತನ ಪರಿಶುದ್ಧವಾದ ಹೆಸರನ್ನೂ ಸ್ತುತಿಸು.
ಕೀರ್ತನೆಗಳು 103 : 2 (KNV)
ಓ ನನ್ನ ಮನವೇ, ಕರ್ತನನ್ನು ಸ್ತುತಿಸು. ಆತನ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ.
ಕೀರ್ತನೆಗಳು 103 : 3 (KNV)
ಆತನು ನಿನ್ನ ಅಪ ರಾಧಗಳನ್ನೆಲ್ಲಾ ಮನ್ನಿಸಿ ನಿನ್ನ ರೋಗಗಳನ್ನೆಲ್ಲಾ ಸ್ವಸ್ಥ ಮಾಡಿ
ಕೀರ್ತನೆಗಳು 103 : 4 (KNV)
ನಿನ್ನ ಜೀವವನ್ನು ನಾಶದೊಳಗಿಂದ ವಿಮೋ ಚಿಸಿ ಪ್ರೀತಿ ಕೃಪೆಯನ್ನೂ ಅಂತಃಕರಣಗಳನ್ನೂ ನಿನಗೆ ಕಿರೀಟವಾಗಿ ಇಟ್ಟು
ಕೀರ್ತನೆಗಳು 103 : 5 (KNV)
ನಿನ್ನ ಯೌವನವು ಹದ್ದಿನಂತೆ ಹೊಸದಾಗುವ ಹಾಗೆ ನಿನ್ನ ಬಾಯಿಯನ್ನು ಒಳ್ಳೇದ ರಿಂದ ತೃಪ್ತಿಪಡಿಸುತ್ತಾನೆ.
ಕೀರ್ತನೆಗಳು 103 : 6 (KNV)
ಕುಗ್ಗಿಸಲ್ಪಡುವವರೆಲ್ಲರಿಗೆ ಕರ್ತನು ನೀತಿಯನ್ನೂ ನ್ಯಾಯವನ್ನೂ ನಡಿಸುತ್ತಾನೆ.
ಕೀರ್ತನೆಗಳು 103 : 7 (KNV)
ಆತನು ತನ್ನ ಮಾರ್ಗಗಳನ್ನು ಮೋಶೆಗೂ ತನ್ನ ಕ್ರಿಯೆಗಳನ್ನು ಇಸ್ರಾಯೇಲಿನ ಮಕ್ಕಳಿಗೂ ತಿಳಿಯಮಾಡಿದನು.
ಕೀರ್ತನೆಗಳು 103 : 8 (KNV)
ಕರ್ತನು ಅಂತಃಕರಣವೂ ದಯೆಯೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳವನಾಗಿದ್ದಾನೆ.
ಕೀರ್ತನೆಗಳು 103 : 9 (KNV)
ಆತನು ಸದಾಕಾಲಕ್ಕೂ ಗದರಿಸುವದಿಲ್ಲ; ನಿತ್ಯವೂ ಕೋಪಿ ಸುವಾತನಲ್ಲ;
ಕೀರ್ತನೆಗಳು 103 : 10 (KNV)
ನಮ್ಮ ಪಾಪಗಳಿಗೆ ತಕ್ಕಂತೆ ನಮಗೆ ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳ ಪ್ರಕಾರ ನಮ್ಮನ್ನು ದಂಡಿಸಲಿಲ್ಲ.
ಕೀರ್ತನೆಗಳು 103 : 11 (KNV)
ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನ ಕೃಪೆಯು ಆತನಿಗೆ ಭಯಪಡುವವರ ಮೇಲೆ ಅಷ್ಟು ಅಪಾರವಾಗಿದೆ.
ಕೀರ್ತನೆಗಳು 103 : 12 (KNV)
ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ಅಷ್ಟು ದೂರ ಮಾಡಿದ್ದಾನೆ.
ಕೀರ್ತನೆಗಳು 103 : 13 (KNV)
ತಂದೆಯು ಮಕ್ಕಳ ಮೇಲೆ ಅಂತಃಕರಣ ಪಡುವ ಪ್ರಕಾರ ಕರ್ತನು ತನಗೆ ಭಯಪಡುವವರ ಮೇಲೆ ಅಂತಃಕರಣಪಡುವವನಾಗಿದ್ದಾನೆ.
ಕೀರ್ತನೆಗಳು 103 : 14 (KNV)
ಆತನು ನಮ್ಮ ಪ್ರಕೃತಿಯನ್ನು ತಿಳುಕೊಂಡು ನಾವು ಧೂಳಿ ಯಾಗಿದ್ದೇವೆಂದು ಜ್ಞಾಪಕಮಾಡಿಕೊಳ್ಳುತ್ತಾನೆ;
ಕೀರ್ತನೆಗಳು 103 : 15 (KNV)
ಮನುಷ್ಯನ ದಿವಸಗಳೋ ಹುಲ್ಲಿನ ಹಾಗೆ ಅವೆ; ಅವನು ಹೊಲದ ಹೂವಿನ ಹಾಗೆಯೇ ಶೋಭಿಸುತ್ತಾನೆ.
ಕೀರ್ತನೆಗಳು 103 : 16 (KNV)
ಆದಾಗ್ಯೂ ಗಾಳಿಯು ಅದರ ಮೇಲೆ ಬೀಸುತ್ತಲೇ ಅದು ಇಲ್ಲದೆ ಹೋಗುತ್ತದೆ; ಅದರ ಸ್ಥಳವು ಅದನ್ನು ಇನ್ನು ಅರಿಯದು.
ಕೀರ್ತನೆಗಳು 103 : 17 (KNV)
ಆದರೆ ಕರ್ತನ ಕೃಪೆಯು ಆತನಿಗೆ ಭಯಪಡುವವರ ಮೇಲೆಯೂ ಆತನ ನೀತಿಯು ಮಕ್ಕಳ ಮಕ್ಕಳಿಗೂ
ಕೀರ್ತನೆಗಳು 103 : 18 (KNV)
ಆತನ ಒಡಂಬಡಿಕೆಯನ್ನು ಕೈಕೊಂಡು ಆತನ ಕಟ್ಟಳೆಗಳನ್ನು ನೆನಸಿ ಅದರಂತೆ ಮಾಡುವವರಿಗೂ ನಿತ್ಯತ್ವದಿಂದ ನಿತ್ಯತ್ವಕ್ಕೂ ಇರುವದು.
ಕೀರ್ತನೆಗಳು 103 : 19 (KNV)
ಕರ್ತನು ಆಕಾಶಗಳಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನ ರಾಜ್ಯವು ಎಲ್ಲರ ಮೇಲೆ ಆಳುತ್ತದೆ.
ಕೀರ್ತನೆಗಳು 103 : 20 (KNV)
ಆತನ ದೂತರೇ, ಆತನ ಮಾತಿನ ಸ್ವರವನ್ನು ಕೇಳಿ, ಆತನ ಆಜ್ಞೆಗಳನ್ನು ನಡಿಸುವ ಶ್ರೇಷ್ಠರಾದ ಶೂರರೇ,
ಕೀರ್ತನೆಗಳು 103 : 21 (KNV)
ಕರ್ತನನ್ನು ಸ್ತುತಿಸಿರಿ. ಆತನ ಎಲ್ಲಾ ಸೈನ್ಯಗಳೇ, ಆತನ ಇಷ್ಟವನ್ನು ನಡಿಸುವ ಆತನ ಸೇವಕರೇ, ಕರ್ತನನ್ನು ಸ್ತುತಿಸಿರಿ.
ಕೀರ್ತನೆಗಳು 103 : 22 (KNV)
ಆತನ ಆಳಿಕೆಯ ಎಲ್ಲಾ ಸ್ಥಳಗಳಲ್ಲಿ ಇರುವ ಆತನ ಎಲ್ಲಾ ಕೆಲಸಗಳೇ. ಕರ್ತನನ್ನು ಸ್ತುತಿಸಿರಿ. ನನ್ನ ಮನವೇ, ಕರ್ತನನ್ನು ಸ್ತುತಿಸು.

1 2 3 4 5 6 7 8 9 10 11 12 13 14 15 16 17 18 19 20 21 22

BG:

Opacity:

Color:


Size:


Font: