ಕೀರ್ತನೆಗಳು 1 : 1 (KNV)
ಭಕ್ತಿಹೀನರ ಆಲೋಚನೆಯಂತೆ ನಡೆಯದೆ ಪಾಪಿಗಳ ಮಾರ್ಗದಲ್ಲಿ ನಿಲ್ಲದೆ ಕುಚೋದ್ಯಗಾರರು ಕೂತುಕೊಳ್ಳುವಲ್ಲಿ ಕೂತುಕೊಳ್ಳದೆ
ಕೀರ್ತನೆಗಳು 1 : 2 (KNV)
ಕರ್ತನ ನ್ಯಾಯ ಪ್ರಮಾಣದಲ್ಲಿ ಸಂತೋಷಿಸಿ ಅದನ್ನ್ನು ರಾತ್ರಿ ಹಗಲು ಧ್ಯಾನಿಸುವ ಮನುಷ್ಯನೇ ಧನ್ಯನು.
ಕೀರ್ತನೆಗಳು 1 : 3 (KNV)
ಅವನು ತನ್ನ ಕಾಲದಲ್ಲಿ ತನ್ನ ಫಲಕೊಡುವಂಥ, ಎಲೆ ಬಾಡದಂಥ, ನೀರಿನ ಹೊಳೆಗಳ ಬಳಿಯಲ್ಲಿ ನೆಡಲ್ಪಟ್ಟಂಥ ಮರದ ಹಾಗಿರುವನು; ಅವನು ಮಾಡು ವದೆಲ್ಲಾ ಸಫಲವಾಗುವದು.
ಕೀರ್ತನೆಗಳು 1 : 4 (KNV)
ಭಕ್ತಿಹೀನರು ಹಾಗಲ್ಲ, ಅವರು ಗಾಳಿ ಬಡು ಕೊಂಡು ಹೋಗುವ ಹೊಟ್ಟಿನ ಹಾಗೆ ಇದ್ದಾರೆ.
ಕೀರ್ತನೆಗಳು 1 : 5 (KNV)
ಆದದರಿಂದ ಭಕ್ತಿಹೀನರು ನ್ಯಾಯತೀರ್ಪಿನಲ್ಲಿಯೂ ಪಾಪಿಗಳು ನೀತಿವಂತರ ಸಭೆಯಲ್ಲಿಯೂ ನಿಲ್ಲರು.ನೀತಿವಂತರ ಮಾರ್ಗವನ್ನು ಕರ್ತನು ಅರಿತಿದ್ದಾನೆ; ಆದರೆ ಭಕ್ತಿಹೀನರ ಮಾರ್ಗವು ನಾಶವಾಗುವದು.
ಕೀರ್ತನೆಗಳು 1 : 6 (KNV)
ನೀತಿವಂತರ ಮಾರ್ಗವನ್ನು ಕರ್ತನು ಅರಿತಿದ್ದಾನೆ; ಆದರೆ ಭಕ್ತಿಹೀನರ ಮಾರ್ಗವು ನಾಶವಾಗುವದು.

1 2 3 4 5 6

BG:

Opacity:

Color:


Size:


Font: