ಙ್ಞಾನೋಕ್ತಿಗಳು 7 : 1 (KNV)
ನನ್ನ ಮಗನೇ, ನನ್ನ ಮಾತುಗಳನ್ನು ಅನುಸರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಇಟ್ಟುಕೋ.
ಙ್ಞಾನೋಕ್ತಿಗಳು 7 : 2 (KNV)
ನನ್ನ ಅಜ್ಞೆಗಳನ್ನು ಅನುಸರಿಸಿ ಬಾಳು; ನಿನ್ನ ಕಣ್ಣು ಗುಡ್ಡೆಯಂತೆ ನನ್ನ ಕಟ್ಟಳೆಯನ್ನು ಕಾಪಾಡು.
ಙ್ಞಾನೋಕ್ತಿಗಳು 7 : 3 (KNV)
ಅವುಗ ಳನ್ನು ನಿನ್ನ ಬೆರಳುಗಳಿಗೆ ಕಟ್ಟಿಕೋ, ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ.
ಙ್ಞಾನೋಕ್ತಿಗಳು 7 : 4 (KNV)
ಜ್ಞಾನಕ್ಕೆ--ನೀನು ನನ್ನ ಸಹೋದರಿ ಎಂದೂ ವಿವೇಕವು ನನ್ನ ಬಂಧು ಎಂದೂ ಹೇಳು;
ಙ್ಞಾನೋಕ್ತಿಗಳು 7 : 5 (KNV)
ಪರಸ್ತ್ರೀಯಿಂದಲೂ ತನ್ನ ಮಾತು ಗಳಿಂದ ಮುಖಸ್ತುತಿ ಮಾಡುವ ಅನ್ಯಳಿಂದಲೂ ಅವು ನಿನ್ನನ್ನು ಕಾಪಾಡುವವು.
ಙ್ಞಾನೋಕ್ತಿಗಳು 7 : 6 (KNV)
ನನ್ನ ಮನೆಯ ಕಿಟಿಕಿಯ ಜಾಲರಿಯಿಂದ ದೃಷ್ಟಿ ಸುವವನಾಗಿ ಜ್ಞಾನಹೀನರಾದವರಲ್ಲಿ ನೋಡಿದಾಗ
ಙ್ಞಾನೋಕ್ತಿಗಳು 7 : 7 (KNV)
ಯುವಕರ ಮಧ್ಯದಲ್ಲಿ ತಿಳುವಳಿಕೆಯಿಲ್ಲದ ಒಬ್ಬ ಯೌವನಸ್ಥನನ್ನು ಕಂಡೆನು.
ಙ್ಞಾನೋಕ್ತಿಗಳು 7 : 8 (KNV)
ಅವನು ಅವಳ ಮೂಲೆಯ ಬೀದಿಯಿಂದ ಹಾದುಹೋಗುತ್ತಾ
ಙ್ಞಾನೋಕ್ತಿಗಳು 7 : 9 (KNV)
ಸಂಜೆಯ ಮೊಬ್ಬಿನಲ್ಲಿ ಗಾಡಾಂಧಕಾರದಲ್ಲಿ ಅವಳ ಮನೆಗೆ ಹೋದನು.
ಙ್ಞಾನೋಕ್ತಿಗಳು 7 : 10 (KNV)
ಇಗೋ, ವೇಶ್ಯಳ ವಸ್ತ್ರವನ್ನು ಧರಿಸಿ ಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರು ಗೊಂಡಳು.
ಙ್ಞಾನೋಕ್ತಿಗಳು 7 : 11 (KNV)
(ಅವಳು ಕೂಗಾಡುವವಳು, ಹಠ ಮಾರಿ; ಅವಳ ಪಾದಗಳು ಮನೆಯಲ್ಲಿ ನಿಲ್ಲುವದಿಲ್ಲ.
ಙ್ಞಾನೋಕ್ತಿಗಳು 7 : 12 (KNV)
ಒಂದು ಸಮಯದಲ್ಲಿ ಅವಳು ಹೊರಗೆ ಮತ್ತೊಂದು ಸಮಯದಲ್ಲಿ ಬೀದಿಗಳಲ್ಲಿ ಪ್ರತಿಯೊಂದು ಮೂಲೆ ಯಲ್ಲಿ ಹೊಂಚುಹಾಕುವಳು).
ಙ್ಞಾನೋಕ್ತಿಗಳು 7 : 13 (KNV)
ಹೀಗೆ ಅವಳು ಅವ ನನ್ನು--ಹಿಡುಕೊಂಡು ಮುದ್ದಿಟ್ಟು
ಙ್ಞಾನೋಕ್ತಿಗಳು 7 : 14 (KNV)
ನಾಚಿಕೆಯಿಲ್ಲದೆ --ನನ್ನಲ್ಲಿ ಸಮಾಧಾನ ಅರ್ಪಣೆಗಳು ಇವೆ; ಈ ದಿವಸ ನನ್ನ ಪ್ರಮಾಣಗಳನ್ನು ನಾನು ಸಲ್ಲಿಸಿದ್ದೇನೆ.
ಙ್ಞಾನೋಕ್ತಿಗಳು 7 : 15 (KNV)
ಆದಕಾರಣ ನಾನು ನಿನ್ನನ್ನು ಎದುರುಗೊಳ್ಳುವದಕ್ಕೆ ಬಂದೆನು; ಅತ್ಯಾಶೆಯಿಂದ ನಿನ್ನನ್ನು ತ್ರೀವ್ರವಾಗಿ ಹುಡು ಕುವದಕ್ಕೆ ಬಂದು ನಿನ್ನನ್ನು ಕಂಡುಕೊಂಡಿದ್ದೇನೆ.
ಙ್ಞಾನೋಕ್ತಿಗಳು 7 : 16 (KNV)
ಚಿತ್ರವಾಗಿ ನೇಯ್ದ ವಸ್ತುಗಳಿಂದಲೂ ವಿಚಿತ್ರ ವಸ್ತು ಗಳಿಂದಲೂ ಐಗುಪ್ತದ ನಯವಾದ ನಾರುಮಡಿ ಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ.
ಙ್ಞಾನೋಕ್ತಿಗಳು 7 : 17 (KNV)
ರಕ್ತಬೋಳ ಅಗರು ಲವಂಗ ಚೆಕ್ಕೆಗಳಿಂದ ನನ್ನ ಹಾಸಿಗೆಯನ್ನು ಸುವಾಸನೆ ಗೊಳಿಸಿದ್ದೇನೆ.
ಙ್ಞಾನೋಕ್ತಿಗಳು 7 : 18 (KNV)
ಬಾ, ಬೆಳಗಿನ ವರೆಗೂ ತೃಪ್ತಿಯಾಗುವ ತನಕ ಪ್ರೀತಿಯ ವಶದಲ್ಲಿ ತುಂಬಿಕೊಳ್ಳುವ ಕಾಮ ವಿಲಾಸಗಳಿಂದ ನಮ್ಮನ್ನು ನಾವು ಆದರಿಸಿಕೊಳ್ಳೋಣ.
ಙ್ಞಾನೋಕ್ತಿಗಳು 7 : 19 (KNV)
ಯಜಮಾ ನನು ಮನೆಯಲ್ಲಿ ಇಲ್ಲ; ಅವನು ದೀರ್ಘದ ಪ್ರಯಾಣ ಕೈಕೊಂಡಿದ್ದಾನೆ.
ಙ್ಞಾನೋಕ್ತಿಗಳು 7 : 20 (KNV)
ಅವನು ತನ್ನೊಂದಿಗೆ ಹಣದ ಚೀಲವನ್ನು ತೆಗೆದುಕೊಂಡು ಹೋಗಿದ್ದಾನೆ; ನೇಮಕ ವಾದ ದಿನದಲ್ಲಿಯೇ ಅವನು ಈ ಮನೆಗೆ ಬರುವವನಾ ಗಿದ್ದಾನೆ ಎಂದು
ಙ್ಞಾನೋಕ್ತಿಗಳು 7 : 21 (KNV)
ಬಹಳವಾದ ತನ್ನ ಸವಿಮಾತಿನಿಂದ ಅವಳು ಅವನನ್ನು ಒಪ್ಪಿಸಿ ತನ್ನ ತುಟಿಗಳ ಮುಖಸ್ತುತಿ ಯಿಂದ ಅವನನ್ನು ಬಲಾತ್ಕರಿಸಿದಳು.
ಙ್ಞಾನೋಕ್ತಿಗಳು 7 : 22 (KNV)
ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ ಇಲ್ಲವೆ ಮೂರ್ಖನು ಶಿಕ್ಷೆಯ ದಂಡನೆಗೆ ಹೋಗುವಂತೆ
ಙ್ಞಾನೋಕ್ತಿಗಳು 7 : 23 (KNV)
ಒಂದು ಬಾಣವು ತನ್ನ ಕಾಳಿಜವನ್ನು ತಿವಿಯುವ ವರೆಗೆ ತನ್ನ ಪ್ರಾಣಕ್ಕಾಗಿ ಬಲೆಯನ್ನು ಒಡ್ಡಿದ್ದಾನೆಂದು ತಿಳಿಯದೆ ಪಕ್ಷಿಯು ಬಲೆಯ ಕಡೆಗೆ ಓಡುವ ಹಾಗೆ ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ.
ಙ್ಞಾನೋಕ್ತಿಗಳು 7 : 24 (KNV)
ಆದುದರಿಂದ ಓ ನನ್ನ ಮಕ್ಕಳಿರಾ, ನನ್ನ ಕಡೆಗೆ ಕಿವಿಗೊಡಿರಿ; ನನ್ನ ಬಾಯಿಯ ಮಾತುಗಳನ್ನು ಆಲಿಸಿರಿ.
ಙ್ಞಾನೋಕ್ತಿಗಳು 7 : 25 (KNV)
ಅವಳ ಮಾರ್ಗಗಳಿಗೆ ನಿನ್ನ ಹೃದಯವು ತಿರುಗದೆ ಇರಲಿ. ಅವಳ ದಾರಿಗಳಲ್ಲಿ ತಪ್ಪಿಹೋಗದೆ ಇರಲಿ.
ಙ್ಞಾನೋಕ್ತಿಗಳು 7 : 26 (KNV)
ಬಹು ಜನರನ್ನು ಅವಳು ಗಾಯಪಡಿಸಿ ಬೀಳಿಸಿ ದ್ದಾಳೆ; ಹೌದು, ಬಲಿಷ್ಠರಾದ ಅನೇಕ ಪುರುಷರು ಅವಳಿಂದ ಹತರಾಗಿದ್ದಾರೆ.ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದುಹೋಗುತ್ತದೆ.
ಙ್ಞಾನೋಕ್ತಿಗಳು 7 : 27 (KNV)
ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದುಹೋಗುತ್ತದೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27

BG:

Opacity:

Color:


Size:


Font: