ಙ್ಞಾನೋಕ್ತಿಗಳು 26 : 1 (KNV)
ಬೇಸಿಗೆಯಲ್ಲಿ ಹಿಮದಂತೆಯೂ ಸುಗ್ಗಿಯಲ್ಲಿ ಮಳೆಯಂತೆಯೂ ಬುದ್ಧಿಹೀನನಿಗೆ ಮಾನ ವು ಸರಿಯಲ್ಲ.
ಙ್ಞಾನೋಕ್ತಿಗಳು 26 : 2 (KNV)
ಅಲೆದಾಡುವ ಪಕ್ಷಿಯಂತೆಯೂ ಹಾರಾ ಡುವ ಬಾನಕ್ಕಿಯಂತೆಯೂ ಕಾರಣವಿಲ್ಲದ ನಾಶವು ಬರುವದಿಲ್ಲ.
ಙ್ಞಾನೋಕ್ತಿಗಳು 26 : 3 (KNV)
ಕುದುರೆಗೆ ಬಾರುಗೋಲು, ಕತ್ತೆಗೆ ಕಡಿ ವಾಣ, ಮೂಢನ ಬೆನ್ನಿಗೆ ಬೆತ್ತ.
ಙ್ಞಾನೋಕ್ತಿಗಳು 26 : 4 (KNV)
ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನು ಅವನಿಗೆ ಸಮಾನನಾದೀಯೇ.
ಙ್ಞಾನೋಕ್ತಿಗಳು 26 : 5 (KNV)
ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನ ದೃಷ್ಟಿ ಯಲ್ಲಿ ಅವನು ಜ್ಞಾನಿಯಾದಾನು.
ಙ್ಞಾನೋಕ್ತಿಗಳು 26 : 6 (KNV)
ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ಪಾದಗಳನ್ನು ಕಡಿದು ಕೇಡನ್ನು ಕುಡಿಯುತ್ತಾನೆ.
ಙ್ಞಾನೋಕ್ತಿಗಳು 26 : 7 (KNV)
ಕುಂಟನ ಕಾಲು ಗಳು ಸಮವಲ್ಲ; ಹಾಗೆಯೇ ಬುದ್ಧಿಹೀನರ ಬಾಯಲ್ಲಿ ಸಾಮ್ಯವು ಇರುತ್ತದೆ.
ಙ್ಞಾನೋಕ್ತಿಗಳು 26 : 8 (KNV)
ಕವಣಿಯಲ್ಲಿ ಕಲ್ಲನ್ನು ಕಟ್ಟುವವನ ಹಾಗೆಯೇ ಮೂಢನಿಗೆ ಮಾನಕೊಡುವವನು ಇರು ವನು.
ಙ್ಞಾನೋಕ್ತಿಗಳು 26 : 9 (KNV)
ಕುಡುಕನ ಕೈಯಲ್ಲಿ ಮುಳ್ಳು ಹೊಕ್ಕಂತೆ ಬುದ್ಧಿ ಹೀನರ ಬಾಯಲ್ಲಿ ಸಾಮ್ಯವು ಇರುವದು.
ಙ್ಞಾನೋಕ್ತಿಗಳು 26 : 10 (KNV)
ಎಲ್ಲವು ಗಳನ್ನು ನಿರ್ಮಿಸಿದ ಮಹಾ ದೇವರು ತಾನೇ ಮೂಢ ನಿಗೂ ಅಪರಾಧಿಗಳಿಗೂ ಪ್ರತಿಫಲ ಕೊಡುತ್ತಾನೆ.
ಙ್ಞಾನೋಕ್ತಿಗಳು 26 : 11 (KNV)
ತಾನು ಕಕ್ಕಿದ್ದಕ್ಕೆ ನಾಯಿಯು ತಿರುಗುವಂತೆ ಮೂಢನು ತನ್ನ ಮೂಢತನಕ್ಕೆ ಹಿಂದಿರುಗುತ್ತಾನೆ.
ಙ್ಞಾನೋಕ್ತಿಗಳು 26 : 12 (KNV)
ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾದವನನ್ನು ನೀನು ನೋಡಿ ದ್ದೀಯೋ? ಅವನಿಗಿಂತ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯು ಇರುತ್ತದೆ,
ಙ್ಞಾನೋಕ್ತಿಗಳು 26 : 13 (KNV)
ಸೋಮಾರಿಯು --ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ಸಿಂಹ ಇದೆ ಎಂದು ಹೇಳುತ್ತಾನೆ.
ಙ್ಞಾನೋಕ್ತಿಗಳು 26 : 14 (KNV)
ಬಾಗಲು ತಿರುಗುಣಿಗಳ ಮೇಲೆ ಹೇಗೆ ತಿರುಗುತ್ತದೋ ಹಾಗೆಯೇ ಸೋಮಾರಿಯು ತನ್ನ ಹಾಸಿಗೆಯ ಮೇಲೆ ತಿರುಗುತ್ತಾನೆ.
ಙ್ಞಾನೋಕ್ತಿಗಳು 26 : 15 (KNV)
ಸೋಮಾ ರಿಯು ಎದೆಯಲ್ಲಿ ತನ್ನ ಕೈಯನ್ನು ಮುಚ್ಚಿಕೊಳ್ಳುತ್ತಾನೆ; ತಿರುಗಿ ಅದನ್ನು ತನ್ನ ಬಾಯಿಯ ಹತ್ತಿರ ತರುವದಕ್ಕೆ ಕೊರಗುತ್ತಾನೆ.
ಙ್ಞಾನೋಕ್ತಿಗಳು 26 : 16 (KNV)
ತನ್ನ ಸ್ವಂತ ಅಭಿಪ್ರಾಯವುಳ್ಳ ಸೋಮಾರಿಯು ನೆವ ಹೇಳುವ ಏಳು ಮಂದಿಗಿಂತ ಜಾಣನಾಗಿದ್ದಾನೆ.
ಙ್ಞಾನೋಕ್ತಿಗಳು 26 : 17 (KNV)
ಹಾದು ಹೋಗುತ್ತಾ ತನ್ನದಾಗ ದಿರುವ ವ್ಯಾಜ್ಯದಲ್ಲಿ ತಲೆಹಾಕುವವನು ಕಿವಿಹಿಡಿದು ನಾಯಿಯನ್ನು ತೆಗೆದುಕೊಂಡು ಹೋಗುವವನಂತೆ ಇದ್ದಾನೆ.
ಙ್ಞಾನೋಕ್ತಿಗಳು 26 : 18 (KNV)
ನೆರೆಯವನನ್ನು ಮೋಸಗೊಳಿಸಿ ತಮಾಷೆ ಗೋಸ್ಕರ ಮಾಡಿದೆನಲ್ಲಾ ಎನ್ನುವವನು--
ಙ್ಞಾನೋಕ್ತಿಗಳು 26 : 19 (KNV)
ಕೊಳ್ಳಿ ಗಳನ್ನೂ ಅಂಬುಗಳನ್ನೂ ಸಾವನ್ನೂ ಬೀರುವ ದೊಡ್ಡ ಹುಚ್ಚನ ಹಾಗೆ.
ಙ್ಞಾನೋಕ್ತಿಗಳು 26 : 20 (KNV)
ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿ ಹೋಗುತ್ತದೆ--ಹಾಗಯೇ ಚಾಡಿಕೋರನು ಇಲ್ಲ ದಿರುವಲ್ಲಿ ಜಗಳ ಶಮನವಾಗುವದು.
ಙ್ಞಾನೋಕ್ತಿಗಳು 26 : 21 (KNV)
ಕೆಂಡಗಳಿಗೆ ಇದ್ದಲು, ಬೆಂಕಿಗೆ ಕಟ್ಟಿಗೆ; ಹಾಗೆಯೇ ಜಗಳವನ್ನು ಕೆರಳಿಸುವಂತೆ ಕಲಹಮಾಡುವವನು ಇರುವನು.
ಙ್ಞಾನೋಕ್ತಿಗಳು 26 : 22 (KNV)
ಚಾಡಿಕೋರನ ಮಾತುಗಳು ಗಾಯಗಳ ಹಾಗೆ ಹೊಟ್ಟೆಯೊಳಕ್ಕೆ ಇಳಿಯುತ್ತವೆ.
ಙ್ಞಾನೋಕ್ತಿಗಳು 26 : 23 (KNV)
ಉರಿಯುವ ತುಟಿ ಗಳೂ ಕೆಟ್ಟಹೃದಯವೂ ಬೆಳ್ಳಿಯ ಕಿಟ್ಟದಿಂದ ಮುಚ್ಚ ಲ್ಪಟ್ಟ ಬೋಕಿಯಂತೆ ಇದೆ.
ಙ್ಞಾನೋಕ್ತಿಗಳು 26 : 24 (KNV)
ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ.
ಙ್ಞಾನೋಕ್ತಿಗಳು 26 : 25 (KNV)
ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ.
ಙ್ಞಾನೋಕ್ತಿಗಳು 26 : 26 (KNV)
ಯಾವನ ಹಗೆ ತನವು ಮೋಸದಿಂದ ಮುಚ್ಚಲ್ಪಟ್ಟಿದೆಯೋ ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವದು.
ಙ್ಞಾನೋಕ್ತಿಗಳು 26 : 27 (KNV)
ಗುಂಡಿ ಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರಿಗಿ ಹೊರಳುವದು.
ಙ್ಞಾನೋಕ್ತಿಗಳು 26 : 28 (KNV)
ಸುಳ್ಳು ನಾಲಿಗೆಯಿಂದ ಬಾಧಿಸಲ್ಪ ಟ್ಟವರನ್ನೇ ಅದು ಹಗೆಮಾಡುವದು; ಮುಖಸ್ತುತಿ ಮಾಡುವ ಬಾಯಿಯು ನಾಶನವನ್ನುಂಟುಮಾಡುತ್ತದೆ.
❮
❯