ಙ್ಞಾನೋಕ್ತಿಗಳು 21 : 1 (KNV)
ನೀರಿನ ನದಿಗಳಂತೆ ಅರಸನ ಹೃದಯವು ಕರ್ತನ ಕೈಯಲ್ಲಿದೆ; ತನಗೆ ಇಷ್ಟವಾದ ಕಡೆಗೆ ಆತನು ಅದನ್ನು ತಿರುಗಿಸುತ್ತಾನೆ.
ಙ್ಞಾನೋಕ್ತಿಗಳು 21 : 2 (KNV)
ತನ್ನ ದೃಷ್ಟಿ ಯಲ್ಲಿ ಮನುಷ್ಯನ ಪ್ರತಿಯೊಂದು ಮಾರ್ಗವು ಸರಿ ಯಾಗಿದೆ; ಕರ್ತನು ಹೃದಯಗಳನ್ನು ಪರೀಕ್ಷಿಸುತ್ತಾನೆ.
ಙ್ಞಾನೋಕ್ತಿಗಳು 21 : 3 (KNV)
ಯಜ್ಞಕ್ಕಿಂತ ನೀತಿನ್ಯಾಯಗಳನ್ನು ನಡಿಸುವದು ಕರ್ತ ನಿಗೆ ಎಷ್ಟೋ ಮೆಚ್ಚಿಕೆಯಾಗಿದೆ.
ಙ್ಞಾನೋಕ್ತಿಗಳು 21 : 4 (KNV)
ಹೆಮ್ಮೆಯ ದೃಷ್ಟಿ, ಗರ್ವದ ಹೃದಯ, ದುಷ್ಟರ ಉಳುವಿಕೆ ಪಾಪವೇ.
ಙ್ಞಾನೋಕ್ತಿಗಳು 21 : 5 (KNV)
ಶ್ರದ್ಧೆಯುಳ್ಳ ಯೋಚನೆಗಳು ಸಮ್ಮದ್ಧಿಗೆ ಒಲಿಯುತ್ತವೆ; ಆತುರಪಡುವ ಪ್ರತಿಯೊಬ್ಬನ ಯೋಚನೆಗಳು ಕೊರ ತೆಗೆ ಉಳಿಯುತ್ತವೆ.
ಙ್ಞಾನೋಕ್ತಿಗಳು 21 : 6 (KNV)
ಸುಳ್ಳಿನ ನಾಲಿಗೆಯಿಂದ ಸಂಪಾ ದಿಸುವ ಸಂಪತ್ತು ಮೃತ್ಯುವನ್ನು ಹುಡುಕುವವರಿಂದ ಬಡಿಯಲ್ಪಟ್ಟ ವ್ಯರ್ಥತ್ವವಾಗಿದೆ.
ಙ್ಞಾನೋಕ್ತಿಗಳು 21 : 7 (KNV)
ದುಷ್ಟರ ಸೂರೆಯು ಅವರನ್ನು ನಾಶಪಡಿಸುವದು; ನ್ಯಾಯವಾದದ್ದನ್ನು ಮಾಡುವದನ್ನು ಅವರು ನಿರಾಕರಿಸುತ್ತಾರೆ.
ಙ್ಞಾನೋಕ್ತಿಗಳು 21 : 8 (KNV)
ಮನುಷ್ಯನ ಮಾರ್ಗವು ಡೊಂಕು ಮತ್ತು ಅಪರಿಚಿತ; ಪವಿತ್ರನಿ ಗಾದರೋ ಅವನ ಕ್ರಿಯೆಯು ಸರಳ.
ಙ್ಞಾನೋಕ್ತಿಗಳು 21 : 9 (KNV)
ವಿಶಾಲವಾದ ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವದಕ್ಕಿಂತ ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವದು ಲೇಸು.
ಙ್ಞಾನೋಕ್ತಿಗಳು 21 : 10 (KNV)
ದುಷ್ಟರ ಮನಸ್ಸು ಕೇಡನ್ನು ಅಪೇಕ್ಷಿಸುತ್ತದೆ; ಅವನ ದೃಷ್ಟಿಯಲ್ಲಿ ತನ್ನ ನೆರೆಯವನು ಯಾವ ದಯೆ ಯನ್ನು ಕಂಡುಕೊಳ್ಳುವದಿಲ್ಲ.
ಙ್ಞಾನೋಕ್ತಿಗಳು 21 : 11 (KNV)
ಪರಿಹಾಸ್ಯಕರನ್ನು ಶಿಕ್ಷಿಸಿ ದರೆ ಬುದ್ಧಿಹೀನರು ಜ್ಞಾನವಂತರಾಗುವರು; ಜ್ಞಾನಿಯು ಶಿಕ್ಷಣ ಹೊಂದಿದರೆ ಅವನು ತಿಳುವಳಿಕೆಯನ್ನು ಹೊಂದು ತ್ತಾನೆ.
ಙ್ಞಾನೋಕ್ತಿಗಳು 21 : 12 (KNV)
ನೀತಿವಂತನು ದುಷ್ಟನ ಮನೆಯನ್ನು ಬುದ್ಧಿ ಯಿಂದ ಲಕ್ಷಿಸುತ್ತಾನೆ; ಅವರ ದುಷ್ಟತನಕ್ಕಾಗಿ ದೇವರು ಅವರನ್ನು ಕೆಡವುತ್ತಾನೆ.
ಙ್ಞಾನೋಕ್ತಿಗಳು 21 : 13 (KNV)
ಬಡವರ ಕೂಗಿಗೆ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವವನು ತಾನು ಕೂಗಿದಾಗ ಯಾರೂ ಅವನಿಗೆ ಉತ್ತರಕೊಡುವದಿಲ್ಲ.
ಙ್ಞಾನೋಕ್ತಿಗಳು 21 : 14 (KNV)
ಗುಪ್ತ ಲಂಚವು ಕೋಪವನ್ನು ಅಡಗಿಸುವದು; ಎದೆಯಲ್ಲಿ ಕೊಟ್ಟ ಬಹುಮಾನವು ರೌದ್ರವನ್ನು ಆರಿಸುತ್ತದೆ.
ಙ್ಞಾನೋಕ್ತಿಗಳು 21 : 15 (KNV)
ನ್ಯಾಯತೀರಿಸುವದು ನೀತಿವಂತರಿಗೆ ಸಂತೋಷವಾ ಗಿದೆ; ಅಕ್ರಮವನ್ನು ಮಾಡುವವರಿಗೆ ನಾಶನ.
ಙ್ಞಾನೋಕ್ತಿಗಳು 21 : 16 (KNV)
ವಿವೇ ಕದ ಮಾರ್ಗವನ್ನು ಬಿಟ್ಟು, ತಿರುಗುವವನು ಸತ್ತವರ ಕೂಟದಲ್ಲಿ ಇರುವಂಥವನಾಗಿದ್ದಾನೆ.
ಙ್ಞಾನೋಕ್ತಿಗಳು 21 : 17 (KNV)
ಭೋಗಾಸ ಕ್ತನು ಕೊರತೆಪಡುವನು; ದ್ರಾಕ್ಷಾರಸವನ್ನೂ ತೈಲವನ್ನೂ ಅಪೇಕ್ಷಿಸುವವನು ನಿರ್ಭಾಗ್ಯನಾಗುವನು.
ಙ್ಞಾನೋಕ್ತಿಗಳು 21 : 18 (KNV)
ನೀತಿ ವಂತರಿಗಾಗಿ ದುಷ್ಟರೂ ಯಥಾರ್ಥವಂತರಿಗಾಗಿ ದೋಷಕರೂ ಈಡಾಗುವರು.
ಙ್ಞಾನೋಕ್ತಿಗಳು 21 : 19 (KNV)
ಕಾಡುವ ಕೋಪವುಳ್ಳ ಸ್ತ್ರೀಯೊಂದಿಗೆ ವಾಸಮಾಡುವದಕ್ಕಿಂತ ಅಡವಿಯಲ್ಲಿ ವಾಸಿಸುವದು ಲೇಸು.
ಙ್ಞಾನೋಕ್ತಿಗಳು 21 : 20 (KNV)
ಜ್ಞಾನವಂತರ ನಿವಾಸದಲ್ಲಿ ಅಪೇಕ್ಷಿಸತಕ್ಕ ಐಶ್ವರ್ಯವೂ ಎಣ್ಣೆಯೂ ಇರುತ್ತವೆ; ಬುದ್ಧಿಹೀನನು ಇದ್ದದ್ದನ್ನು ಖರ್ಚು ಮಾಡುತ್ತಾನೆ.
ಙ್ಞಾನೋಕ್ತಿಗಳು 21 : 21 (KNV)
ನೀತಿಯನ್ನೂ ಕರುಣೆಯನ್ನೂ ಹಿಂಬಾಲಿಸುವವನು; ಜೀವವನ್ನೂ ನೀತಿಯನ್ನೂ ಕೀರ್ತಿಯನ್ನೂ ಕಂಡು ಕೊಳ್ಳುತ್ತಾನೆ.
ಙ್ಞಾನೋಕ್ತಿಗಳು 21 : 22 (KNV)
ಜ್ಞಾನಿಯು ಬಲಿಷ್ಠರ ಪಟ್ಟಣವನ್ನು ಹತ್ತಿ ಅದರಲ್ಲಿ ಭರವಸವಿಟ್ಟು ಬಲವನ್ನು ಕೆಡವಿ ಹಾಕು ತ್ತಾನೆ.
ಙ್ಞಾನೋಕ್ತಿಗಳು 21 : 23 (KNV)
ತನ್ನ ಬಾಯಿಯನ್ನು ನಾಲಿಗೆಯನ್ನು ಕಾಯುವ ವನು ಇಕ್ಕಟ್ಟುಗಳಿಂದ ತನ್ನ ಪ್ರಾಣವನ್ನು ಕಾಪಾಡಿ ಕೊಳ್ಳುತ್ತಾನೆ.
ಙ್ಞಾನೋಕ್ತಿಗಳು 21 : 24 (KNV)
ಸೊಕ್ಕೇರಿದ ಗರ್ವದಲ್ಲಿ ವರ್ತಿಸುವ ವನ ಹೆಸರು ಅಹಂಕಾರಿ ಮತ್ತು ಪರಿಹಾಸ್ಯಕನು.
ಙ್ಞಾನೋಕ್ತಿಗಳು 21 : 25 (KNV)
ಸೋಮಾರಿಯ ಆಶೆಯು ಅವನನ್ನು ಕೊಲ್ಲುತ್ತವೆ. ಅವನ ಕೈಗಳು ದುಡಿಯುವದಕ್ಕೆ ನಿರಾಕರಿಸುತ್ತವೆ.
ಙ್ಞಾನೋಕ್ತಿಗಳು 21 : 26 (KNV)
ದಿನವೆಲ್ಲಾ ಅವನು ದುರಾಶೆಯಿಂದ ಆಶಿಸುತ್ತಾನೆ; ಆದರೆ ನೀತಿವಂತನು ಹಿಂತೆಗೆಯದೇ ಕೊಡುತ್ತಾನೆ.
ಙ್ಞಾನೋಕ್ತಿಗಳು 21 : 27 (KNV)
ದುಷ್ಟರ ಯಜ್ಞವು ಅಸಹ್ಯ; ಹೀಗಾದರೆ ದುರ್ಬುದ್ಧಿ ಯಿಂದ ಅದನ್ನು ಅರ್ಪಿಸಿದರೆ ಇನ್ನೂ ಎಷ್ಟೋ ಅಸಹ್ಯ ಕರವಾಗಿದೆ.
ಙ್ಞಾನೋಕ್ತಿಗಳು 21 : 28 (KNV)
ಸುಳ್ಳುಸಾಕ್ಷಿಯವನು ನಾಶವಾಗುವನು; ಕೇಳುವವನು ಬಿಡದೆ ಮಾತಾಡುವನು.
ಙ್ಞಾನೋಕ್ತಿಗಳು 21 : 29 (KNV)
ದುಷ್ಟನು ತನ್ನ ಮುಖವನ್ನು ಕಠಿಣಮಾಡಿಕೊಳ್ಳುತ್ತಾನೆ; ಯಥಾ ರ್ಥವಂತನಾದರೋ ತನ್ನ ಮಾರ್ಗವನ್ನು ಸರಿಪಡಿಸಿ ಕೊಳ್ಳುತ್ತಾನೆ.
ಙ್ಞಾನೋಕ್ತಿಗಳು 21 : 30 (KNV)
ಕರ್ತನಿಗೆ ವಿರೋಧವಾಗಿ ಯಾವ ಜ್ಞಾನವೂ ವಿವೇಕವೂ ಆಲೋಚನೆಯೂ ಇಲ್ಲ.
ಙ್ಞಾನೋಕ್ತಿಗಳು 21 : 31 (KNV)
ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ.
❮
❯