ಙ್ಞಾನೋಕ್ತಿಗಳು 2 : 1 (KNV)
ನನ್ನ ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಬಚ್ಚಿಟ್ಟುಕೊಂಡರೆ
ಙ್ಞಾನೋಕ್ತಿಗಳು 2 : 2 (KNV)
ನೀನು ಜ್ಞಾನಕ್ಕೆ ಕಿವಿಗೊಡು ವಂತೆಯೂ ತಿಳುವಳಿಕೆಗೆ ನಿನ್ನ ಹೃದಯವನ್ನು ತಿರು ಗಿಸುವಂತೆಯೂ
ಙ್ಞಾನೋಕ್ತಿಗಳು 2 : 3 (KNV)
ಹೌದು, ತಿಳುವಳಿಕೆಗಾಗಿ ಮೊರೆ ಯಿಟ್ಟು ವಿವೇಕಕ್ಕಾಗಿ ನಿನ್ನ ಸ್ವರವನ್ನು ಎತ್ತಿ
ಙ್ಞಾನೋಕ್ತಿಗಳು 2 : 4 (KNV)
ಬೆಳ್ಳಿ ಯಂತೆ ನೀನು ಅದನ್ನು ಹುಡುಕಿ ಬಚ್ಚಿಡಲ್ಪಟ್ಟ ಸಂಪ ತ್ತಿನಂತೆ ಅದಕ್ಕಾಗಿ ಹುಡುಕಿದರೆ,
ಙ್ಞಾನೋಕ್ತಿಗಳು 2 : 5 (KNV)
ನೀನು ಕರ್ತನ ಭಯವನ್ನು ತಿಳಿದುಕೊಳ್ಳುವಿ. ದೇವರ ಜ್ಞಾನವನ್ನು ಕಂಡುಕೊಳ್ಳುವಿ.
ಙ್ಞಾನೋಕ್ತಿಗಳು 2 : 6 (KNV)
ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.
ಙ್ಞಾನೋಕ್ತಿಗಳು 2 : 7 (KNV)
ನೀತಿವಂತರಿಗೋಸ್ಕರ ಆತನು ಸುಜ್ಞಾನವನ್ನು ಕೂಡಿಸುವನು. ಯಥಾರ್ಥದಿಂದ ನಡೆದುಕೊಳ್ಳುವವರಿಗೆ ಆತನು ಗುರಾಣಿಯಾಗಿದ್ದಾನೆ.
ಙ್ಞಾನೋಕ್ತಿಗಳು 2 : 8 (KNV)
ತೀರ್ಪಿನ ದಾರಿಗಳನ್ನು ಆತನು ಕಾಯುತ್ತಾನೆ. ತನ್ನ ಪರಿಶುದ್ಧರ ಮಾರ್ಗವನ್ನು ಭದ್ರಪಡಿಸುತ್ತಾನೆ.
ಙ್ಞಾನೋಕ್ತಿಗಳು 2 : 9 (KNV)
ಆಗ ನೀನು ನ್ಯಾಯವನ್ನೂ ತೀರ್ಪನ್ನೂ ನೀತಿಯನ್ನೂ ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದು ಕೊಳ್ಳುವಿ.
ಙ್ಞಾನೋಕ್ತಿಗಳು 2 : 10 (KNV)
ನಿನ್ನ ಹೃದಯದಲ್ಲಿ ಜ್ಞಾನವು ಪ್ರವೇಶಿ ಸಿದಾಗ ನಿನ್ನ ಪ್ರಾಣಕ್ಕೆ ತಿಳುವಳಿಕೆಯು ಅಂದವಾಗಿರು ವದು.
ಙ್ಞಾನೋಕ್ತಿಗಳು 2 : 11 (KNV)
ವಿವೇಕವು ನಿನ್ನನ್ನು ಭದ್ರವಾಗಿ ಕಾಯುತ್ತದೆ; ತಿಳುವಳಿಕೆಯು ನಿನ್ನನ್ನು ಕಾಪಾಡುವದು;
ಙ್ಞಾನೋಕ್ತಿಗಳು 2 : 12 (KNV)
ಕೆಡುಕನ ಮಾರ್ಗದಿಂದ ಮೂರ್ಖನ ಮಾತುಗಳಿಂದ
ಙ್ಞಾನೋಕ್ತಿಗಳು 2 : 13 (KNV)
ಕತ್ತ ಲೆಯ ಮಾರ್ಗಗಳಲ್ಲಿ ನಡೆಯುವದಕ್ಕೆ ಯಥಾರ್ಥ ತೆಯ ದಾರಿಗಳನ್ನು ತೊರೆದುಬಿಡುವದರಿಂದ
ಙ್ಞಾನೋಕ್ತಿಗಳು 2 : 14 (KNV)
ಕೆಟ್ಟ ದ್ದನ್ನು ಮಾಡುವದಕ್ಕೆ ಸಂತೋಷಿಸಿ ದುಷ್ಟರ ಮೂರ್ಖ ತನದಲ್ಲಿ ಆನಂದಿಸುವದರಿಂದ ನಿನ್ನನ್ನು ತಪ್ಪಿಸುವದು.
ಙ್ಞಾನೋಕ್ತಿಗಳು 2 : 15 (KNV)
ಅವರ ಮಾರ್ಗಗಳು ವಕ್ರವಾಗಿವೆ. ತಮ್ಮ ಮಾರ್ಗ ಗಳಲ್ಲಿ ಅವರು ಮೂರ್ಖರಾಗಿದ್ದಾರೆ.
ಙ್ಞಾನೋಕ್ತಿಗಳು 2 : 16 (KNV)
ಪರಸ್ತ್ರೀ ಯಿಂದ ಅಂದರೆ ತನ್ನ ಮಾತುಗಳಿಂದ ಮುಖಸ್ತುತಿ ಮಾಡುವ ಸ್ತ್ರೀಯಿಂದ ತನ್ನ ದೇವರ ಒಡಂಬಡಿಕೆ ಯನ್ನು ಮರೆತು
ಙ್ಞಾನೋಕ್ತಿಗಳು 2 : 17 (KNV)
ತನ್ನ ಯೌವನ ಕಾಲದ ಸಂಗಾತಿ ಯನ್ನು ತ್ಯಜಿಸುವವಳಿಂದ ಅದು ನಿನ್ನನ್ನು ತಪ್ಪಿಸುವದು.
ಙ್ಞಾನೋಕ್ತಿಗಳು 2 : 18 (KNV)
ಅವಳ ಮನೆಯು ಮರಣದ ಕಡೆಗೆ, ಅವಳ ದಾರಿ ಗಳು ಮೃತರ ಕಡೆಗೆ ಇಳಿಸುತ್ತವೆ.
ಙ್ಞಾನೋಕ್ತಿಗಳು 2 : 19 (KNV)
ಅವಳ ಬಳಿಗೆ ಹೋಗುವ ಯಾವನೂ ಹಿಂತಿರುಗುವದಿಲ್ಲ, ಇಲ್ಲವೆ ಜೀವದ ಮಾರ್ಗಗಳನ್ನು ಅವನು ಹಿಡಿಯುವದೇ ಇಲ್ಲ.
ಙ್ಞಾನೋಕ್ತಿಗಳು 2 : 20 (KNV)
ಒಳ್ಳೆಯವರ ಮಾರ್ಗದಲ್ಲಿ ನೀನು ನಡೆಯು ವಂತೆಯೂ ನೀತಿವಂತರ ದಾರಿಗಳನ್ನು ನೀನು ಹಿಡಿಯು ವಂತೆಯೂ ಅದು ನಿನ್ನನ್ನು ನಡಿಸುವದು.
ಙ್ಞಾನೋಕ್ತಿಗಳು 2 : 21 (KNV)
ಯಥಾ ರ್ಥವಂತರು ದೇಶದಲ್ಲಿ ವಾಸಿಸುವರು. ಸಂಪೂರ್ಣರು ಅದರಲ್ಲಿ ನೆಲೆಯಾಗಿ ಇರುವರು.ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲ್ಪಡುವರು, ಅಪರಾಧಿ ಗಳು ಬೇರು ಸಹಿತವಾಗಿ ಅದರಿಂದ ಕೀಳಲ್ಪಡುವರು.
ಙ್ಞಾನೋಕ್ತಿಗಳು 2 : 22 (KNV)
ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲ್ಪಡುವರು, ಅಪರಾಧಿ ಗಳು ಬೇರು ಸಹಿತವಾಗಿ ಅದರಿಂದ ಕೀಳಲ್ಪಡುವರು.

1 2 3 4 5 6 7 8 9 10 11 12 13 14 15 16 17 18 19 20 21 22

BG:

Opacity:

Color:


Size:


Font: