ಙ್ಞಾನೋಕ್ತಿಗಳು 17 : 1 (KNV)
ವಿವಾದದೊಂದಿಗೆ ಬಲಿಗಳಿಂದ ತುಂಬಿದ ಮನೆಗಿಂತ ಸಮಾಧಾನದ ಒಣತುತ್ತೇ ಮೇಲು.
ಙ್ಞಾನೋಕ್ತಿಗಳು 17 : 2 (KNV)
ನಾಚಿಕೆಪಡಿಸುವ ಮಗನ ಮೇಲೆ ಜ್ಞಾನಿ ಯಾದ ಸೇವಕನು ಆಳುವವನಾಗಿ ಸಹೋದರರಲ್ಲಿ ಬಾಧ್ಯತೆಗೆ ಪಾಲುಗಾರನಾಗುವನು.
ಙ್ಞಾನೋಕ್ತಿಗಳು 17 : 3 (KNV)
ಬೆಳ್ಳಿ ಬಂಗಾರ ಗಳನ್ನು ಪುಟ ಕುಲುಮೆಗಳು ಶೋಧಿಸುವವು, ಕರ್ತನು ಹೃದಯಗಳನ್ನು ಶೋಧಿಸುತ್ತಾನೆ.
ಙ್ಞಾನೋಕ್ತಿಗಳು 17 : 4 (KNV)
ಕೇಡು ಮಾಡುವ ವನು ಕೆಟ್ಟ ತುಟಿಗಳಿಗೆ ಕಿವಿಗೊಡುತ್ತಾನೆ; ಸುಳ್ಳುಗಾರನು ನೀಚವಾದ ನಾಲಿಗೆಗೆ ಕಿವಿಗೊಡುವನು;
ಙ್ಞಾನೋಕ್ತಿಗಳು 17 : 5 (KNV)
ಬಡವರನ್ನು ಹಾಸ್ಯಮಾಡುವವನು ತನ್ನ ಸೃಷ್ಟಿ ಕರ್ತ ನನ್ನೇ ನಿಂದಿಸುತ್ತಾನೆ; ವಿಪತ್ತುಗಳಿಗೆ ಸಂತೋಷಿಸು ವವನು ಶಿಕ್ಷೆಯನ್ನು ಹೊಂದಲೇಬೇಕು.
ಙ್ಞಾನೋಕ್ತಿಗಳು 17 : 6 (KNV)
ಮಕ್ಕಳ ಮಕ್ಕಳು ವೃದ್ಧರಿಗೆ ಕಿರೀಟ; ಮಕ್ಕಳ ಭೂಷಣವು ಅವರ ತಂದೆ ಗಳೇ.
ಙ್ಞಾನೋಕ್ತಿಗಳು 17 : 7 (KNV)
ಬುದ್ಧಿಹೀನನಿಗೆ ಉತ್ತಮವಾದ ನುಡಿಯುಕ್ತ ವಲ್ಲ; ರಾಜಪುತ್ರನಿಗೆ ಸುಳ್ಳಾಡುವ ತುಟಿಗಳು ಇನ್ನೂ ಎಷ್ಟೋ ಹೆಚ್ಚಾಗಿ ಯುಕ್ತವಲ್ಲ.
ಙ್ಞಾನೋಕ್ತಿಗಳು 17 : 8 (KNV)
ತಕ್ಕೊಳ್ಳುವವನ ಕಣ್ಣುಗಳಿಗೆ ಲಂಚವು ಬೆಲೆಯುಳ್ಳ ಕಲ್ಲಿನಂತಿದೆ; ಅದನ್ನು ಹೇಗೆ ತಿರುಗಿಸಿದರೂ ಅಭಿವೃದ್ಧಿಯಾಗುತ್ತದೆ.
ಙ್ಞಾನೋಕ್ತಿಗಳು 17 : 9 (KNV)
ದೋಷ ವನ್ನು ಮುಚ್ಚುವವನು ಪ್ರೀತಿಯನ್ನು ಹುಡುಕುತ್ತಾನೆ, ಸಂಗತಿಯನ್ನು ಎತ್ತಿ ಆಡುವವನು ಸ್ನೇಹಿತರನ್ನು ಪ್ರತ್ಯೇ ಕಿಸುತ್ತಾನೆ.
ಙ್ಞಾನೋಕ್ತಿಗಳು 17 : 10 (KNV)
ಬುದ್ಧಿಹೀನನಿಗೆ ನೂರು ಪೆಟ್ಟುಗಳಿಗಿಂತ ಜ್ಞಾನಿಗೆ ಒಂದು ಗದರಿಕೆಯ ಮಾತು ಹೆಚ್ಚಾಗಿ ನಾಟು ತ್ತದೆ.
ಙ್ಞಾನೋಕ್ತಿಗಳು 17 : 11 (KNV)
ಕೆಟ್ಟವನು ದಂಗೆಯನ್ನೇ ಹುಡುಕುತ್ತಾನೆ; ಆದ ಕಾರಣ ಕ್ರೂರ ಸೇವಕನು ಅವನಿಗೆ ವಿರೋಧವಾಗಿ ಕಳುಹಿಸಲ್ಪಡುವನು.
ಙ್ಞಾನೋಕ್ತಿಗಳು 17 : 12 (KNV)
ಮೂರ್ಖತನದಲ್ಲಿ ಮುಳುಗಿ ರುವ ಮೂಢನಿಗೆ ಎದುರಾಗುವದಕ್ಕಿಂತಲೂ ಮರಿಗ ಳನ್ನು ಕಳೆದುಕೊಂಡ ಕರಡಿಗೆ ಎದುರಾಗುವದು ಲೇಸು.
ಙ್ಞಾನೋಕ್ತಿಗಳು 17 : 13 (KNV)
ಉಪಕಾರಕ್ಕೆ ಅಪಕಾರವನ್ನು ಮಾಡುವವನ ಮನೆ ಯಿಂದ ಕೇಡು ತೊಲಗುವದೇ ಇಲ್ಲ.
ಙ್ಞಾನೋಕ್ತಿಗಳು 17 : 14 (KNV)
ಒಬ್ಬನು ನೀರನ್ನು ಹೊರಬಿಡುವಂತೆ ಕಲಹದ ಪ್ರಾರಂಭವು ಇರುವದು. ಆದಕಾರಣ ಆ ಕಲಹಕ್ಕೆ ಕೈ ಹಾಕುವದಕ್ಕಿಂತ ಮುಂಚೆ ಅದನ್ನು ಬಿಟ್ಟುಬಿಡು.
ಙ್ಞಾನೋಕ್ತಿಗಳು 17 : 15 (KNV)
ದುಷ್ಟರನ್ನು ನೀತಿ ವಂತರೆಂದು ನಿರ್ಣಯಿಸುವವನೂ ನೀತಿವಂತನನ್ನು ದಂಡನೆಗೆ ಗುರಿಮಾಡುವವನೂ ಇವರಿಬ್ಬರೂ ಕರ್ತ ನಿಗೆ ಅಸಹ್ಯರು.
ಙ್ಞಾನೋಕ್ತಿಗಳು 17 : 16 (KNV)
ಬುದ್ಧಿಹೀನನಿಗೆ ಮನಸ್ಸಿಲ್ಲದೆ ಇರು ವದರಿಂದ ಜ್ಞಾನವನ್ನು ಸಂಪಾದಿಸುವದಕ್ಕೆ ಅವನ ಕೈಯಲ್ಲಿ ಕ್ರಯ ಯಾಕೆ?
ಙ್ಞಾನೋಕ್ತಿಗಳು 17 : 17 (KNV)
ಸ್ನೇಹಿತನು ಎಲ್ಲಾ ಸಮ ಯಗಳಲ್ಲಿ ಪ್ರೀತಿಸುತ್ತಾನೆ; ಇಕ್ಕಟ್ಟಿಗೋಸ್ಕರ ಸಹೋ ದರನು ಹುಟ್ಟಿದ್ದಾನೆ.
ಙ್ಞಾನೋಕ್ತಿಗಳು 17 : 18 (KNV)
ವಿವೇಕವಿಲ್ಲದವನು ಕೈ ಮೇಲೆ ಹೊಡೆದು ತನ್ನ ಸ್ನೇಹಿತನ ಎದುರಿನಲ್ಲಿ ಹೊಣೆ ಯಾಗುತ್ತಾನೆ.
ಙ್ಞಾನೋಕ್ತಿಗಳು 17 : 19 (KNV)
ಕಲಹವನ್ನು ಪ್ರೀತಿಮಾಡುವವನು ದೋಷವನ್ನು ಪ್ರೀತಿಮಾಡುತ್ತಾನೆ; ತನ್ನ ದ್ವಾರವನ್ನು ಹೆಚ್ಚಿಸಿಕೊಳ್ಳುವವನು ನಾಶನವನ್ನು ಹುಡುಕುತ್ತಾನೆ.
ಙ್ಞಾನೋಕ್ತಿಗಳು 17 : 20 (KNV)
ಮೂರ್ಖ ಹೃದಯವುಳ್ಳವನು ಒಳ್ಳೇದನ್ನು ಪಡೆ ಯನು; ಕೆಟ್ಟನಾಲಿಗೆಯುಳ್ಳವನು ಹಾನಿಗೆ ಬೀಳುವನು.
ಙ್ಞಾನೋಕ್ತಿಗಳು 17 : 21 (KNV)
ಬುದ್ಧಿಹೀನನನ್ನು ಹೆತ್ತವನಿಗೆ ವ್ಯಥೆ; ಬುದ್ಧಿಹೀನನ ತಂದೆಗೆ ಸಂತೋಷವಿರುವದಿಲ್ಲ.
ಙ್ಞಾನೋಕ್ತಿಗಳು 17 : 22 (KNV)
ಹರ್ಷ ಹೃದಯನು ಔಷಧದಂತೆ ಒಳ್ಳೇದು ಮಾಡುತ್ತಾನೆ; ಕುಗ್ಗಿದ ಮನಸ್ಸು ಎಲುಬುಗಳನ್ನು ಒಣಗಿಸುತ್ತದೆ.
ಙ್ಞಾನೋಕ್ತಿಗಳು 17 : 23 (KNV)
ನ್ಯಾಯದ ಮಾರ್ಗ ಗಳನ್ನು ತಿರುಗಿಸಿಬಿಡುವದಕ್ಕೆ ದುಷ್ಟನು ಎದೆಯಿಂದ ಲಂಚವನ್ನು ತೆಗೆದುಕೊಳ್ಳುತ್ತಾನೆ.
ಙ್ಞಾನೋಕ್ತಿಗಳು 17 : 24 (KNV)
ವಿವೇಕಿಯ ಮುಂದೆ ಜ್ಞಾನವಿದೆ; ಬುದ್ಧಿಹೀನನ ಕಣ್ಣುಗಳು ಭೂಮಿಯ ಅಂತ್ಯಗಳಲ್ಲಿ ಇರುವವು.
ಙ್ಞಾನೋಕ್ತಿಗಳು 17 : 25 (KNV)
ಬುದ್ಧಿಹೀನ ನಾದ ಮಗನು ತನ್ನ ತಂದೆಗೆ ದುಃಖವೂ ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ.
ಙ್ಞಾನೋಕ್ತಿಗಳು 17 : 26 (KNV)
ನೀತಿವಂತನನ್ನು ಶಿಕ್ಷಿಸುವದು ಇಲ್ಲವೆ ಅಕ್ರಮಕ್ಕಾಗಿ ರಾಜಪುತ್ರರನ್ನು ಹೊಡೆಯುವದು ಯುಕ್ತವಲ್ಲ.
ಙ್ಞಾನೋಕ್ತಿಗಳು 17 : 27 (KNV)
ತಿಳುವಳಿಕೆಯುಳ್ಳ ವನು ಮಿತವಾಗಿ ಮಾತನಾಡುತ್ತಾನೆ; ವಿವೇಕಿಯು ಶ್ರೇಷ್ಠವಾದ ಆತ್ಮವುಳ್ಳವನಾಗಿದ್ದಾನೆ.
ಙ್ಞಾನೋಕ್ತಿಗಳು 17 : 28 (KNV)
ಬುದ್ಧಿಹೀನನು ಮೌನವಾಗಿದ್ದರೆ ಜ್ಞಾನಿಯೆಂದು ಎಣಿಸಲ್ಪಡುವನು; ತನ್ನ ತುಟಿಗಳನ್ನು ಬಿಗಿ ಹಿಡಿಯುವವನು ವಿವೇಕಿಯೆಂದು ಅನ್ನಿಸಿಕೊಳ್ಳುವನು.
❮
❯