ಫಿಲಿಪ್ಪಿಯವರಿಗೆ 3 : 1 (KNV)
ಕಡೇದಾಗಿ ನನ್ನ ಸಹೋದರರೇ, ಕರ್ತ ನಲ್ಲಿ ಸಂತೋಷಪಡಿರಿ. ತಿರಿಗಿ ನಿಮಗೆ ಬರೆಯುವದರಲ್ಲಿ ನನಗೇನೂ ಬೇಸರವಿಲ್ಲ; ನಿಮ್ಮನ್ನಾ ದರೋ ಅದು ಭದ್ರಪಡಿಸುವದು.
ಫಿಲಿಪ್ಪಿಯವರಿಗೆ 3 : 2 (KNV)
ನಾಯಿಗಳಿಗೆ ಎಚ್ಚರಿಕೆಯಾಗಿರ್ರಿ; ದುಷ್ಟ ಕೆಲಸದವರಿಗೆ ಎಚ್ಚರಿಕೆ ಯಾಗಿರ್ರಿ. ಅಂಗಚ್ಛೇದನೆಯ ವಿಷಯದಲ್ಲಿ ಎಚ್ಚರಿಕೆ ಯಾಗಿರ್ರಿ.
ಫಿಲಿಪ್ಪಿಯವರಿಗೆ 3 : 3 (KNV)
ಆತ್ಮದಲ್ಲಿ ದೇವರನ್ನು ಆರಾಧಿಸುವವರೂ ಕ್ರಿಸ್ತ ಯೇಸುವಿನಲ್ಲಿ ಸಂತೋಷಿಸುವವರೂ ಶರೀರದಲ್ಲಿ ಭರವಸೆಯಿಲ್ಲದವರೂ ಆದ ನಾವೇ ಸುನ್ನತಿಯವರಾಗಿ ದ್ದೇವೆ.
ಫಿಲಿಪ್ಪಿಯವರಿಗೆ 3 : 4 (KNV)
ನಾನಾದರೋ ಶರೀರ ಸಂಬಂಧವಾದವು ಗಳಲ್ಲಿ ಭರವಸವಿಟ್ಟರೂ ಇಡಬಹುದು, ಬೇರೆ ಯಾವ ನಾದರೂ ಶರೀರ ಸಂಬಂಧವಾದವುಗಳಲ್ಲಿ ಭರವಸವಿಡ ಬಹುದೆಂದು ಯೋಚಿಸುವದಾದರೆ ನಾನು ಅವನಿ ಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು.
ಫಿಲಿಪ್ಪಿಯವರಿಗೆ 3 : 5 (KNV)
ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು; ನಾನು ಇಸ್ರಾಯೇಲ್ ವಂಶದವನು, ಬೆನ್ಯಾವಿಾನನ ಕುಲದವನು, ಇಬ್ರಿಯರಿಂದ ಹುಟ್ಟಿದ ಇಬ್ರಿಯನು; ನ್ಯಾಯಪ್ರಮಾಣವನ್ನು ನೋಡಿದರೆ ನಾನು ಫರಿಸಾ ಯನು;
ಫಿಲಿಪ್ಪಿಯವರಿಗೆ 3 : 6 (KNV)
ಆಸಕ್ತಿಯನ್ನು ನೋಡಿದರೆ ನಾನು ಸಭೆಯ ಹಿಂಸಕನು, ನ್ಯಾಯಪ್ರಮಾಣದಲ್ಲಿ ಹೇಳಿರುವ ನೀತಿ ಯನ್ನು ನೋಡಿದರೆ ನಾನು ನಿರ್ದೋಷಿ.
ಫಿಲಿಪ್ಪಿಯವರಿಗೆ 3 : 7 (KNV)
ಆದರೆ ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ.
ಫಿಲಿಪ್ಪಿಯವರಿಗೆ 3 : 8 (KNV)
ಹೌದು, ನಿಸ್ಸಂದೇಹವಾಗಿ ನನ್ನ ಕರ್ತನಾದ ಕ್ರಿಸ್ತ ಯೇಸುವಿನ ವಿಷಯವಾಗಿರುವ ಅತಿ ಶ್ರೇಷ್ಟವಾದ ಜ್ಞಾನದ ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಸಂಪಾದಿಸಿ ಕೊಳ್ಳಬೇಕೆಂದು ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.
ಫಿಲಿಪ್ಪಿಯವರಿಗೆ 3 : 9 (KNV)
ನಾನು ಕ್ರಿಸ್ತನಲ್ಲಿರುವ ವನಾಗಿ ಕಾಣಿಸಿಕೊಳ್ಳಬೇಕೆಂದು ನ್ಯಾಯಪ್ರಮಾಣ ದಿಂದಾಗುವ ಸ್ವನೀತಿಯನ್ನಾಶ್ರಯಿಸದೆ ಆತನನ್ನು ನಂಬು ವದರಿಂದ ದೊರಕುವಂಥ ಅಂದರೆ ನಂಬಿಕೆಯ ಆಧಾರ ದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ದ್ದೇನೆ.
ಫಿಲಿಪ್ಪಿಯವರಿಗೆ 3 : 10 (KNV)
ಹೀಗೆ ಆತನನ್ನೂ ಆತನ ಪುನರುತ್ಥಾನ ದಲ್ಲಿರುವ ಶಕ್ತಿಯನ್ನೂ ಆತನ ಬಾಧೆಗಳಲ್ಲಿ ಪಾಲುಗಾರ ನಾಗುವದನ್ನೂ ತಿಳಿದುಕೊಂಡು ಆತನ ಮರಣಕ್ಕೆ ಸರೂಪನಾಗುವೆನು.
ಫಿಲಿಪ್ಪಿಯವರಿಗೆ 3 : 11 (KNV)
ಹೇಗಾದರೂ ಸತ್ತವರಿಗೆ ಆಗುವ ಪುನರುತ್ಥಾನವು ನನಗೆ ಆದೀತು.
ಫಿಲಿಪ್ಪಿಯವರಿಗೆ 3 : 12 (KNV)
ಇಷ್ಟ ರೊಳಗೆ ನಾನು ಪಡಕೊಂಡು ಸಿದ್ಧಿಗೆ ಬಂದವನೆಂದು ಹೇಳುವದಿಲ್ಲ; ನಾನು ಯಾವದನ್ನು ಹೊಂದುವದಕ್ಕಾಗಿ ಕ್ರಿಸ್ತ ಯೇಸು ನನ್ನನ್ನು ಹಿಡಿದುಕೊಂಡನೊ ಅದನ್ನು ಹಿಡಿದುಕೊಳ್ಳುವದಕ್ಕೋಸ್ಕರ ಹಿಂದಟ್ಟುತ್ತಾ ಇದ್ದೇನೆ.
ಫಿಲಿಪ್ಪಿಯವರಿಗೆ 3 : 13 (KNV)
ಸಹೋದರರೇ, ನಾನಂತೂ ಹಿಡಿದುಕೊಂಡವ ನೆಂದು ನನ್ನನ್ನು ಎಣಿಸಿಕೊಳ್ಳುವದಿಲ್ಲ; ಆದರೆ ಇದೊಂ ದನ್ನು ಮಾಡುತ್ತೇನೆ, ನಾನು ಹಿಂದಿನ ವಿಷಯಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕಾಗಿ
ಫಿಲಿಪ್ಪಿಯವರಿಗೆ 3 : 14 (KNV)
ಕ್ರಿಸ್ತ ಯೇಸುವಿನಲ್ಲಿ ದೇವರ ಉನ್ನತವಾದ ಕರೆಯುವಿಕೆಯ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.
ಫಿಲಿಪ್ಪಿಯವರಿಗೆ 3 : 15 (KNV)
ಆದದರಿಂದ ನಮ್ಮಲ್ಲಿ ಪರಿ ಪೂರ್ಣರಾದವರು ಇದೇ ಅಭಿಪ್ರಾಯವುಳ್ಳವರಾಗಿ ರೋಣ; ಯಾವದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನೂ ದೇವರು ನಿಮಗೆ ತೋರಿಸಿಕೊಡುವನು.
ಫಿಲಿಪ್ಪಿಯವರಿಗೆ 3 : 16 (KNV)
ಆದಾಗ್ಯೂ ಈಗಾ ಗಲೇ ನಾವು ಯಾವದನ್ನು ಹೊಂದಿಕೊಂಡಿದ್ದೇವೋ ಅದೇ ಸೂತ್ರವನ್ನು ಅನುಸರಿಸಿ ನಡೆದುಕೊಳ್ಳುತ್ತಾ ಒಂದೇ ಮನಸ್ಸುಳ್ಳವರಾಗಿರೋಣ.
ಫಿಲಿಪ್ಪಿಯವರಿಗೆ 3 : 17 (KNV)
ಸಹೋದರರೇ, ನೀವೆಲ್ಲರೂ ನನ್ನನ್ನು ಅನುಸರಿ ಸುವವರಾಗಿರ್ರಿ; ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಗುರುತಿ ಸಿರಿ.
ಫಿಲಿಪ್ಪಿಯವರಿಗೆ 3 : 18 (KNV)
(ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; ಅವರ ವಿಷಯದಲ್ಲಿ ನಾನು ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ.
ಫಿಲಿಪ್ಪಿಯವರಿಗೆ 3 : 19 (KNV)
ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆ ಕೆಲಸಗಳಲ್ಲಿಯೇ ಅವರ ಗೌರವವು. ಅವರು ಭೂಸಂಬಂಧವಾದವುಗಳ ಮೇಲೆ ಮನಸ್ಸಿಡುತ್ತಾರೆ.)
ಫಿಲಿಪ್ಪಿಯವರಿಗೆ 3 : 20 (KNV)
ನಾವಾದರೊ ಪರಲೋಕ ನಿವಾಸಿಗಳು; ಅಲ್ಲಿಂದಲೇ ರಕ್ಷಕನು ಬರುವದನ್ನು ಎದುರು ನೋಡುತ್ತಾ ಇದ್ದೇವೆ; ಆತನೇ ಕರ್ತನಾದ ಯೇಸು ಕ್ರಿಸ್ತನು.
ಫಿಲಿಪ್ಪಿಯವರಿಗೆ 3 : 21 (KNV)
ಆತನು ಎಲ್ಲವನ್ನೂ ತನಗೆ ಅಧೀನ ಮಾಡಿಕೊಳ್ಳಲಾಗುವ ಪರಾಕ್ರಮವನ್ನು ಸಾಧಿಸಿ ದೀನಾ ವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸು ವದಕ್ಕೆ ಶಕ್ತನಾಗಿದ್ದು ಪ್ರಭಾವವುಳ್ಳ ತನ್ನ ದೇಹಕ್ಕೆ ಸಾರೂಪ್ಯವಾಗುವಂತೆ ಮಾಡುವನು.

1 2 3 4 5 6 7 8 9 10 11 12 13 14 15 16 17 18 19 20 21

BG:

Opacity:

Color:


Size:


Font: