ಓಬದ್ಯ 1 : 1 (KNV)
ಓಬದ್ಯನ ದರ್ಶನವು. ಕರ್ತನಾದ ದೇವರು ಎದೋಮನ್ನು ಕುರಿತು ಹೀಗೆ ಹೇಳುತ್ತಾನೆ--ಕರ್ತನಿಂದ ಸುದ್ಧಿಯನ್ನು ಕೇಳಿದ್ದೇವೆ; ಅನ್ಯಜನಾಂಗಗಳಲ್ಲಿ ರಾಯ ಭಾರಿಯು ಕಳುಹಿಸಲ್ಪಟ್ಟಿದ್ದಾನೆ; ಏಳಿರಿ, ಅದಕ್ಕೆ ವಿರೋಧವಾಗಿ ಯುದ್ಧಕ್ಕೆ ಏಳುವ!
ಓಬದ್ಯ 1 : 2 (KNV)
ಇಗೋ, ನಿನ್ನನ್ನು ಅನ್ಯಜನಾಂಗಗಳಲ್ಲಿ ಹೀನವಾಗಿ ಮಾಡಿದ್ದೇನೆ.
ಓಬದ್ಯ 1 : 3 (KNV)
ನೀನು ಬಹಳವಾಗಿ ತಿರಸ್ಕರಿಸಲ್ಪಟ್ಟಿದ್ದೀ. ಬಂಡೆಯ ಬಿರುಕು ಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸ ಮಾಡಿಕೊಂಡವನೇ--ಯಾರು ನನ್ನನ್ನು ನೆಲಕ್ಕೆ ಇಳಿಸ ಬಲ್ಲರೆಂದು ತನ್ನ ಹೃದಯದಲ್ಲಿ ಅನ್ನುವವನೇ, ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ.
ಓಬದ್ಯ 1 : 4 (KNV)
ನೀನು ಹದ್ದಿನಂತೆ ಏರಿಕೊಂಡು ನಿನ್ನ ಗೂಡನ್ನು ನಕ್ಷತ್ರಗಳಲ್ಲಿ ಇಟ್ಟರೂ ಅಲ್ಲಿಂದ ನಿನ್ನನ್ನು ಇಳಿಸುವೆನೆಂದು ಕರ್ತನು ಅನ್ನುತ್ತಾನೆ.
ಓಬದ್ಯ 1 : 5 (KNV)
ಕಳ್ಳರು ನಿನ್ನ ಬಳಿಗೆ ಬಂದಿದ್ದರೆ ಸುಲುಕೊಳ್ಳುವವರು ರಾತ್ರಿಯಲ್ಲಿ ಬಂದಿದ್ದರೆ ಎಷ್ಟೋ ಹಾಳಾಗುತ್ತಿದ್ದಿಯಲ್ಲಾ! ಅವರು ತಮಗೆ ಸಾಕಾಗುವಷ್ಟು ಕದ್ದುಕೊಳ್ಳುವರಲ್ಲವೋ? ದ್ರಾಕ್ಷೇಹಣ್ಣನ್ನು ಕೂಡಿಸುವ ವರು ನಿನ್ನ ಬಳಿಗೆ ಬಂದಿದ್ದರೆ ಅವರು ಕೆಲವು ದ್ರಾಕ್ಷೇ ಹಣ್ಣನ್ನು ಬಿಡುವರಲ್ಲವೋ?
ಓಬದ್ಯ 1 : 6 (KNV)
ಏಸಾವನು ಎಷ್ಟೋ ಶೋಧಿ ಸಲ್ಪಟ್ಟಿದ್ದಾನೆ, ಅವನ ರಹಸ್ಯ ಸ್ಥಳಗಳು ಹುಡುಕ ಲ್ಪಟ್ಟಿವೆ.
ಓಬದ್ಯ 1 : 7 (KNV)
ನಿನ್ನ ಸಂಗಡ ಒಟ್ಟುಗೂಡಿದ ಮನುಷ್ಯರೆಲ್ಲರು ನಿನ್ನನ್ನು ಮೇರೆಯ ವರೆಗೂ ತಂದಿದ್ದಾರೆ: ನಿನ್ನ ಸಂಗಡ ಸಮಾಧಾನವಾಗಿದ್ದ ಮನುಷ್ಯರು ನಿನ್ನನ್ನು ಮೋಸ ಮಾಡಿ ನಿನಗೆ ವಿರೋಧವಾಗಿ ಜಯಹೊಂದಿದ್ದಾರೆ; ನಿನ್ನ ರೊಟ್ಟಿಯನ್ನು ತಿನ್ನುವರು ನಿನ್ನ ಕೆಳಗೆ ಬೋನು ಇಟ್ಟಿದ್ದಾರೆ; ಅವನಲ್ಲಿ ವಿವೇಕವೇನೂ ಇಲ್ಲ.
ಓಬದ್ಯ 1 : 8 (KNV)
ಕರ್ತನು ಅನ್ನುವದೇನಂದರೆ--ನಾನು ಆ ದಿನದಲ್ಲಿ ಎದೋಮಿ ನೊಳಗಿಂದ ಜ್ಞಾನಿಗಳನ್ನೂ ಏಸಾವನ ಬೆಟ್ಟದೊಳಗಿಂದ ವಿವೇಕವನ್ನೂ ನಾಶಮಾಡದಿರುವೆನೋ?
ಓಬದ್ಯ 1 : 9 (KNV)
ಸರ್ವರು ಸಂಹಾರದಿಂದ ಏಸಾವನ ಬೆಟ್ಟದೊಳಗಿಂದ ನಾಶ ವಾಗುವ ಹಾಗೆ ಓ ತೇಮಾನೇ, ನಿನ್ನ ಪರಾಕ್ರಮ ಶಾಲಿಗಳು ಗಾಬರಿಪಡುವರು.
ಓಬದ್ಯ 1 : 10 (KNV)
ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಬಲಾತ್ಕಾರದ ನಿಮಿತ್ತ ನಾಚಿಕೆಯು ನಿನ್ನನ್ನು ಮುಚ್ಚು ವದು; ನೀನು ಎಂದೆಂದಿಗೂ ಕಡಿದುಹಾಕಲ್ಪಡುವಿ.
ಓಬದ್ಯ 1 : 11 (KNV)
ನೀನು ಆ ಕಡೆಯಲ್ಲಿ ನಿಂತ ದಿನದಲ್ಲಿ ಪರರು ಅವನ ಸೆರೆಯಾಗಿ ತಕ್ಕೊಂಡುಹೋದ ದಿನದಲ್ಲಿ ಅನ್ಯರು ಅವನ ಬಾಗಲುಗಳಲ್ಲಿ ಪ್ರವೇಶಿಸಿ ಯೆರೂಸಲೇಮಿನ ಮೇಲೆ ಚೀಟುಗಳನ್ನು ಹಾಕಿದಾಗ ನೀನು ಸಹ ಅವರಲ್ಲಿ ಒಬ್ಬನ ಹಾಗಿದ್ದಿ.
ಓಬದ್ಯ 1 : 12 (KNV)
ಆದರೆ ನಿನ್ನ ಸಹೋದರನ ದಿನದಲ್ಲಿ ಅವನು ಅನ್ಯನಾದ ದಿನದಲ್ಲಿ ನೀನು ನೋಡಬಾರ ದಾಗಿತ್ತು; ಯೆಹೂದನ ಮಕ್ಕಳ ಮೇಲೆ ಅವರ ನಾಶನದ ದಿವಸದಲ್ಲಿ ಸಂತೋಷಿಸಬಾರದಾಗಿತ್ತು; ಕಷ್ಟದ ದಿನದಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು;
ಓಬದ್ಯ 1 : 13 (KNV)
ನನ್ನ ಜನರ ಬಾಗಲೊಳಗೆ ಅವರ ಆಪತ್ತಿನ ದಿನದಲ್ಲಿ ಪ್ರವೇಶಿಸಬಾರದಾಗಿತ್ತು; ಹೌದು, ನೀನು ಅವರ ಆಪತ್ತಿನ ದಿನದಲ್ಲಿ ಅವರ ಕೇಡನ್ನು ನೋಡಬಾರ ದಾಗಿತ್ತು; ಅವರ ಆಪತ್ತಿನ ದಿನದಲ್ಲಿ ಅವರ ಆಸ್ತಿಯ ಮೇಲೆ ಕೈಹಾಕಬಾರದಾಗಿತ್ತು;
ಓಬದ್ಯ 1 : 14 (KNV)
ಅವನಲ್ಲಿ ಓಡಿ ಹೋದವರನ್ನು ಕಡಿದುಬಿಡುವದಕ್ಕೆ ನೀನು ಕೂಡುವ ದಾರಿಯಲ್ಲಿ ನಿಲ್ಲಬಾರದಾಗಿತ್ತು; ಕಷ್ಟದ ದಿನದಲ್ಲಿ ಅವನಲ್ಲಿ ಉಳಿದುಕೊಂಡವರನ್ನು ಒಪ್ಪಿಸಬಾರದಾಗಿತ್ತು.
ಓಬದ್ಯ 1 : 15 (KNV)
ಕರ್ತನ ದಿನವು ಎಲ್ಲಾ ಜನಾಂಗಗಳ ಮೇಲೆ ಸವಿಾಪವಾಗಿದೆ; ನೀನು ಮಾಡಿದ ಹಾಗೆಯೇ ನಿನಗೆ ಮಾಡಲ್ಪಡುವದು; ನಿನ್ನ ಪ್ರತಿಫಲವು ನಿನ್ನ ತಲೆಯ ಮೇಲೆ ತಿರುಗುವದು.
ಓಬದ್ಯ 1 : 16 (KNV)
ನೀವು ನನ್ನ ಪರಿಶುದ್ಧ ಪರ್ವತದ ಮೇಲೆ ಕುಡಿದ ಹಾಗೆಯೇ ಜನಾಂಗಗಳೆಲ್ಲಾ ನಿತ್ಯವಾಗಿ ಕುಡಿಯುವವು; ಹೌದು, ಕುಡಿದು ನುಂಗಿಬಿಡುವವು; ಇಲ್ಲದೆ ಇದ್ದವರ ಹಾಗೆಯೇ ಇರುವವು.
ಓಬದ್ಯ 1 : 17 (KNV)
ಆದರೆ ಚೀಯೋನ್ ಪರ್ವತದಲ್ಲಿ ಬಿಡುಗಡೆ ಇರುವದು, ಅದು ಪರಿಶುದ್ಧ ವಾಗಿರುವದು; ಯಾಕೋಬಿನ ಮನೆತನದವರು ತಮ್ಮ ಸ್ವಾಸ್ತ್ಯಗಳನ್ನು ಸ್ವತಂತ್ರಿಸಿಕೊಳ್ಳುವರು.
ಓಬದ್ಯ 1 : 18 (KNV)
ಇದಲ್ಲದೆ ಯಾಕೋಬಿನ ಮನೆತನದವರು ಬೆಂಕಿಯಾಗಿಯೂ ಯೋಸೇಫನ ಮನೆತನದವರು ಜ್ವಾಲೆಯಾಗಿಯೂ ಇರುವರು; ಏಸಾವನ ಮನೆತನದವರು ಕೂಳೆಯಾಗು ವರು. ಅವರು ಹೊತ್ತಿಸಿ ಇವರನ್ನು ತಿಂದುಬಿಡುವರು; ಏಸಾವನ ಮನೆತನದವರಿಗೆ ಯಾರೂ ಉಳಿಯರು; ಕರ್ತನೇ ಅದನ್ನು ನುಡಿದಿದ್ದಾನೆ.
ಓಬದ್ಯ 1 : 19 (KNV)
ದಕ್ಷಿಣದವರು ಏಸಾವನ ಬೆಟ್ಟವನ್ನೂ ಬೈಲಿನವರು ಫಿಲಿಷ್ಟಿಯರನ್ನೂ ಸ್ವತಂತ್ರಿಸಿಕೊಳ್ಳುವರು; ಎಫ್ರಾಯಾಮಿನ ಹೊಲ ಗಳನ್ನು ಸಮಾರ್ಯದ ಹೊಲಗಳನ್ನು ಸಹ ಸ್ವಾಧೀನ ಮಾಡಿಕೊಳ್ಳುವರು ಮತ್ತು ಬೆನ್ಯಾವಿಾನನು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವನು.
ಓಬದ್ಯ 1 : 20 (KNV)
ಇದಲ್ಲದೆ ಚಾರೆಪತಿನ ವರೆಗೂ ಕಾನಾನ್ಯರಲ್ಲಿರುವ ಇಸ್ರಾಯೇಲನ ಮಕ್ಕಳ ಈ ಸೈನ್ಯದ ಸೆರೆಯವರು ಸೆಫರಾದಿನಲ್ಲಿರುವ ಯೆರೂ ಸಲೇಮಿನ ಸೆರೆಯವರು ದಕ್ಷಿಣದ ಪಟ್ಟಣಗಳನ್ನು ಸ್ವಾಧೀ ನಮಾಡಿಕೊಳ್ಳುವರು.
ಓಬದ್ಯ 1 : 21 (KNV)
ಇದಲ್ಲದೆ ಚೀಯೋನ್ ಪರ್ವತದಲ್ಲಿ ರಕ್ಷಕರು ಏಸಾವಿನ ಬೆಟ್ಟಕ್ಕೆ ನ್ಯಾಯ ತೀರಿಸುವದಕ್ಕೋಸ್ಕರ ಏಳುವರು; ಆಗ ರಾಜ್ಯವು ಕರ್ತನದಾಗಿರುವದು.

1 2 3 4 5 6 7 8 9 10 11 12 13 14 15 16 17 18 19 20 21