ಅರಣ್ಯಕಾಂಡ 8 : 1 (KNV)
ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
ಅರಣ್ಯಕಾಂಡ 8 : 2 (KNV)
ಆರೋನನ ಸಂಗಡ ಮಾತನಾಡಿ ಅವನಿಗೆ ಹೇಳಬೇಕಾದದ್ದೇನಂದರೆ-- ನೀನು ದೀಪಗಳನ್ನು ಹಚ್ಚುವಾಗ ದೀಪಸ್ತಂಭಕ್ಕೆದುರಾಗಿ ಆ ಏಳು ದೀಪಗಳು ಪ್ರಕಾಶಿಸಬೇಕು.
ಅರಣ್ಯಕಾಂಡ 8 : 3 (KNV)
ಆರೋನನು ಹಾಗೆಯೇ ಮಾಡಿ ದೀಪಸ್ತಂಭಕ್ಕೆ ಎದುರಾಗಿ ಅದರ ದೀಪಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಹಚ್ಚಿದನು.
ಅರಣ್ಯಕಾಂಡ 8 : 4 (KNV)
ದೀಪಸ್ತಂಭದ ಈ ಕೆಲಸವು ಅದರ ಸ್ತಂಭದ ವರೆಗೂ ಅದರ ಹೂವುಗಳ ವರೆಗೂ ಬಂಗಾರದ ನಕ್ಷೆಯ ಕೆಲಸವಾಗಿತ್ತು. ಕರ್ತನು ಮೋಶೆಗೆ ತೋರಿ ಸಿದ ಮಾದರಿಯ ಪ್ರಕಾರವೇ ಅವನು ಅದನ್ನು ಮಾಡಿಸಿದನು.
ಅರಣ್ಯಕಾಂಡ 8 : 5 (KNV)
ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ--
ಅರಣ್ಯಕಾಂಡ 8 : 6 (KNV)
ಲೇವಿಯರನ್ನು ಇಸ್ರಾಯೇಲ್ ಮಕ್ಕಳೊಳಗಿಂದ ತೆಗೆದುಕೊಂಡು ಅವರನ್ನು ಶುದ್ಧ ಮಾಡು.
ಅರಣ್ಯಕಾಂಡ 8 : 7 (KNV)
ಅವರನ್ನು ಶುದ್ಧಮಾಡುವದಕ್ಕೆ ಅವರಿಗೆ ಮಾಡಬೇಕಾದದ್ದೇನಂದರೆ--ಶುದ್ಧಿಮಾಡುವ ನೀರನ್ನು ಅವರ ಮೇಲೆ ಚಿಮುಕಿಸು. ಆಗ ಅವರು ತಮ್ಮ ಶರೀರವನ್ನೆಲ್ಲಾ ಕ್ಷೌರಮಾಡಿಸಿಕೊಂಡು ಅವರು ತಮ್ಮ ವಸ್ತ್ರಗಳನ್ನು ಒಗೆದುಕೊಳ್ಳಲಿ. ಹೀಗೆ ಅವರು ತಮ್ಮನ್ನು ತಾವೇ ಶುದ್ಧಮಾಡಿಕೊಳ್ಳುವಂತೆ ಮಾಡು.
ಅರಣ್ಯಕಾಂಡ 8 : 8 (KNV)
ಅವರು ಒಂದು ಎಳೇ ಹೋರಿಯನ್ನು ಅದರೊಂದಿಗೆ ಆಹಾರ ಸಮರ್ಪಣೆಯನ್ನು ಅಂದರೆ ಎಣ್ಣೇ ಬೆರೆಸಿದ ನಯ ವಾದ ಹಿಟ್ಟನ್ನು ತೆಗೆದುಕೊಳ್ಳಬೇಕು. ಪಾಪದ ಬಲಿ ಗಾಗಿ ಮತ್ತೊಂದು ಎಳೇ ಹೋರಿಯನ್ನೂ ನೀನು ತೆಗೆದುಕೋ.
ಅರಣ್ಯಕಾಂಡ 8 : 9 (KNV)
ಆಗ ನೀನು ಲೇವಿಯರನ್ನು ಸಭೆಯ ಗುಡಾರದ ಮುಂದೆ ಕರತಂದು ಇಸ್ರಾಯೇಲ್ಯರ ಸಮಸ್ತ ಸಭೆಯನ್ನು ಒಟ್ಟುಗೂಡಿಸಬೇಕು.
ಅರಣ್ಯಕಾಂಡ 8 : 10 (KNV)
ನೀನು ಲೇವಿ ಯರನ್ನು ಕರ್ತನ ಎದುರಿನಲ್ಲಿ ಕರತರಬೇಕು. ಆಗ ಇಸ್ರಾಯೇಲ್ ಮಕ್ಕಳು ತಮ್ಮ ಕೈಗಳನ್ನು ಲೇವಿಯರ ಮೇಲೆ ಇಡಬೇಕು.
ಅರಣ್ಯಕಾಂಡ 8 : 11 (KNV)
ಕರ್ತನ ಸೇವೆಯನ್ನು ಮಾಡುವವರಾಗುವಂತೆ ಆರೋನನು ಇಸ್ರಾಯೇಲ್ ಮಕ್ಕಳ ಸಮರ್ಪಣೆಗಾಗಿ ಲೇವಿಯರನ್ನು ಸಮರ್ಪಿಸಬೇಕು.
ಅರಣ್ಯಕಾಂಡ 8 : 12 (KNV)
ಲೇವಿಯರು ತಮ್ಮ ಕೈಗಳನ್ನು ಆ ಹೋರಿಗಳ ತಲೆಗಳ ಮೇಲೆ ಇಡಬೇಕು. ಆಗ ನೀನು ಲೇವಿಯರಿಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಕರ್ತನಿಗೆ ಒಂದನ್ನು ಪಾಪದ ಬಲಿಗಾಗಿಯೂ ಮತ್ತೊಂದನ್ನು ದಹನ ಬಲಿಗಾಗಿಯೂ ಸಮರ್ಪಿಸಬೇಕು.
ಅರಣ್ಯಕಾಂಡ 8 : 13 (KNV)
ತರುವಾಯ ನೀನು ಲೇವಿಯರನ್ನು ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ನಿಲ್ಲಿಸಿ ಅವರನ್ನು ಕರ್ತನಿಗೆ ಕಾಣಿಕೆಯಂತೆ ಸಮರ್ಪಿಸಬೇಕು.
ಅರಣ್ಯಕಾಂಡ 8 : 14 (KNV)
ಹೀಗೆ ನೀನು ಲೇವಿಯರನ್ನು ಇಸ್ರಾಯೇಲ್ ಮಕ್ಕಳೊ ಳಗಿಂದ ಪ್ರತ್ಯೇಕಿಸಬೇಕು; ಲೇವಿಯರು ನನ್ನವರಾಗಿರ ಬೇಕು.
ಅರಣ್ಯಕಾಂಡ 8 : 15 (KNV)
ಅದರ ತರುವಾಯ ಲೇವಿಯರು ಸೇವೆ ಮಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿಸು ವರು, ನೀನು ಅವರನ್ನು ಶುದ್ಧಮಾಡಿ ಕಾಣಿಕೆಯಂತೆ ಸಮರ್ಪಿಸಬೇಕು.
ಅರಣ್ಯಕಾಂಡ 8 : 16 (KNV)
ಅವರು ಇಸ್ರಾಯೇಲ್ ಮಕ್ಕಳೊ ಳಗಿಂದ ನನಗೆ ಸಂಪೂರ್ಣವಾಗಿ ಕೊಡಲ್ಪಟ್ಟವರು. ಇಸ್ರಾಯೇಲ್ ಮಕ್ಕಳಲ್ಲಿರುವ ಎಲ್ಲಾ ಗರ್ಭಗಳನ್ನು ತೆರೆಯುವಂತದ್ದಕ್ಕೂ ಅಂದರೆ ಚೊಚ್ಚಲಾದವರೆಲ್ಲರಿಗೂ ಬದಲಾಗಿ ಅವರನ್ನು ನನಗೋಸ್ಕರ ತೆಗೆದುಕೊಂಡಿ ದ್ದೇನೆ.
ಅರಣ್ಯಕಾಂಡ 8 : 17 (KNV)
ಇಸ್ರಾಯೇಲ್ ಮಕ್ಕಳಲ್ಲಿ ಮನುಷ್ಯರಲ್ಲಾ ದರೂ ಪಶುಗಳಲ್ಲಾದರೂ ಚೊಚ್ಚಲಾದದ್ದೆಲ್ಲಾ ನನ್ನದು; ಐಗುಪ್ತ ದೇಶದಲ್ಲಿ ಎಲ್ಲಾ ಚೊಚ್ಚಲಾದವುಗಳನ್ನು ಹೊಡೆದ ದಿವಸದಲ್ಲಿ ನಾನು ಅವರನ್ನು ನನಗಾಗಿ ಪರಿಶುದ್ಧ ಮಾಡಿಕೊಂಡೆನು.
ಅರಣ್ಯಕಾಂಡ 8 : 18 (KNV)
ಇಸ್ರಾಯೇಲ್ ಮಕ್ಕಳಲ್ಲಿರುವ ಎಲ್ಲಾ ಚೊಚ್ಚಲಾದವುಗಳಿಗೋಸ್ಕರ ಲೇವಿಯರನ್ನು ನಾನು ತೆಗೆದುಕೊಂಡೆನು.
ಅರಣ್ಯಕಾಂಡ 8 : 19 (KNV)
ಅವರು ಸಭೆಯ ಗುಡಾರದಲ್ಲಿ ಇಸ್ರಾಯೇಲ್ ಮಕ್ಕಳ ಸೇವೆ ಯನ್ನು ಮಾಡುವದಕ್ಕೂ ಪರಿಶುದ್ಧ ಸ್ಥಳಕ್ಕೆ ಇಸ್ರಾಯೇಲ್ ಮಕ್ಕಳು ಸವಿಾಪಿಸುವಾಗ ಇಸ್ರಾಯೇಲ್ ಮಕ್ಕಳೊಳಗೆ ವ್ಯಾಧಿಯು ಇರದಂತೆ ಇಸ್ರಾಯೇಲ್ ಮಕ್ಕಳಿಗೋಸ್ಕರ ಪ್ರಾಯಶ್ಚಿತ್ತಮಾಡುವದಕ್ಕೂ ನಾನು ಲೇವಿಯರನ್ನು ಇಸ್ರಾಯೇಲ್ ಮಕ್ಕಳೊಳಗಿಂದ ಆರೋನನಿಗೂ ಅವನ ಕುಮಾರರಿಗೂ ದಾನವಾಗಿ ಕೊಟ್ಟಿದ್ದೇನೆ.
ಅರಣ್ಯಕಾಂಡ 8 : 20 (KNV)
ಮೋಶೆಗೆ ಲೇವಿಯರ ವಿಷಯದಲ್ಲಿ ಕರ್ತನು ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಆಗ ಮೋಶೆಯೂ ಆರೋನನೂ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯೂ ಲೇವಿಯರಿಗೆ ಮಾಡಿದರು, ಇಸ್ರಾಯೇಲ್ ಮಕ್ಕಳು ಅವರಿಗೆ ಹಾಗೆಯೇ ಮಾಡಿದರು.
ಅರಣ್ಯಕಾಂಡ 8 : 21 (KNV)
ಲೇವಿಯರು ತಮ್ಮನ್ನು ಪವಿತ್ರಮಾಡಿಕೊಂಡು ತಮ್ಮ ವಸ್ತ್ರಗಳನ್ನು ತೊಳೆದುಕೊಂಡರು. ಆರೋನನು ಅವರನ್ನು ಕರ್ತನ ಮುಂದೆ ಕಾಣಿಕೆಯಂತೆ ಅರ್ಪಿಸಿದನು; ಅವರು ಶುದ್ಧರಾಗುವ ಹಾಗೆ ಆರೋನನು ಅವರಿಗೋಸ್ಕರ ಪ್ರಾಯಶ್ಚಿತ್ತ ಮಾಡಿದನು.
ಅರಣ್ಯಕಾಂಡ 8 : 22 (KNV)
ತರುವಾಯ ಲೇವಿಯರು ಸಭೆಯ ಗುಡಾರದಲ್ಲಿ ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ಅವರ ಸೇವೆ ಮಾಡು ವದಕ್ಕೆ ಒಳಗೆ ಪ್ರವೇಶಿಸಿದರು. ಕರ್ತನು ಮೋಶೆಗೆ ಲೇವಿಯರ ವಿಷಯವಾಗಿ ಹೇಗೆ ಆಜ್ಞಾಪಿಸಿದನೋ ಹಾಗೆಯೇ ಅವರಿಗೆ ಮಾಡಿದನು.
ಅರಣ್ಯಕಾಂಡ 8 : 23 (KNV)
ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ--
ಅರಣ್ಯಕಾಂಡ 8 : 24 (KNV)
ಲೇವಿಯರಿಗೆ ಸಂಬಂಧ ಪಟ್ಟದ್ದು ಇದಾಗಿದೆ; ಇಪ್ಪತ್ತೈದು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಸಭೆಯ ಗುಡಾರದ ಸೇವೆಗಾಗಿ ಒಳಗೆ ಹೋಗುವರು.
ಅರಣ್ಯಕಾಂಡ 8 : 25 (KNV)
ಆದರೆ ಐವತ್ತು ವರುಷದವ ರಾಗಿ ಸೇವೆಯನ್ನು ಬಿಟ್ಟುಬಿಟ್ಟವರು ಇನ್ನು ಮೇಲೆ ಸೇವೆಮಾಡಬಾರದು.
ಅರಣ್ಯಕಾಂಡ 8 : 26 (KNV)
ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26

BG:

Opacity:

Color:


Size:


Font: