ಅರಣ್ಯಕಾಂಡ 6 : 1 (KNV)
ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ --
ಅರಣ್ಯಕಾಂಡ 6 : 2 (KNV)
ನೀನು ಇಸ್ರಾ ಯೇಲ್‌ ಮಕ್ಕಳ ಸಂಗಡ ಮಾತನಾಡಿ ಹೇಳಬೇಕಾದ ದ್ದೇನಂದರೆ--ಪುರುಷನಾದರೂ ಸ್ತ್ರೀಯಾದರೂ ಕರ್ತ ನಿಗೆ ಪ್ರತ್ಯೇಕಿಸಿಕೊಳ್ಳುವ ಹಾಗೆ ನಾಜೀರನ ವಿಶೇಷ ವಾದ ಪ್ರಮಾಣವನ್ನು ಮಾಡಿ
ಅರಣ್ಯಕಾಂಡ 6 : 3 (KNV)
ದ್ರಾಕ್ಷಾರಸಕ್ಕೂ ಮದ್ಯ ಪಾನಕ್ಕೂ ದೂರವಾಗಿದ್ದು ದ್ರಾಕ್ಷಾರಸದ ಹುಳಿಯನ್ನೂ ಮದ್ಯಪಾನದ ಹುಳಿಯನ್ನೂ ಕುಡಿಯದೆ ದ್ರಾಕ್ಷೆಯಿಂದ ಮಾಡಿದ ಯಾವ ಪಾನವನ್ನಾದರೂ ಕುಡಿಯದೆ, ಹಸೀದಾಗಲಿ ಒಣಗಿದ್ದಾಗಲಿ ದ್ರಾಕ್ಷೇ ಹಣ್ಣನ್ನು ತಿನ್ನದೆ ಇರಬೇಕು.
ಅರಣ್ಯಕಾಂಡ 6 : 4 (KNV)
ತನ್ನ ನಾಜೀರತನ ದಿವಸಗಳಲ್ಲೆಲ್ಲಾ ದ್ರಾಕ್ಷೇ ಬೀಜ ಮೊದಲುಗೊಂಡು ಸಿಪ್ಪೆಯ ವರೆಗೂ ದ್ರಾಕ್ಷೇ ಬಳ್ಳಿಯಲ್ಲಿ ಬೆಳೆದದ್ದು ಯಾವದನ್ನಾದರೂ ತಿನ್ನಬಾರದು.
ಅರಣ್ಯಕಾಂಡ 6 : 5 (KNV)
ಅವನ ನಾಜೀರತನ ಪ್ರಮಾಣದ ದಿವಸಗಳೆಲ್ಲಾ ಕ್ಷೌರ ಕತ್ತಿ ಅವನ ತಲೆಯ ಮೇಲೆ ಬರಬಾರದು; ಅವನು ಕರ್ತನಿಗೆ ತನ್ನನ್ನು ಪ್ರತ್ಯೇಕಿಸಿಕೊಂಡ ದಿವಸ ಗಳು ಪೂರ್ತಿಯಾಗುವ ವರೆಗೆ ಅವನು ಪರಿಶುದ್ಧನಾಗಿ ರುವನು; ಅವನು ತನ್ನ ತಲೆಯ ಕೂದಲನ್ನು ಬೆಳೆಸ ಬೇಕು.
ಅರಣ್ಯಕಾಂಡ 6 : 6 (KNV)
ಅವನು ಕರ್ತನಿಗೆ ತನ್ನನ್ನು ಪ್ರತ್ಯೇಕಿಸಿ ಕೊಂಡ ದಿವಸಗಳೆಲ್ಲಾ ಸತ್ತವನ ಬಳಿಗೆ ಬರಬಾರದು.
ಅರಣ್ಯಕಾಂಡ 6 : 7 (KNV)
ಅವನ ತಂದೆ ತಾಯಿ ಸಹೋದರ ಸಹೋದರಿ ಸತ್ತರೂ ಅವನು ಅವರಿಗೋಸ್ಕರ ಅಪವಿತ್ರನಾಗ ಬಾರದು; ಅವನ ದೇವರ ನಾಜೀರತನವು ಅವನ ತಲೆಯ ಮೇಲೆ ಇದೆ.
ಅರಣ್ಯಕಾಂಡ 6 : 8 (KNV)
ಅವನ ನಾಜೀರತನದ ದಿವಸ ಗಳಲ್ಲೆಲ್ಲಾ ಅವನು ಕರ್ತನಿಗೆ ಪರಿಶುದ್ಧನಾಗಿದ್ದಾನೆ.
ಅರಣ್ಯಕಾಂಡ 6 : 9 (KNV)
ಅವನ ಬಳಿಯಲ್ಲಿ ಒಬ್ಬನು ಅಕಸ್ಮಾತ್ತಾಗಿ ಸತ್ತರೆ ಅವನ ನಾಜೀರತನದ ತಲೆಯು ಅಶುದ್ಧವಾದದ್ದರಿಂದ ಅವನು ಶುದ್ಧನಾಗುವ ದಿವಸದಲ್ಲಿ ತನ್ನ ತಲೆಯನ್ನು ಬೋಳಿಸಿ ಕೊಳ್ಳಬೇಕು, ಏಳನೇ ದಿವಸದಲ್ಲಿ ಬೋಳಿಸಿಕೊಳ್ಳ ಬೇಕು.
ಅರಣ್ಯಕಾಂಡ 6 : 10 (KNV)
ಎಂಟನೆಯ ದಿವಸದಲ್ಲಿ ಅವನು ಯಾಜಕನ ಬಳಿಗೆ ಸಭೆಯ ಗುಡಾರದ ಬಾಗಲಿಗೆ ಎರಡು ಬೆಳವಕ್ಕಿ ಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು.
ಅರಣ್ಯಕಾಂಡ 6 : 11 (KNV)
ಯಾಜಕನು ಒಂದನ್ನು ಪಾಪದ ಬಲಿ ಯಾಗಿಯೂ ಇನ್ನೊಂದನ್ನು ಹೋಮವಾಗಿಯೂ ಅರ್ಪಿಸಿ ಅವನು ಸತ್ತವನಲ್ಲಿ ಪಾಪಮಾಡಿದ್ದರಿಂದ ಅವನಿಗೋಸ್ಕರ ಪಾಪವನ್ನು ಮುಚ್ಚಿ ಆ ದಿವಸದಲ್ಲಿ ಅವನ ತಲೆಯನ್ನು ಪರಿಶುದ್ಧಮಾಡಬೇಕು.
ಅರಣ್ಯಕಾಂಡ 6 : 12 (KNV)
ಅವನು ಪ್ರತ್ಯೇಕಿಸಲ್ಪಟ್ಟ ತನ್ನ ದಿವಸಗಳನ್ನು ಕರ್ತನಿಗೆ ಪ್ರತ್ಯೇಕಿಸಿ ಅಪರಾಧ ಬಲಿಯಾಗಿ ಒಂದು ವರುಷದ ಕುರಿಮರಿ ಯನ್ನು ತರಬೇಕು; ಆದರೆ ಮೊದಲಿನ ದಿವಸಗಳು ವ್ಯರ್ಥವಾಗುವವು; ಅವನು ಪ್ರತ್ಯೇಕಿಸಲ್ಪಟ್ಟದ್ದು ಅಶುದ್ಧವಾಯಿತು.
ಅರಣ್ಯಕಾಂಡ 6 : 13 (KNV)
ಇದು ನಾಜೀರನ ನಿಯಮವು: ಪ್ರತ್ಯೇಕಿಸಲ್ಪಟ್ಟ ಅವನ ದಿವಸಗಳು ಪೂರ್ಣವಾದ ಮೇಲೆ ಅವನನ್ನು ಸಭೆಯ ಗುಡಾರದ ಬಾಗಲಿನ ಬಳಿಗೆ ತರಬೇಕು.
ಅರಣ್ಯಕಾಂಡ 6 : 14 (KNV)
ಅವನು ಕರ್ತನಿಗೆ ತನ್ನ ಅರ್ಪಣೆಯನ್ನು ಅರ್ಪಿಸ ಬೇಕು; ಅದೇನಂದರೆ, ದಹನ ಬಲಿಗಾಗಿ ಒಂದು ವರುಷದ ದೋಷವಿಲ್ಲದ ಟಗರಿನ ಮರಿಯನ್ನೂ ಪಾಪದ ಬಲಿಗಾಗಿ ಒಂದು ವರುಷದ ದೋಷವಿಲ್ಲದ ಒಂದು ಕುರಿಮರಿಯನ್ನೂ ಸಮಾಧಾನದ ಬಲಿಗಾಗಿ ದೋಷವಿಲ್ಲದ ಒಂದು ಟಗರನ್ನೂ ತರಬೇಕು.
ಅರಣ್ಯಕಾಂಡ 6 : 15 (KNV)
ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ಮಾಡಿದ ಹುಳಿ ಯಿಲ್ಲದ ರೊಟ್ಟಿಗಳ ಒಂದು ಪುಟ್ಟಿಯನ್ನೂ ಎಣ್ಣೇ ಹಚ್ಚಿದ ಹುಳಿಯಿಲ್ಲದ ರೊಟ್ಟಿಯ ದೋಸೆಗಳನ್ನೂ ಅವುಗಳ ಆಹಾರದ ಅರ್ಪಣೆಯನ್ನೂ ಅವುಗಳ ಪಾನಾರ್ಪಣೆಗಳನ್ನೂ ತರಬೇಕು.
ಅರಣ್ಯಕಾಂಡ 6 : 16 (KNV)
ಇವುಗಳನ್ನು ಯಾಜಕನು ಕರ್ತನ ಎದುರಿನಲ್ಲಿ ತಂದು ಅವನ ಪಾಪದ ಬಲಿಯನ್ನೂ ದಹನಬಲಿಯನ್ನೂ ಅರ್ಪಿಸ ಬೇಕು.
ಅರಣ್ಯಕಾಂಡ 6 : 17 (KNV)
ಆ ಟಗರನ್ನು ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯ ಸಂಗಡ ಕರ್ತನಿಗೆ ಸಮಾಧಾನದ ಅರ್ಪಣೆ ಗಳ ಬಲಿಗಾಗಿ ಅರ್ಪಿಸಬೇಕು; ಇದಲ್ಲದೆ ಯಾಜಕನು ಅವನ ಆಹಾರದ ಅರ್ಪಣೆಯನ್ನೂ ಪಾನಾರ್ಪಣೆ ಯನ್ನೂ ಅರ್ಪಿಸಬೇಕು.
ಅರಣ್ಯಕಾಂಡ 6 : 18 (KNV)
ಇದಲ್ಲದೆ ನಾಜೀರನು ಪ್ರತ್ಯೇಕಿಸಿಕೊಂಡ ತನ್ನ ತಲೆಯನ್ನು ಸಭೆಯ ಗುಡಾರದ ಬಾಗಲಿನ ಬಳಿಯಲ್ಲಿ ಬೋಳಿಸಿ ಪ್ರತ್ಯೇಕಿಸಿದ ತನ್ನ ತಲೆಯ ಕೂದಲನ್ನು ತಕ್ಕೊಂಡು ಸಮಾಧಾನದ ಅರ್ಪಣೆಗಳ ಬಲಿಯ ಕೆಳಗಿರುವ ಬೆಂಕಿಯಲ್ಲಿ ಹಾಕ ಬೇಕು.
ಅರಣ್ಯಕಾಂಡ 6 : 19 (KNV)
ಯಾಜಕನು ಬೇಯಿಸಿದ ಆ ಟಗರಿನ ಮುಂದೊಡೆಯನ್ನೂ ಆ ಪುಟ್ಟಿಯೊಳಗಿಂದ ಹುಳಿ ಯಿಲ್ಲದ ಒಂದು ರೊಟ್ಟಿಯನ್ನೂ ಹುಳಿಯಿಲ್ಲದ ಒಂದು ದೋಸೆಯನ್ನೂ ತಕ್ಕೊಂಡು ನಾಜೀರನ ಪ್ರತ್ಯೇಕಿಸಿದ ಆ ಕೂದಲನ್ನು ಬೋಳಿಸಿದ ತರುವಾಯ ಅವನ ಕೈಗಳಲ್ಲಿ ಅವುಗಳನ್ನು ಕೊಡಬೇಕು.
ಅರಣ್ಯಕಾಂಡ 6 : 20 (KNV)
ಯಾಜಕನು ಅವುಗಳನ್ನು ಆಡಿಸುವ ಅರ್ಪಣೆಗಾಗಿ ಕರ್ತನ ಎದುರಿ ನಲ್ಲಿ ಆಡಿಸಬೇಕು. ಆಡಿಸುವ ಎದೆಯ ಸಂಗಡಲೂ ಎತ್ತುವ ಮುಂದೊಡೆಯ ಸಂಗಡಲೂ ಅದು ಯಾಜಕ ನಿಗೆ ಪರಿಶುದ್ಧವಾಗಿದೆ. ಆ ಮೇಲೆ ನಾಜೀರನು ದ್ರಾಕ್ಷಾ ರಸವನ್ನು ಕುಡಿಯಬಹುದು.
ಅರಣ್ಯಕಾಂಡ 6 : 21 (KNV)
ಪ್ರಮಾಣಮಾಡಿಕೊಂಡ ನಾಜೀರನ ನಿಯ ಮವು ಇದೇ. ಅವನ ಕೈಗೆ ದೊರಕಿದ್ದಲ್ಲದೆ ಅವನು ತನ್ನ ಪ್ರತ್ಯೇಕಿಸುವಿಕೆಗಾಗಿ ಕರ್ತನಿಗೆ ಅರ್ಪಿಸತಕ್ಕದ್ದು. ಅವನು ಪ್ರಮಾಣಮಾಡಿಕೊಂಡ ಪ್ರಕಾರ ತಾನು ಪ್ರತ್ಯೇಕಿಸಿಕೊಂಡಂತೆ ಅವನು ಮಾಡಬೇಕು.
ಅರಣ್ಯಕಾಂಡ 6 : 22 (KNV)
ಇದಲ್ಲದೆ ಕರ್ತನು ಮೋಶೆಯ ಸಂಗಡ ಮಾತ ನಾಡಿ ಹೇಳಿದ್ದೇನಂದರೆ--
ಅರಣ್ಯಕಾಂಡ 6 : 23 (KNV)
ನೀನು ಆರೋನನ ಸಂಗ ಡಲೂ ಅವನ ಕುಮಾರರ ಸಂಗಡಲೂ ಮಾತನಾಡಿ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್‌ ಮಕ್ಕಳನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು.
ಅರಣ್ಯಕಾಂಡ 6 : 24 (KNV)
ಕರ್ತನು ನಿನ್ನನ್ನು ಆಶೀರ್ವದಿಸಲಿ, ನಿನ್ನನ್ನು ಕಾಪಾಡಲಿ.
ಅರಣ್ಯಕಾಂಡ 6 : 25 (KNV)
ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಪ್ರಕಾಶಿಸುವಂತೆ ಮಾಡಿ ನಿನಗೆ ದಯೆ ತೋರಿಸಲಿ.
ಅರಣ್ಯಕಾಂಡ 6 : 26 (KNV)
ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಎತ್ತಿ ನಿನಗೆ ಸಮಾಧಾನ ಅನುಗ್ರಹಿಸಲಿ.ಅವರು ನನ್ನ ಹೆಸರನ್ನು ಇಸ್ರಾಯೇಲ್‌ ಮಕ್ಕಳ ಮೇಲೆ ಇಡಬೇಕು. ನಾನೇ ಅವರನ್ನು ಆಶೀರ್ವದಿಸುವೆನು.
ಅರಣ್ಯಕಾಂಡ 6 : 27 (KNV)
ಅವರು ನನ್ನ ಹೆಸರನ್ನು ಇಸ್ರಾಯೇಲ್‌ ಮಕ್ಕಳ ಮೇಲೆ ಇಡಬೇಕು. ನಾನೇ ಅವರನ್ನು ಆಶೀರ್ವದಿಸುವೆನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27

BG:

Opacity:

Color:


Size:


Font: