ಅರಣ್ಯಕಾಂಡ 4 : 1 (KNV)
ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನಂದರೆ --
ಅರಣ್ಯಕಾಂಡ 4 : 2 (KNV)
ಲೇವಿಯ ಮಕ್ಕಳೊಳಗಿಂದ ಅವರ ತಂದೆಗಳ ಮನೆ ತನದ ಕುಟುಂಬಗಳ ಪ್ರಕಾರವಾಗಿ
ಅರಣ್ಯಕಾಂಡ 4 : 3 (KNV)
ಮೂವತ್ತು ವರುಷವಾದವರನ್ನೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ವರನ್ನೂ ಅಂದರೆ ಐವತ್ತು ವರುಷದ ವರೆಗೆ ಸಭೆಯ ಗುಡಾರದಲ್ಲಿ ಕೆಲಸ ಮಾಡುವದಕ್ಕೆ ಸೈನ್ಯದಲ್ಲಿ ಸೇರುವವ ರನ್ನೆಲ್ಲಾ ಎಣಿಸಿ ಕೆಹಾತನ ಮಕ್ಕಳ ಲೆಕ್ಕವನ್ನು ತಕ್ಕೊಳ್ಳಿರಿ.
ಅರಣ್ಯಕಾಂಡ 4 : 4 (KNV)
ಸಭೆಯ ಗುಡಾರದಲ್ಲಿ ಕೆಹಾತನ ಮಕ್ಕಳ ಸೇವೆಯು ಅತಿ ಪರಿಶುದ್ಧವಾದದ್ದೇ.
ಅರಣ್ಯಕಾಂಡ 4 : 5 (KNV)
ಪಾಳೆಯವು ಹೊರಡು ವಾಗ ಆರೋನನೂ ಅವನ ಮಕ್ಕಳೂ ಒಳಗೆ ಹೋಗಿ ತೆರೆಯನ್ನು ಇಳಿಸಿ ಅದರಿಂದ ಸಾಕ್ಷಿಯ ಮಂಜೂಷವನ್ನು ಮುಚ್ಚಿ
ಅರಣ್ಯಕಾಂಡ 4 : 6 (KNV)
ಅದರ ಮೇಲೆ ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹೊದಿಸಬೇಕು. ಅದರ ಮೇಲ್ಭಾಗ ದಲ್ಲಿ ಪೂರ್ಣವಾದ ನೀಲಿ ವಸ್ತ್ರವನ್ನು ಹಾಸಿ ಅದರ ಕೋಲುಗಳನ್ನು ಇಡಬೇಕು. 7
ಅರಣ್ಯಕಾಂಡ 4 : 7 (KNV)
ಸಮ್ಮುಖದ ರೊಟ್ಚಿಯ ಮೇಜಿನ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದರ ಮೇಲೆ ಪಾತ್ರೆ ಚಮಟಿಕೆ ಪಾನದ ಅರ್ಪ ಣೆಯ ಹೂಜಿ ಇವುಗಳನ್ನು ಇಡಬೇಕು. ನಿತ್ಯವಾದ ರೊಟ್ಟಿಯೂ ಅದರ ಮೇಲೆ ಇರಬೇಕು.
ಅರಣ್ಯಕಾಂಡ 4 : 8 (KNV)
ಅವೆ ಲ್ಲವುಗಳ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಹೊದಿಸಿ ಅದರ ಕೋಲುಗಳನ್ನು ಇಡಬೇಕು.
ಅರಣ್ಯಕಾಂಡ 4 : 9 (KNV)
ಇದ ಲ್ಲದೆ ಅವರು ನೀಲಿ ವಸ್ತ್ರವನ್ನು ತಕ್ಕೊಂಡು ಅದರಿಂದ ದೀಪಸ್ತಂಭವನ್ನೂ ಅದರ ದೀಪಗಳನ್ನೂ ಚಮಟಿಕೆಗಳನ್ನೂ ದೀಪದ ಕುಡಿತೆಗೆಯುವ ಬಟ್ಟಲುಗಳನ್ನೂ ಅದಕ್ಕೆ ಸೇವೆ ಮಾಡುವ ಸಕಲ ಎಣ್ಣೆಯ ಪಾತ್ರೆಗಳನ್ನೂ ಮುಚ್ಚಬೇಕು.
ಅರಣ್ಯಕಾಂಡ 4 : 10 (KNV)
ಅವರು ಅದನ್ನೂ ಅದರ ಎಲ್ಲಾ ವಸ್ತುಗಳನ್ನೂ ಕಡಲು ಹಂದಿಯ ಚರ್ಮಗಳ ಮುಚ್ಚಳ ದೊಳಗೆ ಇಟ್ಟು ಅಡ್ಡದಂಡೆಯ ಮೇಲೆ ಹಾಕಬೇಕು.
ಅರಣ್ಯಕಾಂಡ 4 : 11 (KNV)
ಇದಲ್ಲದೆ ಬಂಗಾರದ ಬಲಿಪೀಠದ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮವನ್ನು ಮುಚ್ಚಳ ಹೊದಿಸಿ ಅದರ ಕೋಲುಗಳನ್ನು ಇಡಬೇಕು.
ಅರಣ್ಯಕಾಂಡ 4 : 12 (KNV)
ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವ ಸೇವೆಯ ಎಲ್ಲಾ ವಸ್ತುಗಳನ್ನು ಅವರು ತಕ್ಕೊಂಡು ನೀಲಿ ವಸ್ತ್ರದಿಂದ ಕಟ್ಟಿ ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಮುಚ್ಚಿ ಅಡ್ಡದಂಡೆಯ ಮೇಲೆ ಹಾಕಬೇಕು.
ಅರಣ್ಯಕಾಂಡ 4 : 13 (KNV)
ಬಲಿಪೀಠದ ಬೂದಿಯನ್ನು ತೆಗೆದು ಅದರ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ
ಅರಣ್ಯಕಾಂಡ 4 : 14 (KNV)
ಸೇವೆ ಮಾಡುವ ಎಲ್ಲಾ ವಸ್ತುಗಳನ್ನೂ ಅಗ್ನಿಪಾತ್ರೆಗಳನ್ನೂ ಮುಳ್ಳುಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಬಲಿಪೀಠದ ಎಲ್ಲಾ ವಸ್ತುಗಳನ್ನೂ ಅದರ ಮೇಲಿಟ್ಟು ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹಾಕಿ ಅದರ ಕೋಲುಗಳನ್ನು ಇಡಬೇಕು.
ಅರಣ್ಯಕಾಂಡ 4 : 15 (KNV)
ಆರೋನನೂ ಅವನ ಕುಮಾರರೂ ಪರಿಶುದ್ಧ ಸ್ಥಳವನ್ನು ಅದರ ಎಲ್ಲಾ ವಸ್ತುಗಳನ್ನು ಮುಚ್ಚಿದಮೇಲೆ ಪಾಳೆಯವು ಹೊರಡುವಾಗ ಕೆಹಾತನ ಕುಮಾರರು ಅದನ್ನು ಹೊತ್ತು ಕೊಂಡು ಹೋಗುವದಕ್ಕೆ ಪ್ರವೇಶಿಸಬೇಕು; ಅವರು ಸಾಯದ ಹಾಗೆ ಪರಿಶುದ್ಧವಾದ ಯಾವದನ್ನೂ ಮುಟ್ಟ ಬಾರದು. ಸಭೆಯ ಗುಡಾರದಲ್ಲಿ ಕೆಹಾತನ ಕುಮಾರರ ಹೊರೆಗಳು ಇವೇ ಆಗಿವೆ.
ಅರಣ್ಯಕಾಂಡ 4 : 16 (KNV)
ಯಾಜಕನಾದ ಆರೋನನ ಮಗನಾದ ಎಲ್ಲಾಜಾ ರನ ಕೆಲಸ ಯಾವದಂದರೆ: ದೀಪದ ಎಣ್ಣೆಯೂ ಸುಗಂಧ ಧೂಪವೂ ನಿತ್ಯದ ಆಹಾರ ಸಮರ್ಪಣೆಯೂ ಅಭಿಷೇಕದ ತೈಲವೂ ಸಮಸ್ತಗುಡಾರವೂ ಅದರ ಲ್ಲಿರುವ ಸಕಲವೂ ಪರಿಶುದ್ಧ ಸ್ಥಳದಲ್ಲಿಯೂ ಅದರ ವಸ್ತುಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು.
ಅರಣ್ಯಕಾಂಡ 4 : 17 (KNV)
ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನಂದರೆ--
ಅರಣ್ಯಕಾಂಡ 4 : 18 (KNV)
ನೀವು ಲೇವಿಯರೊಳಗಿಂದ ಕೆಹಾತಿಯರ ಗೋತ್ರದ ಕುಟುಂಬಗಳನ್ನು ಕಡಿದು ಹಾಕಬೇಡಿರಿ.
ಅರಣ್ಯಕಾಂಡ 4 : 19 (KNV)
ಆದರೆ ಅವರು ಅತಿ ಪರಿಶುದ್ಧವಾ ದವುಗಳನ್ನು ಸವಿಾಪಿಸುವಾಗ ಅವರು ಸಾಯದೆ ಬದುಕುವ ಹಾಗೆ ಅವರಿಗೆ ಮಾಡಬೇಕಾದದ್ದೇ ನೆಂದರೆ--ಆರೋನನೂ ಅವನ ಕುಮಾರರೂ ಒಳಗೆ ಪ್ರವೇಶಿಸಿ ಅವರಲ್ಲಿ ಒಬ್ಬೊಬ್ಬನನ್ನು ಅವನ ಕೆಲಸಕ್ಕೂ ಅವನ ಹೊರೆಗೂ ನೇಮಿಸಬೇಕು.
ಅರಣ್ಯಕಾಂಡ 4 : 20 (KNV)
ಆದರೆ ಅವರು ಸಾಯದ ಹಾಗೆ ಪರಿಶುದ್ಧವಾದವುಗಳನ್ನು ನೋಡಲು ಒಳಗೆ ಹೋಗಬಾರದು.
ಅರಣ್ಯಕಾಂಡ 4 : 21 (KNV)
ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ--
ಅರಣ್ಯಕಾಂಡ 4 : 22 (KNV)
ಗೇರ್ಷೋನನ ಕುಮಾರರ ಲೆಕ್ಕವನ್ನು ಸಹ ಅವರ ತಂದೆ ಮನೆಗಳ ಪ್ರಕಾರವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ತೆಗೆದುಕೊಳ್ಳ ಬೇಕು.
ಅರಣ್ಯಕಾಂಡ 4 : 23 (KNV)
ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಐವತ್ತು ವರುಷಗಳ ಪ್ರಾಯವುಳ್ಳವರನ್ನು ಸಭೆಯ ಗುಡಾರದಲ್ಲಿ ಸೇವೆಮಾಡುವದಕ್ಕೂ ಅದನ್ನು ಪೂರೈಸು ವದಕ್ಕೂ ಸೇರುವವರೆಲ್ಲರನ್ನೂ ಎಣಿಸು.
ಅರಣ್ಯಕಾಂಡ 4 : 24 (KNV)
ಗೇರ್ಷೋನಿಯರ ಕುಟುಂಬಗಳ ಸೇವೆಯೂ ಹೊರೆಯೂ ಯಾವದಂದರೆ--
ಅರಣ್ಯಕಾಂಡ 4 : 25 (KNV)
ಅವರು ಗುಡಾರದ ತೆರೆಗಳನ್ನೂ ಸಭೆಯ ಗುಡಾರವನ್ನೂ ಅದರ ಹೊದಿಕೆ ಯನ್ನೂ ಅದರ ಮೇಲಿರುವ ಕಡಲು ಹಂದಿಯ ಚರ್ಮದ ಹೊದಿಕೆಯನ್ನೂ ಸಭೆಯ ಗುಡಾರದ ಬಾಗಲಿನ ತೆರೆಯನ್ನೂ
ಅರಣ್ಯಕಾಂಡ 4 : 26 (KNV)
ಅಂಗಳದ ಪರದೆಗಳನ್ನೂ ಗುಡಾರವನ್ನೂ ಬಲಿಪೀಠವನ್ನೂ ಇವುಗಳ ಸುತ್ತಲಿರುವ ಅಂಗಳದ ಬಾಗಲಿನ ತೆರೆಯನ್ನೂ ಅವುಗಳ ಹಗ್ಗಗ ಳನ್ನೂ ಅವುಗಳ ಸೇವೆಯ ಎಲ್ಲಾ ವಸ್ತುಗಳನ್ನೂ ಹೊತ್ತು ಕೊಳ್ಳಬೇಕು. ಅವುಗಳಿಗೆ ಮಾಡತಕ್ಕ ಎಲ್ಲಾ ಸೇವೆಯನ್ನು ಹೀಗೆ ಅವರು ಮಾಡಬೇಕು.
ಅರಣ್ಯಕಾಂಡ 4 : 27 (KNV)
ಆರೋನನೂ ಅವನ ಕುಮಾರರೂ ನೇಮಿಸುವ ಹಾಗೆಯೇ ಗೇರ್ಷೋನನ ಕುಮಾರರ ಸೇವೆಯೆಲ್ಲಾ ಅವರು ಹೊರತಕ್ಕದ್ದೆಲ್ಲವೂ ಮಾಡತಕ್ಕದ್ದೆಲ್ಲವೂ ಆಗಬೇಕು. ನೀವು ಅವರ ಸಮಸ್ತ ಹೊರೆಯನ್ನೂ ಅಪ್ಪಣೆಯ ಪ್ರಕಾರ ಅವರಿಗೆ ನೇಮಿಸ ಬೇಕು.
ಅರಣ್ಯಕಾಂಡ 4 : 28 (KNV)
ಗೇರ್ಷೋನನ ಕುಮಾರರು ಸಭೆಯ ಗುಡಾರದಲ್ಲಿ ಮಾಡುವ ಸೇವೆಯು ಇದೇ: ಯಾಜಕ ನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರುವದು ಅವರಿಗೆ ಕೊಡಲ್ಪಟ್ಟ ಅಪ್ಪಣೆಯಾಗಿದೆ.
ಅರಣ್ಯಕಾಂಡ 4 : 29 (KNV)
ಮೆರಾರೀಯ ಕುಮಾರರನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ಎಣಿಸಬೇಕು.
ಅರಣ್ಯಕಾಂಡ 4 : 30 (KNV)
ಮೂವತ್ತು ವರುಷವು ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರನ್ನು ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದ ಸೇವೆಮಾಡುವ ದಕ್ಕಾಗಿ ಒಳಗೆ ಪ್ರವೇಶಿಸುವವರನ್ನೆಲ್ಲಾ ಎಣಿಸಬೇಕು.
ಅರಣ್ಯಕಾಂಡ 4 : 31 (KNV)
ಸಭೆಯ ಗುಡಾರದಲ್ಲಿ ಅವರು ಮಾಡತಕ್ಕ ಸಮಸ್ತ ಸೇವೆಯ ಪ್ರಕಾರ ಅವರು ಹೊರುವದಕ್ಕೆ ಕೊಡಲ್ಪಟ್ಟ ಅಪ್ಪಣೆಯು ಏನಂದರೆ, ಗುಡಾರದ ಹಲಿಗೆಗಳೂ ಅದರ ಅಡ್ಡ ತೊಲೆಗಳೂ ಕಂಬಗಳೂ ಕುಣಿಕೆಗಳೂ.
ಅರಣ್ಯಕಾಂಡ 4 : 32 (KNV)
ಸುತ್ತಲಿರುವ ಅಂಗಳದ ಕಂಬಗಳೂ ಕುಣಿಕೆಗಳೂ ಗೂಟಗಳೂ ಅವುಗಳ ಹಗ್ಗಗಳೂ ಎಲ್ಲಾ ವಸ್ತುಗಳ ಪ್ರಕಾರವಾಗಿಯೂ ಅವುಗಳ ಸಮಸ್ತ ಸೇವೆಯ ಪ್ರಕಾರವಾಗಿಯೂ ಅವರು ಹೊರುವದಕ್ಕೆ ಕೊಡಲ್ಪಟ್ಟ ಅಪ್ಪಣೆಯ ವಸ್ತುಗಳನ್ನು ನೀವು ಹೆಸರೆಸರಾಗಿ ಎಣಿಸ ಬೇಕು.
ಅರಣ್ಯಕಾಂಡ 4 : 33 (KNV)
ಮೆರಾರೀಯ ಕುಮಾರರ ಕುಟುಂಬಗಳ ಸೇವೆಯೂ ಗುಡಾರದಲ್ಲಿ ಅವರು ಮಾಡುವ ಸಮಸ್ತ ಸೇವೆಯೂ ಇದೇ. ಅದು ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರಬೇಕು.
ಅರಣ್ಯಕಾಂಡ 4 : 34 (KNV)
ಆಗ ಮೋಶೆಯೂ ಆರೋನನೂ ಸಭೆಯ ಮುಖ್ಯಸ್ಥರೂ ಕೆಹಾತಿಯರ ಕುಮಾರರನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ
ಅರಣ್ಯಕಾಂಡ 4 : 35 (KNV)
ಮೂವತ್ತು ವರು ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದಲ್ಲಿ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನು ಎಣಿಸಿ ದರು.
ಅರಣ್ಯಕಾಂಡ 4 : 36 (KNV)
ಕುಟುಂಬಗಳ ಪ್ರಕಾರ ಅವರಲ್ಲಿ ಎಣಿಸಲ್ಪ ಟ್ಟವರು ಎರಡು ಸಾವಿರದ ಏಳು ನೂರ ಐವತ್ತು ಮಂದಿಯಾಗಿದ್ದರು.
ಅರಣ್ಯಕಾಂಡ 4 : 37 (KNV)
ಮೋಶೆಗೆ ಕರ್ತನು ಅಪ್ಪಣೆ ಮಾಡಿದ ಹಾಗೆ ಮೋಶೆಯೂ ಆರೋನನೂ ಎಣಿಸದ ಕೆಹಾತಿಯರ ಕುಟುಂಬಗಳಲ್ಲಿ ಎಣಿಸಲ್ಪಟ್ಟವರೂ ಸಭೆಯ ಗುಡಾರದಲ್ಲಿ ಸೇವೆಮಾಡುವವರೆಲ್ಲರೂ ಇವರೇ.
ಅರಣ್ಯಕಾಂಡ 4 : 38 (KNV)
ಗೇರ್ಷೋನನ ಕುಮಾರರಲ್ಲಿ ಅವರ ಕುಟುಂಬ ಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ ಎಣಿಸಲ್ಪಟ್ಟವರು
ಅರಣ್ಯಕಾಂಡ 4 : 39 (KNV)
ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾ ರದ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನೂ
ಅರಣ್ಯಕಾಂಡ 4 : 40 (KNV)
ಅಂದರೆ ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ ಎಣಿಸಲ್ಪ ಟ್ಟವರು ಎರಡು ಸಾವಿರದ ಆರುನೂರ ಮೂವತ್ತು ಮಂದಿಯಾಗಿದ್ದರು.
ಅರಣ್ಯಕಾಂಡ 4 : 41 (KNV)
ಕರ್ತನ ಅಪ್ಪಣೆಯ ಹಾಗೆ ಮೋಶೆಯೂ ಆರೋನನೂ ಎಣಿಸಿದ ಗೇರ್ಷೋನನ ಕುಮಾರರ ಕುಟುಂಬಗಳಲ್ಲಿ ಎಣಿಸಲ್ಪಟ್ಟವರೂ ಸಭೆಯ ಗುಡಾರದಲ್ಲಿ ಸೇವೆಮಾಡುವವರೆಲ್ಲರೂ ಇವರೇ.
ಅರಣ್ಯಕಾಂಡ 4 : 42 (KNV)
ಮೆರಾರೀಯ ಕುಮಾರರಲ್ಲಿ ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ ಎಣಿಸಲ್ಪಟ್ಟವರು;
ಅರಣ್ಯಕಾಂಡ 4 : 43 (KNV)
ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನು
ಅರಣ್ಯಕಾಂಡ 4 : 44 (KNV)
ಅಂದರೆ ಅವರ ಕುಟುಂಬಗಳ ಪ್ರಕಾರ ಅವರಲ್ಲಿ ಎಣಿಸಲ್ಪಟ್ಟವರು ಮೂರುಸಾವಿರದ ಇನ್ನೂರು ಮಂದಿಯಾಗಿದ್ದರು.
ಅರಣ್ಯಕಾಂಡ 4 : 45 (KNV)
ಮೋಶೆಗೆ ಕರ್ತನು ಅಪ್ಪಣೆಮಾಡಿದ ಹಾಗೆ ಮೋಶೆಯೂ ಆರೋನನೂ ಎಣಿಸಿದ ಮೆರಾರೀಯ ಕುಮಾರರ ಕುಟುಂಬಗಳಲ್ಲಿ ಎಣಿಸಲ್ಪಟ್ಟವರು ಇವರೇ.
ಅರಣ್ಯಕಾಂಡ 4 : 46 (KNV)
ಮೋಶೆಯೂ ಆರೋನನೂ ಇಸ್ರಾಯೇಲಿನ ಮುಖ್ಯಸ್ಥರೂ ಎಣಿಸಿದ ಸಮಸ್ತ ಲೇವಿಯರು ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ
ಅರಣ್ಯಕಾಂಡ 4 : 47 (KNV)
ಮೂವತ್ತು ವರು ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದಲ್ಲಿ ಕೆಲಸ ಮಾಡುವದಕ್ಕಾಗಿಯೂ ಹೊರುವದಕ್ಕಾಗಿಯೂ ಬರುವವರೆಲ್ಲರು
ಅರಣ್ಯಕಾಂಡ 4 : 48 (KNV)
ಅಂದರೆ ಅವರಲ್ಲಿ ಎಣಿಸಲ್ಪಟ್ಟವರು ಎಂಟು ಸಾವಿರದ ಐನೂರ ಎಂಭತ್ತು ಮಂದಿ.ಕರ್ತನು ಮೋಶೆಗೆ ಅಪ್ಪಣೆಕೊಟ್ಟ ಪ್ರಕಾರ ಅವರನ್ನು ಅವರವರ ಸೇವೆಗಾಗಿಯೂ ಅವರವರ ಹೊರೆ ಗಾಗಿಯೂ ಅವರನ್ನು ಎಣಿಸಿದರು.
ಅರಣ್ಯಕಾಂಡ 4 : 49 (KNV)
ಕರ್ತನು ಮೋಶೆಗೆ ಅಪ್ಪಣೆಕೊಟ್ಟ ಪ್ರಕಾರ ಅವರನ್ನು ಅವರವರ ಸೇವೆಗಾಗಿಯೂ ಅವರವರ ಹೊರೆ ಗಾಗಿಯೂ ಅವರನ್ನು ಎಣಿಸಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49

BG:

Opacity:

Color:


Size:


Font: