ಅರಣ್ಯಕಾಂಡ 33 : 1 (KNV)
ಮೋಶೆ ಆರೋನರ ಕೈಕೆಳಗೆ ಐಗುಪ್ತ ದೇಶದೊಳಗಿಂದ ತಮ್ಮ ಸೈನ್ಯಗಳ ಪ್ರಕಾರ ಹೊರಟ ಇಸ್ರಾಯೇಲ್ ಮಕ್ಕಳ ಪ್ರಯಾಣಗಳು ಇವೇ.
ಅರಣ್ಯಕಾಂಡ 33 : 2 (KNV)
ಮೋಶೆಯು ಕರ್ತನ ಆಜ್ಞೆಯ ಪ್ರಕಾರ ಅವರ ಪ್ರಯಾಣಗಳ ಹೊರಡೋಣಗಳನ್ನು ಬರೆದನು.
ಅರಣ್ಯಕಾಂಡ 33 : 3 (KNV)
ಅವರ ಪ್ರಯಾಣಗಳ ಹೊರಡೋಣಗಳು ಯಾವ ವೆಂದರೆ--ಅವರು ಮೊದಲನೇ ತಿಂಗಳಿನ ಹದಿನೈದನೇ ದಿವಸದಲ್ಲಿ ಪಸ್ಕ ಹಬ್ಬದ ಮರು ದಿವಸದಲ್ಲಿ ರಮ್ಸೇಸಿ ನಿಂದ ಹೊರಟರು; ಇಸ್ರಾಯೇಲ್ ಮಕ್ಕಳು ಸಮಸ್ತ ಐಗುಪ್ತ್ಯರ ಎದುರಿನಲ್ಲೇ ಜಯೋತ್ಸವದಿಂದ ಹೊರಟು ಹೋದರು.
ಅರಣ್ಯಕಾಂಡ 33 : 4 (KNV)
ಹೇಗಂದರೆ ಕರ್ತನು ಅವರಲ್ಲಿ ಸಮಸ್ತ ಚೊಚ್ಚಲಿನವರನ್ನು ಹೊಡೆದದ್ದರಿಂದ ಐಗುಪ್ತ್ಯರು ಹೂಣಿಡುತ್ತಿದ್ದರು; ಕರ್ತನು ಅವರ ದೇವರುಗಳಿಗೂ ತೀರ್ಪು ಮಾಡಿದನು.
ಅರಣ್ಯಕಾಂಡ 33 : 5 (KNV)
ಇಸ್ರಾಯೇಲ್ ಮಕ್ಕಳು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದರು.
ಅರಣ್ಯಕಾಂಡ 33 : 6 (KNV)
ಸುಕ್ಕೋತಿನಿಂದ ಹೊರಟು ಅರಣ್ಯದ ಮೇರೆಯಲ್ಲಿರುವ ಏತಾಮಿನಲ್ಲಿ ಇಳಿದು ಕೊಂಡರು.
ಅರಣ್ಯಕಾಂಡ 33 : 7 (KNV)
ಏತಾಮಿನಿಂದ ಹೊರಟು ಬಾಳ್ಚೆಫೋನಿಗೆ ಎದುರಾಗಿರುವ ಪೀಹಹೀರೋತಿಗೆ ತಿರುಗಿಕೊಂಡು ಮಿಗ್ದೋಲಿಗೆ ಎದುರಾಗಿ ಇಳಿದುಕೊಂಡರು.
ಅರಣ್ಯಕಾಂಡ 33 : 8 (KNV)
ಪೀಹ ಹೀರೋತಿನಿಂದ ಹೊರಟು ಸಮುದ್ರದೊಳಗಿಂದ ಅರಣ್ಯಕ್ಕೆ ದಾಟಿದರು; ಆಗ ಅವರು ಮೂರು ದಿವಸದ ಪ್ರಯಾಣ ಮಾಡಿ ಏತಾಮೆಂಬ ಅರಣ್ಯದಲ್ಲಿ ನಡೆದು ಮಾರಾದಲ್ಲಿ ಇಳಿದರು.
ಅರಣ್ಯಕಾಂಡ 33 : 9 (KNV)
ಮಾರಾದಿಂದ ಹೊರಟು ಏಲೀಮಿಗೆ ಬಂದರು; ಏಲೀಮಿನಲ್ಲಿ ಹನ್ನೆರಡು ನೀರಿನ ಒರತೆಗಳೂ ಎಪ್ಪತ್ತು ಖರ್ಜೂರ ಮರಗಳೂ ಇದ್ದದ ರಿಂದ ಅಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 10 (KNV)
ಏಲೀಮಿನಿಂದ ಹೊರಟು ಕೆಂಪುಸಮುದ್ರದ ಬಳಿಯಲ್ಲಿ ಇಳಿದು ಕೊಂಡರು.
ಅರಣ್ಯಕಾಂಡ 33 : 11 (KNV)
ಕೆಂಪುಸಮುದ್ರದಿಂದ ಹೊರಟು ಸೀನೆಂಬ ಅರಣ್ಯದಲ್ಲಿ ಇಳಿದುಕೊಂಡು,
ಅರಣ್ಯಕಾಂಡ 33 : 12 (KNV)
ಸೀನೆಂಬ ಅರಣ್ಯದಿಂದ ಹೊರಟು ದೊಪ್ಕದಲ್ಲಿ ಇಳಿದು ಕೊಂಡರು.
ಅರಣ್ಯಕಾಂಡ 33 : 13 (KNV)
ದೊಪ್ಕದಿಂದ ಹೊರಟು ಆಲೂಷದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 14 (KNV)
ಆಲೂಷದಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಆದರೆ ಅಲ್ಲಿ ಜನರಿಗೆ ಕುಡಿಯುವದಕ್ಕೆ ನೀರು ಇದ್ದಿಲ್ಲ;
ಅರಣ್ಯಕಾಂಡ 33 : 15 (KNV)
ರೆಫೀ ದೀಮಿನಿಂದ ಹೊರಟು ಸೀನಾಯಿ ಅರಣ್ಯದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 16 (KNV)
ಸೀನಾಯಿ ಅರಣ್ಯದಿಂದ ಹೊರಟು ಕಿಬ್ರೋತ್ಹತಾವದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 17 (KNV)
ಕಿಬ್ರೋತ್ಹತಾವದಿಂದ ಹೊರಟು ಹಚೇರೋತಿ ನಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 18 (KNV)
ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 19 (KNV)
ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚನಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 20 (KNV)
ರಿಮ್ಮೋನ್ ಪೆರೆಚನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 21 (KNV)
ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 22 (KNV)
ರಿಸ್ಸದಿಂದ ಹೊರಟು ಕೆಹೇಲಾತಿ ನಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 23 (KNV)
ಕೆಹೇಲಾತಿನಿಂದ ಹೊರಟು ಶೆಫೆರ್ ಪರ್ವತದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 24 (KNV)
ಶೆಫೆರ್ ಪರ್ವತದಿಂದ ಹೊರಟು ಹರಾದದಲ್ಲಿ ಇಳಿದು ಕೊಂಡರು.
ಅರಣ್ಯಕಾಂಡ 33 : 25 (KNV)
ಹರಾದದಿಂದ ಹೊರಟು ಮಖೇ ಲೋತಿನಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 26 (KNV)
ಮಖೇಲೋತಿ ನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 27 (KNV)
ತಹತಿನಿಂದ ಹೊರಟು ತೆರಹದಲ್ಲಿ ಇಳಿದು ಕೊಂಡರು.
ಅರಣ್ಯಕಾಂಡ 33 : 28 (KNV)
ತೆರಹದಿಂದ ಹೊರಟು ಮಿತ್ಕದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 29 (KNV)
ಮಿತ್ಕದಿಂದ ಹೊರಟು ಹಷ್ಮೋನದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 30 (KNV)
ಹಷ್ಮೋನ ದಿಂದ ಹೊರಟು ಮೋಸೇರೋತಿನಲ್ಲಿ ಇಳಿದು ಕೊಂಡರು.
ಅರಣ್ಯಕಾಂಡ 33 : 31 (KNV)
ಮೋಸೇರೋತಿನಿಂದ ಹೊರಟು ಬೆನೇ ಯಾಕಾನಿನಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 32 (KNV)
ಬೆನೇಯಾ ಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದು ಕೊಂಡರು.
ಅರಣ್ಯಕಾಂಡ 33 : 33 (KNV)
ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 34 (KNV)
ಯೊಟ್ಬಾತ ದಿಂದ ಹೊರಟು ಅಬ್ರೋನದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 35 (KNV)
ಅಬ್ರೋನದಿಂದ ಹೊರಟು ಎಚ್ಯೋನ್ಗೆಬೆರಿನಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 36 (KNV)
ಎಚ್ಯೋನ್ಗೆಬೆರಿನಿಂದ ಹೊರಟು ಕಾದೇಶೆಂಬ ಜಿನ್ ಅರಣ್ಯದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 37 (KNV)
ಕಾದೇಶಿನಿಂದ ಹೊರಟು ಎದೋಮ್ ದೇಶದ ಅಂಚಿನಲ್ಲಿರುವ ಹೋರ್ ಗುಡ್ಡದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 38 (KNV)
ಆಗ ಯಾಜಕನಾದ ಆರೋನನು ಕರ್ತನ ಆಜ್ಞೆಯ ಪ್ರಕಾರ ಹೋರ್ ಗುಡ್ಡದ ಮೇಲೆ ಏರಿ ಅಲ್ಲಿ ಇಸ್ರಾಯೇಲ್ ಮಕ್ಕಳು ಐಗುಪ್ತ ದೇಶದಿಂದ ಹೊರಟ ನಾಲ್ವತ್ತನೇ ವರುಷದ ಐದನೇ ತಿಂಗಳಿನ ಮೊದಲನೇ ದಿವಸದಲ್ಲಿ ಸತ್ತನು.
ಅರಣ್ಯಕಾಂಡ 33 : 39 (KNV)
ಆರೋನನು ಹೋರ್ ಗುಡ್ಡ ದಲ್ಲಿ ಸಾಯುವಾಗ ಅವನು ನೂರ ಇಪ್ಪತ್ತು ಮೂರು ವರುಷದವನಾಗಿದ್ದನು.
ಅರಣ್ಯಕಾಂಡ 33 : 40 (KNV)
ಆಗ ಇಸ್ರಾಯೇಲ್ ಮಕ್ಕಳು ಬರುವದನ್ನು ಕಾನಾನ್ ದೇಶದ ದಕ್ಷಿಣದಲ್ಲಿ ವಾಸವಾಗಿದ್ದ ಕಾನಾನ್ಯ ರಿಗೆ ಅರಸನಾದ ಅರಾದನು ಕೇಳಿದನು.
ಅರಣ್ಯಕಾಂಡ 33 : 41 (KNV)
ಹೋರ್ ಗುಡ್ಡದಿಂದ ಅವರು ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 42 (KNV)
ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 43 (KNV)
ಪೂನೋನಿ ನಿಂದ ಹೊರಟು ಒಬೋತಿನಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 44 (KNV)
ಒಬೋತಿನಿಂದ ಹೊರಟು ಮೋವಾಬಿನ ಮೇರೆ ಯಲ್ಲಿರುವ ಇಯ್ಯಾಮಿನಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 45 (KNV)
ಇಯ್ಯಾಮಿನಿಂದ ಹೊರಟು ದೀಬೋನ್ಗಾದಿನಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 46 (KNV)
ದೀಬೋನ್ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದು ಕೊಂಡರು.
ಅರಣ್ಯಕಾಂಡ 33 : 47 (KNV)
ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ನೇಬೋವಿಗೆದುರಾಗಿರುವ ಅಬಾರೀಮ್ ಗುಡ್ಡಗಳಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 48 (KNV)
ಅಬಾರೀಮ್ ಗುಡ್ಡಗಳಿಂದ ಹೊರಟು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲು ಗಳಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 33 : 49 (KNV)
ಅವರು ಯೊರ್ದನ್ ನದಿಯ ಬಳಿಯಲ್ಲಿರುವ ಬೇತ್ಯೆಷೀಮೋತಿನಿಂದ ಮೋವಾಬಿನ ಬೈಲುಗಳಲ್ಲಿರುವ ಆಬೇಲ್ಶಿಟ್ಟೀಮಿನ ಪರ್ಯಂತರದ ವರೆಗೂ ಇಳಿದುಕೊಂಡರು.
ಅರಣ್ಯಕಾಂಡ 33 : 50 (KNV)
ಕರ್ತನು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ--
ಅರಣ್ಯಕಾಂಡ 33 : 51 (KNV)
ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇ ನಂದರೆ--ನೀವು ಯೊರ್ದನನ್ನು ದಾಟಿ ಕಾನಾನ್ ದೇಶಕ್ಕೆ ಬರುವಾಗ
ಅರಣ್ಯಕಾಂಡ 33 : 52 (KNV)
ನೀವು ನಿಮ್ಮ ಮುಂದೆ ಆ ದೇಶದ ಸಮಸ್ತ ನಿವಾಸಿಗಳನ್ನು ಹೊರಡಿಸಿ ಅವರ ಚಿತ್ರಗಳನ್ನೂ ಅವರ ಕೆತ್ತಿದ ವಿಗ್ರಹಗಳನ್ನೂ ನಾಶಮಾಡಿ ಅವರ ಸಮಸ್ತ ಮೇಡುಗಳನ್ನೂ ಹಾಳುಮಾಡಬೇಕು.
ಅರಣ್ಯಕಾಂಡ 33 : 53 (KNV)
ನೀವು ಆ ದೇಶವನ್ನು ತಕ್ಕೊಂಡು ಅದರಲ್ಲಿ ವಾಸಮಾಡಿರಿ; ಯಾಕಂದರೆ ಅದನ್ನು ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ.
ಅರಣ್ಯಕಾಂಡ 33 : 54 (KNV)
ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟಿನಿಂದ ಸ್ವಾಧೀನಮಾಡಿ ಹಂಚಿಕೊಳ್ಳಬೇಕು; ಹೆಚ್ಚಾದವರಿಗೆ ಸ್ವಾಸ್ತ್ಯವನ್ನು ಹೆಚ್ಚಿಸಿ ಕಡಿಮೆಯಾದ ವರಿಗೆ ಸ್ವಾಸ್ತ್ಯವನ್ನು ಕಡಿಮೆಮಾಡಬೇಕು; ಒಬ್ಬೊಬ್ಬ ನಿಗೆ ಚೀಟು ಎಲ್ಲಿ ಬೀಳುವದೋ ಅದೇ ಅವನಿಗಾಗ ಬೇಕು; ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು.
ಅರಣ್ಯಕಾಂಡ 33 : 55 (KNV)
ಆದರೆ ನೀವು ನಿಮ್ಮ ಮುಂದೆ ದೇಶದ ನಿವಾಸಿ ಗಳನ್ನು ಹೊರಡಿಸದಿದ್ದರೆ ನೀವು ಉಳಿಸಿದವರು ನಿಮ್ಮ ಕಣ್ಣುಗಳಲ್ಲಿ ಮುಳ್ಳುಗಳಾಗಿಯೂ ನಿಮ್ಮ ಪಾರ್ಶ್ವಗಳಲ್ಲಿ ಕಂಟಕಗಳಾಗಿಯೂ ಇರುವರು; ನೀವು ವಾಸಿಸುವ ದೇಶದಲ್ಲಿ ಅವರು ನಿಮ್ಮನ್ನು ಶ್ರಮೆಪಡಿಸುವರು.
ಅರಣ್ಯಕಾಂಡ 33 : 56 (KNV)
ಇದಲ್ಲದೆ ನಾನು ಅವರಿಗೆ ಮಾಡಬೇಕೆಂದಿದ್ದ ಹಾಗೆ ನಿಮಗೆ ಮಾಡುವೆನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56