ಅರಣ್ಯಕಾಂಡ 30 : 1 (KNV)
ಮೋಶೆಯು ಇಸ್ರಾಯೇಲ್ ಮಕ್ಕಳ ಗೋತ್ರಗಳ ಯಜಮಾನರ ಸಂಗಡ ಮಾತನಾಡಿ -- ಕರ್ತನು ಆಜ್ಞಾಪಿಸಿದ್ದೇನಂದರೆ,
ಅರಣ್ಯಕಾಂಡ 30 : 2 (KNV)
ಒಬ್ಬನು ಕರ್ತನಿಗೆ ಪ್ರಮಾಣವನ್ನು ಮಾಡಿದರೆ ಇಲ್ಲವೆ ಕಟ್ಟಳೆಯಿಂದ ತನ್ನ ಪ್ರಾಣವನ್ನು ಬಾಧಿಸುವ ಆಣೆ ಇಟ್ಟುಕೊಂಡರೆ ಅವನು ತನ್ನ ಮಾತನ್ನು ತಪ್ಪಿಸಬಾರದು, ಬಾಯಿಂದ ಹೊರಟ ಎಲ್ಲಾದರ ಪ್ರಕಾರ ಮಾಡಬೇಕು.
ಅರಣ್ಯಕಾಂಡ 30 : 3 (KNV)
ಸ್ತ್ರೀಯು ಕರ್ತನಿಗೆ ಪ್ರಮಾಣಮಾಡಿ ತನ್ನ ಕನ್ಯಾ ವಸ್ಥೆಯಲ್ಲಿ ತಂದೆಯ ಮನೆಯಲ್ಲಿ ಬಂಧಿಸಿಕೊಂಡರೆ
ಅರಣ್ಯಕಾಂಡ 30 : 4 (KNV)
ಅವಳ ತಂದೆ ಅವಳ ಪ್ರಮಾಣವನ್ನೂ ಅವಳು ತನ್ನ ಪ್ರಾಣದ ಮೇಲೆ ಬಂಧಿಸಿಕೊಂಡದ್ದನ್ನೂ ಕೇಳಿ ಅದಕ್ಕೆ ಮೌನವಾಗಿರುವ ಪಕ್ಷದಲ್ಲಿ ಅವಳ ಪ್ರಮಾಣ ಗಳೆಲ್ಲವೂ ಅವಳು ತನ್ನ ಪ್ರಾಣದ ಮೇಲೆ ಮಾಡಿದ ಬಂಧನವೆಲ್ಲವೂ ನಿಲ್ಲುವವು.
ಅರಣ್ಯಕಾಂಡ 30 : 5 (KNV)
ಆದರೆ ಅವಳ ತಂದೆ ಕೇಳಿದ ದಿವಸದಲ್ಲಿ ಅವಳನ್ನು ತಡೆದರೆ ಅವಳ ಎಲ್ಲಾ ಪ್ರಮಾಣಗಳೂ ಅವಳು ತನ್ನ ಪ್ರಾಣದ ಮೇಲೆ ಇಟ್ಟುಕೊಂಡ ಎಲ್ಲಾ ಬಂಧನಗಳೂ ನಿಲ್ಲವು; ಅವಳ ತಂದೆ ಅವಳಿಗೆ ತಡೆದ ಕಾರಣ ಕರ್ತನು ಅವಳನ್ನು ಕ್ಷಮಿಸುವನು.
ಅರಣ್ಯಕಾಂಡ 30 : 6 (KNV)
ಆದರೆ ಅವಳಿಗೆ ಗಂಡನಿರುವ ವೇಳೆಯಲ್ಲಿ ಅವಳ ಮೇಲೆ ಪ್ರಮಾಣಗಳು ಇಲ್ಲವೆ ಪ್ರಾಣವನ್ನು ಬಂಧಿ ಸುವ ಬಾಯಿಂದ ಬಂದ ಮಾತು ಇದ್ದರೆ
ಅರಣ್ಯಕಾಂಡ 30 : 7 (KNV)
ಅವಳ ಗಂಡನು ಅದನ್ನು ಕೇಳಿ, ಕೇಳಿದ ದಿವಸದಲ್ಲಿ ಅವಳಿಗೆ ಸುಮ್ಮನಿದ್ದ ಪಕ್ಷದಲ್ಲಿ ಅವಳ ಪ್ರಮಾಣಗಳೂ ಅವಳು ತನ್ನ ಪ್ರಾಣದ ಮೇಲೆ ಬಂಧಿಸಿಕೊಂಡದ್ದೂ ನಿಲ್ಲುವವು.
ಅರಣ್ಯಕಾಂಡ 30 : 8 (KNV)
ಆದರೆ ಅವಳ ಗಂಡನು ಅದನ್ನು ಕೇಳಿದ ದಿವಸದಲ್ಲಿ ಅವಳನ್ನು ತಡೆದು ಅವಳ ಮೇಲೆ ಇರುವ ಅವಳ ಪ್ರಮಾಣವನ್ನೂ ಪ್ರಾಣದ ಮೇಲೆ ಅವಳು ಬಂಧಿಸಿ ಕೊಂಡ ಬಾಯಿಂದ ಬಂದ ಮಾತನ್ನೂ ನಿರರ್ಥಕ ಮಾಡಿದ ಪಕ್ಷದಲ್ಲಿ ಕರ್ತನು ಅವಳಿಗೆ ಕ್ಷಮಿಸುವನು.
ಅರಣ್ಯಕಾಂಡ 30 : 9 (KNV)
ಇದಲ್ಲದೆ ವಿಧವೆಯಾದರೂ ಪರಿತ್ಯಾಗ ಮಾಡ ಲ್ಪಟ್ಟವಳಾದರೂ ತಮ್ಮ ಪ್ರಾಣಗಳನ್ನು ಬಂಧಿಸಿದ ಒಂದೊಂದು ಪ್ರಮಾಣವು ಅವರ ಮೇಲೆ ನಿಲ್ಲುವದು.
ಅರಣ್ಯಕಾಂಡ 30 : 10 (KNV)
ಅವಳು ತನ್ನ ಗಂಡನ ಮನೆಯಲ್ಲಿ ಪ್ರಮಾಣ ಮಾಡಿದರೆ ಇಲ್ಲವೆ ಆಣೆಯಿಂದ ತನ್ನ ಪ್ರಾಣವನ್ನು ಬಂಧಿಸಿದರೆ
ಅರಣ್ಯಕಾಂಡ 30 : 11 (KNV)
ಅವಳ ಗಂಡನು ಅದನ್ನು ಕೇಳಿ ಅದಕ್ಕೆ ಮೌನವಾಗಿದ್ದು ಅವಳನ್ನು ತಡೆಯದ ಪಕ್ಷದಲ್ಲಿ ಅವಳ ಸಮಸ್ತ ಪ್ರಮಾಣಗಳೂ ಅವಳು ತನ್ನ ಪ್ರಾಣವನ್ನು ಬಂಧಿಸಿದ ಸಮಸ್ತ ಬಂಧನಗಳೂ ನಿಲ್ಲುವವು.
ಅರಣ್ಯಕಾಂಡ 30 : 12 (KNV)
ಆದರೆ ಅವಳ ಗಂಡನು ಅವುಗಳನ್ನು ಕೇಳಿದ ದಿವಸದಲ್ಲೇ ಅವುಗಳನ್ನು ಪೂರ್ಣವಾಗಿ ನಿರರ್ಥಕಮಾಡಿದ ಪಕ್ಷ ದಲ್ಲಿ ಅವಳ ಪ್ರಮಾಣಗಳಿಗೋಸ್ಕರವೂ ಅವಳ ಪ್ರಾಣದ ಕಟ್ಟಳೆಗೋಸ್ಕರವೂ ಅವಳ ತುಟಿಗಳಿಂದ ಹೊರಟದ್ದು ಯಾವದಾಗಲಿ ನಿಲ್ಲದು, ಅವಳ ಗಂಡನು ಅವುಗಳನ್ನು ನಿರರ್ಥಕಮಾಡಿದ್ದಾನೆ; ಕರ್ತನು ಅವಳನ್ನು ಕ್ಷಮಿಸುವನು.
ಅರಣ್ಯಕಾಂಡ 30 : 13 (KNV)
ಎಲ್ಲಾ ಪ್ರಮಾಣವನ್ನೂ ಪ್ರಾಣವನ್ನು ಕುಂದಿಸುವ ಕಟ್ಟಳೆಯ ಎಲ್ಲಾ ಆಣೆಗಳನ್ನೂ ಅವಳ ಗಂಡನು ಸಾರ್ಥಕಮಾಡಬಹುದು, ಇಲ್ಲವೆ ನಿರರ್ಥಕ ಮಾಡಬಹುದು.
ಅರಣ್ಯಕಾಂಡ 30 : 14 (KNV)
ಆದರೆ ಅವಳ ಗಂಡನು ಅದಕ್ಕೆ ದಿನದಿನಕ್ಕೆ ಪೂರ್ಣವಾಗಿ ಸುಮ್ಮನಿದ್ದರೆ ಅವನು ಅವಳ ಸಮಸ್ತ ಪ್ರಮಾಣಗಳನ್ನೂ ಅವಳ ಮೇಲಿರುವ ಸಮಸ್ತ ಕಟ್ಟಳೆಗಳನ್ನೂ ಸ್ಥಾಪಿಸುತ್ತಾನೆ; ಅವನು ಕೇಳಿದ ದಿವಸ ದಲ್ಲಿ ಅವಳಿಗೆ ಸುಮ್ಮನಿರುವದರಿಂದ ಅವುಗಳನ್ನು ಸ್ಥಾಪಿಸಿದ್ದಾನೆ.
ಅರಣ್ಯಕಾಂಡ 30 : 15 (KNV)
ಆದರೆ ಅವನು ಕೇಳಿದ ತರುವಾಯ ಅವುಗಳನ್ನು ಹೇಗಾದರೂ ನಿರರ್ಥಕ ಮಾಡಿದರೆ ಅವಳ ಅಕ್ರಮವನ್ನು ಹೊರಬೇಕು.
ಅರಣ್ಯಕಾಂಡ 30 : 16 (KNV)
ಪತಿಪತ್ನಿಯರ ವಿಷಯದಲ್ಲಿಯೂ ತಂದೆಯೂ ತಂದೆ ಮನೆಯಲ್ಲಿ ಕನ್ಯಾವಸ್ತೆಯಾಗಿರುವ ಮಗಳೂ ಇವರ ವಿಷಯದಲ್ಲಿಯೂ ಕರ್ತನು ಮೋಶೆಗೆ ಆಜ್ಞಾಪಿಸಿದ ಕಟ್ಟಳೆಗಳು ಇವೇ.

1 2 3 4 5 6 7 8 9 10 11 12 13 14 15 16

BG:

Opacity:

Color:


Size:


Font: