ಅರಣ್ಯಕಾಂಡ 20 : 1 (KNV)
ಇಸ್ರಾಯೇಲ್ ಮಕ್ಕಳ ಸಭೆಯೆಲ್ಲಾ ಜಿನ್ ಎಂಬ ಅರಣ್ಯಕ್ಕೆ ಮೊದಲನೇ ತಿಂಗಳಿನಲ್ಲಿ ಬಂದರು; ಜನರು ಕಾದೇಶಿನಲ್ಲಿ ವಾಸಿಸುವಾಗ ಅಲ್ಲಿ ಮಿರ್ಯಾಮಳು ಸತ್ತು ಅಲ್ಲೇ ಹೂಣಲ್ಪಟ್ಟಳು.
ಅರಣ್ಯಕಾಂಡ 20 : 2 (KNV)
ಆಗ ಸಭೆಗೆ ನೀರಿಲ್ಲದೆ ಇರಲಾಗಿ ಅವರು ಮೋಶೆಗೂ ಆರೋನನಿಗೂ ವಿರೋಧವಾಗಿ ಕೂಡಿ ಕೊಂಡರು.
ಅರಣ್ಯಕಾಂಡ 20 : 3 (KNV)
ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ ಹೇಳಿದ್ದೇನಂದರೆ--ನಮ್ಮ ಸಹೋದರರು ಕರ್ತನ ಮುಂದೆ ಸತ್ತುಹೋದಾಗಲೇ ನಾವು ಸಹ ಸತ್ತು ಹೋಗಿದ್ದರೆ ಚೆನ್ನಾಗಿತ್ತು.
ಅರಣ್ಯಕಾಂಡ 20 : 4 (KNV)
ನಾವೂ ನಮ್ಮ ಪಶುಗಳೂ ಸಾಯುವ ಹಾಗೆ ನೀವು ಯಾಕೆ ಕರ್ತನ ಸಭೆಯನ್ನು ಈ ಅರಣ್ಯಕ್ಕೆ ತಂದಿರಿ?
ಅರಣ್ಯಕಾಂಡ 20 : 5 (KNV)
ಈ ಕೆಟ್ಟ ಸ್ಥಳಕ್ಕೆ ನಮ್ಮನ್ನು ತರುವದಕ್ಕೆ ಯಾಕೆ ನಮ್ಮನ್ನು ಐಗುಪ್ತ ದೇಶದೊಳ ಗಿಂದ ಕರಕೊಂಡು ಬಂದಿರಿ? ಈ ಸ್ಥಳದಲ್ಲಿ ಬೀಜ ವಾದರೂ ಅಂಜೂರವಾದರೂ ದ್ರಾಕ್ಷೇತೋಟವಾ ದರೂ ದಾಳಿಂಬರ ಹಣ್ಣಾದರೂ ಇಲ್ಲ; ಕುಡಿಯುವದಕ್ಕೆ ನೀರು ಸಹ ಇಲ್ಲ ಅಂದರು.
ಅರಣ್ಯಕಾಂಡ 20 : 6 (KNV)
ಆಗ ಮೋಶೆಯೂ ಆರೋನನೂ ಸಭೆಯ ಎದುರಿ ನಿಂದ ಸಭೆಯ ಗುಡಾರದ ಬಾಗಲಿನೊಳಗೆ ಹೋಗಿ ಬೋರಲು ಬಿದ್ದರು; ಕರ್ತನ ಮಹಿಮೆಯು ಅವರಿಗೆ ಕಾಣಬಂತು.
ಅರಣ್ಯಕಾಂಡ 20 : 7 (KNV)
ಆಗ ಕರ್ತನು ಮೋಶೆಯ ಸಂಗಡ ಮಾತನಾಡಿ--
ಅರಣ್ಯಕಾಂಡ 20 : 8 (KNV)
ಕೋಲನ್ನು ತಕ್ಕೊಂಡು ನೀನು ನಿನ್ನ ಸಹೋದರನಾದ ಆರೋನನು ಸಭೆಯನ್ನು ಕೂಡಿಸಿ ಕೊಂಡು ಅವರ ಕಣ್ಣುಗಳ ಮುಂದೆ ಬಂಡೆಯ ಸಂಗಡ ಮಾತನಾಡಿರಿ; ಅದು ತನ್ನ ನೀರನ್ನು ಕೊಡುವದು; ನೀನು ಅವರಿಗೋಸ್ಕರ ಬಂಡೆಯೊಳಗಿಂದ ನೀರನ್ನು ಹೊರಗೆ ತರುವಿ; ಸಭೆಗೂ ಅವರ ಪಶುಗಳಿಗೂ ನೀನು ಕುಡಿಯಲು ಕೊಡುವಿ ಎಂದು ಹೇಳಿದನು.
ಅರಣ್ಯಕಾಂಡ 20 : 9 (KNV)
ಆಗ ಕರ್ತನು ಆಜ್ಞಾಪಿಸಿದ ಹಾಗೆ ಮೋಶೆಯು ಆತನ ಸನ್ನಿಧಿಯಿಂದ ಕೋಲನ್ನು ತಕ್ಕೊಂಡನು.
ಅರಣ್ಯಕಾಂಡ 20 : 10 (KNV)
ಮೋಶೆಯೂ ಆರೋನನೂ ಸಭೆಯನ್ನು ಬಂಡೆಯ ಮುಂದೆ ಕೂಡಿಸಿ ಅವರಿಗೆ--ತಿರುಗಿಬಿದ್ದವರೇ, ಕೇಳಿರಿ; ನಾವು ನಿಮಗೋಸ್ಕರ ಈ ಬಂಡೆಯೊಳಗಿಂದ ನೀರನ್ನು ಹೊರಡಿಸಬೇಕೋ ಎಂದು ಹೇಳಿದರು.
ಅರಣ್ಯಕಾಂಡ 20 : 11 (KNV)
ಮೋಶೆಯು ತನ್ನ ಕೈಯನ್ನು ಎತ್ತಿ ತನ್ನ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು; ಆಗ ಬಹಳ ನೀರು ಹೊರಗೆ ಬಂತು; ಸಭೆಯೂ ಅವರ ಪಶುಗಳೂ ಕುಡಿದವು.
ಅರಣ್ಯಕಾಂಡ 20 : 12 (KNV)
ಆಗ ಕರ್ತನು ಮೋಶೆ ಆರೋನನ ಸಂಗಡ ಮಾತನಾಡಿ--ನೀವು ಇಸ್ರಾಯೇಲ್ ಮಕ್ಕಳ ಕಣ್ಣುಗಳ ಮುಂದೆ ನನ್ನನ್ನು ಪರಿಶುದ್ಧಮಾಡುವದಕ್ಕೆ ನನ್ನಲ್ಲಿ ವಿಶ್ವಾಸಿ ಸದೆ ಇದ್ದ ಕಾರಣ ನಾನು ಅವರಿಗೆ ಕೊಟ್ಟ ದೇಶದಲ್ಲಿ ನೀವು ಸಮೂಹವನ್ನು ಸೇರಿಸುವದಿಲ್ಲ ಅಂದನು.
ಅರಣ್ಯಕಾಂಡ 20 : 13 (KNV)
ಇಸ್ರಾಯೇಲ್ ಮಕ್ಕಳು ಕರ್ತನ ಸಂಗಡ ವ್ಯಾಜ್ಯ ವಾಡಿದಕ್ಕಾಗಿ ಆತನು ಅವರಲ್ಲಿ ತನ್ನನ್ನು ಪರಿಶುದ್ಧ ಮಾಡಿಕೊಂಡ ಮೆರೀಬಾದ ನೀರು ಇದೇ.
ಅರಣ್ಯಕಾಂಡ 20 : 14 (KNV)
ಇದಲ್ಲದೆ ಮೋಶೆಯು ಕಾದೇಶಿನಿಂದ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--ನಿನ್ನ ಸಹೋದರನಾದ ಇಸ್ರಾಯೇ ಲನು ಹೇಳುವದೇನಂದರೆ--ನಮಗೆ ಉಂಟಾದ ಸಕಲ ಆಯಾಸವನ್ನು ನೀನು ಅರಿತಿದ್ದೀ.
ಅರಣ್ಯಕಾಂಡ 20 : 15 (KNV)
ನಮ್ಮ ಪಿತೃಗಳು ಐಗುಪ್ತಕ್ಕೆ ಇಳಿದು ಹೋದರು; ಐಗುಪ್ತದಲ್ಲಿ ನಾವು ಬಹಳ ದಿವಸ ವಾಸವಾಗಿದ್ದೆವು; ಐಗುಪ್ತದವರು ನಮಗೂ ನಮ್ಮ ಪಿತೃಗಳಿಗೂ ಕೇಡನ್ನು ಮಾಡಿದರು.
ಅರಣ್ಯಕಾಂಡ 20 : 16 (KNV)
ಆದಕಾರಣ ನಾವು ಕರ್ತನಿಗೆ ಕೂಗಿದೆವು; ಆತನು ನಮ್ಮ ಧ್ವನಿಯನ್ನು ಕೇಳಿ ದೂತನನ್ನು ಕಳುಹಿಸಿ ನಮ್ಮನ್ನು ಐಗುಪ್ತದೊಳಗಿಂದ ಹೊರಗೆ ತಂದನು; ಇಗೋ, ನಾವು ನಿನ್ನ ಮೇರೆಯ ಕಡೇ ಊರಾದ ಕಾದೇಶಿನ ಲ್ಲಿದ್ದೇವೆ.
ಅರಣ್ಯಕಾಂಡ 20 : 17 (KNV)
ನಮ್ಮನ್ನು ನಿನ್ನ ದೇಶದಿಂದ ದಾಟಿ ಹೋಗ ಗೊಡಿಸು; ನಾವು ಹೊಲವನ್ನಾದರೂ ದ್ರಾಕ್ಷೇತೋಟ ವನ್ನಾದರೂ ದಾಟಿಹೋಗುವದಿಲ್ಲ, ಬಾವಿಗಳ ನೀರನ್ನೂ ಕುಡಿಯುವದಿಲ್ಲ, ರಾಜ ಮಾರ್ಗದಲ್ಲಿ ಮಾತ್ರ ಹೋಗುತ್ತೇವೆ. ನಾವು ನಿನ್ನ ಮೇರೆಯನ್ನು ದಾಟುವ ವರೆಗೆ ಬಲಗಡೆಗಾದರೂ ಎಡಗಡೆಗಾದರೂ ತಿರುಗುವದಿಲ್ಲ.
ಅರಣ್ಯಕಾಂಡ 20 : 18 (KNV)
ಎದೋಮ್ಯನು ಅವನಿಗೆ ಹೇಳಿದ್ದೇನಂದರೆ--ನೀನು ನನ್ನ ಕಡೆಯಲ್ಲಿ ದಾಟಿ ಹೋಗಬೇಡ; ಹೋದರೆ ನಾನು ಕತ್ತಿಯಿಂದ ನಿನಗೆದುರಾಗಿ ಹೊರಡುವೆನು.
ಅರಣ್ಯಕಾಂಡ 20 : 19 (KNV)
ಆಗ ಇಸ್ರಾಯೇಲ್ ಮಕ್ಕಳು ಅವನಿಗೆ ಹೇಳಿದ್ದೇ ನಂದರೆ--ನಾವು ರಾಜ ಮಾರ್ಗದಲ್ಲಿ ಹೋಗುತ್ತೇವೆ; ನಾನಾಗಲಿ ನನ್ನ ಪಶುಗಳಾಗಲಿ ನಿನ್ನ ನೀರನ್ನು ಕುಡಿದರೆ ಅದರ ಕ್ರಯವನ್ನು ಕೊಡುತ್ತೇನೆ; ನನ್ನ ಕಾಲ್ನಡೆಯಾಗಿ ದಾಟಿಹೋಗುವದೇ ಹೊರತು ಮತ್ತೇನು ಮಾಡು ವದಿಲ್ಲ.
ಅರಣ್ಯಕಾಂಡ 20 : 20 (KNV)
ಆದರೆ ಅವನು--ನೀನು ದಾಟಬೇಡ ಅಂದನು. ಎದೋಮ್ಯನು ಬಹು ಜನರಿಂದಲೂ ಬಲವುಳ್ಳ ಕೈಯಿಂದಲೂ ಅವರಿಗೆ ಎದುರಾಗಿ ಹೊರಟನು.
ಅರಣ್ಯಕಾಂಡ 20 : 21 (KNV)
ಈ ಪ್ರಕಾರ ಎದೋಮ್ಯನು ಇಸ್ರಾ ಯೇಲ್ಯರನ್ನು ತನ್ನ ಮೇರೆಯಲ್ಲಿ ದಾಟಗೊಡಿಸಲಿಲ್ಲ; ಆದಕಾರಣ ಇಸ್ರಾಯೇಲ್ಯರು ಅವನ ಕಡೆಯಿಂದ ತಿರುಗಿಕೊಂಡು ಹೊರಟುಹೋದರು.
ಅರಣ್ಯಕಾಂಡ 20 : 22 (KNV)
ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯು ಕಾದೇಶಿನಿಂದ ಪ್ರಯಾಣಮಾಡಿ ಹೋರ್ ಎಂಬ ಬೆಟ್ಟದ ಬಳಿಗೆ ಬಂದರು.
ಅರಣ್ಯಕಾಂಡ 20 : 23 (KNV)
ಆಗ ಕರ್ತನು ಎದೋಮ್ಯ ದೇಶದ ಮೇರೆಯ ಮೇಲಿರುವ ಹೋರ್ ಎಂಬ ಬೆಟ್ಟದಲ್ಲಿ ಮೋಶೆ ಆರೋನನ ಸಂಗಡ ಮಾತನಾಡಿ--
ಅರಣ್ಯಕಾಂಡ 20 : 24 (KNV)
ಆರೋನನು ತನ್ನ ಜನರ ಸಂಗಡ ಕೂಡಿಸಲ್ಪಡುವನು; ನೀವು ಮೆರೀಬಾದ ನೀರಿನ ಹತ್ತಿರ ನನ್ನ ಮಾತಿಗೆ ತಿರುಗಿ ಬಿದ್ದದರಿಂದ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಟ್ಟ ದೇಶಕ್ಕೆ ಅವನು ಪ್ರವೇಶಿಸುವದಿಲ್ಲ.
ಅರಣ್ಯಕಾಂಡ 20 : 25 (KNV)
ಆರೋನ ನನ್ನೂ ಅವನ ಮಗನಾದ ಎಲ್ಲಾಜಾರನನ್ನೂ ಹೋರ್ ಬೆಟ್ಟಕ್ಕೆ ಕರಕೊಂಡು ಬಂದು.
ಅರಣ್ಯಕಾಂಡ 20 : 26 (KNV)
ಆರೋನನ ವಸ್ತ್ರಗಳನ್ನು ತೆಗೆದು ಅವುಗಳನ್ನು ಅವನ ಮಗನಾದ ಎಲ್ಲಾಜಾರ ನಿಗೆ ತೊಡಿಸು; ಆರೋನನು ಅಲ್ಲಿಯೇ ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಡುವನು ಎಂದು ಹೇಳಿದನು.
ಅರಣ್ಯಕಾಂಡ 20 : 27 (KNV)
ಕರ್ತನು ಆಜ್ಞಾಪಿಸಿದ ಪ್ರಕಾರ ಮೋಶೆಯು ಮಾಡಿದನು. ಅವರು ಸಮಸ್ತ ಸಭೆಯ ಕಣ್ಣು ಗಳಿಗೆದುರಾಗಿ ಹೋರ್ ಬೆಟ್ಟವನ್ನೇರಿದರು.
ಅರಣ್ಯಕಾಂಡ 20 : 28 (KNV)
ಆಗ ಮೋಶೆಯು ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗನಾದ ಎಲ್ಲಾಜಾರನಿಗೆ ತೊಡಿಸಿದನು; ಆಗ ಆರೋನನು ಅಲ್ಲೆ ಬೆಟ್ಟದ ತುದಿಯಲ್ಲಿ ಸತ್ತನು. ಮೋಶೆಯೂ ಎಲ್ಲಾಜಾರನೂ ಬೆಟ್ಟದಿಂದ ಇಳಿದು ಬಂದರು.
ಅರಣ್ಯಕಾಂಡ 20 : 29 (KNV)
ಆರೋನನು ತೀರಿಹೋದನೆಂದು ಸಭೆಯಲ್ಲಾ ನೋಡಿದಾಗ ಇಸ್ರಾಯೇಲ್ಯರ ಮನೆಯ ವರೆಲ್ಲರು ಆರೋನನಿಗೋಸ್ಕರ ಮೂವತ್ತು ದಿವಸದ ವರೆಗೂ ದುಃಖಿಸಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29