ಅರಣ್ಯಕಾಂಡ 13 : 1 (KNV)
ಕರ್ತನು ಮೋಶೆಯ ಸಂಗಡ ಮಾತನಾಡಿ
ಅರಣ್ಯಕಾಂಡ 13 : 2 (KNV)
ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ಕಾನಾನ್ ದೇಶವನ್ನು ಪರೀಕ್ಷಿಸುವ ಹಾಗೆ ನೀನು ಮನುಷ್ಯರನ್ನು ಕಳುಹಿಸು. ಅವರವರ ಪಿತೃಗಳ ಗೋತ್ರದ ಪ್ರಕಾರ ಅವರೊಳಗೆ ಅಧಿಕಾರಿಯಾಗಿರುವ ಪ್ರತಿಯೊಬ್ಬನನ್ನು ಕಳುಹಿಸು ಅಂದನು.
ಅರಣ್ಯಕಾಂಡ 13 : 3 (KNV)
ಆಗ ಮೋಶೆಯು ಕರ್ತನ ಆಜ್ಞೆಯಂತೆ ಪಾರಾನ್ ಅರಣ್ಯ ದಿಂದ ಅವರನ್ನು ಕಳುಹಿಸಿದನು. ಅವರೆಲ್ಲರೂ ಇಸ್ರಾ ಯೇಲ್ ಮಕ್ಕಳ ಮುಖ್ಯಸ್ಥರಾಗಿದ್ದರು.
ಅರಣ್ಯಕಾಂಡ 13 : 4 (KNV)
ಅವರ ಹೆಸರುಗಳು ಯಾವವಂದರೆ: ರೂಬೇನ್ ಗೋತ್ರದ ಜಕ್ಕೂರನ ಮಗನಾದ ಶಮ್ಮೂವನು,
ಅರಣ್ಯಕಾಂಡ 13 : 5 (KNV)
ಸಿಮೆಯೋನ್ ಗೋತ್ರದ ಹೋರಿಯ ಮಗನಾದ ಶಾಫಾಟನು,
ಅರಣ್ಯಕಾಂಡ 13 : 6 (KNV)
ಯೂದಾ ಗೋತ್ರದ ಯೆಫುನ್ನೆಯ ಮಗನಾದ ಕಾಲೇಬನು,
ಅರಣ್ಯಕಾಂಡ 13 : 7 (KNV)
ಇಸ್ಸಾಕಾರ್ ಗೋತ್ರದ ಯೋಸೇಫನ ಮಗನಾದ ಇಗಾಲನು,
ಅರಣ್ಯಕಾಂಡ 13 : 8 (KNV)
ಎಫ್ರಾಯಾಮ್ ಗೋತ್ರದ ನೂನನ ಮಗನಾದ ಹೋಶೇಯನು,
ಅರಣ್ಯಕಾಂಡ 13 : 9 (KNV)
ಬೆನ್ಯಾವಿಾನ್ ಗೋತ್ರದ ರಾಫೂವನ ಮಗನಾದ ಪಲ್ಟೀಯು,
ಅರಣ್ಯಕಾಂಡ 13 : 10 (KNV)
ಜೆಬುಲೂನ್ ಗೋತ್ರದ ಸೋದೀಯ ಮಗನಾದ ಗದ್ದೀಯೇಲ್,
ಅರಣ್ಯಕಾಂಡ 13 : 11 (KNV)
ಯೋಸೇಫನ ಗೋತ್ರ ಅಂದರೆ ಮನಸ್ಸೆ ಗೋತ್ರದ ಸೂಸೀಯ ಮಗನಾದ ಗದ್ದೀ,
ಅರಣ್ಯಕಾಂಡ 13 : 12 (KNV)
ದಾನ್ ಗೋತ್ರದ ಗೆಮಲ್ಲೀಯನ ಮಗನಾದ ಅವ್ಮೆಾಯೇಲನು,
ಅರಣ್ಯಕಾಂಡ 13 : 13 (KNV)
ಆಶೇರ್ ಗೋತ್ರದ ವಿಾಕಾ ಯೇಲನ ಮಗನಾದ ಸೆತೂರ್,
ಅರಣ್ಯಕಾಂಡ 13 : 14 (KNV)
ನಫ್ತಾಲಿ ಗೋತ್ರದ ವಾಪೆಸೀಯನ ಮಗನಾದ ನಹಬೀ,
ಅರಣ್ಯಕಾಂಡ 13 : 15 (KNV)
ಗಾದನ ಗೋತ್ರದ ಮಾಕೀಯನ ಮಗನಾದ ಗೆಯೂವೇಲ್.
ಅರಣ್ಯಕಾಂಡ 13 : 16 (KNV)
ಮೋಶೆಯು ದೇಶವನ್ನು ಪಾಳತಿ ನೋಡುವದಕ್ಕಾಗಿ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗನಾದ ಹೋಶೇಯನಿಗೆ ಯೆಹೋಶು ವನೆಂದು ಹೆಸರಿಟ್ಟನು.
ಅರಣ್ಯಕಾಂಡ 13 : 17 (KNV)
ಮೋಶೆ ಕಾನಾನ್ ದೇಶವನ್ನು ಪಾಳತಿ ನೋಡು ವದಕ್ಕೆ ಅವರನ್ನು ಕಳುಹಿಸುವಾಗ ಅವರಿಗೆ--ಈ ದಕ್ಷಿಣ ಕಡೆಯಲ್ಲಿ ಹೋಗಿ ಬೆಟ್ಟವನ್ನೇರಿ
ಅರಣ್ಯಕಾಂಡ 13 : 18 (KNV)
ಆ ದೇಶವು ಎಂಥದ್ದೋ? ಅದರಲ್ಲಿ ವಾಸಿಸುವ ಜನರು ಬಲವುಳ್ಳ ವರೋ ಇಲ್ಲವೆ ಬಲಹೀನರೋ, ಸ್ವಲ್ಪ ಜನರೋ ಇಲ್ಲವೆ ಬಹಳ ಜನರೋ ಎಂದೂ
ಅರಣ್ಯಕಾಂಡ 13 : 19 (KNV)
ಅವರು ವಾಸಿ ಸುವ ದೇಶವು ಎಂಥದ್ದೋ ಅದು ಒಳ್ಳೆಯದಾಗಿ ದೆಯೋ ಕೆಟ್ಟದ್ದಾಗಿದೆಯೋ ಅವರು ವಾಸಿಸುವ ಪಟ್ಟಣಗಳು ಎಂಥವುಗಳೋ ಅವರು ವಾಸಿಸುವದು ಡೇರೆಗಳಲ್ಲಿಯೋ ಬಲವಾದ ಕೋಟೆಗಳಲ್ಲಿಯೋ ಎಂದೂ
ಅರಣ್ಯಕಾಂಡ 13 : 20 (KNV)
ಆ ಭೂಮಿಯು ಎಂಥದ್ದೋ ಸಾರವಾ ದದ್ದೋ? ನಿಸ್ಸಾರವಾದದ್ದೋ ಮರಗಳುಳ್ಳದ್ದೋ? ಇಲ್ಲದಿರುವದೋ ಎಂದೂ ನೋಡಿರಿ. ನೀವು ಧೈರ್ಯ ವುಳ್ಳವರಾಗಿದ್ದು ಆ ಭೂಮಿಯ ಫಲವನ್ನು ತೆಗೆದು ಕೊಳ್ಳಿರಿ ಅಂದನು. ಆಗ ಪ್ರಥಮ ದ್ರಾಕ್ಷೇಹಣ್ಣುಗಳ ಕಾಲವಾಗಿತ್ತು.
ಅರಣ್ಯಕಾಂಡ 13 : 21 (KNV)
ಆಗ ಅವರು ಏರಿಹೋಗಿ ಜಿನ್ ಎಂಬ ಅರಣ್ಯ ದಿಂದ ಹಮಾತಿನ ಕಡೆಯಲ್ಲಿರುವ ರೆಹೋಬಿನ ವರೆಗೂ ದೇಶವನ್ನು ಪಾಳತಿ ನೋಡಿದರು.
ಅರಣ್ಯಕಾಂಡ 13 : 22 (KNV)
ಅವರು ದಕ್ಷಿಣದ ಕಡೆಯಲ್ಲಿ ಹೆಬ್ರೋನಿನ ವರೆಗೆ ಬಂದರು; ಅಲ್ಲಿ ಅನಾಕನ ಮಕ್ಕಳಾದ ಅಹೀಮನ ಶೇಷೈಯನೂ ತಲ್ಮೈಯನೂ ಇದ್ದರು. ಹೆಬ್ರೋನು ಐಗುಪ್ತದೇಶದ ಚೋವನಿಗಿಂತ ಏಳು ವರುಷಗಳ ಮೊದಲು ಕಟ್ಟಲ್ಪ ಟ್ಟಿತ್ತು.
ಅರಣ್ಯಕಾಂಡ 13 : 23 (KNV)
ಅವರು ಎಷ್ಕೋಲ ಹಳ್ಳದ ವರೆಗೂ ಬಂದು ಅಲ್ಲಿ ದ್ರಾಕ್ಷೇಹಣ್ಣುಗಳ ಗೊಂಚಲಿನ ಕೊಂಬೆಯನ್ನು ಕೊಯ್ದು ಅದನ್ನು ಅಡ್ಡಕೋಲಿನ ಮೇಲೆ ಇಬ್ಬರಾಗಿ ಹೊತ್ತುಕೊಂಡು ಹೋದರು; ಇದಲ್ಲದೆ ದಾಳಿಂಬರ ಅಂಜೂರ ಹಣ್ಣುಗಳನ್ನು ತಕ್ಕೊಂಡು ಹೋದರು.
ಅರಣ್ಯಕಾಂಡ 13 : 24 (KNV)
ಇಸ್ರಾಯೇಲ್ ಮಕ್ಕಳು ಅಲ್ಲಿ ದ್ರಾಕ್ಷೇಗೊಂಚಲನ್ನು ಕೊಯ್ದದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್ ಹಳ್ಳವೆಂದು ಹೆಸರಿಟ್ಟರು.
ಅರಣ್ಯಕಾಂಡ 13 : 25 (KNV)
ಅವರು ದೇಶವನ್ನು ಪಾಳತಿ ನೋಡಿ ನಾಲ್ವತ್ತು ದಿವಸಗಳಾದ ಮೇಲೆ ತಿರಿಗಿ ಬಂದರು.
ಅರಣ್ಯಕಾಂಡ 13 : 26 (KNV)
ಅವರು ಹೋಗಿ ಮೋಶೆ ಆರೋನರ ಬಳಿಗೂ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯ ಬಳಿಗೂ ಪಾರಾನ್ ಅರಣ್ಯದಲ್ಲಿರುವ ಕಾದೇಶಿಗೂ ಬಂದು ಅವರಿಗೂ ಸಮಸ್ತ ಸಭೆಗೂ ವಿಷಯವನ್ನು ವಿವರಿಸಿ ಆ ದೇಶದ ಫಲಗಳನ್ನು ಅವರಿಗೆ ತೋರಿಸಿದರು.
ಅರಣ್ಯಕಾಂಡ 13 : 27 (KNV)
ಅವರು ಅವ ನಿಗೆ--ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು. ಅದು ನಿಜವಾಗಿಯೂ ಹಾಲೂ ಜೇನೂ ಹರಿಯುವ ದೇಶವೇ; ಅದರ ಫಲವು ಇದೇ.
ಅರಣ್ಯಕಾಂಡ 13 : 28 (KNV)
ಆದರೆ ಆ ದೇಶದಲ್ಲಿ ವಾಸವಾಗಿರುವ ಜನರು ಬಲಿಷ್ಠರು; ಪಟ್ಟಣ ಗಳು ಭದ್ರವಾಗಿಯೂ ಬಹಳ ದೊಡ್ಡವುಗಳಾಗಿಯೂ ಅವೆ. ಮತ್ತು ಅನಾಕನ ಮಕ್ಕಳನ್ನು ಅಲ್ಲಿ ನಾವು ಕಂಡೆವು.
ಅರಣ್ಯಕಾಂಡ 13 : 29 (KNV)
ಅಮಾಲೇಕ್ಯರು ದೇಶದ ದಕ್ಷಿಣದಲ್ಲಿ ವಾಸವಾಗಿದ್ದಾರೆ; ಹಿತ್ತಿಯರು ಯೆಬೂಸಿಯರು ಅಮೋ ರಿಯರು ಪರ್ವತಗಳಲ್ಲಿಯೂ ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸ ವಾಗಿದ್ದಾರೆ ಎಂದು ಹೇಳಿದರು.
ಅರಣ್ಯಕಾಂಡ 13 : 30 (KNV)
ಆದರೆ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ--ನಾವು ತಕ್ಷಣವೇ ಹೋಗಿ ಅದನ್ನು ಸ್ವಾಧೀನಮಾಡಿಕೊಳ್ಳೋಣ. ಅದನ್ನು ಜಯಿ ಸಲು ನಾವು ನಿಜವಾಗಿಯೂ ಶಕ್ತ ರಾಗಿದ್ದೇವೆ ಅಂದನು.
ಅರಣ್ಯಕಾಂಡ 13 : 31 (KNV)
ಅದರೆ ಅವನ ಸಂಗಡ ಹೋದ ಮನುಷ್ಯರುಆ ಜನರ ಬಳಿಗೆ ಹೋಗಲು ನಮ್ಮಿಂದಾಗುವದಿಲ್ಲ; ಅವರು ನಮಗಿಂತ ಬಲಿಷ್ಠರಾಗಿದ್ದಾರೆ ಎಂದು ಹೇಳಿ ದರು.
ಅರಣ್ಯಕಾಂಡ 13 : 32 (KNV)
ಅವರು ಪಾಳತಿ ನೋಡಿದ ದೇಶದ ವಿಷಯ ಕೆಟ್ಟಸುದ್ಧಿಯನ್ನು ತಂದು--ನಾವು ಪಾಳತಿ ನೋಡುವ ದಕ್ಕೆ ಹಾದುಹೋದ ದೇಶವು ತನ್ನಲ್ಲಿ ವಾಸವಾಗಿರು ವವರನ್ನು ತಿಂದುಬಿಡುವ ದೇಶವಾಗಿದೆ; ನಾವು ಅದರಲ್ಲಿ ನೋಡಿದ ಜನರೆಲ್ಲಾ ಮಹಾಶರೀರದ ಮನುಷ್ಯರು.
ಅರಣ್ಯಕಾಂಡ 13 : 33 (KNV)
ಅಲ್ಲಿ ಅಮಾನುಷ್ಯರನ್ನೂ ಅಮಾನುಷ್ಯ ಸಂತಾನ ವಾದ ಅನಾಕನ ಮಕ್ಕಳನ್ನೂ ಕಂಡೆವು; ನಮ್ಮ ದೃಷ್ಟಿಗೆ ನಾವು ಮಿಡತೆಗಳ ಹಾಗೆ ಇದ್ದೆವು, ಅದೇ ಪ್ರಕಾರ ಅವರ ದೃಷ್ಟಿಗೂ ಇದ್ದೆವು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33

BG:

Opacity:

Color:


Size:


Font: