ಅರಣ್ಯಕಾಂಡ 12 : 1 (KNV)
ಮೋಶೆಯು ಮದುವೆಯಾಗಿದ್ದ ಐಥೋಪ್ಯಳಾದ ಸ್ತ್ರೀಯ ನಿಮಿತ್ತ ಮಿರ್ಯಾಮಳೂ ಆರೋನನೂ ಅವನಿಗೆ ವಿರೋಧವಾಗಿ ಮಾತ ನಾಡಿದರು. ಯಾಕಂದರೆ ಅವನು ಐಥೋಪ್ಯಳಾದ ಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು.
ಅರಣ್ಯಕಾಂಡ 12 : 2 (KNV)
ಅವರುಕರ್ತನು ಮೋಶೆಯ ಮುಖಾಂತರ ಮಾತ್ರವೇ ಮಾತನಾಡಿದ್ದಾನೋ? ಆತನು ನಮ್ಮ ಮುಖಾಂತ ರವಾಗಿಯೂ ಮಾತನಾಡಲಿಲ್ಲವೋ ಅಂದರು.
ಅರಣ್ಯಕಾಂಡ 12 : 3 (KNV)
(ಆದರೆ ಮೋಶೆ ಎಂಬವನು ಭೂಮುಖದ ಮೇಲಿರುವ ಸಕಲ ಮನುಷ್ಯರೆಲ್ಲರಿಗಿಂತ ಬಹು ಸಾತ್ವಿಕನಾಗಿದ್ದನು.)
ಅರಣ್ಯಕಾಂಡ 12 : 4 (KNV)
ಆಗ ಕರ್ತನು ಫಕ್ಕನೆ ಮೋಶೆಗೂ ಆರೋನನಿಗೂ ಮಿರ್ಯಾಮಳಿಗೂ--ನೀವು ಮೂರು ಮಂದಿ ಹೊರಗೆ ಸಭೆಯ ಗುಡಾರದ ಸವಿಾಪಕ್ಕೆ ಬನ್ನಿರಿ ಅಂದನು. ಆ ಮೂವರು ಹೊರಗೆ ಬಂದಾಗ.
ಅರಣ್ಯಕಾಂಡ 12 : 5 (KNV)
ಕರ್ತನು ಮೇಘಸ್ತಂಭದಲ್ಲಿ ಇಳಿದು ಗುಡಾರದ ಬಾಗಿಲ ಬಳಿಯಲ್ಲಿ ನಿಂತು ಆರೋನನನ್ನೂ ಮಿರ್ಯಾಮ ಳನ್ನೂ ಕರೆದಾಗ ಅವರಿಬ್ಬರೂ ಮುಂದೆ ಬಂದರು.
ಅರಣ್ಯಕಾಂಡ 12 : 6 (KNV)
ಆತನು--ನನ್ನ ಮಾತುಗಳನ್ನು ಈಗ ಕೇಳಿರಿ--ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಕರ್ತನಾದ ನಾನು ದರ್ಶನದಲ್ಲಿ ಅವನಿಗೆ ತಿಳಿಯಪಡಿಸುವೆನು, ಸ್ವಪ್ನದಲ್ಲಿ ಅವನ ಸಂಗಡ ಮಾತನಾಡುವೆನು.
ಅರಣ್ಯಕಾಂಡ 12 : 7 (KNV)
ನನ್ನ ಸೇವಕನಾದ ಮೋಶೆಯು ಹಾಗಲ್ಲ; ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾ ಗಿದ್ದಾನೆ.
ಅರಣ್ಯಕಾಂಡ 12 : 8 (KNV)
ಗೂಢವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ನಾನು ಅವನ ಸಂಗಡ ಮಾತನಾ ಡುತ್ತೇನೆ. ಅವನು ಕರ್ತನ ರೂಪವನ್ನು ನೋಡುತ್ತಾನೆ; ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡಲು ಯಾಕೆ ಭಯಪಡಲಿಲ್ಲ ಎಂದು ಹೇಳಿದನು.
ಅರಣ್ಯಕಾಂಡ 12 : 9 (KNV)
ಕರ್ತನ ಕೋಪವು ಅವರ ಮೇಲೆ ಉರಿಯಿತು, ಆತನು ಹೋದನು.
ಅರಣ್ಯಕಾಂಡ 12 : 10 (KNV)
ಆ ಮೇಘವು ಗುಡಾರದ ಮೇಲಿನಿಂದ ತೊಲಗಿ ಹೋಯಿತು; ಆಗ ಇಗೋ, ಮಿರ್ಯಾಮಳು ಹಿಮದ ಹಾಗೆ ಕುಷ್ಠವುಳ್ಳವಳಾದಳು. ಆರೋನನು ಮಿರ್ಯಾಮಳ ಕಡೆಗೆ ನೋಡಿದಾಗ ಇಗೋ, ಅವಳು ಕುಷ್ಠರೋಗಿ ಯಾಗಿದ್ದಳು.
ಅರಣ್ಯಕಾಂಡ 12 : 11 (KNV)
ಆರೋನನು ಮೋಶೆಗೆ--ಅಯ್ಯೋ, ನನ್ನ ಒಡೆಯನೇ, ನಾವು ಪಾಪಮಾಡಿದೆವು, ಬುದ್ಧಿಯಿಲ್ಲದೆ ಮಾಡಿದ ಈ ಪಾಪವನ್ನು ನಮ್ಮ ಮೇಲೆ ಹಾಕಬೇಡ.
ಅರಣ್ಯಕಾಂಡ 12 : 12 (KNV)
ತನ್ನ ತಾಯಿಯ ಗರ್ಭದಿಂದ ಹೊರಗೆ ಬಂದಾಗಲೇ ಅರ್ಧ ಮಾಂಸ ಕೊಳೆತುಹೋದಂಥ ಶವದಂತೆ ಆಕೆಯನ್ನು ಇರಗೊಡಿಸಬೇಡ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
ಅರಣ್ಯಕಾಂಡ 12 : 13 (KNV)
ಆಗ ಮೋಶೆಯು ಕರ್ತನಿಗೆ ಕೂಗಿ--ಓ ದೇವರೇ, ಅವಳನ್ನು ಈಗ ಸ್ವಸ್ಥಮಾಡು ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
ಅರಣ್ಯಕಾಂಡ 12 : 14 (KNV)
ಆಗ ಕರ್ತನು ಮೋಶೆಗೆ--ಆಕೆಯ ತಂದೆ ಆಕೆಯ ಮುಖದ ಮೇಲೆ ಉಗುಳಿದರೆ ಆಕೆಯು ಏಳು ದಿವಸ ನಾಚಿಕೊಳ್ಳುವದಿಲ್ಲವೋ? ಆಕೆಯು ಏಳು ದಿವಸ ಪಾಳೆಯದ ಹೊರಗೆ ಮರೆಯಾಗಿದ್ದು ತರುವಾಯ ಸೇರಿಸಲ್ಪಡಲಿ ಎಂದು ಹೇಳಿದನು.
ಅರಣ್ಯಕಾಂಡ 12 : 15 (KNV)
ಹಾಗೆಯೇ ಮಿರ್ಯಾಮಳನ್ನು ಪಾಳೆಯದ ಹೊರಗೆ ಏಳು ದಿವಸ ಮರೆಯಾಗಿಯಿಟ್ಟರು. ಮಿರ್ಯಾಮಳು ತಿರಿಗಿ ಒಳಗೆ ಬರುವ ವರೆಗೆ ಜನರು ಪ್ರಯಾಣ ಮಾಡಲಿಲ್ಲ.
ಅರಣ್ಯಕಾಂಡ 12 : 16 (KNV)
ತರುವಾಯ ಜನರು ಹಚೇರೋತಿನಿಂದ ಹೊರಟು ಪಾರಾನ್ ಅರಣ್ಯದಲ್ಲಿ ಇಳುಕೊಂಡರು.

1 2 3 4 5 6 7 8 9 10 11 12 13 14 15 16