ನಹೂಮ 2 : 1 (KNV)
ಚೂರುಚೂರಾಗಿ ಒಡೆದು ಬಿಡುವವನು ನಿನ್ನ ಎದುರಿಗೆ ಬಂದಿದ್ದಾನೆ; ಆಯುಧ ಗಳನ್ನು ಭದ್ರಪಡಿಸು; ದಾರಿಯನ್ನು ಕಾಯಿ; ನಡುವನ್ನು ಬಲಪಡಿಸಿಕೋ, ನಿನ್ನ ಶಕ್ತಿಯನ್ನು ಬಲವಾಗಿ ಗಟ್ಟಿ ಮಾಡಿಕೋ.
ನಹೂಮ 2 : 2 (KNV)
ಕರ್ತನು ಯಾಕೋಬನ ಹೆಚ್ಚಳವನ್ನು ಇಸ್ರಾಯೇಲಿನ ಹೆಚ್ಚಳದ ಹಾಗೆಯೇ ತಿರುಗಿಸಿಬಿಟ್ಟಿ ದ್ದಾನೆ; ಬರಿದು ಮಾಡುವವರು ಅವರನ್ನು ಬರಿದು ಮಾಡಿ ಅವರ ದ್ರಾಕ್ಷೇ ಬಳ್ಳಿಗಳನ್ನು ಕೆಡಿಸಿದ್ದಾರೆ.
ನಹೂಮ 2 : 3 (KNV)
ಆತನ ಬಲಾಢ್ಯದ ಡಾಲು ಕೆಂಪಾಗಿದೆ; ಶೂರರು ರಕ್ತವರ್ಣದವರಾಗಿದ್ದಾರೆ; ಆತನು ಸಿದ್ಧಮಾಡುವ ದಿನ ದಲ್ಲಿ ರಥಗಳು ಹೊಳೆಯುವ ದೀವಟಿಗೆಗಳ ಹಾಗೆ ಇರುವವು; ಸೈಪ್ರಸ್ ಮರಗಳು ಭಯಂಕರವಾಗಿ ಅಲ್ಲಾ ಡಿಸಲ್ಪಡುವವು.
ನಹೂಮ 2 : 4 (KNV)
ರಥಗಳು ಬೀದಿಗಳಲ್ಲಿ ರಭಸವಾಗಿ ಓಡಾಡುವವು. ಹೆದ್ದಾರಿಗಳಲ್ಲಿ ಒಂದಕ್ಕೊಂದು ತಗಲು ವವು; ದೀವಟಿಗೆಗಳ ಹಾಗೆ ತೋರುವವು, ಮಿಂಚುಗಳ ಹಾಗೆ ಓಡುವವು.
ನಹೂಮ 2 : 5 (KNV)
ಆತನು ತನಗೆ ಯೋಗ್ಯವಾದವ ರನ್ನು ಗಮನಿಸುವನು. ಅವರು ತಮ್ಮ ನಡೆಯಲ್ಲಿ ಎಡವುವರು; ಅದರ ಗೋಡೆಯ ಬಳಿಗೆ ತ್ವರೆಯಾಗಿ ಬರುವರು; ರಕ್ಷಣೆಯು ಸಿದ್ಧಮಾಡಲ್ಪಡುವದು.
ನಹೂಮ 2 : 6 (KNV)
ನದಿಗಳ ಬಾಗಲುಗಳು ತೆರೆಯಲ್ಪಡುವವು; ಅರಮನೆ ಕರಗಿಹೋಗುವದು.
ನಹೂಮ 2 : 7 (KNV)
ಸ್ಥಿರವಾಗಿದ್ದವಳು ಸೆರೆಗೆ ಒಯ್ಯಲ್ಪಡುವಳು, ಮೇಲಕ್ಕೆ ತರಲ್ಪಡುವಳು; ಅವಳ ದಾಸಿಯರು ಪಾರಿವಾಳಗಳ ಶಬ್ದದಂತೆ ಮೂಲ್ಗುತ್ತ ಎದೆಬಡುಕೊಳ್ಳುವರು.
ನಹೂಮ 2 : 8 (KNV)
ನಿನೆವೆ ಹುಟ್ಟಿದಂದಿನಿಂದ ನೀರಿನ ಕೆರೆಯ ಹಾಗಿತ್ತು; ಆದರೂ ಅವರು ಓಡಿಹೋಗುತ್ತಾರೆ; ನಿಲ್ಲಿರಿ, ನಿಲ್ಲಿರಿ ಅಂದರೂ ಒಬ್ಬನೂ ಹಿಂದಕ್ಕೆ ನೋಡುವದಿಲ್ಲ.
ನಹೂಮ 2 : 9 (KNV)
ಬೆಳ್ಳಿಯನ್ನು ಸುಲುಕೊಳ್ಳಿರಿ; ಬಂಗಾರವನ್ನು ಸುಲುಕೊಳ್ಳಿರಿ; ಕೂಡಿಸಿಟ್ಟ ಧನಕ್ಕೂ ಸಕಲ ವಿಧವಾದ ಶ್ರೇಷ್ಠ ವಸ್ತುಗಳ ನಿಧಿಗೂ ಪಾರವೇ ಇಲ್ಲ.
ನಹೂಮ 2 : 10 (KNV)
ಅದು ಬರಿದಾಗಿಯೂ, ಬೈಲಾಗಿಯೂ, ಹಾಳಾ ಗಿಯೂ ಇತ್ತು; ಹೃದಯ ಕರಗುತ್ತದೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ. ಎಲ್ಲಾ ನಡುವುಗಳಲ್ಲಿ ಹೆಚ್ಚು ಸಂಕಟ ಉಂಟು; ಎಲ್ಲಾ ಮುಖಗಳು ಕಳೆ ಗುಂದುತ್ತವೆ.
ನಹೂಮ 2 : 11 (KNV)
ಸಿಂಹದ ಗವಿಯೂ ಎಳೇ ಸಿಂಹಗಳು ಮೇಯುವ ಸ್ಥಳವು ಎಲ್ಲಿ? ಅಲ್ಲಿ ಮುದಿಸಿಂಹ, ಸಿಂಹಿಣಿ ಸಿಂಹದ ಮರಿಗಳು ನಡೆದಾಡಿದರೂ ಯಾರೂ ಹೆದರಿ ಸಲಿಲ್ಲವಲ್ಲಾ?
ನಹೂಮ 2 : 12 (KNV)
ಸಿಂಹವು ತನ್ನ ಮರಿಗಳಿಗೆ ಸಾಕಾ ಗುವಷ್ಟು ಸೀಳಿ ತನ್ನ ಸಿಂಹಿಣಿಗಳಿಗೋಸ್ಕರ ಕೊರಳು ಹಿಸುಕಿ ಕೊಳ್ಳೆಯಿಂದ ತನ್ನ ಗವಿಗಳನ್ನೂ ಸುಲಿಗೆಯಿಂದ ತನ್ನ ಗುಹೆಗಳನ್ನೂ ತುಂಬಿಸುತ್ತಿತ್ತು.
ನಹೂಮ 2 : 13 (KNV)
ಸೈನ್ಯಗಳ ಕರ್ತನು ಹೇಳುವದೇನಂದರೆ -- ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ; ಅದರ ರಥಗಳನ್ನು ಹೊಗೆಯಾ ಗಲು ಸುಡುತ್ತೇನೆ; ಕತ್ತಿಯು ನಿನ್ನ ಎಳೇ ಸಿಂಹಗಳನ್ನು ನುಂಗಿಬಿಡುವದು; ನಿನ್ನ ಕೊಳ್ಳೆಯನ್ನು ಭೂಮಿಯ ಮೇಲಿನಿಂದ ಕಡಿದುಬಿಡುತ್ತೇನೆ; ನಿನ್ನ ಸೇವಕರ ಶಬ್ದವು ಇನ್ನು ಕೇಳಲ್ಪಡುವದಿಲ್ಲ.
❮
❯
1
2
3
4
5
6
7
8
9
10
11
12
13